ತೂಕ ಇಳಿಸಲು ಫ್ಯಾಟ್ ಬರ್ನರ್ ಬಳಸ್ತೀರಾ? ಎಚ್ಚರ ತಪ್ಪಿದ್ರೆ ಅಪಾಯ

ನೋಡಲು ಆಕರ್ಷಕವಾಗಿರಬೇಕು, ಝೀರೋ ಸೈಜ್ ಮೆಂಟೇನ್ ಮಾಡ್ಬೇಕು ಎಂಬುದು ಮಹಿಳೆಯರ ಆಸೆ. ಇದೇ ಕಾರಣಕ್ಕೆ ತೂಕ ಇಳಿಸಲು ಮಹಿಳೆಯರು ಆದ್ಯತೆ ನೀಡ್ತಾರೆ. ಫಿಟ್ನೆಸ್ ಕಾಯ್ದುಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಫ್ಯಾಟ್ ಬರ್ನರ್ ಬಳಸ್ತಾರೆ. ಆದ್ರೆ ಇದು ಆರೋಗ್ಯ ಹೆಚ್ಚಿಸುವ ಬದಲು ಅನಾರೋಗ್ಯಕ್ಕೆ ಕಾರಣವಾಗುತ್ತೆ.  
 

Side Effects Of Fat Burner For Ladies think while reducing weight

ಫಿಟ್ನೆಸ್ ಬಗ್ಗೆ ಜನರು ಹೆಚ್ಚು ಆಲೋಚನೆ ಮಾಡ್ತಾರೆ. ದೇಹದ ಆಕಾರಕ್ಕೆ ಮಹತ್ವ ನೀಡುವವರ ಸಂಖ್ಯೆ ಹೆಚ್ಚಿದೆ. ಮಹಿಳೆಯರು ಫಿಟ್ನೆಸ್ ಬಗ್ಗೆ ಅತಿ ಹೆಚ್ಚು ಚಿಂತಿಸ್ತಾರೆ. ದೇಹದ ಕೊಬ್ಬು ಅಥವಾ ತೂಕ ಸ್ವಲ್ಪ ಹೆಚ್ಚಾದ್ರೂ ಅವರು ಒತ್ತಡಕ್ಕೆ ಒಳಗಾಗ್ತರೆ. ಯಾವುದೇ ರೀತಿಯಲ್ಲಾದ್ರೂ ತೂಕ ಇಳಿಸಿಕೊಳ್ಳಬೇಕೆಂಬ ತೀರ್ಮಾನಕ್ಕೆ ಬರ್ತಾರೆ. ಅತಿ ಬೇಗ ತೂಕ ಇಳಿಯುವ ವಿಧಾನವನ್ನು ಅನುಸರಿಸಲು ಮುಂದಾಗ್ತಾರೆ. ಕೆಲವು ಮಹಿಳೆಯರು ಮಾರುಕಟ್ಟೆಯಲ್ಲಿ ಲಭ್ಯವಿರುವ ಫ್ಯಾಟ್ ಬರ್ನರ್ ಗಳನ್ನು ಸಹ ಬಳಸ್ತಾರೆ. ತ್ವರಿತ ಫಲಿತಾಂಶಗಳನ್ನು ಪಡೆಯಲು ಇದು ಮಹಿಳೆಗೆ ಸಹಾಯ ಮಾಡುತ್ತದೆ. ಇದ್ರಲ್ಲಿ ವೇಗವಾಗಿ ಕೊಬ್ಬು ಇಳಿಯುತ್ತದೆ ನಿಜ. ಆದ್ರೆ ಇದರ ಬಳಕೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಫ್ಯಾಟ್ ಬರ್ನರ್ ಗಳಲ್ಲಿ ಕೆಫೀನ್, ಆಸ್ಪಿರಿನ್ ಸೇರಿದಂತೆ ತೂಕ ಬೇಗ ಕಡಿಮೆಯಾಗಲು ಸಹಾಯವಾಗುವ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಫ್ಯಾಟ್ ಬರ್ನರ್ ಬಳಕೆ ಮಾಡುವ ಮೊದಲು ಅದ್ರಿಂದಾಗುವ ಅಡ್ಡ ಪರಿಣಾಮಗಳನ್ನು ತಿಳಿಯುವುದು ಬಹಳ ಮುಖ್ಯ. 

ಫ್ಯಾಟ್ ಬರ್ನರ್ (Fat Burners)  ಬಳಕೆಯಿಂದಾಗುವ ನಷ್ಟಗಳು : 
ಫ್ಯಾಟ್ ಬರ್ನರ್ ಬಳಕೆಯಿಂದ ಹದಗೆಡುವ ಮಾನಸಿಕ ಆರೋಗ್ಯ (Mental Health) :
ಬಹುತೇಕರಿಗೆ ಈ ಸಂಗತಿ ತಿಳಿದಿಲ್ಲ. ತೂಕ ಬೇಗ ಇಳಿಯುತ್ತದೆ ಎನ್ನುವ ಕಾರಣಕ್ಕೆ ಫ್ಯಾಟ್ ಬರ್ನರ್ ಬಳಕೆ ಮಾಡ್ತಾರೆ. ಆದ್ರೆ ಇದು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದ್ರಲ್ಲಿ ಬಳಸುವ ಪದಾರ್ಥಗಳು ಒತ್ತಡ, ಆತಂಕ, ಕೋಪ ಮತ್ತು ಚಡಪಡಿಕೆ ಮುಂತಾದ ಸಮಸ್ಯೆಗೆ ಕಾರಣವಾಗುತ್ತದೆ. ಮೂಡ್ ಸ್ವಿಂಗ್ ಸಮಸ್ಯೆ ಇದ್ರಿಂದ ಕಾಡುತ್ತದೆ. ಫ್ಯಾಟ್ ಬರ್ನರ್ ಬಳಕೆ ಮಾಡುವವರಿಗೆ ಭಾವನೆಗಳನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. 

ತೂಕ, ಪ್ರೆಶರ್, ಶುಗರ್, ಕೊಲೆಸ್ಟ್ರಾಲ್ ಎಲ್ಲವನ್ನೂ ಕಂಟ್ರೋಲಿನಲ್ಲಿಡುತ್ತೆ ರವೆ

ಹಸಿವಾಗದಿರುವುದು (Loss Of Appetite) :  ಫ್ಯಾಟ್ ಬರ್ನರ್ ನಲ್ಲಿ ಬಳಸುವ ರಾಸಾಯನಿಕಗಳು ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ. ಈ ರಾಸಾಯನಿಕಗಳು ನಿಮ್ಮ ಮೆದುಳಿಗೆ ಹೊಟ್ಟೆ ತುಂಬಿದೆ ಎಂಬ ಸಂದೇಶವನ್ನು ನೀಡುತ್ತವೆ. ಇದ್ರಿಂದ ನೀವು ಯಾವುದೇ ಆಹಾರವನ್ನು ಸೇವನೆ ಮಾಡುವುದಿಲ್ಲ. ನೀವು ಕಡಿಮೆ ಆಹಾರ ಸೇವನೆ ಮಾಡಿದ್ರೆ ತೂಕ ಇಳಿಯೋದು ಸಹಜ. ಹಾಗಾಗಿಯೇ ಫ್ಯಾಟ್ ಬರ್ನರ್ ತೂಕ ಇಳಿಕೆಗೆ ನೆರವಾಗುತ್ತದೆ. ಆದ್ರೆ ಹೊಟ್ಟೆ ತುಂಬಿದೆ ಎನ್ನುವ ಕಾರಣಕ್ಕೆ ನೀವು ಪೌಷ್ಠಿಕಾಂಶದ ಆಹಾರವನ್ನು ತೆಗೆದುಕೊಳ್ಳದಿದ್ದರೆ  ಅಪೌಷ್ಟಿಕತೆಯಿಂದಾಗಿ ಅನೇಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ನಿಮಗಿರುತ್ತದೆ. 

28 ಕೆಜಿ Weight ಇಳಿಸಿಕೊಂಡ ಗುಂಡಮ್ಮ; ಗೀತಾ ಟ್ರಾನ್ಸ್‌ಫಾರ್ಮೇಷನ್‌ ಫೋಟೋ ವೈರಲ್!

ನಿದ್ರೆಯಲ್ಲಿ ಸಮಸ್ಯೆ (Insomnia)  : ಫ್ಯಾಟ್ ಬರ್ನರ್ ಸೇವನೆಯಿಂದ ನಿಮ್ಮ ನಿದ್ರೆಯಲ್ಲಿ ಏರುಪೇರಾಗುತ್ತದೆ. ನಿದ್ರಾಹೀನತೆ ಸಮಸ್ಯೆ ನಿಮ್ಮನ್ನು ಕಾಡಬಹುದು.ಫ್ಯಾಟ್ ಬರ್ನರ್‌ಗಳಲ್ಲಿ ಉತ್ತಮ ಪ್ರಮಾಣದ ಕೆಫೀನ್ ಮತ್ತು ಎಫೆಡ್ರೈನ್ ಇರುತ್ತದೆ. ಇದರಿಂದಾಗಿ ನಿದ್ರೆಗೆ ತೊಂದರೆಯಾಗುತ್ತದೆ. ನಿದ್ರಾಹೀನತೆ ಆಯಾಸಕ್ಕೆ ಕಾರಣವಾಗುತ್ತದೆ. ಅನಾರೋಗ್ಯಕ್ಕೂ ನಿದ್ರಾಹೀನತೆ ಕಾರಣವಾಗುತ್ತದೆ. ನಿದ್ರೆಯ ಕೊರತೆ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಯಾವುದೇ ಕೆಲಸದಲ್ಲಿ ಆಸಕ್ತಿ ಇರುವುದಿಲ್ಲ. ಇಡೀ ದಿನ ನಿದ್ರೆ ಮಂಪರು ನಿಮ್ಮ ಕೆಲಸವನ್ನು ಹಾಳು ಮಾಡುತ್ತದೆ. 

ನಿರ್ಜಲೀಕರಣ ಸಮಸ್ಯೆಗೆ (Dehydration Problem) ಕಾರಣವಾಗುತ್ತೆ ಫ್ಯಾಟ್ ಬರ್ನರ್ : ಫ್ಯಾಟ್ ಬರ್ನರನ್ನು ಹೆಚ್ಚಿನ ಪ್ರಮಾಣದಲ್ಲಿ ನೀವು ಸೇವನೆ ಮಾಡಿದ್ರೆ ನಿರ್ಜಲೀಕರಣಕ್ಕೆ ಇದು ದಾರಿ ಮಾಡಿಕೊಡುತ್ತದೆ. ಕೆಫೀನ್, ಫ್ಯಾಟ್ ಬರ್ನರ್ ನಲ್ಲಿ ಹೆಚ್ಚಾಗಿರುತ್ತದೆ. ಕೆಫೀನ್ ಜೊತೆ ಎಫೆಡ್ರೈನ್ ಇರೋದ್ರಿಂದ ಇದು ದೇಹವನ್ನು ಡ್ರೈ ಮಾಡುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗ್ತಿದ್ದಂತೆ ಅನೇಕ ಸಮಸ್ಯೆ ನಮ್ಮನ್ನು ಕಾಡುತ್ತದೆ.  ತಲೆತಿರುಗುವಿಕೆ, ಪ್ರಜ್ಞೆ ತಪ್ಪುವುದು ಸೇರಿದಂತೆ ಅನೇಕ ಸಮಸ್ಯೆಯಿಂದ ನಾವು ಬಳಲಬೇಕಾಗುತ್ತದೆ. 

Side Effects Of Fat Burner For Ladies think while reducing weight


 

Latest Videos
Follow Us:
Download App:
  • android
  • ios