ಕೊರೋನಾಕ್ಕಿಂತಲೂ ಜನರ ಮನಸ್ಥಿತಿ, ತಪ್ಪು ಕಲ್ಪನೆ ಅವರಲ್ಲಿ ಭಯ ಹುಟ್ಟಿಸಿರೋದು ಸ್ಪಷ್ಟ. ಹಾಗಾಗಿ ಕೊರೋನಾ ಬಂದ ಕೂಡಲೇ ಸಾಯ್ತೀವಿ ಅಂದುಕೊಳ್ಳೋದು ಬಿಡೋಣ. ಕೊರೋನಾ ಪೀಡಿತರ ಬಗ್ಗೆ ಮಾನವೀಯತೆಯಿಂದ ವರ್ತಿಸೋಣ. 

ಚೆನ್ನೖಯಲ್ಲಿ ರಸ್ತೆ ಮೇಲೆ ಪೋಲಿ ಅಲೆಯುತ್ತಿದ್ದ ಒಂದಿಷ್ಟು ಹುಡುಗರನ್ನು ಪೊಲೀಸರು ಅಡ್ಡ ಹಾಕಿದ್ರು. ನಿಮ್ಮನ್ನೀಗ ಕೊರೋನಾ ಪೇಶೆಂಟ್ ಇರುವ ಆಂಬುಲೆನ್ಸ್ ಒಳಗೆ ಹಾಕ್ತೀವಿ ಅಂತ ಅವರೆಷ್ಟು ಕೊಸರಾಡಿದರೂ ಬಿಡದೇ ಎಳೆದು ಆಂಬುಲೆನ್ಸ್ ಒಳಗೆ ತಳ್ಳಿದರು. ಅಲ್ಲೊಬ್ಬ ವ್ಯಕ್ತಿ ಕೊರೋನಾ ಪೇಶೆಂಟ್ ನಂತೆ ಮಲಗಿದ್ದ. ಆತನನ್ನು ಕಂಡು ಸಾಕ್ಷಾತ್ ಯಮನನ್ನೇ ಕಂಡಹಾಗೆ ಬೆಚ್ಚಿದ ಆ ಪೋಕರಿಗಳು ಆಂಬ್ಯುಲೆನ್ಸ್ ಒಳಗೇ ಹಾರಾಡಿ, ಚೀರಾಡಿ, ಕಿಟಕಿಯಿಂದ ಜಿಗಿಯಲು ನೋಡಿ ಪಾರಾಗಲು ವೃಥಾ ಪ್ರಯತ್ನ ಮಾಡುತ್ತಿದ್ದರು. ಕೊನೆಯಲ್ಲಿ ಇದು ಪೊಲೀಸರು ತಿಳುವಳಿಕೆ ಮೂಡಿಸಲು ಆಡಿದ ನಾಟಕ ಅಂತ ಗೊತ್ತಾಯ್ತು!

ಈ ಘಟನೆ ನೋಡಿದರೆ ಜನರಿಗೆ ಕೊರೋನಾ ಬಗ್ಗೆ ಯಾವ ಮಟ್ಟಿನ ಆತಂಕ, ಭಯ ಇದೆ ಅಂತ ಗೊತ್ತಾಗುತ್ತದೆ. ಇನ್ನು ನಮಗೇ ಕೊರೋನಾ ಪಾಸಿಟಿವ್ ಬಂದರೆ ಹೇಗಿರಬಹುದು.. 

ಲಾಕ್‌ಡೌನ್ ಮುಗಿದ್ಮೇಲೆ ಹೀಗ್ ಮಾಡ್ಬೇಡಿ

ಈ ಬಗ್ಗೆ ಹ್ಯೂಮನ್ಸ್ ಆಫ್ ಬಾಂಬೆ ವೆಬ್ ಸೖಟ್ ನಲ್ಲಿ ಒಬ್ಬ ಹೆಣ್ಣುಮಕ್ಕಳು ಬರೆದುಕೊಂಡಿದ್ದಾಳೆ. ಆಕೆಯ ಮಾತುಗಳಲ್ಲೇ ಆ ವಿವರ ಓದಿ. 

‘ಕೊರೋನಾ ಲಾಕ್ ಡೌನ್ ಗೂ ಮೊದಲೇ ಒಂದಿಷ್ಟು ಕಡೆ ಸುತ್ತಾಡಿ ಬಂದಿದ್ದೆವು. ಒಂದು ದಿನ ಸಡನ್ನಾಗಿ ಅಪ್ಪನಿಗೆ ಜ್ವರ ಕಾಣಿಸಿಕೊಂಡಿತು. ಮಾಮೂಲಿ ಜ್ವರ ಅಂದುಕೊಂಡು ಸುಮ್ಮನಿದ್ದೆವು. ಆದರೆ ಟೆಸ್ಟ್ ನಲ್ಲಿ ಕೊರೋನಾ ಪಾಸಿಟಿವ್ ಬಂದಾಗ ತುಂಬಾ ಶಾಕ್ ಆಯ್ತು.ಇದೊಂದು ಕೆಟ್ಟ ಕನಸು ಆಗಿರಲಿ ದೇವರೇ ಅಂತ ಬೇಡಿಕೊಂಡೆ. ಆದರೆ ಇದು ನಿಜ ಆಗಿತ್ತು. ಅಪ್ಪನನ್ನು ತಕ್ಷಣ ಹಿಂದೂಜಾ ಆಸ್ಪತ್ರೆಗೆ ದಾಖಲಿಸಿದರು. ಕೊರೋನಾ ಟೆಸ್ಟ್ ಗೆ ಒಳಪಡಿಸಿದರು. ಅದೃಷ್ಟವಶಾತ್ ಅಜ್ಜಿಗೆ ನೆಗೆಟಿವ್ ಬಂತು. ಆದರೆ ನನಗೆ, ತಮ್ಮನಿಗೆ ಹಾಗೂ ಅಮ್ಮನಿಗೆ ಪಾಸಿಟಿವ್ ಬಂತು. ನಮ್ಮನ್ನೂ ಪ್ರತ್ಯೇಕ ಆಸ್ಪತ್ರೆಗಳಲ್ಲಿಟ್ಟರು. 

ಐಸೋಲೇಶನ್ ನಲ್ಲಿದ್ದಾಗ ನಾನು ಬದುಕೋದೇ ಇಲ್ಲ ಅಂತ ಅಂದುಕೊಂಡಿದ್ದೆ. ಒಂದಿಷ್ಟು ಪುಸ್ತಕಗಳನ್ನ ಓದಿದ್ದು ಮನಸ್ಸು ಹಗುರ ಮಾಡಿತು. ಜೊತೆಗೆ ಲವಲವಿಕೆಯಿಂದ ಓಡಾಡುತ್ತಿದ್ದ ಡಾಕ್ಟರ್, ನರ್ಸ್ ಗಳು ನಮ್ಮಲ್ಲಿ ಆಶಾಭಾವ ಮೊಳೆಯುವ ಹಾಗೆ ಮಾಡುತ್ತಿದ್ದರು. 

ವಿಷಣ್ಣತೆಯಲ್ಲಿ ದಿನ ಮುಂದೆ ಹೋಗುತ್ತಿತ್ತು. ಆಮೇಲೆ ಟೆಸ್ಟ್ ಮಾಡಿದಾಗ ನನಗೆ ನೆಗೆಟಿವ್ ಬಂತು. ಅಮ್ಮ, ತಮ್ಮನ ರಿಸಲ್ಟೂ ನೆಗೆಟಿವ್ ಬಂತು ನಾವು ಮೂವರು ಬಚಾವ್ ಆದೆವು. ಆದರೆ ಅಪ್ಪನಿಗೆ ಮಾತ್ರ ಇನ್ನೂ ಒಂದಿಷ್ಟು ದಿನ ಕೊರೋನಾ ಕಾಡಿಸಿತು. 

'ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಬಗ್ಗೆ ಸುಳ್ಳು ಸುದ್ದಿ ಹರಡಿದ್ರೆ...

ನಮಗೆ ಕೊರೋನಾ ಪಾಸಿಟಿವ್ ಬಂದಿದ್ದನ್ನು ನಾವು ಯಾರ ಬಳಿಯೂ ಹೇಳಿರಲಿಲ್ಲ. ಆದರೆ ನಮ್ಮ ಟೆಸ್ಟ್ ಪಾಸಿಟಿವ್ ಬಂದ ಸ್ವಲ್ಪ ಹೊತ್ತಿನಲ್ಲೇ ಈ ವಿಷಯ ಸುತ್ತಲಿನವರಿಗೆ, ಬಂಧುಗಳಿಗೆ ಎಲ್ಲರಿಗೂ ಗೊತ್ತಾಯ್ತು. ನಾವು ಡಿಸ್ ಚಾರ್ಜ್ ಆಗಿ ಬಂದ ಮೇಲೆ ಕೆಲವರು ಬಹಳ ಅಕ್ಕರೆಯಿಂದ ನಮಗಾಗಿ ಅಡುಗೆ ಮಾಡಿ ತಂದುಕೊಡುತ್ತಿದ್ದರು. ಕೆಲವರು ತರಕಾರಿ, ಹಣ್ಣು ಮನೆಯ ಹೊರಗಿಟ್ಟು ಸಂದೇಶ ಕಳಿಸುತ್ತಿದ್ದರು. ಜೊತೆಗೆ ಕೆಲವು ಜನ ಮಾತ್ರ ನಮ್ಮನ್ನು ಬೖಕಾಟ್ ಮಾಡಬೇಕು ಅಂತ ಹಠ ಹಿಡಿದರು. ಯಾರೂ ನಮ್ಮ ಮನೆಯ ಕಡೆ ಸುಳಿಯುವ ಹಾಗಿಲ್ಲ ಅಂತೆಲ್ಲ ರೂಲ್ ಮಾಡ ಹೊರಟರು. ಆದರೆ ನಮ್ಮ ಭಾಗದ ಎಂಎಲ್ಎ ಅವರು ಕೂಡಲೇ ಆ ಜನರಲ್ಲಿ ತಿಳುವಳಿಕೆ ಮೂಡಿಸಿ ಮಾನವೀಯತೆಯಿಂದ ವರ್ತಿಸುವಂತೆ ಹೇಳಿದರು. ನಮ್ಮ ರಿಸಲ್ಟ್ ನೆಗೆಟಿವ್ ಬಂದಿದ್ದರೂ ಮನೆಯಿಂದ ಆಚೆ ಬರುತ್ತಿರಲಿಲ್ಲ. ಮನೆಯೊಳಗೂ ಡಿಸ್ಟೆನ್ಸ್ ಮೖಂಟೇನ್ ಮಾಡುತ್ತಿದ್ದೆವು. ಇಷ್ಟರಲ್ಲಿ ಅಪ್ಪನಿಗೂ ಕೊರೋನಾ ನೆಗೆಟಿವ್ ಬಂದಾಗ ನಮಗಾದ ನಿರಾಳತೆಯನ್ನು ಪದಗಳಲ್ಲಿ ವಿವರಿಸೋದು ಸಾಧ್ಯವಿಲ್ಲ. .’

ಕೊರೋನಾ ಸೋಂಕಿತ ವೃದ್ದೆ ಸಾವು: ಶವ ಸಂಸ್ಕಾರಕ್ಕೆ ಸ್ಥಳೀಯರಿಂದ ವಿರೋಧ.. 

ಈಕೆಯ ಮಾತು ಕೇಳಿದರೆ ಕೊರೋನಾಕ್ಕಿಂತಲೂ ಜನರ ಮನಸ್ಥಿತಿ, ತಪ್ಪು ಕಲ್ಪನೆ ಅವರಲ್ಲಿ ಭಯ ಹುಟ್ಟಿಸಿರೋದು ಸ್ಪಷ್ಟ. ಹಾಗಾಗಿ ಕೊರೋನಾ ಬಂದ ಕೂಡಲೇ ಸಾಯ್ತೀವಿ ಅಂದುಕೊಳ್ಳೋದು ಬಿಡೋಣ. ಕೊರೋನಾ ಪೀಡಿತರ ಬಗ್ಗೆ ಮಾನವೀಯತೆಯಿಂದ ವರ್ತಿಸೋಣ.