Asianet Suvarna News Asianet Suvarna News

Cyberbullying : ಹುಚ್ಚು ಹಿಡಿಯೋ ಹಾಗೆ ಮಾಡಬಹುದು ಹುಷಾರ್!

ಸಾಮಾಜಿಕ ಜಾಲತಾಣ ಬಳಸುವ ವೇಳೆ ನಾವು ಮಾಡುವ ಸಣ್ಣ ಯಡವಟ್ಟು ನಮ್ಮ ಪ್ರಾಣವನ್ನೇ ತೆಗೆಯೋ ಸಾಧ್ಯತೆಯಿರುತ್ತದೆ. ಮಕ್ಕಳು ಹಾಗೂ ಯುವಕರು ಇದಕ್ಕೆ ಹೆಚ್ಚು ಬಲಿಯಾಗ್ತಾರೆ. ಸುರಕ್ಷಿತವಾಗಿ ಇಂಟರ್ನೆಟ್ ಬಳಕೆ ಮಾಡ್ಬೇಕೆಂದ್ರೆ ನಾವು ಮೊದಲು ಸೈಬರ್ ಬುಲ್ಲಿಂಗ್ ಬಗ್ಗೆಯೂ ತಿಳಿಯಬೇಕು. 
 

Safer Internet Day Unicef Suggestions What Teens Want To Know About Cyberbullying
Author
First Published Feb 7, 2023, 1:28 PM IST

ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಒಂದಂಶವಾಗಿವೆ. ಸಾಮಾಜಿಕ ಜಾಲತಾಣಗಳಿಂದಾಗಿ ಪರಸ್ಪರರನ್ನು ಸಂಪರ್ಕಿಸಲು ಹಾಗೂ ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾಕಷ್ಟು ನೆರವಾಗಿದೆ. ಪ್ರತಿಭೆಗಳನ್ನು ಪ್ರದರ್ಶಿಸಲು ಇದು ಉತ್ತಮ ವೇದಿಕೆಯಾಗಿದೆ. ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಷ್ಟು ಅನುಕೂಲವಿದೆಯೋ ಅಷ್ಟೇ ಅನಾನುಕೂಲವಿದೆ. ಇದನ್ನು ಬಳಸುವವರು ಅನೇಕ ಬಾರಿ ಮೋಸ ಹೋಗ್ತಾರೆ. ಇದನ್ನು ತಪ್ಪಿಸುವ ಉದ್ದೇಶದಿಂದಲೇ ಫೆಬ್ರವರಿ 7ನೇ ತಾರೀಕರನ್ನು ಸುರಕ್ಷಿತ ಇಂಟರ್ನೆಟ್ ದಿನವನ್ನಾಗಿ ಆಚರಿಸಲಾಗುತ್ತದೆ. ಜನರಿಗೆ ಸುರಕ್ಷಿತ ಇಂಟರ್ನೆಟ್ ಸೇವೆ ಒದಗಿಸುವುದು ಇದ್ರ ಉದ್ದೇಶವಾಗಿದೆ. 

ಸುರಕ್ಷಿತ ಇಂಟರ್ನೆಟ್ (Internet) ಎನ್ನುವ ವಿಷ್ಯ ಬಂದಾಗ ಸೈಬರ್‌ಬುಲ್ಲಿಂಗ್ (Cyber Bullying) ಬಗ್ಗೆ ಚರ್ಚೆ ಆಗ್ಲೇಬೇಕು. ಸೈಬರ್‌ಬುಲ್ಲಿಂಗ್ ಮನುಷ್ಯನ ಮನಸ್ಥಿತಿಯನ್ನು ಹಾಳು ಮಾಡುತ್ತದೆ. ಮಕ್ಕಳು ಮತ್ತು ಯುವಕರ ಮಾನಸಿಕ ಆರೋಗ್ಯದ ಮೇಲೆ ಸೈಬರ್ ಬುಲ್ಲಿಂಗ್ ದುಷ್ಪರಿಣಾಮಕಾರಿಯಾಗಿದೆ. ನಾವಿಂದು ಸೈಬರ್ ಬುಲ್ಲಿಂಗ್ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.

ಭಾರತೀಯ ಮಕ್ಕಳು ಆನ್‌ಲೈನ್ ವಂಚನೆ ಬಲಿಯಾಗುವ ಸಾಧ್ಯತೆ ಹೆಚ್ಚು: McAfee 2022 ವರದಿ

ಸೈಬರ್ ಬುಲ್ಲಿಂಗ್ ಅಂದ್ರೇನು? : ಫೇಸ್‌ಬುಕ್ (Facebook), ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್‌ನಂತಹ ಅನೇಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಜನರು ಟ್ರೋಲ್ ಆಗುವುದು ಸೈಬರ್‌ಬುಲ್ಲಿಂಗ್‌ನ ಒಂದು ಭಾಗವಾಗಿದೆ.  ವ್ಯವಸ್ಥಿತ ರೀತಿಯಲ್ಲಿ ಜನರನ್ನು ಬೆದರಿಸುವುದು, ಕೋಪಗೊಳಿಸುವುದು ಅಥವಾ ಮುಜುಗರಕ್ಕೀಡು ಮಾಡುವುದು ಇದ್ರ ಉದ್ದೇಶವಾಗಿರುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಒಬ್ಬರ ಬಗ್ಗೆ ಸುಳ್ಳು ಮಾಹಿತಿ ನೀಡುವುದು, ಮುಜುಗರದ ಫೋಟೋ ಅಥವಾ ವೀಡಿಯೊ ಪೋಸ್ಟ್ ಮಾಡುವುದು, ನಕಲಿ ಖಾತೆ ರಚಿಸುವುದು, ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನಿಂದನೆ, ಬೆದರಿಕೆ ಸಂದೇಶ ರವಾನೆ ಮಾಡುವುದು ಇವೆಲ್ಲವೂ ಸೈಬರ್ ಬುಲ್ಲಿಂಗ್ ನಲ್ಲಿ ಬರುತ್ತದೆ.

ಸೈಬರ್ ಬುಲ್ಲಿಂಗ್ ನಿಂದಾಗುವ ಸಮಸ್ಯೆಗಳೇನು? : 
ಕೆಲವರು ಈ ಬಗ್ಗೆ ತಮಾಷೆ ಮಾಡ್ತಾರೆ. ಮತ್ತೆ ಕೆಲವರು ಗಂಭಿರವಾಗಿರ್ತಾರೆ. ಯಾರು ಗಂಭೀರವಾಗಿದ್ದಾರೆ, ಸೈಬರ್ ಬುಲ್ಲಿಂಗ್ ಮಾಡ್ತಿದ್ದಾರೆ ಎಂಬುದನ್ನು ನೀವು ತಿಳಿಯಬೇಕು. ಹಾಗೆಯೇ ಈ ಸೈಬರ್ ಬುಲ್ಲಿಂಗ್ ಸಾಮಾನ್ಯ ಎನ್ನಿಸುತ್ತದೆ. ಆದ್ರೆ ಅದ್ರ ಪರಿಣಾಮ ಗಂಭೀರವಾಗಿರುತ್ತದೆ. ಇದು ಗಂಭೀರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.  ಸೈಬರ್ ಬುಲ್ಲಿಂಗ್ ಗೆ ಬಲಿಯಾಗುವವರು ಅಸಮಾಧಾನ, ಅವಮಾನ, ಭಯ ಅಥವಾ ಕೋಪಕ್ಕೆ ಒಳಗಾಗ್ತಾರೆ. ಇದು ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ದಣಿವು, ಕಿಬ್ಬೊಟ್ಟೆ ನೋವು ಮತ್ತು ತಲೆನೋವು ಕಾಡುತ್ತದೆ. 

ಹೆಚ್ಚಾಗುತ್ತೆ ಒತ್ತಡ : ಸೈಬರ್‌ಬುಲ್ಲಿಂಗ್‌  ಮಾನಸಿಕ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಸೈಬರ್ ಬುಲ್ಲಿಂಗ್ ಗೆ ಒಳಗಾದವರು, ಜನರು ನನ್ನ ಬಗ್ಗೆ ಏನು ಆಲೋಚನೆ ಮಾಡ್ತಿರಬಹುದು ಎಂದು ಸದಾ ಚಿಂತಿಸುತ್ತಾರೆ. ಅವರಲ್ಲಿ ನಕಾರಾತ್ಮಕ ಆಲೋಚನೆ ಹೆಚ್ಚಾಗುತ್ತದೆ. ಆತಂಕ,ಒತ್ತಡ ಮತ್ತು ಖಿನ್ನತೆ ಸಮಸ್ಯೆ ಹೆಚ್ಚಾಗುತ್ತದೆ. 

ಆತ್ಮಹತ್ಯೆ ಅಪಾಯ ಹೆಚ್ಚು : ಸೈಬರ್ ಬುಲ್ಲಿಂಗ್  ಗೆ ಒಳಗಾದ ಜನರು  ಆತ್ಮಹತ್ಯೆ ಬಗ್ಗೆ ಹೆಚ್ಚು ಆಲೋಚನೆ ಮಾಡ್ತಾರೆ. ಅದರ ಪ್ರಯತ್ನ ಕೂಡ ನಡೆಸಿರುತ್ತಾರೆ ಎಂದು ತಜ್ಞರು ಹೇಳಿದ್ದಾರೆ. ಬೆದರಿಕೆಯಂತಹ ಪ್ರಕರಣಗಳಲ್ಲಿ ವ್ಯಕ್ತಿ ಬಲವಂತವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. 

ಸೈಬರ್ ಬುಲ್ಲಿಂಗ್ ಗೆ ಒಳಗಾದವರು ಏನು ಮಾಡ್ಬೇಕು? : ಆನ್‌ಲೈನ್ ಮಾಧ್ಯಮಗಳ ಮೂಲಕ ಯಾರಾದರೂ ನಿಮಗೆ ಬೆದರಿಕೆ ಹಾಕುತ್ತಿದ್ದರೆ, ನಿಮ್ಮ ಇಮೇಜ್‌ಗೆ ಕಳಂಕ ತರಲು ಪ್ರಯತ್ನಿಸುತ್ತಿದ್ದರೆ ನೀವು ಕೆಲವೊಂದು ವಿಷ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. 

ಬೇರೆಯವರ ಮೇಲಿರಲಿ ಪ್ರೀತಿ, ಇದು ಮರಳಿ ಕೊಡುತ್ತೆ ಇನ್ನಷ್ಟು

1. ಮಕ್ಕಳು ಮತ್ತು ಯುವಕರಲ್ಲಿ ಇದು ಹೆಚ್ಚಾಗಿರುವ ಕಾರಣ ಅವರು ಪೋಷಕರು ಅಥವಾ ಸಂಬಂಧಿಕರು ಇಲ್ಲವೆ ಸ್ನೇಹಿತರ ಸಹಾಯ ಪಡೆಯಬೇಕು. ಯಾವುದೇ ಕಾರಣಕ್ಕೂ ಅದನ್ನು ಮುಚ್ಚಿಡುವ ಪ್ರಯತ್ನ ನಡೆಸಬಾರದು. 
2. ಶಾಲೆಯಲ್ಲಿ ಸಲಹೆಗಾರರು, ತರಬೇತುದಾರ ಅಥವಾ ನಿಮ್ಮ ನೆಚ್ಚಿನ ಶಿಕ್ಷಕರೊಂದಿಗೆ ನೀವು ಇದನ್ನು ಚರ್ಚಿಸಬಹುದು.
3. ಸಾಮಾಜಿಕ ಮಾಧ್ಯಮವನ್ನು ಸುರಕ್ಷಿತವಾಗಿ ಬಳಸಿ.
4. ಎಲ್ಲ ಸಾಮಾಜಿಕ ಜಾಲತಾಣದಲ್ಲೂ ನಿಮ್ಮ ಗೌಪ್ಯತೆ ಕಾಪಾಡಲು ಅವಕಾಶವಿದ್ದು, ಅದನ್ನು ಪಾಲಿಸಬೇಕು.
5. ಅಪರಿಚಿತರ ಸ್ನೇಹ ಬೆಳೆಸುವ ಕೆಲಸಕ್ಕೆ ಹೋಗಬಾರದು. 

Follow Us:
Download App:
  • android
  • ios