Asianet Suvarna News Asianet Suvarna News

ಬೆಡ್ ರೂಮಲ್ಲಿ ರೋಮ್ಯಾನ್ ಹೆಚ್ಚಿಸುತ್ತೆ ಶುಂಠಿ – ಜೇನುತುಪ್ಪದ ಮಿಶ್ರಣ

ಜೇನುತುಪ್ಪ ಹಾಗೂ ಶುಂಠಿಯನ್ನು ಭಾರತೀಯರು ಮನೆ ಮದ್ದಿನ ರೂಪದಲ್ಲಿ ಬಳಕೆ ಮಾಡ್ತಾರೆ. ಕೆಮ್ಮು, ನೆಗಡಿ, ಜ್ವರ ಬಂದಾಗ ಇದರ ಬಳಕೆ ಹೆಚ್ಚಾಗುತ್ತದೆ. ಆದ್ರೆ ಲೈಂಗಿಕ ಜೀವನಕ್ಕೂ ಇದು ಒಳ್ಳೆಯದು ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ.
 

Sexual Health Problem Remedies with honey and ginger combination
Author
Bangalore, First Published Jun 8, 2022, 3:25 PM IST

ಶುಂಠಿ (Ginger) ಮತ್ತು ಜೇನುತುಪ್ಪ (Honey) ವು ಹಲವಾರು ಆರೋಗ್ಯ (Health) ಪ್ರಯೋಜನಗಳನ್ನು ಹೊಂದಿದೆ. ಭಾರತ (India) ದಲ್ಲಿ ಶುಂಠಿ ಹಾಗೂ ಜೇನುತುಪ್ಪ ಎರಡರ ಬಳಕೆಯೂ ಹೆಚ್ಚಿದೆ. ಶುಂಠಿ ಹಾಗೂ ಜೇನುತುಪ್ಪವನ್ನು ಒಟ್ಟಿಗೆ ತೆಗೆದುಕೊಂಡಾಗ, ಅವುಗಳ ಶಕ್ತಿ ಮತ್ತು ಲಾಭವು ದ್ವಿಗುಣಗೊಳ್ಳುತ್ತದೆ. ಜೇನುತುಪ್ಪ ಮತ್ತು ಶುಂಠಿಯ ಶಕ್ತಿಯುತವಾದ ಸಂಯೋಜನೆಯು ಶೀತ ಮತ್ತು ಕೆಮ್ಮಿನಂತಹ ಉಸಿರಾಟದ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತದೆ. ಜೇನುತುಪ್ಪ ಮತ್ತು ಶುಂಠಿ ಎರಡಕ್ಕೂ ತನ್ನದೇ ಆದ ವಿಶಿಷ್ಟ ಗುಣಲಕ್ಷಣಗಳಿವೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಈ ಎರಡರಲ್ಲೂ ಕಂಡುಬರುತ್ತವೆ. ಇವುಗಳ ಸೇವನೆಯಿಂದ ಅನೇಕ ಪ್ರಯೋಜನಗಳಿವೆ. ಶುಂಠಿಯಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸತು, ತಾಮ್ರ ಮತ್ತು ಮ್ಯಾಂಗನೀಸ್ನಂತಹ ಪೋಷಕಾಂಶಗಳು  ಕಂಡುಬರುತ್ತವೆ. ಜೇನುತುಪ್ಪರ ರುಚಿ ಅಧ್ಬುತ. ಇದು ಫ್ರಕ್ಟೋಸ್, ಕಾರ್ಬೋಹೈಡ್ರೇಟ್, ರೈಬೋಫ್ಲಾವಿನ್, ನಿಯಾಸಿನ್, ವಿಟಮಿನ್ ಬಿ6, ವಿಟಮಿನ್ ಸಿ ಮತ್ತು ಅಮೈನೋ ಆಮ್ಲಗಳಂತಹ ಪೋಷಕಾಂಶಗಳ ಉಗ್ರಾಣವಾಗಿದೆ.

ಶುಂಠಿ ಮತ್ತು ಜೇನುತುಪ್ಪವನ್ನು ಒಟ್ಟಿಗೆ ಸೇವಿಸುವುದರಿಂದ ಅಜೀರ್ಣ, ಶೀತ-ಕೆಮ್ಮು, ನೋವು, ವಾಕರಿಕೆ-ವಾಂತಿ ಮುಂತಾದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಲೈಂಗಿಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಇವು ಸಹಾಯ ಮಾಡುತ್ತದೆ. ವಿವಾಹಿತ ಪುರುಷರಿಗೆ ಶುಂಠಿ ಮತ್ತು ಜೇನುತುಪ್ಪದ  ಸಂಯೋಜನೆಯು ತುಂಬಾ ಪ್ರಯೋಜನಕಾರಿಯಾಗಿದೆ.

ಶುಂಠಿ ಮತ್ತು ಜೇನುತುಪ್ಪದ ಸೇವನೆ ಹೇಗೆ? : ಲೈಂಗಿಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಲು ನೀವು ಬೆಳಿಗ್ಗೆ ಶುಂಠಿ ಮತ್ತು ಜೇನುತುಪ್ಪವನ್ನು ಸೇವಿಸಬಹುದು. ಶುಂಠಿಯ ಚೂರಿನ ಜೊತೆ ಎರಡು ಚಮಯ ಜೇನುತುಪ್ಪವನ್ನು ಸೇರಿಸಿ ತಿನ್ನಬೇಕು. ಇದಲ್ಲದೆ ಜೇನುತುಪ್ಪ ಮತ್ತು ಬೆಚ್ಚಗಿನ ನೀರಿಗೆ ಶುಂಠಿ ಪುಡಿಯನ್ನು ಹಾಕಿಯೂ ಕುಡಿಯಬಹುದು. 

WORLD BRAIN TUMOUR DAY 2022: ಮಾರಣಾಂತಿಕ ಮೆದುಳಿನ ಗೆಡ್ಡೆಯ ಸಮಸ್ಯೆಗೆ ಕಾರಣವೇನು ?

ಶುಂಠಿ – ಜೇನುತುಪ್ಪದ ಪ್ರಯೋಜನ : 
ಟೆಸ್ಟೋಸ್ಟೆರಾನ್ ಹೆಚ್ಚಿಸಲು ಸಹಾಯ :
ಕಡಿಮೆ ಟೆಸ್ಟೋಸ್ಟೆರಾನ್ ಲೈಂಗಿಕ ಬಯಕೆಯ ಮೇಲೆ ಪರಿಣಾಮ ಬೀರಬಹುದು. ಶುಂಠಿ ಹಾಗೂ ಜೇನುತುಪ್ಪ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ಈ ಮಿಶ್ರಣ ನಿಯಂತ್ರಣದಲ್ಲಿಡುತ್ತದೆ ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತದೆ.

ವೀರ್ಯದ ಗುಣಮಟ್ಟ ಸುಧಾರಣೆ : ಲೈಂಗಿಕ ಆರೋಗ್ಯ ಮತ್ತು ವೀರ್ಯ ಉತ್ಪಾದನೆಯ ವಿಷಯಕ್ಕೆ ಬಂದಾಗ, ವೀರ್ಯದ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಶುಂಠಿ ಮತ್ತು ಜೇನುತುಪ್ಪದ ಸಂಯೋಜನೆಯು ವೀರ್ಯದ ಗುಣಮಟ್ಟ ಮತ್ತು ಉತ್ಪಾದನೆಯನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ. ಈ ಮಿಶ್ರಣವು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಮತ್ತು ವೀರ್ಯದ ಗುಣಮಟ್ಟವನ್ನು ಸುಧಾರಿಸುವ ಮೂಲಕ ಬಂಜೆತನವನ್ನು ಸುಧಾರಿಸುತ್ತದೆ.

ಸಿಲಿಕಾನ್ ಚಿಪ್ ಬಳಸಿ ವೀರ್ಯ, ಇಸ್ರೇಲ್ ಸಂಶೋಧಕರ ಸಾಧನೆ!

ಉತ್ತಮ ರಕ್ತ ಸಂಚಾರ : ನಿಮಿರುವಿಕೆಯನ್ನು ಕಾಪಾಡಿಕೊಳ್ಳಲು ಉತ್ತಮ ರಕ್ತ ಪರಿಚಲನೆಯನ್ನು ಹೊಂದಿರುವುದು ಬಹಳ ಮುಖ್ಯ. ಇದರ ಕ್ಷೀಣತೆಯು ಲೈಂಗಿಕ ಅಪಸಾಮಾನ್ಯ ಕ್ರಿಯೆ ಮತ್ತು ಪುರುಷರಲ್ಲಿ ಕಾಮಾಸಕ್ತಿಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಸುಧಾರಿತ ರಕ್ತ ಪರಿಚಲನೆಯು ಅಕಾಲಿಕ ಸ್ಖಲನ ಮತ್ತು ಕಡಿಮೆ ಕಾಮಾಸಕ್ತಿಯಂತಹ ಸಮಸ್ಯೆಗಳಿಗೆ ಸಹ ಸಹಾಯ ಮಾಡುತ್ತದೆ.

ಉರಿಯೂತಕ್ಕೆ ಪರಿಹಾರ : ಉರಿಯೂತ ಸಂಬಂಧಿತ ಕಾಯಿಲೆಗಳಿರುವ ಜನರಲ್ಲಿ ಲೈಂಗಿಕ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿದೆ. ನೋವು ಮತ್ತು ಬಳಲಿಕೆಯಿಂದಾಗಿ ಆಗಾಗ್ಗೆ ಸಂಭವಿಸುವ ಉರಿಯೂತದ ಕಾಯಿಲೆಗಳು ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಶುಂಠಿ ಹಾಗೂ ಜೇನುತುಪ್ಪದ ಮಿಶ್ರಣ ಈ ಸಮಸ್ಯೆಗೆ ಪರಿಹಾರ ನೀಡುತ್ತದೆ. 

ತೂಕ ನಷ್ಟಕ್ಕೆ ಸಹಾಯ : ಸ್ಥೂಲಕಾಯ ಮತ್ತು ಅಧಿಕ ತೂಕವು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಸಂಬಂಧಿಸಿದೆ. ಹೆಚ್ಚುವರಿ ತೂಕವು ಕೀಲುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ.  ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಟೆಸ್ಟೋಸ್ಟೆರಾನ್ ಅನ್ನು ಕಡಿಮೆ ಮಾಡುತ್ತದೆ. ಉರಿಯೂತಕ್ಕೂ ಕಾರಣವಾಗುತ್ತದೆ. ಶುಂಠಿ ಮತ್ತು ಜೇನುತುಪ್ಪದ ಮಿಶ್ರಣವನ್ನು ತೆಗೆದುಕೊಳ್ಳುವುದರಿಂದ, ಸ್ಥೂಲಕಾಯ ಸಮಸ್ಯೆ ಕಡಿಮೆಯಾಗುತ್ತದೆ. ಇದ್ರಿಂದ ಲೈಂಗಿಕ ಜೀವನ ಸುಧಾರಿಸುತ್ತದೆ. 

Sexual Health Problem Remedies with honey and ginger combination

 

Follow Us:
Download App:
  • android
  • ios