ಬೇಸಿಗೆಯಲ್ಲಿ ಬೆವರು ಮಾಮೂಲಿ. ಆದ್ರೆ ಕೂಲರ್ ಮುಂದೆ ಕುಳಿತಾಗ್ಲೂ ಕೆಲವರು ಬೆವರ್ತಾರೆ. ಚಳಿಗಾಲದಲ್ಲೂ ಬೆವರು ಹರಿತಿರುತ್ತದೆ. ಅದ್ರಲ್ಲೂ ರಾತ್ರಿ ನಿದ್ರೆಯನ್ನು ಬೆವರು ಹಾಳು ಮಾಡುತ್ತದೆ. ನಿಮಗೂ ಈ ಸಮಸ್ಯೆಯಿದ್ರೆ ಈ ಸುದ್ದಿ ಓದಿ.
ಬೇಸಿಗೆ (Summer) ಯ ಬಿಸಿ (Hot) ಹೆಚ್ಚಾಗಿದೆ. ಇದ್ರಿಂದ ಹಗಲಿನಲ್ಲಿ ಮಾತ್ರವಲ್ಲ ರಾತ್ರಿ (Night) ಕೂಡ ವಿಪರೀತ ಬೆವರು ಬರುತ್ತದೆ. ದೇಹ (Body ) ದ ಬೆವರು (Sweat ) ಗ್ರಂಥಿಗಳಿಂದ ದ್ರವಗಳ ಬಿಡುಗಡೆಯಿಂದಾಗಿ ಬೆವರು ಬರುತ್ತದೆ. ಇದು ದೇಹದ ನೈಸರ್ಗಿಕ ಪ್ರಕ್ರಿಯೆ ಎಂದು ಪರಿಗಣಿಸಲಾಗುತ್ತದೆ. ಆದರೆ ಅನೇಕ ಬಾರಿ ಬೇಸಿಗೆಯಲ್ಲಿ ಮಾತ್ರವಲ್ಲ ಚಳಿಗಾಲದಲ್ಲಿಯೂ ಕೆಲವರು ಬೆವರುತ್ತಾರೆ. ವ್ಯಾಯಾಮ (Exercise) ಮಾಡಿದ ನಂತ್ರ ಬೆವರುವುದು ಸಾಮಾನ್ಯ. ಆದ್ರೆ ರಾತ್ರಿ ತಂಪಾದ ವಾತಾವರಣದಲ್ಲಿಯೂ ಅನೇಕರು ಬೆವರುತ್ತಾರೆ. ರಾತ್ರಿಯಲ್ಲಿ ನೀವು ವಿಪರೀತ ಬೆವರಿನ ಸಮಸ್ಯೆಗೆ ಒಳಗಾಗಿದ್ದರೆ ಅದನ್ನು ಎಂದೂ ನಿರ್ಲಕ್ಷ್ಯ ಮಾಡ್ಬೇಡಿ. ಓಮಿಕ್ರಾನ್ (Omicron) ರೂಪಾಂತರದ ಸೋಂಕಿನ ಸಂದರ್ಭದಲ್ಲಿಯೂ ಸಹ ರಾತ್ರಿಯಲ್ಲಿ ಅತಿಯಾಗಿ ಬೆವರು ಬರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ರಾತ್ರಿ ಮಲಗಿದಾಗ ಅತಿಯಾದ ಬೆವರುವ ಸಮಸ್ಯೆಯನ್ನು ಸಾಮಾನ್ಯ ಎಂದು ಪರಿಗಣಿಸಬಾರದು. ಮಲಗುವಾಗ ನಿಮ್ಮ ದೇಹದ ಉಷ್ಣತೆ (Temperature) ಯಲ್ಲಿ ಬದಲಾವಣೆಯಾಗುವುದು ಸಹಜ ಮತ್ತು ಇದು ಕೆಲವೊಮ್ಮೆ ಬೆವರುವಿಕೆಗೆ ಕಾರಣವಾಗಬಹುದು. ಆದರೆ ನೀವು ಸಾಕಷ್ಟು ಬೆವರುತ್ತಿದ್ದರೆ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು. ಯಾವ ಕಾರಣಗಳಿಗಾಗಿ ನೀವು ರಾತ್ರಿಯಲ್ಲಿ ಅತಿಯಾಗಿ ಬೆವರುತ್ತೀರಿ ಎಂಬುದನ್ನು ನಾವಿಂದು ಹೇಳ್ತೇವೆ.
ರಾತ್ರಿ ಅತಿಯಾಗಿ ಬೆವರಲು ಇದು ಕಾರಣ
ಚಿಂತೆ – ಆತಂಕದ ಸ್ಥಿತಿ : ಆರೋಗ್ಯ ತಜ್ಞ (Health Expert) ರ ಪ್ರಕಾರ, ನೀವು ಆಗಾಗ್ಗೆ ಆತಂಕ ಅಥವಾ ಒತ್ತಡ ಅನುಭವಿಸಿದರೆ ಅದು ರಾತ್ರಿ ಬೆವರಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಹೈಪರ್ಆಕ್ಟಿವ್ ಮೆದುಳಿನ ಕಾರಣದಿಂದಾಗಿ ಇದು ಮೆದುಳು ಮತ್ತು ದೇಹದ ಮೇಲೆ ಹಲವು ವಿಧಗಳಲ್ಲಿ ಪರಿಣಾಮ ಬೀರುತ್ತದೆ. ಇದರಿಂದಾಗಿ ನಿಮಗೆ ಬೆವರು ಬರುತ್ತದೆ. ಹೆಚ್ಚು ಒತ್ತಡದಲ್ಲಿದ್ದಾಗ ರಕ್ತದೊತ್ತಡ ಹೆಚ್ಚಾಗಬಹುದು. ಈ ಕಾರಣದಿಂದಾಗಿ ರಾತ್ರಿ ಬೆವರುವ ಸಮಸ್ಯೆ ನಿಮ್ಮನ್ನು ಕಾಡಬಹುದು. ಹಾಗಾಗಿ ರಾತ್ರಿ ಅತಿಯಾಗಿ ಬೆವರುತ್ತಿದ್ದರೆ ಮೊದಲು ಕಾರಣ ತಿಳಿದುಕೊಳ್ಳಿ. ಒಂದು ವೇಳೆ ಅತಿ ಒತ್ತಡಕ್ಕೆ ಸಮಸ್ಯೆಯಾಗ್ತಿದೆ ಎಂದಾದ್ರೆ ಒತ್ತಡ –ಆತಂಕದಿಂದ ಮನಸ್ಸನ್ನು ಶಾಂತಗೊಳಿಸಲು ಪ್ರಯತ್ನಿಸಿ.
ಕಣ್ಣಲ್ಲಿ ಪದೇ ಪದೇ ನೀರು ಬರೋದಕ್ಕೆ ಕಾರಣ ಏನು ಗೊತ್ತಾ ?
ಔಷಧಿಯ ಪರಿಣಾಮ : ಹಲವು ವಿಧದ ಔಷಧಿಗಳ ಸೇವನೆಯಿಂದ ಅತಿಯಾದ ಬೆವರುವಿಕೆಯ ಸಮಸ್ಯೆ ನಿಮಗೆ ಕಾಡುತ್ತದೆ. ಔಷಧಿ ತೆಗೆದುಕೊಳ್ಳುತ್ತಿದ್ದು, ರಾತ್ರಿ ಹೆಚ್ಚು ಬೆವರುತ್ತಿದ್ದರೆ ಹೆಚ್ಚು ಗಾಬರಿಯಾಗುವ ಅಗತ್ಯವಿಲ್ಲ. ಕೆಲವು ಔಷಧಿಗಳು ದೇಹದ ಉಷ್ಣತೆ ಅಥವಾ ನಿಮ್ಮ ಬೆವರು ಗ್ರಂಥಿಗಳನ್ನು ನಿಯಂತ್ರಿಸುವ ನಿಮ್ಮ ಮೆದುಳಿನ ಭಾಗಗಳ ಮೇಲೆ ಪರಿಣಾಮ ಬೀರಬಹುದು. ಈ ಕಾರಣದಿಂದಾಗಿ ರಾತ್ರಿ ಅತಿಯಾದ ಬೆವರು ನಿಮಗೆ ಕಾಣಿಸಿಕೊಳ್ಳುತ್ತದೆ. ಔಷಧಿ ತೆಗೆದುಕೊಂಡ ನಂತ್ರ ಬೆವರು ಬರ್ತಿದ್ದರೆ ನೀವು ವೈದ್ಯರ ಜೊತೆ ಇದ್ರ ಬಗ್ಗೆ ಮಾತನಾಡಿ.
ಋತುಬಂಧದ ಸಮಯದಲ್ಲಿ ಬೆವರಿನ ಸಮಸ್ಯೆ : ಮಹಿಳೆಯರಲ್ಲಿ ರಾತ್ರಿ ಅತಿಯಾಗಿ ಬೆವರುವುದು ಋತುಬಂಧದ ಸಂಕೇತವಾಗಿದೆ. ಋತುಬಂಧದ ಸಮಯದಲ್ಲಿ ಸಹ ರಾತ್ರಿಯ ಸಮಯದಲ್ಲಿ ಅತಿಯಾದ ಬೆವರು ಕಾಣಿಸಿಕೊಳ್ಳುತ್ತದೆ. ಸುಮಾರು 75 ಪ್ರತಿಶತ ಮಹಿಳೆಯರು ಮುಟ್ಟು ನಿಲ್ಲುವ ಸಂದರ್ಭದಲ್ಲಿ ಈ ಸಮಸ್ಯೆಯ ಬಗ್ಗೆ ಹೇಳಿಕೊಳ್ತಾರೆ. ಋತುಬಂಧದ ನಂತರದ ಮೊದಲ ಕೆಲವು ವರ್ಷಗಳ ಕಾಲ ಬೆವರು ಅಧಿಕವಾಗಿರುತ್ತದೆ ಮತ್ತು ನಂತರ ಕಾಲಾನಂತರದಲ್ಲಿ ಕಡಿಮೆಯಾಗುತ್ತದೆ.
ವೀಳ್ಯದೆಲೆ ತಿನ್ನೋದ್ರಿಂದ ಆರೋಗ್ಯಕ್ಕೆಷ್ಟು ಪ್ರಯೋಜನವಿದೆ ಗೊತ್ತಾ ?
ಹೈಪರ್ಹೈಡ್ರೋಸಿಸ್ ಸಮಸ್ಯೆ : ಹೈಪರ್ಹೈಡ್ರೋಸಿಸ್ ಎಂಬ ಸಮಸ್ಯೆಯಿಂದಲೂ ಕೆಲವರಿಗೆ ರಾತ್ರಿ ಅತಿಯಾದ ಬೆವರು ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಈ ರೋಗದ ಪ್ರಕರಣಗಳು ಅಪರೂಪ. ನೀವೂ ರಾತ್ರಿ ಅತಿಯಾಗಿ ಬೆವರುತ್ತಿದ್ದರೆ ತಜ್ಞರ ಜೊತೆ ಅವಶ್ಯಕವಾಗಿ ಮಾತನಾಡಿ. ನಿಮ್ಮ ರಾತ್ರಿ ಬೆವರಿಗೆ ಕಾರಣವೇನು ಎಂಬುದನ್ನು ಪತ್ತೆ ಮಾಡಿ. ಅಗತ್ಯವಿರುವ ಚಿಕಿತ್ಸೆಯನ್ನು ಪಡೆದುಕೊಳ್ಳಿ.
