ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಜನರು ಹೆಚ್ಚು ಆದ್ಯತೆ ನೀಡ್ತಿದ್ದಾರೆ. ಯೋಗ,ಜಿಮ್,ಒತ್ತಡ ನಿವಾರಿಸುವು ಕ್ಲಾಸ್ ಗಳಿಗೆ ಹೋಗ್ತಿದ್ದಾರೆ. ಇವುಗಳ ಮಧ್ಯೆ ಸಿಗುವು ಬಿಡುವಿನ ಸಮಯದಲ್ಲಿ ಉಗುರುಗಳನ್ನು ಉಜ್ಜಿದ್ರೆ ಏನೆಲ್ಲ ಲಾಭವಿದೆ ಗೊತ್ತಾ?
ಅಂಗೈ (Palms) ನಲ್ಲಿ ಆರೋಗ್ಯ (Health)ವಿದೆ. ಪ್ರಾಚೀನ ಕಾಲದಿಂದಲೂ ಜನರು ಇದನ್ನು ನಂಬಿದ್ದಾರೆ. ಅಂಗೈಗಳನ್ನು ಉಜ್ಜುವುದ್ರಿಂದ ಹಾಗೂ ಅಂಗೈ ಬಿಂದುಗಳನ್ನು ಒತ್ತುವುದ್ರಿಂದ ಅನೇಕ ರೋಗಗಳನ್ನು ಗುಣಪಡಿಸಲಾಗುತ್ತದೆ. ಹಾಗೆಯೇ ಉಗುರಿ (Nail) ನಲ್ಲೂ ನಮ್ಮ ಆರೋಗ್ಯ ಕಾಪಾಡುವ ಶಕ್ತಿಯಿದೆ. ಅನೇಕರು ಕುಳಿತಲ್ಲೇ ಉಗುರು ಉಜ್ಜಿಕೊಳ್ಳುವುದನ್ನು ನಾವು ಕಂಡಿರುತ್ತೇವೆ. ಇದೇಕೆ ಹೀಗೆ ಎಂಬ ಪ್ರಶ್ನೆಯೂ ನಮ್ಮ ಮನಸ್ಸಿನಲ್ಲಿ ಬಂದಿರುತ್ತದೆ. ಪ್ರಪಂಚದ ಅನೇಕ ದೊಡ್ಡ ಯೋಗ ಗುರುಗಳು ಉಗುರುಗಳನ್ನು ಉಜ್ಜಲು ಶಿಫಾರಸು ಮಾಡುತ್ತಾರೆ. ಅನೇಕ ರೋಗಗಳಿಗೆ ಇದು ಮದ್ದಾಗುತ್ತದೆ. ಈ ಪ್ರಕ್ರಿಯೆಯನ್ನು ಬಾಲಯಂ (Balayam) ಎಂದು ಕರೆಯಲಾಗುತ್ತದೆ. ಇದರ ಅರ್ಥ ಕೂದಲು ವ್ಯಾಯಾಮ ಎಂದಾಗುತ್ತದೆ. ಪ್ರಾಚೀನ ಕಾಲದಿಂದಲೂ ಉಗುರು ಉಜ್ಜುವಂತೆ ಸಲಹೆ ನೀಡುತ್ತ ಬರಲಾಗಿದೆ. ಈಗ್ಲೂ ಜನರು ಇದನ್ನು ಪಾಲಿಸುತ್ತ ಬಂದಿದ್ದಾರೆ. ಇಂದು ನಾವು ಉಗುರು ಉಜ್ಜುವುದ್ರಿಂದ ಆಗುವ ಲಾಭವೇನು ಎಂಬುದನ್ನು ನಿಮಗೆ ಹೇಳ್ತೇವೆ.
ಉಗುರುಗಳನ್ನು ಉಜ್ಜುವ ಪ್ರಕ್ರಿಯೆಯಿಂದ ಪ್ರಯೋಜನವೇನು ? : ಆಕ್ಯುಪ್ರೆಶರ್ ಥೆರಪಿಯಲ್ಲಿ ಉಗುರುಗಳನ್ನು ಉಜ್ಜುವುದಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಕೆಟ್ಟ ಜೀವನಶೈಲಿ, ಜಂಕ್ ಫುಡ್ ಸೇವನೆ, ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಕೊರತೆ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು ಮುಂತಾದ ಕಾರಣಗಳಿಂದ ಹಲವು ರೀತಿಯ ಸಮಸ್ಯೆಗಳು ಶುರುವಾಗುತ್ತವೆ. ಇಂಥ ಕಾರಣಕ್ಕೆ ಆಗುವ ಆರೋಗ್ಯ ಸಮಸ್ಯೆಗೆ ಉಗುರು ಉಜ್ಜುವ ವಿಧಾನ ಸಮಾಧಾನ ನೀಡಬಲ್ಲದು.
ಕೂದಲಿಗೆ ಮದ್ದು: ಹೆಸರೇ ಹೇಳುವಂತೆ ಪರಸ್ಪರ ಉಗುರುಗಳನ್ನು ಉಜ್ಜುವುದು ಕೂದಲಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಜೀವನಶೈಲಿ,ಬದಲಾದ ವಾತಾವಣ,ಕಲುಷಿತ ನೀರು,ಒತ್ತಡದ ಜೀವನದಲ್ಲಿ ತಲೆ ಮೇಲಿರುವ ಕೂದಲನ್ನು ರಕ್ಷಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕೂದಲು ಉದುರುವ ಸಮಸ್ಯೆ ದೊಡ್ಡದಾಗಿದೆ. ಅನೇಕರು ಬೋಳು ತಲೆಯಿಂದ ಬಳಲುತ್ತಿದ್ದಾರೆ. ಇನ್ನು ಕೆಲವರ ತಲೆಯಲ್ಲಿ ಅಲ್ಲೊಂದು,ಇಲ್ಲೊಂದು ಕೂದಲು ಕಾಣಿಸುತ್ತದೆ. ಮತ್ತೆ ಕೆಲವರ ಕೂದಲು ತುಂಬಾ ತೆಳ್ಳಗಿರುತ್ತದೆ. ಇದೆಲ್ಲದಕ್ಕೂ ಉಗುರು ಉಜ್ಜುವುದು ಪರಿಹಾರವಾಗುತ್ತದೆ. ಸಣ್ಣ ವಯಸ್ಸಿನಲ್ಲಿಯೇ ಕಾಡುವ ಬಿಳಿ ಕೂದಲ ಸಮಸ್ಯೆಯಿಂದಲೂ ಇದು ನಮ್ಮನ್ನು ರಕ್ಷಿಸುತ್ತದೆ. ಬಾಲಯಂ ಮಾಡುವುದರಿಂದ ಕೂದಲ ಬೆಳವಣಿಗೆ ಶುರುವಾಗುತ್ತದೆ. ವಿಜ್ಞಾನಿಗಳು ನಡೆಸಿದ ಅಧ್ಯಯನಗಳ ಪ್ರಕಾರ, ಬಾಲಯಂ ಯೋಗವು ಕೂದಲನ್ನು ಆರೋಗ್ಯಕರವಾಗಿಡಲು ಬಹಳ ಪ್ರಯೋಜನಕಾರಿ. ಉಗುರುಗಳ ಕೆಳಗೆ ಇರುವ ನರಗಳು ವಾಸ್ತವವಾಗಿ ನೆತ್ತಿಯ ಪ್ರದೇಶಕ್ಕೆ ಸಂಪರ್ಕ ಹೊಂದಿವೆ. ನೀವು ಉಗುರುಗಳನ್ನು ಪರಸ್ಪರ ಉಜ್ಜಿದಾಗ, ರಕ್ತ ಪರಿಚಲನೆಯ ವೇಗವು ನೆತ್ತಿಯೊಂದಿಗೆ ಸಂಪರ್ಕ ಹೊಂದಿ,ನರಗಳನ್ನು ಉತ್ತೇಜಿಸುತ್ತದೆ ಮತ್ತು ಇದರಿಂದ ಕೂದಲಿನ ಗುಣಮಟ್ಟ ಸುಧಾರಿಸುತ್ತದೆ.
ಉತ್ತಮಗೊಳ್ಳುವ ರಕ್ತ ಪರಿಚಲನೆ : ಪರಸ್ಪರ ಉಗುರನ್ನು ಉಜ್ಜುವುದ್ರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ನಿಮ್ಮ ದೇಹವು ಶಕ್ತಿ ಪಡೆಯುತ್ತದೆ.
Long Covid: ಲಾಂಗ್ ಕೋವಿಡ್ ದುಷ್ಪರಿಣಾಮಗಳಿಂದ ಪಾರಾಗೋದು ಹೇಗೆ?
ಚರ್ಮದ ಆರೋಗ್ಯ : ಬಾಲಯಂ ಮಾಡುವುದ್ರಿಂದ ಮುಖಕ್ಕೂ ಒಳ್ಳೆಯದು. ಇದು ಮುಖದ ಹೊಳಪನ್ನು ಹೆಚ್ಚಿಸುತ್ತದೆ. ಇದಲ್ಲದೇ ಪದೇ ಪದೇ ಉಗುರುಗಳನ್ನು ಉಜ್ಜುವುದರಿಂದ ನಿಮ್ಮ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಚರ್ಮ ರೋಗಗಳು ದೂರವಾಗುತ್ತವೆ.
ಬಾಲಯಂ ಮಾಡುವ ವಿಧಾನ : ಬಾಲಯಂ ಪ್ರಯೋಜನಗಳು ಏನು ಎಂಬುದು ತಿಳಿದಿದೆ. ಇದನ್ನು ಯಾವಾಗ,ಎಲ್ಲಿ ಬೇಕಾದ್ರೂ ಮಾಡಬಹುದು. ಬಾಲಯಂ ಮಾಡಲು, ನಿಮ್ಮ ಎರಡೂ ಕೈಗಳನ್ನು ಎದೆಯ ಬಳಿ ತಂದು ಬೆರಳುಗಳನ್ನು ಒಳಕ್ಕೆ ಬಗ್ಗಿಸಿ ಮತ್ತು ಉಜ್ಜಿಕೊಳ್ಳಿ. ಸಾಧ್ಯವಾದಷ್ಟು ಕಾಲ ಈ ಪ್ರಕ್ರಿಯೆಯನ್ನು ಮಾಡಿ. ದಿನಕ್ಕೆ ಕನಿಷ್ಠ 5-10 ನಿಮಿಷಗಳ ಕಾಲ ಇದನ್ನು ಮಾಡಿದರೆ ಶೀಘ್ರವೇ ನೀವು ಫಲಿತಾಂಶವನ್ನು ನೋಡಬಹುದು.
YOGA AND FITNESS: ಶಿಲ್ಪಾ ಶೆಟ್ಟಿಯ ನಟರಾಜಾಸನದ ಮೋಡಿ ನೋಡಿ
ಬಾಲಯಂ ಯಾರು ಮಾಡಬಾರದು? : ತಜ್ಞರ ಪ್ರಕಾರ ಬಾಲಯಂ ಗರ್ಭಿಣಿಯರಿಗೆ ನಿಷಿದ್ಧ. ಗರ್ಭಿಣಿಯರು ಅಪ್ಪಿತಪ್ಪಿಯೂ ಇದನ್ನು ಮಾಡಬಾರದು. ಏಕೆಂದರೆ ಉಗುರುಗಳನ್ನು ಉಜ್ಜಿಕೊಳ್ಳುವುದ್ರಿಂದ ಗರ್ಭಾಶಯದ ಸಂಕೋಚನಕ್ಕೆ ಹಾನಿಯಾಗುತ್ತದೆ. ಗರ್ಭಿಣಿಯರಲ್ಲದೆ ಅಧಿಕ ರಕ್ತದೊತ್ತಡದಿಂದ ಬಳಲುವ ಜನರು ಕೂಡ ಬಾಲಯಂ ಮಾಡಬಾರದು. ಅಪೆಂಡಿಸೈಟಿಸ್ ಮತ್ತು ಆಂಜಿಯೋಗ್ರಫಿಯಂತಹ ಶಸ್ತ್ರಚಿಕಿತ್ಸಾಗೆ ಒಳಗಾಗಿದ್ದರೂ ಇದನ್ನು ಮಾಡಬಾರದು.
