MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Food
  • ತೂಕ, ಪ್ರೆಶರ್, ಶುಗರ್, ಕೊಲೆಸ್ಟ್ರಾಲ್ ಎಲ್ಲವನ್ನೂ ಕಂಟ್ರೋಲಿನಲ್ಲಿಡುತ್ತೆ ರವೆ

ತೂಕ, ಪ್ರೆಶರ್, ಶುಗರ್, ಕೊಲೆಸ್ಟ್ರಾಲ್ ಎಲ್ಲವನ್ನೂ ಕಂಟ್ರೋಲಿನಲ್ಲಿಡುತ್ತೆ ರವೆ

ಅದು ಬೆಳಗಿನ ಉಪಾಹಾರ ಇರಲಿ, ಮಧ್ಯಾಹ್ನ ಅಥವಾ ರಾತ್ರಿ ಊಟವಾಗಿರಲಿ, ಸಿಹಿ ತಿಂಡಿಯಾಗಿರಲಿ ನೀವು ಪ್ರತಿ ಬಾರಿಯೂ ವಿವಿಧ ರೀತಿಯಲ್ಲಿ ರವೆಯನ್ನು ಆಹಾರದಲ್ಲಿ ಸೇರಿಸಬಹುದು. ಇದರಲ್ಲಿರುವ ಪೋಷಕಾಂಶಗಳು ಆರೋಗ್ಯಕರ ರೀತಿಯಲ್ಲಿ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡುತ್ತವೆ. ಹೌದು ರವೆಯಿಂದ ಮಾಡುವ ತಿಂಡಿ ಬಾಯಿಗೆ ರುಚಿ ಮಾತ್ರವಲ್ಲ, ಉತ್ತಮ ಆರೋಗ್ಯಕ್ಕೂ ಸಹಕಾರಿ. ರವೆಯು ತೂಕ, ರಕ್ತದೊತ್ತಡ, ಸಕ್ಕರೆ (Sugar Level) ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ, ಅದನ್ನು ಆಹಾರದಲ್ಲಿ ಹೇಗೆ ಸೇರಿಸಬೇಕೆಂದು ಅನ್ನೋದನ್ನು ತಿಳಿಯಿರಿ.

2 Min read
Suvarna News
Published : Sep 18 2022, 10:39 AM IST| Updated : Sep 18 2022, 10:40 AM IST
Share this Photo Gallery
  • FB
  • TW
  • Linkdin
  • Whatsapp
19

ರವೆಯನ್ನು ಅನೇಕ ರೀತಿಯ ಅಡುಗೆಗಳಲ್ಲಿ ಬಳಸಲಾಗುತ್ತೆ. ಕೇಸರಿ ಬಾತ್, ಉಪ್ಪಿಟ್ಟು, ಉಪ್ಮಾ, ಇಡ್ಲಿ, ದೋಸೆ, ರವೆ ಲಡ್ಡು… ಹೀಗೆ ಎಲ್ಲಾದಕ್ಕೂ ರವೆ ಬೇಕೇ ಬೇಕು. ಇದು ಬಹುತೇಕ ಪ್ರತಿಯೊಂದೂ ಭಾರತೀಯ ಅಡುಗೆಮನೆಯಲ್ಲಿಯೂ (Indian kitchen) ಕಾಮನ್ ಆಗಿ ಬಳಸುವ ಪದಾರ್ಥ| ರುಚಿಕರವಾದ ಭಕ್ಷ್ಯಗಳನ್ನು ತಯಾರಿಸೋದರ ಜೊತೆಗೆ, ರವೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹೃದಯದ ಆರೋಗ್ಯಕ್ಕೆ, ಜೀರ್ಣಕ್ರಿಯೆಗೂ ಸಹ ಪರಿಣಾಮಕಾರಿ. ಅಷ್ಟೇ ಅಲ್ಲದೇ ತೂಕ ಮತ್ತು ಕೊಲೆಸ್ಟ್ರಾಲ್ ಎರಡನ್ನೂ ನಿಯಂತ್ರಿಸುತ್ತದೆ.  

29

ರವೆಯ ಪ್ರಯೋಜನಗಳು ಯಾವುವು ಮತ್ತು ಅವುಗಳನ್ನು ನಿಮ್ಮ ಆಹಾರದಲ್ಲಿ ಹೇಗೆ ಸೇರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ :

ರವೆ ಪೌಷ್ಠಿಕಾಂಶದ ಆಗರ 
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ದತ್ತಾಂಶದ ಪ್ರಕಾರ, ರವೆಯು ಕ್ಯಾಲೋರಿಗಳು, ಕಾರ್ಬೋಹೈಡ್ರೇಟ್ಸ್ (Carbohydrates), ಪ್ರೋಟೀನ್ (Protein), ಥಯಾಮಿನ್, ಫೈಬರ್, ಫೋಲೇಟ್, ರಿಬೋಫ್ಲೇವಿನ್, ಕಬ್ಬಿಣ (Iron), ಮೆಗ್ನೀಸಿಯಮ್ (Magnesium)ನ ಉತ್ತಮ ಮೂಲ. ಈ ಎಲ್ಲಾ ಪೋಷಕಾಂಶಗಳು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ (healthy). ಆದುದರಿಂದ, ನಿಮ್ಮ ಆಹಾರದಲ್ಲಿ ರವೆಯಿಂದ ತಯಾರಿಸಿದ ಭಕ್ಷ್ಯಗಳನ್ನು ಸೇರಿಸುವುದು ಬಹಳ ಮುಖ್ಯ. ನೀವು ತೂಕ ಇಳಿಸಲು ಬಯಸಿದ್ದರೂ ಸಹ, ರವೆ ನಿಮಗೆ ಆರೋಗ್ಯಕರ ಆಯ್ಕೆಯಾಗಿದೆ.

39
ಆರೋಗ್ಯಕ್ಕಾಗಿ ರವೆ ಅಥವಾ ರವೆಯ 4 ಪ್ರಯೋಜನಗಳು ಇಲ್ಲಿವೆ

ಆರೋಗ್ಯಕ್ಕಾಗಿ ರವೆ ಅಥವಾ ರವೆಯ 4 ಪ್ರಯೋಜನಗಳು ಇಲ್ಲಿವೆ

1. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಿ
ರವೆ ಸಾಕಷ್ಟು ಪ್ರಮಾಣದ ನಾರಿನಂಶವನ್ನು ಹೊಂದಿರುತ್ತದೆ, ಇದು ಹೃದ್ರೋಗದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಅದೇ ಸಮಯದಲ್ಲಿ, ಇದು ಎಲ್ಡಿಎಲ್ (bad cholesterol) ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಆ ಮೂಲಕ ಹೃದಯ ಆರೋಗ್ಯವಾಗಿರಲು ಸಹಾಯ ಮಾಡುತ್ತೆ.  

49
2. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು

2. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು

ರವೆ ಮೆಗ್ನೀಸಿಯಮ್ ಮತ್ತು ಆಹಾರದ ನಾರಿನ ಉತ್ತಮ ಮೂಲ. ಇದು ರಕ್ತದ ಸಕ್ಕರೆ ಮಟ್ಟವನ್ನು (blood sugar level) ಸುಧಾರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ರವೆಯಲ್ಲಿರುವ ಫೈಬರ್ ರಕ್ತದಲ್ಲಿರುವ ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಅಲ್ಲದೇ ಇದು ರಕ್ತದಲ್ಲಿನ ಸಕ್ಕರೆ (Blood Sugar Level) ಪ್ರಮಾಣ ಹೆಚ್ಚಾಗೋದನ್ನು ತಡೆಯುತ್ತೆ.

59
3. ಜೀರ್ಣಕ್ರಿಯೆಯನ್ನು ಸಮತೋಲನದಲ್ಲಿರಿಸುತ್ತೆ

3. ಜೀರ್ಣಕ್ರಿಯೆಯನ್ನು ಸಮತೋಲನದಲ್ಲಿರಿಸುತ್ತೆ

ನಾರಿನಂಶ ಭರಿತ ರವೆಯು ಜೀರ್ಣಾಂಗ ವ್ಯವಸ್ಥೆಯನ್ನು (Digestive System)ಸಮತೋಲನದಲ್ಲಿರಿಸುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಇದು ಜೀರ್ಣಾಂಗವ್ಯೂಹದಲ್ಲಿ ಕರುಳು ಸ್ನೇಹಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಈ ಕಾರಣದಿಂದಾಗಿ ಅಜೀರ್ಣ, ಮಲಬದ್ಧತೆ (Constipation) ಮುಂತಾದ ಜೀರ್ಣಕಾರಿ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ.

69
4. ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ

4. ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ

ನೀವು ತೂಕ ಇಳಿಸಿಕೊಳ್ಳಲು (weight loss) ಯೋಚಿಸುತ್ತಿದ್ದರೆ, ನಿಮ್ಮ ಆಹಾರದಲ್ಲಿ ರವೆ ಸೇರಿಸಬಹುದು. ಪೋಷಕಾಂಶ ಭರಿತ ರವೆಯು ಥಯಾಮಿನ್, ಫೋಲೇಟ್ ಮತ್ತು ವಿಟಮಿನ್ ಬಿ ಯ ಉತ್ತಮ ಮೂಲ. ರವೆಯ ಸೇವನೆ ನಿಮ್ಮನ್ನು ದೀರ್ಘಕಾಲದವರೆಗೆ ಸಂತೃಪ್ತಿಗೊಳಿಸುತ್ತದೆ ಮತ್ತು ನೀವು ಅತಿಯಾಗಿ ತಿನ್ನುವುದಿಲ್ಲ. ಇದು ತೂಕ ನಿಯಂತ್ರಿಸಲು ಸಹಾಯ ಮಾಡುತ್ತೆ.

79

ರವೆಯು ಸಾಕಷ್ಟು ಪ್ರಮಾಣದ ಪ್ರೋಟೀನ್ ಅನ್ನು ಹೊಂದಿರುತ್ತದೆ. ತೂಕ ಇಳಿಸುವ ಆಹಾರದಲ್ಲಿ ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ. ದೇಹದಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತೆ. ಆದುದರಿಂದ ನೀವು ಸುಲಭವಾಗಿ ತೂಕ ಇಳಿಸಲು ಬಯಸಿದರೆ ರವೆಯನ್ನು ನಿಮ್ಮ ಆಹಾರದಲ್ಲಿ ಸೇರಿಸೋದು ಉತ್ತಮ. 

89
ರವೆಯನ್ನು ಆಹಾರದಲ್ಲಿ ಸೇರಿಸಲು ಕೆಲವು ಆರೋಗ್ಯಕರ ವಿಧಾನಗಳನ್ನು ತಿಳಿಯಿರಿ

ರವೆಯನ್ನು ಆಹಾರದಲ್ಲಿ ಸೇರಿಸಲು ಕೆಲವು ಆರೋಗ್ಯಕರ ವಿಧಾನಗಳನ್ನು ತಿಳಿಯಿರಿ

ದಕ್ಷಿಣ ಭಾರತದ ಬಹುತೇಕ ಎಲ್ಲಾ ಆಹಾರಗಳನ್ನು ತಯಾರಿಸಲು ರವೆ ಬಳಸಬಹುದು. ರವೆಯಿಂದ ಮಾಡಿದ ಉಪ್ಮಾ, ದೋಸೆ, ಇಡ್ಲಿ ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು. ಇವೆಲ್ಲವೂ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತವೆ.

99

ಹಲ್ವಾ ಮತ್ತು ಖೀರ್‌ನಂತಹ ಆರೋಗ್ಯಕರ ಸಿಹಿತಿಂಡಿಗಳನ್ನು ತಯಾರಿಸಲು ನೀವು ರವೆಯನ್ನು ಸಹ ಬಳಸಬಹುದು. ಅದನ್ನು ಆರೋಗ್ಯಕರವಾಗಿಡಲು ಸಕ್ಕರೆ ಬದಲು ಬೆಲ್ಲ ಬಳಸಿ.

ನೀವು ಬಯಸಿದರೆ, ಮನೆಯಲ್ಲಿ ರವೆಯ ಸಹಾಯದಿಂದ ಬೇಯಿಸುವ ಮೂಲಕ ಆರೋಗ್ಯಕರ ಮತ್ತು ರುಚಿಕರವಾದ ಕುಕೀಗಳು, ಕೇಕ್ಸ್ (Cakes) ಮತ್ತು ಬ್ರೆಡ್ (Bread( ತಯಾರಿಸಬಹುದು.

ರವೆಯನ್ನು ಸೂಪ್ ಮತ್ತು ಇತರ ರೀತಿಯ ತರಕಾರಿಗಳ ಸಬ್ಜಿ ದಪ್ಪಗಾಗಲು ಬಳಸಬಹುದು.

About the Author

SN
Suvarna News
ಸಕ್ಕರೆ
ತೂಕ ಇಳಿಕೆ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved