Health
ಮುಂಜಾನೆ ಎದ್ದು ಮಾಡುವಂತಹ ಕೆಲವು ಕೆಲಸಗಳು ನಮ್ಮ ಜೀವನವನ್ನೇ ಬದಲಾಯಿಸುತ್ತೆ ಅಲ್ವಾ? ಹೌದು, ಉತ್ತಮ ಆರೋಗ್ಯ, ಉತ್ತಮ ದಿನ ಮತ್ತು ಉತ್ತಮ ಮನಸ್ಸಿಗಾಗಿ ನೀವು ಮುಂಜಾನೆ ಈ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳೋದು ಉತ್ತಮ.
ನಾಳೆಗೆ ಏನೆಲ್ಲಾ ಆಗಬೇಕು ಅನ್ನೋದನ್ನು ಹಿಂದಿನ ರಾತ್ರಿಯೇ ಪ್ಲ್ಯಾನ್ ಮಾಡಿ. ಏನೆಲ್ಲಾ ಕೆಲಸ ಆಗಬೇಕು, ಯಾವ ಬಟ್ಟೆ ಧರಿಸಬೇಕು ಎಲ್ಲವನ್ನೂ ಪ್ಲ್ಯಾನ್ ಮಾಡಿದ್ರೆ ಮರುದಿನ ಬೆಳಗ್ಗೆ ಫ್ರೆಶ್ ಆಗಿ ಎದ್ದೇಳಬಹುದು.
ಬೆಳಗ್ಗೆ ಎದ್ದು ಯಾವುದೇ ಕೆಲಸ ಮಾಡುವ ಮುನ್ನ ನೀವು, ಹಲ್ಲುಜ್ಜುವ ಮುನ್ನ ಒಂದು ಗ್ಲಾಸ್ ನೀರು ಕುಡಿಯಿರಿ. ಇದು ನಿಮ್ಮ ದೇಹವನ್ನು ಹೈಡ್ರೇಟ್ ಮಾಡುತ್ತೆ, ಜೊತೆಗೆ ಹೊಟ್ಟೆ ಕ್ಲೀನ್ ಆಗುವಂತೆ ಮಾಡುತ್ತೆ.
ನೀವು ಮನೆಯಿಂದ ಹೊರ ಹೋಗುವ ಮುನ್ನ, ಕ್ಯಾಲೆಂಡರ್ ಅಥವಾ ಟುಡು ಲಿಸ್ಟ್ ಚೆಕ್ ಮಾಡಿ. ಇದರಿಂದ ಸರಿಯಾಗಿ ಟೈಮ್ ಮ್ಯಾನೇಜ್ ಮಾಡಲು ಸಾಧ್ಯವಾಗುತ್ತೆ.
ಪ್ರತಿದಿನ ಬೆಳಗ್ಗೆ ಮನೆಯಿಂದ ಹೊರಗೆ ಹೋಗಿ ಒಂದು 15-20 ನಿಮಿಷ ವಾಕ್ ಮಾಡಿ. ಪ್ರತಿದಿನ ಇದನ್ನ ಮಾಡೋದರಿಂದ ಶುದ್ಧ ಗಾಳಿ ಸಿಗುತ್ತೆ, ಜೊತೆಗೆ ನೀವು ಆರೋಗ್ಯದಿಂದಿರಲು ಸಾಧ್ಯವಾಗುತ್ತೆ.
ನಮ್ಮೆಲರಿಗೂ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವ ಅಭ್ಯಾಸ ಇರುತ್ತೆ, ಆದರೆ ಅದನ್ನ ಮಾಡ್ಲೇ ಬೇಡಿ. ಇದು ಕಷ್ಟ, ಆದ್ರೆ ಬೆಳಗ್ಗೆ ಮೊಬೈಲ್ ನಿಂದ ದೂರ ಇದ್ರೆ ಕೆಲಸಗಳು ಬೇಗನೆ ಆಗುತ್ತವೆ.
ನಿಮಗೆ ಯಾವ ಒಂದು ಕೆಲಸ ತುಂಬಾನೆ ಸಂತೋಷ ಕೊಡುತ್ತೆ ಅನ್ನೋದನ್ನು ತಿಳಿದುಕೊಂಡು ಅದನ್ನ ಮಾಡಿ. ಉದಾಹರಣೆ ನಾಯಿ ಜೊತೆ ವಾಕ್, ಮೆಡಿಟೇಶನ್ ಅಥವಾ ಪುಸ್ತಕ ಓದೋದು.
ನಿಮ್ಮ ಮನಸಿನಲ್ಲಿ ಬರುವಂತಹ ಯೋಚನೆಗಳು, ನಿಮ್ಮ ನಿನ್ನೆಯ ದಿನಚರಿ ಎಲ್ಲವನ್ನೂ ಒಂದು ಜರ್ನಲ್ ನಲ್ಲಿ ಬರೆದಿಡಿ. ಅದನ್ನ ಬೆಳಗ್ಗೆಯೇ ಮಾಡಿದ್ರೆ ಮನಸ್ಸು ಹಗುರಾಗುತ್ತೆ.