Asianet Suvarna News Asianet Suvarna News

ಹಾಟ್​ ವಿಡಿಯೋ ಶೇರ್​ ಮಾಡಿ ಬಿಗ್​ಬಾಸ್​ ಮನೆಯೊಳಕ್ಕೆ ಕಾಲಿಡ್ತಿದ್ದಾರೆ ಮಾಜಿ ಮಿಸ್ ಇಂಡಿಯಾ!

ಬಿಗ್​ ಬಾಸ್​ ಮನೆಯೊಳಕ್ಕೆ ಹೋಗಲು ರೆಡಿಯಾದ ಈ ಬಿಕಿನಿ ಸುಂದರಿ, ಮಾಜಿ ಮಿಸ್​ ಇಂಡಿಯಾ ಮನಸ್ವಿ. ಇವರ ವಿಡಿಯೋ ವೈರಲ್​ ಆಗಿದೆ.  
 

Bikini beauty former Miss India Manasvi inside Bigg Boss house suc
Author
First Published Oct 9, 2023, 5:33 PM IST

ಕನ್ನಡದಲ್ಲಿ ಬಿಗ್​ಬಾಸ್​ ಸೀಸನ್​ 10 ಶುರುವಾಗಿದ್ದು, ಬಹಳ ಕುತೂಹಲ ಕೆರಳಿಸುತ್ತಿದ್ದರೆ, ಅದೇ ಹಿಂದಿಯಲ್ಲಿ ಬಿಗ್​ಬಾಸ್​ 17 ಶುರುವಾಗಿದೆ. ಬಹುತೇಕ ಎಲ್ಲಾ ಭಾಷೆಗಳಲ್ಲಿಯೂ ಬಿಗ್​ಬಾಸ್​ ಇದಾಗಲೇ ಕೆಲವು ಕಂತುಗಳನ್ನು ಪೂರೈಸಿದ್ದರೆ, ಮೊದಲು ಶುರುವಾಗಿದ್ದ ಹಿಂದಿ ಬಿಗ್​ಬಾಸ್​​ 17ನೇ ಸಂಚಿಕೆಯನ್ನು ಕಾಣುತ್ತಿದೆ. ಆರಂಭದಿಂದಲೂ ವಿವಾದದ ಸುಳಿಯಿಂದಲೇ ಹಿಂದಿ ಬಿಗ್​ಬಾಸ್​ ಸುತ್ತುವರೆಯುತ್ತಲೇ ಇದ್ದು, ಅದನ್ನು ಜನರು ಬೈಯುತ್ತಲೇ ಎಂಜಾಯ್​ ಮಾಡುತ್ತಿದ್ದಾರೆ. ಅತ್ಯಂತ ಕಳಪೆ ಕಾರ್ಯಕ್ರಮ, ಇದನ್ನು ಬ್ಯಾನ್​ ಮಾಡಬೇಕು, ಕುಟುಂಬಸ್ಥರು ಕುಳಿತು ನೋಡಲಾಗದು, ಅತ್ಯಂತ ಅಶ್ಲೀಲ ಪ್ರದರ್ಶನ ಇದರಲ್ಲಿ ನಡೆಯುತ್ತದೆ ಎಂದು ದಿನನಿತ್ಯವೂ ಬೈಯುತ್ತಲೇ ಒಂದೇ ಒಂದು ಎಪಿಸೋಡ್​ ಮಿಸ್​ ಮಾಡಿಕೊಳ್ಳದ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಬಿಗ್​ಬಾಸ್​ ಮನೆಯೊಳಕ್ಕೆ ಯಾರು ಹೋಗುತ್ತಾರೆ ಎನ್ನುವ ಕೌತುಕ ಮನೆ ಮಾಡಿರುತ್ತದೆ.

ಇತ್ತ ಕನ್ನಡದ ಬಿಗ್​ಬಾಸ್​ನಲ್ಲಿ ಯಾರ್ಯಾರು ಹೋಗುತ್ತಾರೆ ಎನ್ನುವ ಕುತೂಹಲ ಕೊನೆಗೂ ತಣಿದಿದ್ದು, ದೊಡ್ಮನೆಯಲ್ಲಿ ಆಟ ಶುರುವಾಗಿದ್ದರೆ, ಅತ್ತ ಹಿಂದಿ ಬಿಗ್​ಬಾಸ್​ನಲ್ಲಿ ಇದರ ಕುತೂಹಲ ಹೆಚ್ಚಿದೆ. 'ಬಿಗ್ ಬಾಸ್ 17' ಕೆಲವೇ ದಿನಗಳಲ್ಲಿ ಕಿಕ್‌ಸ್ಟಾರ್ಟ್‌ಗೆ ಸಿದ್ಧವಾಗಿದೆ ಮತ್ತು ಈ ಹೊಸ ಸೀಸನ್‌ನಲ್ಲಿ ಯಾರು ಪಾಲ್ಗೊಳ್ಳುತ್ತಾರೆ ಎಂಬ ಬಗ್ಗೆ ಪ್ರೇಕ್ಷಕರು ಈಗಾಗಲೇ ಉತ್ಸುಕರಾಗಿದ್ದಾರೆ.  ಮಾಜಿ ಪೋರ್ನ್​ ಸ್ಟಾರ್​ ಸನ್ನಿ ಲಿಯೋನ್ ಮತ್ತು ಪಮೇಲಾ ಆಂಡರ್ಸನ್ ನಂತರ, 'ಬಿಗ್ ಬಾಸ್ 17' ಅತಿದೊಡ್ಡ ಸಾಮಾಜಿಕ ಮಾಧ್ಯಮ ಪ್ರಭಾವಿ ಮತ್ತು ವಯಸ್ಕ ವಿಷಯ ರಚನೆಕಾರರಾದ ಶಿಲ್ಪಾ ಸೇಥಿ ಅವರು ಇದಾಗಲೇ ಪ್ರವೇಶ ಪಡೆದಿದ್ದಾರೆ.  ಭಾರತದ ಕಿಮ್ ಕಾರ್ಡಶಿಯಾನ್ ಎಂದು ಕರೆಯಲ್ಪಡುವ ಶಿಲ್ಪಾ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಜನಪ್ರಿಯ ಅಮೇರಿಕನ್-ಭಾರತೀಯ ಪ್ರಭಾವಶಾಲಿಗಳಲ್ಲಿ ಒಬ್ಬರು. ಅವರ ವಿಲಕ್ಷಣ ಪೋಸ್ಟ್‌ಗಳು ಮತ್ತು ವೈರಲ್ ವಿಷಯವು ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ.  ತಮ್ಮ ಸಾಮಾಜಿಕ ಮಾಧ್ಯಮ ಬಯೋದಲ್ಲಿ ತಮ್ಮನ್ನು ತಾವು  ಅತ್ಯಂತ ಕೆಟ್ಟ ಭಾರತೀಯ ಎಂದು ಕರೆದುಕೊಳ್ಳುವ ಇವರಿಗೆ ಈಗ ಬಿಗ್​ಬಾಸ್​ 17ನೇ ಸೀಸನ್​ನಲ್ಲಿ ಎಂಟ್ರಿ ಸಿಕ್ಕಿದೆ.

ಬಿಗ್​ಬಾಸ್​ ವೇದಿಕೆಯಲ್ಲಿ ಡ್ರೋಣ್​ ಪ್ರತಾಪ್​ ಪ್ರತ್ಯಕ್ಷ! ಕಾಗೆ ಹಾರಿಸೋಕೆ ರೆಡಿನಾ ಅಂತಿದ್ದಾರೆ ನೆಟ್ಟಿಗರು
 
ಇವುಗಳ ನಡುವೆಯೇ ಕುತೂಹಲ ಕೆರಳಿಸಿರುವುದು ನಟಿ ಮತ್ತು ಮಾಜಿ ಮಿಸ್ ಇಂಡಿಯಾ, ಮನಸ್ವಿ ಮಾಮ್ಗೈ ಅವರ ಬಗ್ಗೆ. ಅತ್ಯಂತ ಕಡಿಮೆ ಬಟ್ಟೆ ತೊಟ್ಟು ವಿಡಿಯೋಶೂಟ್​ ಮಾಡಿಸಿಕೊಳ್ಳುವಲ್ಲಿ ಎತ್ತಿದ ಕೈ ಮನಸ್ವಿ ಅವರದ್ದು. ಅವರ ಇಂಥದ್ದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸದ್ದು ಮಾಡುತ್ತಿದ್ದು, ಇವರು ಕೂಡ ಹಿಂದಿಯ  'ಬಿಗ್ ಬಾಸ್' ಮನೆಗೆ  ಸೇರಿಕೊಳ್ಳಲಿದ್ದಾರೆ. ಅವರು ಮನೆಯೊಳಗಿನ 'ಸಿಂಗಲ್' ಸ್ಪರ್ಧಿಗಳಲ್ಲಿ ಒಬ್ಬರಾಗಿರುತ್ತಾರೆ. 

ಅಂದಹಾಗೆ ಮನಸ್ವಿ ಕೊನೆಯದಾಗಿ 'ದಿ ಟ್ರಯಲ್' ಎಂಬ ವೆಬ್ ಸರಣಿಯಲ್ಲಿ ಕಾಜೋಲ್ ಜೊತೆಗೆ ಕಾಣಿಸಿಕೊಂಡಿದ್ದರು. ಪ್ರಾಸಂಗಿಕವಾಗಿ, ಸರಣಿಯಲ್ಲಿನ ಅವರ ಪಾತ್ರವು ಸುಶಾಂತ್ ಸಿಂಗ್ ರಜಪೂತ್ ಅವರ ಮರಣದ ನಂತರ ರಿಯಾ ಚಕ್ರವರ್ತಿಯ ಪ್ರಕರಣದಿಂದ ಸ್ಫೂರ್ತಿ ಪಡೆದಿದೆ. ಮನಸ್ವಿ ದೆಹಲಿ ಮೂಲದವರಾಗಿದ್ದು, ನಟನೆಯಲ್ಲಿ ಅದೃಷ್ಟ ಪರೀಕ್ಷೆಗೆಂದು ಮುಂಬೈಗೆ ಬಂದಿದ್ದಾರೆ. ಅವರು ಹಲವಾರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಅನೇಕ ಫ್ಯಾಷನ್ ಶೋಗಳಲ್ಲಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ಅವರು 2010 ರಲ್ಲಿ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದರು ಮತ್ತು ಚೀನಾದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸದ್ದರು. ಮನಸ್ವಿ ಅನುಪಮ್ ಖೇರ್ ಅಕಾಡೆಮಿಯಲ್ಲಿ ನಟನಾ ಕೌಶಲ್ಯವನ್ನು ಕಲಿತಿದ್ದಾರೆ. 2014 ರಲ್ಲಿ ಪ್ರಭುದೇವ ನಿರ್ದೇಶನದ ಅಜಯ್ ದೇವಗನ್ ಜೊತೆಗೆ 'ಆಕ್ಷನ್ ಜಾಕ್ಸನ್' ಮೂಲಕ ಪದಾರ್ಪಣೆ ಮಾಡಿದರು. ನಟಿ, ಹಾಲಿವುಡ್‌ನಲ್ಲಿ ನಟನೆಯನ್ನು ಮುಂದುವರಿಸಲು US ಗೆ ತೆರಳಿದರು ಮತ್ತು ಅಲ್ಲಿ ಒಂದು ಗೇಮ್ ಶೋ ಗೆದ್ದರು. ಇತ್ತೀಚೆಗೆ, ಅವರು ವೆಬ್ ಶೋಗಳಿಗಾಗಿ ಮುಂಬೈನಲ್ಲಿದ್ದಾರೆ ಮತ್ತು ಈಗ ಅವರು ತಮ್ಮ ಮೊದಲ ರಿಯಾಲಿಟಿ ಶೋ 'ಬಿಗ್ ಬಾಸ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಿಗ್​ಬಾಸ್​ನಲ್ಲಿ ಮೊದಲ ಸ್ಪರ್ಧಿಯೇ ಮಿಸ್ಸಿಂಗ್​! ಉಫ್​... ನಿಮ್​ ಸಹವಾಸವೇ ಬೇಡ ಅಂದಳಾ ಚಾರ್ಲಿ?
 

Follow Us:
Download App:
  • android
  • ios