ಕೊರೋನಾ ವಾರಿಯರ್ಸ್ ಆದ ಸಂಗೀತ ನಿರ್ದೇಶಕ/  ಐ ಲವ್ ಯು ಚಿತ್ರಕ್ಕೆ ಸಂಗೀತ ನೀಡಿದ್ದ ಸಂಗೀತ ನಿರ್ದೇಶಕ ಕಿರಣ್/ ವೈದ್ಯರಾಗಿದ್ದ ಕಿರಣ್ ಮತ್ತೆ ತಮ್ಮ ಕೆಲಸಕ್ಕೆ ಮರಳಿದ ಬಗೆ

ಬೆಂಗಳೂರು(ಜು.07) ಕೊರೋನಾ ಕಾರಣಕ್ಕೆ ಒಬ್ಬೊಬ್ಬರು ಒಂದೊಂದು ಜನ ಮೆಚ್ಚುವ ಕೆಲಸ ಮಾಡಿಕೊಂಡೇ ಬಂದಿದ್ದಾರೆ. ಇಲ್ಲೊಬ್ಬರು ಸಂಗೀತ ನಿರ್ದೇಶಕ ಮತ್ತೆ ತಮ್ಮ ವೈದ್ಯ ಕೆಲಸಕ್ಕೆ ಮರಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಪೇಂದ್ರ ಮತ್ತು ರಚಿತಾ ರಾಮ್ ಕಾಣಿಸಿಕೊಂಡಿದ್ದ ಐ ಲವ್ ಯು ಚಿತ್ರಕ್ಕೆ ಸಂಗೀತ ನೀಡಿದ್ದ ಸಂಗೀತ ನಿರ್ದೇಶಕ ಕಿರಣ್ ಮೂಲತಃ ವೈದ್ಯರು. ಬೆಂಗಳೂರಿನಲ್ಲಿ ಕೊರೋನಾ ಅಟ್ಟಹಾಸಗೈಯುತ್ತಿರುವುದರಿಂದ ಕಿರಣ್ ತೋಟಂಬೈಲು ಇದೀಗ ಕೊರೋನಾ ವಾರಿಯರ್ ಆಗಿ ರೋಗಿಗಳ ಆರೈಕೆ ಮಾಡುತ್ತಿದ್ದಾರೆ.

ಮುರುಕಲು ಸೇತುವೆ ಮೇಲೆ ಆಶಾ ಕಾರ್ಯಕರ್ತೆಯರ ನಡಿಗೆ

ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯ ಕೊವಿಡ್ ಕ್ಲಿನಿಕ್ ಅಲ್ಲಿ ಡಾಕ್ಟರ್ ಕಿರಣ್ ಕಾರ್ಯನಿರತರಾಗಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನ ಮನೆಯಲ್ಲಿ ಬಿಟ್ಟು ಕೋವಿಡ್ ವಾರಿಯರ್ ಆಗಿದ್ದಾರೆ ಎಂಬಿಬಿಎಸ್ ಡಾಕ್ಟರ್. ಡಾ. ಕಿರಣ್ ಅವರಿಗೊಂದು ಅಭಿನಂದನೇ ಹೇಳೋಣ.