Asianet Suvarna News Asianet Suvarna News

World Spine Day: ಬೆನ್ನು ನೋವಿನಿಂದ ಕಂಗೆಟ್ಟಿದ್ದೀರಾ ? ಸರಳ ಯೋಗಾಸನ ಮಾಡಿ ಸಾಕು

ಇಂದು ವಿಶ್ವ ಬೆನ್ನು ಮೂಳೆ ದಿನವನ್ನು ಆಚರಿಸಲಾಗುತ್ತಿದೆ. ಬೆನ್ನು ಮೂಳೆಯ ಕಾರಣದಿಂದಾಗಿ ಬೆನ್ನು ನೋವು ಕಾಡಿಸುತ್ತಿದೆಯೇ? ಹಾಗಿದ್ದರೆ ಆ ನೋವನ್ನು ಯೋಗದ ಕೆಲವು ಆಸನಗಳ ಮೂಲಕವಾಗಿ ನಿವಾರಣೆ ಮಾಡಿಕೊಳ್ಳಿ. ಬೆನ್ನು ಮೂಳೆಯ ಆರೋಗ್ಯಕ್ಕೆ ಈ ಆಸನಗಳು ಭಾರೀ ಕೊಡುಗೆ ನೀಡುತ್ತವೆ. 
 

 

Say Goodbye To Back Pain With The Help Of These Asanas Vin
Author
First Published Oct 16, 2022, 6:32 PM IST

ಬೆನ್ನು ನೋವು ಅನೇಕರ ಸಮಸ್ಯೆ. ಇಡೀ ದೇಹದಲ್ಲಿ ಪ್ರಮುಖವಾಗಿರುವ ಬೆನ್ನು ಮೂಳೆಯ ನೋವು ಬಹಳಷ್ಟು ಜನರನ್ನು ಕಾಡುತ್ತದೆ. ಎಷ್ಟು ಔಷಧ ಮಾಡಿದರೂ ಕೆಲವೇ ದಿನ, ಮತ್ತೆ ಕಾಡಲು ಆರಂಭವಾಗುತ್ತದೆ. ನಿಮಗೆ ಗೊತ್ತೇ? ಪ್ರತಿವರ್ಷ ಅಕ್ಟೋಬರ್‌ 16ರಂದು ವಿಶ್ವ ಬೆನ್ನು ಮೂಳೆ ದಿನವನ್ನು ಆಚರಿಸಲಾಗುತ್ತದೆ. ಬೆನ್ನುಮೂಳೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವುದು, ಜನರಲ್ಲಿ ಅರಿವು ಮೂಡಿಸುವುದು ಈ ದಿನದ ಆಚರಣೆಯ ಪ್ರಮುಖ ಉದ್ದೇಶ. ನಮ್ಮ ಸುತ್ತಮುತ್ತ ಬೆನ್ನು ನೋವಿನಿಂದ ಸುಸ್ತಾಗಿರುವ ಸಾಕಷ್ಟು ಜನರನ್ನು ಕಾಣಬಹುದು. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಕುಳಿತುಕೊಳ್ಳುವ ಭಂಗಿಯೂ ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು.

ಕುಳಿತುಕೊಳ್ಳುವ, ನಡೆಯುವ, ನಿಂತುಕೊಳ್ಳುವ ಭಂಗಿಯಿಂದಲೂ ನೋವು (Pain) ಹೆಚ್ಚಾಗಬಹುದು. ಉತ್ತಮ ಭಂಗಿಯಲ್ಲಿ ನೋವು ಕಡಿಮೆ ಆಗುತ್ತದೆ. ಹಾಗೆಯೇ, ಕೆಲವು ಸರಳ ವ್ಯಾಯಾಮಗಳು (Exercise) ಬೆನ್ನು ನೋವಿಗೆ ಪರಿಹಾರ ನೀಡುತ್ತವೆ. ಅವುಗಳನ್ನು ನಿಯಮಿತವಾಗಿ ಮಾಡುವುದರಿಂದ ಬೆನ್ನು ನೋವು ಖಂಡಿತವಾಗಿ ನಿಯಂತ್ರಣದಲ್ಲಿ ಇರುತ್ತದೆ. ಬೆನ್ನು ನೋವಿರಲಿ, ಬಿಡಲಿ, ಕೆಲವು ಸರಳ ವ್ಯಾಯಾಮಗಳನ್ನು ದಿನವೂ ಮಾಡುತ್ತಿದ್ದರೆ ಬೆನ್ನು ನೋವು ಹತ್ತಿರಕ್ಕೂ ಸುಳಿಯುವುದಿಲ್ಲ. 

•    ಮುಂದಕ್ಕೆ ಬಾಗುವ ಉತ್ಥಾನಾಸನ (Forward Fold)
ಬೆನ್ನು ಮೂಳೆಯ (Spine) ಮೇಲೆ ಉಂಟಾಗುವ ಒತ್ತಡವನ್ನು (Stress) ಈ ಭಂಗಿ (Posture) ಕಡಿಮೆ ಮಾಡುತ್ತದೆ. ಇದರಿಂದ ಹಿಂಭಾಗ (Back) ಮತ್ತು ಕಾಲುಗಳು (Legs) ಸಹ ಹಿಗ್ಗುತ್ತವೆ. ಈ ವ್ಯಾಯಾಮ (Exercise) ಮಾಡುವಾಗ ಹಿಂಬದಿಯ ಸಂಪೂರ್ಣ ಅವಯವಗಳು ಹಿಗ್ಗುವುದರಿಂದ ಬೆನ್ನು ನೋವು (Back Pain) ಕಡಿಮೆ ಆಗುತ್ತದೆ.  

ಎಂಜಾಯ್ ಮಾಡ್ಕೊಂಡು ವ್ಯಾಯಾಮ ಮಾಡಿ! 

•    ಕುಂಭಕಾಸನ (High Plank)
ಇದು ಅತ್ಯಂತ ಸುಲಭದ (Easy) ಭಂಗಿಯಾಗಿ ಕಂಡರೂ ಆರಂಭದಲ್ಲಿ ಮಾಡಲು ತುಸು ಕಷ್ಟವಾಗಬಹುದು. ಆದರೆ, ದಿನವೂ ಅಭ್ಯಾಸ ಮಾಡಿದರೆ ಸುಲಭವಾಗಿ ಕರಗತ ಮಾಡಿಕೊಳ್ಳಬಹುದು. ಕಾಲುಗಳ ಬೆರಳುಗಳು (Toes) ಮತ್ತು ಕೈಗಳ (Hands) ಮೇಲೆ ಇಡೀ ದೇಹದ ಭಾರ ಹಾಕುವ ಆಸನ (Asana) ಇದು. ಇದನ್ನು ಮಾಡುವಾಗ ಕೈಗಳು ಹಾಗೂ ಬೆನ್ನು ಮೂಳೆ ವಿಸ್ತಾರವಾಗಿ ಹಿಗ್ಗುತ್ತದೆ (Strech). ಹೀಗಾಗಿ, ಬೆನ್ನು ಮೂಳೆಗೆ ಭಾರೀ ಹಿತವಾಗುತ್ತದೆ. ಭುಜ, ತೋಳುಗಳು (Arms) ಹಾಗೂ ಮಂಡಿಯ ಆರೋಗ್ಯಕ್ಕೂ ಪೂರಕವಾದ ವ್ಯಾಯಾಮ ಇದಾಗಿದೆ. ಕಾಲುಗಳನ್ನು ನೆಲಕ್ಕೆ ಊರುವ ಅರ್ಧ ಕುಂಭಕಾಸನವನ್ನೂ ಮಾಡಬಹುದು. ದೇಹದ ಸಮತೋಲನ (Balance), ಉತ್ತಮ ಭಂಗಿ ಕಾಯ್ದುಕೊಳ್ಳಲು ಇದು ಭಾರಿ ಅನುಕೂಲ ಮಾಡುತ್ತದೆ.

•    ಮಗುವಿನ ಭಂಗಿಯ ಬಾಲಾಸನ (Child Pose-Balasana)
ಇದು ಯೋಗವನ್ನು (Yoga) ಹೊಸದಾಗಿ ಆರಂಭ ಮಾಡುತ್ತಿರುವವರಿಗೆ ಹೇಳಿಕೊಡುವ ಸಾಮಾನ್ಯ ಭಂಗಿ. ಆದರೆ, ಇದು ದೇಹ (Body) ಹಾಗೂ ಮನಸ್ಸಿಗೆ (Mind) ಭಾರೀ ಆರಾಮ (Relax) ನೀಡುವ ಭಂಗಿಯಾಗಿದೆ. ಬೆನ್ನು ಮೂಳೆಯ ಬಿಗಿತವನ್ನು (Stiffness) ಹೋಗಲಾಡಿಸಿ ನೋವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಇದು ಹೊಟ್ಟೆಯ ಕೊಬ್ಬನ್ನು (Belly Fat) ಕರಗಿಸುವಲ್ಲಿಯೂ ಪ್ರಮುಖ ಆಸನವಾಗಿದೆ. ಫ್ಯಾಟಿ ಲಿವರ್‌ ಸಮಸ್ಯೆ ಹೊಂದಿರುವವರು ಇದನ್ನು ಮಾಡಿದರೆ ಭಾರೀ ಅನುಕೂಲ ಆಗುತ್ತದೆ. 

ಅಬ್ಬಾ, ಈ ಕತ್ತು ನೋವು ಅದೆಲ್ಲಿಂದ ಬರುತ್ತೋ ಗೊತ್ತಿಲ್ಲ, ಇಲ್ಲಿದೆ ಮದ್ದು

•    ಅಧೋಮುಖ ಶ್ವಾನಾಸನ (Downward Facing Dog)
ಈ ಆಸನ ಕೂಡ ನೋಡಲು ಅತಿ ಸರಳ ಎನ್ನುವಂತೆ ಭಾಸವಾಗುತ್ತದೆ. ಆದರೆ, ಮಾಡುವುದು ಆರಂಭದಲ್ಲಿ ತುಸು ಕಷ್ಟವಾಗಬಹುದು. ದಿನವೂ ಅಭ್ಯಾಸ (Practice) ಮಾಡಿದರೆ ಸೂಕ್ತ ಭಂಗಿಯನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಭಂಗಿಯಲ್ಲಿ ಇಡೀ ದೇಹವನ್ನು ಸಮತೋಲನ ಮಾಡುವುದರಿಂದ ಇದು ದೇಹಕ್ಕೆ ಹಿತ ನೀಡುತ್ತದೆ. ಬೆನ್ನು ನೋವು ಕಡಿಮೆ ಆಗುತ್ತದೆ. ಜತೆಗೆ, ಹಿಂಭಾಗದ ಮಾಂಸಖಂಡಗಳು (Muscles) ಸದೃಢವಾಗಲು (Strong) ಅನುಕೂಲವಾಗುತ್ತದೆ. 

ಇಷ್ಟೇ ಅಲ್ಲ, ಯೋಗದಲ್ಲಿ ಇನ್ನೂ ಸಿಕ್ಕಾಪಟ್ಟೆ ಆಸನಗಳಿವೆ. ಅವುಗಳನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಬೆನ್ನು ನೋವು ನಿವಾರಣೆಯಾಗುತ್ತದೆ. ತ್ರಿಕೋಣಾಸನ, ಉಷ್ಟ್ರಾಸನ, ಹಲಾಸನ, ಶಲಭಾಸನ ಮುಂತಾದ ಆಸನಗಳಿಂದ ಬೆನ್ನು ನೋವು ಕಡಿಮೆಯಾಗುತ್ತದೆ. 

Follow Us:
Download App:
  • android
  • ios