Asianet Suvarna News Asianet Suvarna News

Ranbir Kapoor : ಬಾಲಿವುಡ್ ಸ್ಟಾರ್ ಗೆ ಬಾಲ್ಯದಿಂದ್ಲೇ ಇದೆ ಈ ಸಮಸ್ಯೆ

ಬಾಲಿವುಡ್ ನ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾಗಿರುವ ರಣಬೀರ್ ಕಪೂರ್ ಚುರುಕಾಗಿ ಮಾತನಾಡ್ತಾರೆ. ಅವರ ಈ ಮಾತಿನ ಹಿಂದೆ ಕಹಿ ಸತ್ಯವೊಂದು ಅಡಗಿದೆ. ಅದು ಏನು ಎಂಬುದನ್ನು ನಾವಿಂದು ಹೇಳ್ತೇವೆ.
 

Ranbir Kapoor Suffers From Septum since Childhood Know What Its Symptoms And Treatment For Children roo
Author
First Published Aug 31, 2023, 2:33 PM IST | Last Updated Aug 31, 2023, 2:33 PM IST

ನಮಗೆ ಸಣ್ಣ ಅನಾರೋಗ್ಯ ಕಾಡಿದ್ರೂ ನಾವು ಬೇಸರಪಟ್ಟುಕೊಳ್ತೇವೆ. ಎಲ್ಲ ನೋವು, ಖಾಯಿಲೆ ನಮಗೆ ಬರುತ್ತೆ ಎನ್ನುವ ಜೊತೆಗೆ ಕೆಲ ಸೆಲೆಬ್ರಿಟಿಗಳನ್ನು ನೋಡಿ ಮರಗ್ತೇವೆ. ಅವರೆಷ್ಟು ಆರಾಮವಾಗಿದ್ದಾರೆ, ಎಷ್ಟು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದುಕೊಳ್ತೇವೆ. ಆದ್ರೆ ಸಮಸ್ಯೆ ಪ್ರತಿಯೊಬ್ಬರಿಗೂ ಇದೆ. ಅವರ ಜೀವನವನ್ನು ಇಣುಕಿ ನೋಡಿದಾಗ್ಲೇ ನಮಗೆ ಅವರ ನೋವು ತಿಳಿಯೋದು. ಕೆಲವರು ತಮ್ಮ ಸಮಸ್ಯೆಯನ್ನು ಬೇರೆಯವರ ಮುಂದೆ ಹೇಳಿಕೊಳ್ಳೋದಿಲ್ಲ. ಅಲ್ಲದೆ ಅದ್ರ ಜೊತೆ ಅಥವಾ ಅದನ್ನು ಎದುರಿಸಿ ನಡೆಯುವುದನ್ನು ಕಲಿತಿರುತ್ತಾರೆ.

ಬಾಲಿವುಡ್ (Bollywood) ನಟ ರಣಬೀರ್ ಕಪೂರ್ ಬಗ್ಗೆಯೂ ಸಾಮಾನ್ಯವಾಗಿ ಅಭಿಮಾನಿಗಳು ಅಂದಕೊಳ್ಳೋದು ಇದನ್ನೆ. ಅವರಿಗೇನು ಎಂಬ ಮಾತನ್ನು ನೀವೂ ಆಡ್ತಿದ್ದರೆ ರಣಬೀರ್ ಕಪೂರ್ (Ranbir Kapoor) ಬಾಲ್ಯದಿಂದಲೂ ಒಂದು ಸಮಸ್ಯೆ ಜೊತೆಯೇ ಜೀವನ ಸಾಗಿಸುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಬೇಗ ಬೇಗ ಊಟ ಮಾಡೋದು, ಬೇಗ ಬೇಗ ಮಾತನಾಡೋದು. ಇದು ಅವರ ಆಪ್ತರಿಗೆ ಮಾತ್ರ ತಿಳಿದಿದೆ. ಅಷ್ಟಕ್ಕೂ ರಣಬೀರ್ ಕಪೂರ್ ಗೆ ಕಾಡ್ತಿದ್ದ ಖಾಯಿಲೆ ಯಾವುದು ಎಂಬುದನ್ನು ನಾವು ಹೇಳ್ತೇವೆ.

Blood Group : ಈ ಬ್ಲಡ್ ಗ್ರುಪ್ ನವರಿಗೆ ಹೃದಯಾಘಾತದ ಅಪಾಯ ಹೆಚ್ಚು

ರಣಬೀರ್ ಕಪೂರ್ ಗ್ ಇದೆ ಮೂಗಿನ ಸೆಪ್ಟಮ್ (Septum) ವಿಚಲನೆ: ರಣಬೀರ್ ಕಪೂರ್ ಮೂಗಿನ ಸೆಪ್ಟಮ್ ವಿಚಲನೆ  ಸಮಸ್ಯೆಯನ್ನು ಹೊಂದಿದ್ದರು. ಇದರಲ್ಲಿ ಎರಡು ಮೂಗಿನ ಹೊಳ್ಳೆಗಳ ನಡುವಿನ ಮೂಳೆಯು ವಿಚಲನಗೊಳ್ಳುತ್ತದೆ.  ಮೂಗಿನ ಸೆಪ್ಟಮ್ ಅಂದರೆ ಅದು ಒಂದು ತೆಳುವಾದ ಗೋಡೆಯಾಗಿದೆ. ಅದು ನಮ್ಮ ಮೂಗನ್ನು ಎರಡು ಭಾಗವಾಗಿ ಪ್ರತ್ಯೇಕಿಸುತ್ತದೆ. ಎರಡೂ ಭಾಗಗಳು ಒಂದೇ ಗಾತ್ರದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಈ ಸೆಪ್ಟಮ್ ಮ್ಯೂಕಸ್ ಮೆಂಬರೆನ್ ಸಹ ಆಯೋಜಿಸುತ್ತದೆ. ಇದು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುವುದಲ್ಲದೆ ಸೋಂಕನ್ನು ಹೊರಗೆ ಹಾಕಲು ನೆರವಾಗುತ್ತದೆ. ಒಂದು ವೇಳೆ ಈ ಸೆಪ್ಟಮ್ ಸರಿಯಾಗಿಲ್ಲದೆ ಹೋದ್ರೆ, ಒಂದು ಕಡೆ ಹೆಚ್ಚು ವಾಲಿದ್ದರೆ ಅದನ್ನು ವಿಚಲನೆ ಎಂದು ಕರೆಯಲಾಗುತ್ತದೆ.

ಗರ್ಭಿಣಿಯ ಕಾಡೋ ಸಮಸ್ಯೆ ಒಂದೆರಡಲ್ಲ, ಹೊಟ್ಟೆ ತುರಿಕೆಗೇನು ಕಾರಣ?

ಲಕ್ಷಣ:  ಈ ವಿಚಲನೆ ಅನೇಕರಲ್ಲಿ ರೋಗ ಲಕ್ಷಣವನ್ನು ಕಾಣಿಸೋದಿಲ್ಲ. ವಿಚಲನೆ ತೀವ್ರವಾಗಿದ್ದಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಉಸಿರಾಡಲು ತೊಂದೆಯಾಗಬಹುದು. ಒಂದೇ ಮೂಗಿನ ಹೊಳ್ಳೆ ದೊಡ್ಡದಿದ್ದು, ಇನ್ನೊಂದು ಕಿರಿದಾಗಿರುವ ಕಾರಣ ಮೂಗು ಶುಷ್ಕವಾಗಿ ರಕ್ತಸ್ರಾವವಾಗುವ ಸಾಧ್ಯತೆಯಿರುತ್ತದೆ. ಮೂಗಿನ ಭಾಗದಲ್ಲಿ ಕೆಲವರಿಗೆ ನೋವು ಕಾಣಿಸಿಕೊಳ್ಳುತ್ತದೆ. ನಿದ್ರೆಯಲ್ಲಿ ಉಸಿರುಗಟ್ಟಿದಂತಾಗುವುದು, ಗೊರಕೆ ಬರುವುದು ಇದೇ ಕಾರಣಕ್ಕೆ. ಸೈನಸ್ ಸಮಸ್ಯೆಗೂ ಇದು ಕಾರಣವಾಗುತ್ತದೆ. 

ಮೂಗಿನ ಸೆಪ್ಟಮ್ ವಿಚಲನೆಗೆ ಕಾರಣವೇನು? : ಇದಕ್ಕೆ ಎರಡು ಕಾರಣವಿದೆ. ಒಂದು ಜನ್ಮದಲ್ಲಿಯೇ ಬರುವುದು. ಇನ್ನೊಂದು ಮೂಗಿನಲ್ಲಿ ಗಾಯವಾದ್ರೆ ಸಮಸ್ಯೆ ಶುರುವಾಗುತ್ತದೆ. 

ಮೂಗಿನ ಸೆಪ್ಟಮ್ ವಿಚಲನೆಗೆ ಚಿಕಿತ್ಸೆ : ನಿಮಗೆ ಈ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ವೈದ್ಯರು ಇದರ ಪ್ರಮಾಣವನ್ನು ಪರೀಕ್ಷೆ ಮಾಡಿ, ಹೇಗೆ ಚಿಕಿತ್ಸೆ ನೀಡಬೇಕೆಂಬ ನಿರ್ಧಾರಕ್ಕೆ ಬರ್ತಾರೆ. ಮಾತ್ರೆಯಲ್ಲಿಯೇ ಇದನ್ನು ಗುಣಪಡಿಸಬಹುದು. ಒಂದ್ವೇಳೆ ಅದ್ರಿಂದ ಸಾಧ್ಯವಿಲ್ಲ ಎಂದಾದಾಗ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಗುತ್ತದೆ. ಸೆಪ್ಟೋಪ್ಲ್ಯಾಸ್ಟಿ ಎಂಬ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ವಿಚಲನೆಗೊಂದ ಮೂಳೆಯನ್ನು ಸರಿಯಾದ ಜಾಗಕ್ಕೆ ತಂದಿರುವ ಕೆಲಸವನ್ನು ಇಲ್ಲಿ ಮಾಡಲಾಗುತ್ತದೆ. ಸೆಪ್ಟೋಪ್ಲ್ಯಾಸಿ ಚಿಕಿತ್ಸೆಯಲ್ಲೂ ಕೆಲವೊಂದು ಅಪಾಯವಿದೆ. ಮಕ್ಕಳಿಗೆ ಇದನ್ನು ಮಾಡಲು ವೈದ್ಯರು ಒಪ್ಪಿಗೆ ನೀಡುವುದಿಲ್ಲ. ಯಾಕೆಂದ್ರೆ ಮಕ್ಕಳ ಮೇಲೆ ಇದು ಭಿನ್ನ ಪರಿಣಾಮ ಬೀರಬಹುದು. ಈ ಶಸ್ತ್ರಚಿಕಿತ್ಸೆಯಿಂದಾಗಿ ಮಗುವಿಗೆ ಸೋಂಕು, ರಕ್ತಸ್ರಾವ ಮತ್ತು ಅರಿವಳಿಕೆಗೆ ಪ್ರತಿಕ್ರಿಯೆಯ ಅಪಾಯವಿದೆ. ಶಸ್ತ್ರಚಿಕಿತ್ಸೆ ನಂತ್ರ ತಾತ್ಕಾಲಿಕ ಅಡ್ಡಪರಿಣಾಮ ಕಾಣಿಸಿಕೊಳ್ಳುತ್ತದೆ. ಮುಖ ಉಬ್ಬುವುದು, ಮೂಗಿನಲ್ಲಿ ನೋವು, ತಲೆನೋವು, ಕಣ್ಣುಗಳ ಸುತ್ತಲೂ ಊತ,   ರಕ್ತಸ್ರಾವ. ದಿನ ಕಳೆದಂತೆ ಸಮಸ್ಯೆ ಕಡಿಮೆಯಾಗ್ತಾ ಬರುತ್ತದೆ. ರಣಬೀರ್ ಕಪೂರ್ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. 
 

Latest Videos
Follow Us:
Download App:
  • android
  • ios