Asianet Suvarna News Asianet Suvarna News

Health Tips : ಕೊರೊನಾ ಲಸಿಕೆ ಪಡೆದ ಮಕ್ಕಳಲ್ಲಿ ಈ ಲಕ್ಷಣ ಕಾಣಿಸಿಕೊಂಡ್ರೆ ನಿರ್ಲಕ್ಷ್ಯ ಬೇಡ

ಕೊರೊನಾದಿಂದ ದೂರವಿರಲು ಲಸಿಕೆ ಮದ್ದು. ಭಾರತದಲ್ಲಿ ವೇಗವಾಗಿ ನಡೆಯುತ್ತಿರುವ ಲಸಿಕೆ ಅಭಿಯಾನಕ್ಕೆ ಈಗ ಮಕ್ಕಳು ಸೇರಿದ್ದಾರೆ. ಮಕ್ಕಳಿಗೆ ಲಸಿಕೆ ನೀಡುವುದು ಅನಿವಾರ್ಯವಾಗಿದೆ. ಮಕ್ಕಳಿಗೆ ವ್ಯಾಕ್ಸಿನೇಷನ್ ನೀಡಿದ ನಂತ್ರ ಕಾಡುವ ಅಡ್ಡಪರಿಣಾಮದ ಬಗ್ಗೆ ಪಾಲಕರು ಚಿಂತಿಸುವ ಅಗತ್ಯವಿಲ್ಲ.
 

Safety And Side Effects Of COVID-19 Vaccinations in Kids
Author
Bangalore, First Published Jan 6, 2022, 3:58 PM IST

ವಿಶ್ವ (World)ಕ್ಕೆ ಸವಾಲಾಗಿರುವ ದೊಡ್ಡ ಸಾಂಕ್ರಾಮಿಕ ರೋಗ ಕೊರೊನಾ (Corona). ಒಂದಾದ್ಮೇಲೆ ಒಂದರಂತೆ ರೂಪಾಂತರಗೊಳ್ತಿರುವ ಕೊರೊನಾ ಜನರನ್ನು ಹೈರಾಣವಾಗಿಸಿದೆ. ಕೊರೊನಾ,ಡೆಲ್ಟಾ ರೂಪಾಂತರದ ನಂತ್ರ ಒಮಿಕ್ರೋನ್ ಈಗ ದೇಶಕ್ಕೂ ಕಾಲಿಟ್ಟಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿರುವ ಕಾರಣ ದೇಶದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಕರ್ನಾಟಕ(Karnataka)ದಲ್ಲಿಯೂ ಕೊರೊನಾ ನಿಯಂತ್ರಣಕ್ಕೆ ಅಗತ್ಯ ನಿಯಮ ಜಾರಿಗೆ ಬಂದಿದೆ. ಈ ಎಲ್ಲದರ ಮಧ್ಯೆಯೇ ಕೊರೊನಾ ಲಸಿಕೆ (Corona Vaccine )ಅಭಿಯಾನ ವೇಗವಾಗಿ ನಡೆಯುತ್ತಿದೆ. ವಯಸ್ಕರಿಗೆ ಕೊರೊನಾ ಎರಡು ಲಸಿಕೆ ಪಡೆಯುವಂತೆ ಒಂದು ಕಡೆ ಮನವಿ ಮಾಡ್ತಿದ್ದರೆ ಇನ್ನೊಂದು ಕಡೆ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗ್ತಿದೆ.

ಜನವರಿ ಐದರಿಂದ 15 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಆರಂಭದಲ್ಲಿ ಕೊರೊನಾ ಲಸಿಕೆ ಹಾಕುವಾಗ ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು. ಈಗ ವಯಸ್ಕರು ಯಾವುದೇ ಭಯವಿಲ್ಲದೆ ಲಸಿಕೆ ಪಡೆಯುತ್ತಿದ್ದಾರೆ. ಆದ್ರೆ ಮಕ್ಕಳಿಗೆ ಲಸಿಕೆ ಹಾಕಲು ಅನೇಕ ಪಾಲಕರು ಹಿಂದೇಟು ಹಾಕ್ತಿದ್ದಾರೆ. ಇದಕ್ಕೆ ಕಾರಣ ಲಸಿಕೆಯ ಸೈಡ್ ಇಫೆಕ್ಟ್.ಆದ್ರೆ ಇದಕ್ಕೆ ಭಯಪಡಬೇಕಾಗಿಲ್ಲ. ವಯಸ್ಕರಂತೆ ಮಕ್ಕಳಿಗೂ ವ್ಯಾಕ್ಸಿನೇಷನ್ ನಂತರ ಕೆಲವು ಸೌಮ್ಯ ಅಡ್ಡ ಪರಿಣಾಮ ಕಾಣಿಸಿಕೊಳ್ತಿದೆ. ಈ ರೋಗಲಕ್ಷಣಗಳು ಸೌಮ್ಯವಾಗಿರುವ ಕಾರಣ ಪೋಷಕರು ಪ್ಯಾನಿಕ್ ಆಗಬೇಕಾಗಿಲ್ಲ.

ಮಕ್ಕಳಿಗೆ ಲಸಿಕೆ ಹಾಕಿದ ನಂತ್ರ ಯಾವೆಲ್ಲ ಅಡ್ಡಪರಿಣಾಮ ಕಾಣಿಸಿಕೊಳ್ಳುತ್ತದೆ ಎಂಬುದನ್ನು ತಜ್ಞರು ಹೇಳಿದ್ದಾರೆ. ಮೊದಲ ಡೋಸ್ ನಂತ್ರ  ತಕ್ಷಣವೇ ಪರಿಣಾಮ ಕಾಣಿಸಿಕೊಳ್ಳಲು ಪ್ರಾರಂಭಿಸುವುದಿಲ್ಲ. ಲಸಿಕೆ ಪಡೆದ ಕೆಲ ಗಂಟೆಗಳ ನಂತ್ರ ರೋಗಲಕ್ಷಣ ಕಂಡು ಬಂದ್ರೂ ಒಂದರೆಡು ದಿನಗಳಲ್ಲಿ ಇದು ಕಡಿಮೆಯಾಗುತ್ತದೆ.

ಮಕ್ಕಳಲ್ಲಿ ಕೊರೊನಾ ಲಸಿಕೆ ನಂತರ ಕಾಣಿಸಿಕೊಳ್ಳುವ ಅಡ್ಡಪರಿಣಾಮಗಳು 

ಚರ್ಮದ ಮೇಲೆ ಕೆಂಪು ಕಲೆ ಮತ್ತು ನೋವು: ಲಸಿಕೆ ಹಾಕಿ ಜಾಗ ಸ್ವಲ್ಪ ಕೆಂಪಾಗಬಹುದು. ಅಲ್ಲಿ ಸಣ್ಣ ನೋವು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಲಸಿಕೆಯ ನೋವನ್ನು ಕಡಿಮೆ ಮಾಡಲು ಲಸಿಕೆ ಹಾಕಿದ ಕೈ ಭಾಗಕ್ಕೆ ತಂಪಾದ, ಮೃದುವಾದ ಬಟ್ಟೆಯನ್ನು ಇಡಬೇಕು. ಇದರಿಂದ ಹಿತವೆನಿಸುತ್ತದೆ. ನೋವು ನಿಧಾನವಾಗಿ ಕಡಿಮೆಯಾಗುತ್ತದೆ. ಆದ್ರೆ ನೋವಿರುವ ಜಾಗಕ್ಕೆ ಯಾವುದೇ ನೋವಿನ ಔಷಧಿ ಹಚ್ಚಬಾರದು.  

ಪ್ರಜ್ಞಾಹೀನತೆ: ವ್ಯಾಕ್ಸಿನೇಷನ್ ನಂತರ ಪ್ರಜ್ಞೆ ತಪ್ಪುವ ಸಾಧ್ಯತೆ ಅಪರೂಪಕ್ಕೊಂದು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ. ಹಾಗಾಗಿ ಲಸಿಕೆ ಪಡೆದ ತಕ್ಷಣ ಕೇಂದ್ರದಿಂದ ಹೊರಗೆ ಹೋಗುವುದ ಸೂಕ್ತವಲ್ಲ. ಲಸಿಕೆ ಪಡೆದ ನಂತರ ಸುಮಾರು 15 ನಿಮಿಷಗಳ ಕಾಲ ಅಲ್ಲಿಯೇ ಕುಳಿತುಕೊಳ್ಳುವುದು ಅಥವಾ ಮಲಗಿಕೊಳ್ಳುವುದು ಸೂಕ್ತ. 

Break Up : ಕುಂತ್ರೂ, ನಿಂತ್ರೂ ಕಾಡೋ ಮಾಜಿಯನ್ನು ಮತ್ತೆ ಯಾಕೆ ಸಂಪರ್ಕಿಸ್ಬಾರ್ದು ಅಂದ್ರೆ..

ಸೌಮ್ಯ ಜ್ವರ : ಲಸಿಕೆ ಪಡೆದ ಮಕ್ಕಳಲ್ಲಿ ಸೌಮ್ಯ ಜ್ವರ ಕಾಣಿಸಿಕೊಳ್ಳುತ್ತದೆ. ಇದಕ್ಕೆ ವೈದ್ಯರ ಸಲಹೆ ಮೇರೆಗೆ ಔಷಧ ಸೇವಿಸಬೇಕಾಗುತ್ತದೆ. ಔಷಧಿ ಸೇವಿಸಿದ ಒಂದು ದಿನದಲ್ಲಿ ಜ್ವರ ಕಡಿಮೆಯಾಗುತ್ತದೆ. ಜ್ವರದ ಪ್ರಮಾಣ ಹೆಚ್ಚಿದ್ದು, ಮೂರ್ನಾಲ್ಕು ದಿನಗಳವರೆಗೆ ಮುಂದುವರೆದಿದ್ದರೆ ಮತ್ತೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಸುಸ್ತು : ಲಸಿಕೆಯನ್ನು ಪಡೆದ ಮಕ್ಕಳಲ್ಲಿ ಆಯಾಸ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಲಸಿಕೆ ಪಡೆದ ಒಂದು ದಿನ ಮಕ್ಕಳಿಗೆ ವಿಶ್ರಾಂತಿ ನೀಡುವುದು ಉತ್ತಮ. ಬೆಚ್ಚಗಿನ ನೀರು ಮತ್ತು ದ್ರವ ಪದಾರ್ಥವನ್ನು ಹೆಚ್ಚಾಗಿ ನೀಡಬೇಕು. ಆದ್ರೆ ಪ್ಯಾಕೆಟ್ ನಲ್ಲಿರುವ ದ್ರವ ಪದಾರ್ಥ,ತಣ್ಣನೆಯ ಆಹಾರವನ್ನು ನೀಡಬೇಡಿ. 

Corona Virus ಎಂದರೆ ಬರೀ ಜ್ವರ, ಉಸಿರಾಟದ ಸಮಸ್ಯೆಯಲ್ಲ, ಇನ್ನೂ ಹಲ ಲಕ್ಷಣಗಳಿವೆ..

ತಲೆ ಸುತ್ತು : ಲಸಿಕೆ ನಂತ್ರ ಕೆಲ ಮಕ್ಕಳಿಗೆ ತಲೆ ಸುತ್ತಿದ ಅನುಭವವಾಗುತ್ತದೆ. ಇದು ಲಸಿಕೆಯ ಅಡ್ಡ ಪರಿಣಾಮವಲ್ಲ. ಲಸಿಕೆಯನ್ನು ಖಾಲಿ ಹೊಟ್ಟೆಯಲ್ಲಿ ಪಡೆದಿದ್ದರೆ ಇದು ಸಂಭವಿಸುತ್ತದೆ. 
ಒಂದು ವೇಳೆ ಇದಲ್ಲದೆ ಇನ್ನು ಕೆಲ ಸಮಸ್ಯೆ ಮಕ್ಕಳಲ್ಲಿ ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷ್ಯಿಸಬೇಡಿ. ಯಾವುದೇ ಬದಲಾವಣೆ ಕಂಡು ಬಂದರೂ ವೈದ್ಯರನ್ನು ಭೇಟಿಯಾಗಿ,ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಿ.
 

Follow Us:
Download App:
  • android
  • ios