ಕೊರೊನಾ ಆಯ್ತು, ಓಮಿಕ್ರಾನ್ ಆಯ್ತು. ಈಗ ಕೋವಿಡ್‌ನಿಂದ ದೀರ್ಘಕಾಲ ಬಳಲಿದ ಪರಿಣಾಮ ಉಂಟಾಗುವ ದುಷ್ಪರಿಣಾಮಗಳು ತುಂಬಾ ಮಂದಿಯನ್ನು ಬಾಧಿಸುತ್ತಿವೆ. ಇದರಿಂದ ಪಾರಾಗುವ ಬಗೆ ಹೇಗೆ? 

ಕೊರೋನಾವೈರಸ್ (Corona Virus) ಕೇವಲ ಸೋಂಕಿಗೆ, ನಂತರ ಒಂದು ವಾರದ ಜ್ವರಕ್ಕೆ (Fever) ಸೀಮಿತವಾಗಿಲ್ಲ, ಬದಲಿಗೆ ಅದು ಆ ಅವಧಿಯನ್ನು ಮೀರಿ, ನಂತರದ ಲಾಂಗ್‌ ಕೋವಿಡ್ (Long Covid) ಸಿಂಡ್ರೋಮ್‌ಗೂ ಕಾರಣವಾಗುತ್ತದೆ. ಪೋಸ್ಟ್-COVID ಸಿಂಡ್ರೋಮ್ ಅಥವಾ ಲಾಂಗ್ ಕೋವಿಡ್ ತುಂಬಾ ಜನರಲ್ಲಿ ಕಂಡುಬರುತ್ತಿದೆ, ವೈರಸ್‌ನ (Virus) ದೀರ್ಘಕಾಲೀನ ಪರಿಣಾಮಗಳು ದೇಹವನ್ನು ದುರ್ಬಲಗೊಳಿಸುವುದನ್ನು ಮುಂದುವರೆಸುತ್ತವೆ, ಆರೈಕೆ ಮತ್ತು ವಿಶ್ರಾಂತಿಯನ್ನು ಬಯಸುತ್ತವೆ.

ಕೊರೋನಾವೈರಸ್‌ನ ಎರಡನೇ ಅಲೆಯಲ್ಲಿ ಪೀಡಿತರಾದ ಅನೇಕರು, 8-9 ತಿಂಗಳ ನಂತರವೂ, ವಾಸನೆ (Smell) ಮತ್ತು ರುಚಿಯ (Taste) ಪತ್ತೆ ಹಚ್ಚುವುದರಲ್ಲಿ ಇನ್ನೂ ತೊಂದರೆ ಅನುಭವಿಸುತ್ತಿದ್ದಾರೆ. ಸುಸ್ತು (Fatigue) ಮತ್ತು ಇನ್ನಿತರ ಹಲವು ಸಮಸ್ಯೆಗಳನ್ನೂ ಎದುರಿಸುತ್ತಿದ್ದಾರೆ. ಸುಮಾರು 5-10%ರಷ್ಟು ಆಸ್ಪತ್ರೆಗೆ (Hospital) ದಾಖಲಾಗದ ರೋಗಿಗಳು ಮತ್ತು ಆಸ್ಪತ್ರೆಗೆ ದಾಖಲಾದ ಸುಮಾರು 80% COVID ರೋಗಿಗಳು ದೀರ್ಘಾವಧಿಯ COVIDಗೆ ತುತ್ತಾಗುತ್ತಾರೆ ಎಂದು ಸಂಶೋಧನೆ ಸೂಚಿಸುತ್ತದೆ. ಒಮಿಕ್ರಾನ್ (Omicron) ರೂಪಾಂತರಿಯು (Mutation) ಸೌಮ್ಯವಾಗಿರಬಹುದು, ಆದರೆ ಪೋಸ್ಟ್ COVID ಸಿಂಡ್ರೋಮ್‌ನ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. 

cancer Myths: ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ಈ ವಿಚಾರಗಳು ನಿಮಗೆ ಗೊತ್ತಿರಲಿ

ಯಾರು ಇದಕ್ಕೆ ಹೆಚ್ಚು ಒಳಗಾಗುತ್ತಾರೆ?
40 ವರ್ಷಕ್ಕಿಂತ ಮೇಲ್ಪಟ್ಟವರು, ಮೊದಲೇ ಅಸ್ತಿತ್ವದಲ್ಲಿರುವ ಕೊಮೊರ್ಬಿಡಿಟಿಗಳು (ಮಧುಮೇಹ, ಹೃದಯಕಾಯಿಲೆ, ಕಿಡ್ನಿ ಸಮಸ್ಯೆ ಇತ್ಯಾದಿ) ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಲಾಂಗ್ COVID ಅನ್ನು ಹೊಂದುವ ಹೆಚ್ಚಿನ ಅಪಾಯವನ್ನು ಹೊಂದಿರಬಹುದು ಎಂದು ಅಧ್ಯಯನಗಳು ತೋರಿಸಿವೆ. ವಯಸ್ಸಾದಂತೆ ರೋಗನಿರೋಧಕ ಸೆಲ್‌ಗಳು ನಿಧಾನವಾಗಿ ಕಡಿಮೆಯಾಗಲು ಪ್ರಾರಂಭಿಸುವುದರಿಂದ, ವೈರಸ್ ದೇಹವನ್ನು ಆಕ್ರಮಿಸಲು ಸುಲಭವಾಗುತ್ತದೆ. ಆದ್ದರಿಂದಲೇ ವಯಸ್ಸಾದವರಲ್ಲಿ ಮತ್ತು ಕೊಮೊರ್ಬಿಡಿಟಿ ಇರುವವರಲ್ಲಿ ಹೆಚ್ಚಿನ ಕೋವಿಡ್ ತೀವ್ರತೆಯನ್ನು ದಾಖಲಿಸಲಾಗಿದೆ.

ಲಾಂಗ್ COVID ಅಪಾಯ ಕಡಿಮೆ ಮಾಡಲು ಮಾರ್ಗ ಯಾವುದು?
ಬ್ರಿಟನ್‌ನ ವಿಜ್ಞಾನಿಗಳು ದೇಶದ ಜನಸಂಖ್ಯೆಯ ಅಂದಾಜು 2 ಪ್ರತಿಶತದಷ್ಟು ಜನರು ದೀರ್ಘ COVIDನಿಂದ ಬಳಲುತ್ತಿದ್ದಾರೆ ಎಂದು ಕಂಡುಕೊಂಡಿದ್ದಾರೆ. ಆದರೆ ಸಮೀಕ್ಷೆಯ ಪ್ರಕಾರ, ಲಸಿಕೆಯು ಈ ಅಪಾಯವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಂಪೂರ್ಣವಾಗಿ ಲಸಿಕೆಯನ್ನು ಪಡೆದವರು COVID-ಪ್ರೇರಿತ ತೊಡಕುಗಳಿಗೆ ಕಡಿಮೆ ಒಳಗಾಗುತ್ತಾರೆ. ಬ್ರಿಟನ್ ಮತ್ತು ಅಂತಾರಾಷ್ಟ್ರೀಯ ಅಧ್ಯಯನಗಳ ಪ್ರಕಾರ, ಫಿಜರ್, ಮಾಡರ್ನಾ ಮತ್ತು ಅಸ್ಟ್ರಾಜೆನೆಕಾ ಲಸಿಕೆಗಳ (ಭಾರತದಲ್ಲಿ ಕೋವಿಶೀಲ್ಡ್) ಎರಡು ಪ್ರಮಾಣಿತ ಡೋಸ್‌ಗಳನ್ನು ಪಡೆದ ಜನರು ಮತ್ತು ಜಾನ್ಸೆನ್‌ನ ಒಂದು ಲಸಿಕೆಯ ಪರಿಣಾಮ ದೀರ್ಘಾವಧಿಯವರೆಗೆ ರಕ್ಷಿಸುತ್ತದೆ. ದೀರ್ಘಾವಧಿಯ COVID ವಿರುದ್ಧ ಲಸಿಕೆಗಳ ಪರಿಣಾಮಕಾರಿತ್ವವು 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಅತ್ಯಧಿಕವಾಗಿದೆ ಮತ್ತು 19 ಮತ್ತು 35ರ ನಡುವಿನ ವಯಸ್ಸಿನವರಲ್ಲಿ ಕಡಿಮೆಯಾಗಿದೆ ಎಂದು ಡೇಟಾ ಗಮನಿಸಿದೆ.

Organ Donation: ಮೆದುಳು ನಿಷ್ಕ್ರಿಯಗೊಂಡಾಗ ಯಾವ ಅಂಗ ದಾನ ಮಾಡಬಹುದು?

ದೀರ್ಘ COVID ಲಕ್ಷಣಗಳು (Symptoms) 
ದೀರ್ಘಕಾಲದ COVID ಅನ್ನು ಹೊಂದುವ ಜನರು ವ್ಯಾಪಕ ಶ್ರೇಣಿಯ ರೋಗಲಕ್ಷಣಗಳನ್ನು ಅನುಭವಿಸಬಹುದು, ಅವುಗಳಲ್ಲಿ ಕೆಲವು ಸೋಂಕಿನಿಂದ ಚೇತರಿಸಿಕೊಂಡ ಎಷ್ಟೋ ದಿನಗಳ ನಂತರವೂ ಕಾಣಿಸುತ್ತವೆ. ನಿರಂತರ ಕೆಮ್ಮು, ಆಯಾಸ, ಎದೆನೋವು, ಉಸಿರಾಟದ ತೊಂದರೆ ಇವುಗಳು ಕೆಲವು ಸಾಮಾನ್ಯ ಕೋವಿಡ್ ನಂತರದ ರೋಗಲಕ್ಷಣಗಳು ಕಾಲಾನಂತರದಲ್ಲಿ ಕಡಿಮೆಯಾಗುತ್ತವೆ. ಆದಾಗ್ಯೂ, ಮೆದುಳು ಮಸುಕು, ವಾಸನೆ ಮತ್ತು ರುಚಿಯ ದುರ್ಬಲ ಪ್ರಜ್ಞೆಯಂತಹ ಕೆಲವು ದೀರ್ಘವಾದ COVID ರೋಗಲಕ್ಷಣಗಳು, ವೈದ್ಯಕೀಯವಾಗಿ ಪರೋಸ್ಮಿಯಾ ಮತ್ತು ಅನೋಸ್ಮಿಯಾ ಎಂದು ಕರೆಯಲ್ಪಡುತ್ತವೆ. ಇವು ಕೇವಲ ಅಸ್ವಸ್ಥತೆಯನ್ನು ಉಂಟುಮಾಡುವುದಿಲ್ಲ, ಆದರೆ ಜೀವನದ ಗುಣಮಟ್ಟದ ಮೇಲೆ ಹಲವು ವಿಧಗಳಲ್ಲಿ ಪರಿಣಾಮ ಬೀರುತ್ತವೆ.
ಇದರ ಹೊರತಾಗಿ, ಮೊದಲೇ ಅಸ್ತಿತ್ವದಲ್ಲಿರುವ ಹೃದಯದ ಕಾಯಿಲೆಗಳು (Heart Problems), ಮಧುಮೇಹ (Diabetes) ಅಥವಾ ಕ್ಯಾನ್ಸರ್ (Cancer) ಇರುವವರು ಹೆಚ್ಚು ಜಾಗರೂಕರಾಗಿರಬೇಕು. 

ಕೋವಿಡ್ ನಂತರದ ಆರೈಕೆ ಅತ್ಯಗತ್ಯ
ನೀವು COVIDನಿಂದ ಚೇತರಿಸಿಕೊಂಡಿದ್ದರೂ, ಇನ್ನೂ ಜಾಗರೂಕರಾಗಿರಬೇಕು. ಸೋಂಕಿನ ವಿರುದ್ಧ ಹೋರಾಡಿದ ನಂತರ, ನಿಮ್ಮ ದೇಹವನ್ನು ನೋಡಿಕೊಳ್ಳಲು ಮರೆಯದಿರಿ, ಅದು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ. ಸಾಕಷ್ಟು ವಿಶ್ರಾಂತಿ ಪಡೆಯಿರಿ, ಉತ್ತಮ ಆಹಾರ ಸೇವಿಸಿ. ನೀರು ಸಾಕಷ್ಟು ಕುಡಿಯರಿ. ಪೌಷ್ಟಿಕಾಂಶ-ಭರಿತ ಆಹಾರಗಳು ಮತ್ತು ಹಣ್ಣುಗಳನ್ನು ಸೇವಿಸಿ. ನಿಯಮಿತವಾಗಿ ವ್ಯಾಯಾಮ ಮಾಡಿ, ಆದರೆ ನಿಧಾನವಾದ ಮತ್ತು ಸುಲಭವಾದ ವ್ಯಾಯಾಮದೊಂದಿಗೆ ಪ್ರಾರಂಭಿಸಿ. ಅತಿಯಾದ ವ್ಯಾಯಾಮ ಅಥವಾ ತೀವ್ರವಾದ ವ್ಯಾಯಾಮಗಳಿಂದ ನಿಮ್ಮ ದೇಹವನ್ನು ಬಳಲಿಸಬೇಡಿ.

Health And Nail Shape: ಏನು, ಉಗುರಿನ ಆಕಾರ ನೋಡಿ ಆರೋಗ್ಯ ತಿಳೀಬಹುದಾ?!