28 ಕೆಜಿ Weight ಇಳಿಸಿಕೊಂಡ ಗುಂಡಮ್ಮ; ಗೀತಾ ಟ್ರಾನ್ಸ್‌ಫಾರ್ಮೇಷನ್ ಫೋಟೋ ವೈರಲ್!
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಗೀತಾ ಭಾರತಿ ಭಟ್ ಟ್ರಾನ್ಸ್‌ಫಾರ್ಮೇಷನ್ ಫೋಟೋ. 28 ಕೆಜಿ ತೂಕ ಇಳಿಸಿಕೊಂಡು ಹೇಗೆ ಕಾಣಿಸುತ್ತಿದ್ದಾರೆ ನೋಡಿ....
ಗೀತಾ ಭಾರತಿ ಭಟ್. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಬ್ರಹ್ಮಗಂಟು’ ಸೀರಿಯಲ್‌ನಿಂದ ಜನಪ್ರಿಯತೆ ಪಡೆದ ನಟಿ. ಗುಂಡ್ ಗುಂಡಗೆ, ಮುದ್ದು ಮುದ್ದಾದ ಮುಖದಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಈ ನಟಿ ಸದ್ಯಕ್ಕೆ ತೆರೆಮರೆಗೆ ಸರಿದಿದ್ದಾರೆ. ವರ್ಕ್‌ಔಟ್ ಮಾಡುವದರಲ್ಲಿ ಬ್ಯುಸಿ. 28 ಕೆ.ಜಿ. ಇಳಿಸಿಕೊಂಡಿದ್ದು, ಮತ್ತಷ್ಟು ತೂಕ ಇಳಿಸಿಕೊಳ್ಳುವ ಹಾದಿಯಲ್ಲಿ ಮುಂದುವರಿದಿದ್ದಾರೆ.
ಸಾಮಾನ್ಯವಾಗಿ ಎಲ್ಲ ಸೀರಿಯಲ್ಸ್ ತಾರೆಯರು (Small Screen Actress), ತೆಳ್ಳಗೆ, ಬಳಕುವ ಬಳ್ಳಿಯಂತಿದ್ದರೆ ಬ್ರಹ್ಮಗಂಟು ನಟಿ ಮಾತ್ರ ಡುಮ್ ಡುಮ್ಮಗೇ ಇದ್ದರು. ಇವರ ಫಿಸಿಕ್ (Physic) ಮತ್ತು ಮುದ್ದು ಮುಖ ಹಾಗೂ ನಟನೆಯಿಂದಲೇ ಅಪಾರ ಅಭಿಮಾನಿಗಳನ್ನೂ ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲ, ಇದೇ ಫೇಮ್‌ನಿಂದ ಬಿಗ್ ಬಾಸ್ ಸೀಸನ್ (Bigg Boss) ಸೀಸನ್ 8ರ ಸ್ಪರ್ಧಿಯಾಗಿಯೂ ಪಾಲ್ಗೊಂಡಿದ್ದರು.
ಸಾಮಾನ್ಯವಾಗಿ ದಪ್ಪಗಿರೋರು ಸಿಕ್ಕಾಪಟ್ಟೆ ತಿನ್ನುತ್ತಾರೆಂಬ ತಪ್ಪು ಕಲ್ಪನೆ ಇರುತ್ತೆ. ಆದರೆ, ವಿವಿಧ ಕಾಯಿಲೆಯಿಂದ ಅವರ ಫಿಸಿಕ್ ಹಾಗಾಗಿರುತ್ತೆ, ಅನ್ನೋದು ಎಲ್ಲರಿಗೂ ಅರ್ಥವಾಗೋಲ್ಲ. ಸಮಾಜ (Society) ಮಾತ್ರ ಇಂಥ ದಪ್ಪಗಿರೋರನ್ನು ಅದರಲ್ಲಿಯೂ ಹೆಣ್ಣು ಮಕ್ಕಳನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳೋಲ್ಲ. ಬೇಕಾ ಬಿಟ್ಟಿ ಕಮೆಂಟ್ಸ್ ಪಾಸ್ ಮಾಡುತ್ತಾರೆ.
ಇಂಥ ಕಮೆಂಟ್‌ಗಳು ಎಂಥವರನ್ನೂ ಜರ್ಜರಿತರನ್ನಾಗಿ ಮಾಡಿಬಿಡುತ್ತೆ. ಎಲ್ಲರೂ ಲೇವಡಿ ಮಾಡುತ್ತಾರೆ. ಕ್ಲಾಸ್‌ಮೇಟ್ಸ್ ಸಹ ಆಡಿ ಕೊಳ್ಳುತ್ತಾರೆ. ಗೀತಾ ಮಾತ್ರ ಮುಂಚೆನಿಂದಲೇ ಹೀಗೆ ದಪ್ಪಗಿದ್ದವರಲ್ಲ. ಸ್ಪೋರ್ಟ್ಸ್‌ನಲ್ಲಿ (Sports) ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದ ವಿದ್ಯಾರ್ಥಿನಿ (Student).
ಬ್ಯಾಸ್ಕೆಟ್ ಬಾಲ್ (Basketball) ಆಡುವಾಗೊಮ್ಮೆ ಬಿದ್ದು ಗಾಯಗೊಂಡಿದ್ದ ಗೀತಾಗೆ ಅಂಟಿ ಕೊಂಡಿದ್ದು ಒಬೆಸಿಟಿ (Obesity). ಸದಾ ಆಡವಾಡಿಕೊಂಡು, ಲವಲವಿಕೆಯಿಂದ ಇದ್ದ ಗೀತಾಗೆ ಮಲಗಿದ್ದಲ್ಲೇ ಮಲಗಿದ್ದು ಮುಳುವಾಯಿತು. ನಾಲ್ಕು ತಿಂಗಳ ಕಾಲ ಮಲಗಿದ್ದ ಗೀತಾ ದೇಹ ಬಲೂನ್ ರೀತಿ ಊದಿಕೊಳ್ತು.
ಸಹಜವಾಗಿಯೇ ಗೀತಾರನ್ನು ನೋಡಿ ಕಮೆಂಟ್ಸ್ ಮಾಡೋರು ಹೆಚ್ಚಾದರೆ. ಅವರ ಆತ್ಮವಿಶ್ವಾಸವೂ (Confidence) ಕಡಿಮೆ ಆಯಿತು. ಆದರೆ, ಅದೆಷ್ಟು ದಿನ ಅಂತ ಹೀಗಿರೋದು. ಇಲ್ಲ ಈ ರೀತಿ ಇರಬಾರದು. ಏನಾದರೂ ಸಾಧಿಸಬೇಕೆಂದು ಗಟ್ಟಿ ಮನಸ್ಸು ಮಾಡಿದರು. ದೃಢ ನಿರ್ದಾರವೊಂದು ಗೀತಾಳ ಬಾಳಿನಲ್ಲಿ ಬದಲಾವಣೆ ತಂದಿತ್ತು.
ಅಲ್ಲಿಂದ ಅವರ ಆತ್ಮವಿಶ್ವಾಸದ ಗ್ರಾಫ್ (Confidence Graph) ಏರ ತೊಡಗಿತು. ಕೀಳಿರಿಮೆ ಕಡಿಮೆಯಾಯಿತು. ಬ್ಯಾಂಕಿಂಗ್ (Banking) ಕ್ಷೇತ್ರದಲ್ಲಿ ಕೆಲಸ ಹುಡುಕಿಕೊಂಡರು. ಎರಡು ವರ್ಷ ಕೆಲಸ ಮಾಡಿದ್ದರು. ಕಿರುತೆರೆ ಕೈ ಬೀಸಿ ಕರೆಯಿತು. ಕೆಲಸ ಬಿಟ್ಟು, ನಟನೆಯಲ್ಲಿ ತೊಡಗಿಕೊಂಡರು.
ಅಲ್ಲಿಂದ ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. ಕನ್ನಡಿಗರೂ ಗೀತಾ ನಟನೆಗೆ ಕ್ಲೀನ್ ಬೋಲ್ಡ್ ಆಗಿಬಿಟ್ಟರು. ಅಕ್ಕರೆಯಿಂದ ಈ ಪ್ರತಿಭೆಯನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.
‘ನಿಮ್ಮ ಆತ್ಮ ಬಯಸುವ ಎಲ್ಲವನ್ನೂ ನಿಮ್ಮ ಕಣ್ಣುಗಳು ಸೆರೆ ಹಿಡಿಯುತ್ತವೆ’ ಎಂದು ಬರೆದುಕೊಂಡು ಶೇರ್ ಮಾಡಿಕೊಂಡಿದ್ದ ಇವರ ಫೋಟೋ ಶೂಟಿಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿದ್ದವು. ಗುಂಡಮ್ಮನಿಗೆ ನೆಟ್ಟಿಗರು ಫಿದಾ ಆಗಿದ್ದರು.
ಅವರಿದ್ದಂತೆ ಜನರು ಗೀತಾರನ್ನು ಅಕ್ಸೆಪ್ಟ್ ಮಾಡಿಯಾಗಿತ್ತು. ಅಲ್ಲಿಯೇ ಆತ್ಮವಿಶ್ವಾಸವನ್ನೂ ಹುಡುಕಿಕೊಂಡಿದ್ದರು. ದಪ್ಪಗೆ ಇರೋದು ಒಂದು ವೀಕ್ ನೆಸ್ (Weakness) ಅಲ್ಲವೆಂದು ತಮ್ಮಂತೆ ಇರುವ ಹಲವು ಹೆಣ್ಣು ಮಕ್ಕಳಲ್ಲಿಯೂ ವಿಶ್ವಾಸ ತುಂಬಿದ್ದರು ಗೀತಾ.
ಇದೀಗ ಗೀತಾ ಸಹ ಮನಸ್ಸು ಬದಲಿಸಿದ್ದಾರೆ. ಏನಾದರೂ ಸರಿ ತೆಳ್ಳಗೆ ಆಗಬೇಕೆಂದು ಪಣ ತೊಟ್ಟಿದ್ದಾರೆ. ಬಿಡದೇ ವರ್ಕ್‌ಔಟಿನಲ್ಲಿ (Workout) ತೊಡಗಿಸಿಕೊಂಡಿದ್ದಾರೆ. ಬಳುಕುವ ಬಳ್ಳಿಯಂತಾಗದೇ ಹೋದರೂ, 30 ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದಾರೆ. ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದೆಂಬುದನ್ನು ಅವರು ಪ್ರೂವ್ ಮಾಡಿದ್ದಾರೆ. ಗೀತಾಗೆ ಶುಭವಾಗಲಿ.