ಮುಂಜಾನೆ ಎದ್ದ ಕೂಡಲೇ ಏನು ಮಾಡುತ್ತೀರಿ? ಕೆಲವು ಅಭ್ಯಾಸಗಳು ನಿಮ್ಮ ದಿನವನ್ನು ಹಾಳು ಮಾಡಬಲ್ಲವು. ಇವು ನಿಮ್ಮಲ್ಲೂ ಇದೆಯಾ ನೋಡಿಕೊಳ್ಳಿ.
'ಬೆಳ್‌ಬೆಳಗ್ಗೇನೇ (Morning) ಎದ್ದು ಮೊಬೈಲ್ (Mobile) ನೋಡ್ತಾ ಕೂತ್ರೆ ನೀನು ಉದ್ಧಾರ ಆದಂಗೇ' ಎಂದು ಮಕ್ಕಳಿಗೆ ಅಪ್ಪ- ಅಮ್ಮ ಬಯ್ಯುವುದನ್ನು ನೀವು ಕೇಳಿರಬಹುದು. ಅಥವಾ ನೀವೇ ಆ ಮಗು ಆಗಿದ್ದರೂ ಆಗಿರಬಹುದು. ಪ್ರತಿದಿನ ಮುಂಜಾನೆ ಎಚ್ಚರವಾದ ಬಳಿಕ, ನಾವು ಕೆಲವು ಕೆಲಸಗಳನ್ನು ಅಭ್ಯಾಸಬಲದಿಂದ ಮಾಡುತ್ತೇವೆ. ಇದು ಚಟವಾಗಿ ಬಿಟ್ಟಿರುತ್ತದೆ. ಆದರೆ ಅವುಗಳು ಒಬ್ಬ ಯಶಸ್ವಿ ವ್ಯಕ್ತಿಯಾಗಿ ನಾವು ಬೆಳೆಯಲು ಅಡ್ಡಿಯಾಗಿಬಿಡುತ್ತವೆ ಎಂಬುದನ್ನು ಮರೆಯಬೇಡಿ. ಈ ವಿಷಕಾರಿ ಅಭ್ಯಾಸಗಳು ನಮ್ಮ ದಿನಚರಿಯನ್ನು ನಿಧಾನಗೊಳಿಸುತ್ತವೆ. ನಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ. ಕೆಲವು ಅಭ್ಯಾಸಗಳಿಂದ ನಾವು ಮುಂಗೋಪಿಯಾಗಬಹುದು, ಖಿನ್ನರಾಗಬಹುದು. ಮುಂಜಾನೆಯೇ ಮೂಡ್ ಕೆಡಿಸಿಕೊಂಡರೆ ದಿನವಿಡೀ ನಮ್ಮ ಯಾವ ಕೆಲಸವೂ ಸರಿಯಾಗಿ ನಡೆಯುವುದಿಲ್ಲ.
ಆದ್ದರಿಂದ ದಿನವನ್ನು ಪ್ರಾರಂಭಿಸುವ ವೇಳೆ ಈ ಕೆಳಗಿನ ಬೆಳಗಿನ ವಿಷಕಾರಿ (Toxic) ಅಭ್ಯಾಸಗಳನ್ನು (Habits) ಬಿಡಿ.
ಫೋನ್ ನೋಡುತ್ತಿರುವುದು (Smartphone)
ಈ ದಿನಗಳಲ್ಲಿ, ನಾವು ಎದ್ದಾಗ ಮಾಡುವ ಮೊದಲ ಕೆಲಸವೆಂದರೆ ನಮ್ಮ ಸ್ಮಾರ್ಟ್‌ಪೋನ್ ಪರದೆಗಳನ್ನು ನೋಡುವುದು. ಇದು ನಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರುವ ಅತ್ಯಂತ ವಿಷಕಾರಿ ಅಭ್ಯಾಸವಾಗಿದೆ. ಇದು ನಮ್ಮನ್ನು ಕಡಿಮೆ ಉತ್ಪಾದಕವಾಗಿಸುತ್ತದೆ. ಆದ್ದರಿಂದ ಬದಲಾಗಿ, ಎದ್ದೇಳಿ. ಸ್ವಲ್ಪ ಬೆಚ್ಚಗಿನ ನೀರನ್ನು ಸೇವಿಸಿ, ನಿಮ್ಮ ಮುಖವನ್ನು ತೊಳೆಯಿರಿ. ನಿಂತುಕೊಳ್ಳಿ ಅಥವಾ ಬಾಲ್ಕನಿಯಲ್ಲಿ ಅಥವಾ ಕಿಟಕಿಯ ಬಳಿ ಕುಳಿತು ಸ್ವಲ್ಪ ತಾಜಾ ಗಾಳಿಯನ್ನು ಉಸಿರಾಡಿ. ನಿಮಗಾಗಿ ಒಂದು ಅಥವಾ ಎರಡು ಗಂಟೆಗಳನ್ನು ಇಟ್ಟುಕೊಳ್ಳಿ ಮತ್ತು ನಂತರ ಫೋನ್, ಸಾಮಾಜಿಕ ಮಾಧ್ಯಮ, ನಿಮ್ಮ ಮೇಲ್‌ಗಳು ಇತ್ಯಾದಿಗಳನ್ನು ನೋಡಿ.
Sensual Kiss: ಸಂಗಾತಿಗೆ ಮತ್ತು ಬರುವ ಮುತ್ತು ಕೊಡುವುದು ಹೇಗೆ ?
ಉಪಹಾರವನ್ನು ಬಿಟ್ಟುಬಿಡುವುದು (Breakfast)
ಅನೇಕ ಜನರು ಈ ಕೆಟ್ಟ ಅಭ್ಯಾಸವನ್ನು ಹೊಂದಿದ್ದಾರೆ. ತಡವಾಗಿ ಎದ್ದು, ನಂತರ ಬೆಳಗಿನ ಉಪಾಹಾರಕ್ಕಾಗಿ ಏನನ್ನೂ ತಿನ್ನದೆ ಕಾಫಿ ಅಥವಾ ಚಹಾವನ್ನು ಸೇವಿಸುತ್ತಾರೆ. ನಿಮ್ಮ ದಿನವನ್ನು ಪ್ರಾರಂಭಿಸಲು ಆರೋಗ್ಯಕರ ಉಪಹಾರವನ್ನು ಸೇವಿಸುವುದು ಮುಖ್ಯ. ಮೊಟ್ಟೆ, ಟೋಸ್ಟ್ ಅಥವಾ ಓಟ್ ಮೀಲ್, ಕೆಲವು ತಾಜಾ ಹಣ್ಣುಗಳು ಇತ್ಯಾದಿಗಳನ್ನು ಸೇವಿಸಿ.
ಮುಂದೂಡುವುದು (Procrastination)
ನೀವು ಬೆಳಿಗ್ಗೆ ಎದ್ದ ನಂತರ, ನಿಮ್ಮ ದಿನವನ್ನು ಯೋಜಿಸುವುದು ಮುಖ್ಯವಾಗಿದೆ. ಅದು ಭಾನುವಾರವಾಗಿದ್ದರೂ ಸರಿ. ನೀವು ಶಾಪಿಂಗ್ ಮಾಡಲು ಬಯಸಿದರೆ ಅದಕ್ಕೆ ಅನುಗುಣವಾಗಿ ಕೆಲಸ ಮಾಡಿ. ನಿಮ್ಮ ಯೋಜನೆಗಳನ್ನು ವಿಳಂಬ ಮಾಡಬೇಡಿ, ಅದು ಎಂದಿಗೂ ಫಲಪ್ರದವಾಗುವುದಿಲ್ಲ. ಹೊರಗೆ ಹೋಗುವ ಮೊದಲು ಬಿಡುವಿನ ವೇಳೆ ಗಿಡಗಳಿಗೆ ನೀರು ಹಾಕಿ ಅಥವಾ ಮನೆ, ಫ್ರಿಡ್ಜ್ ಸ್ವಚ್ಛಗೊಳಿಸಿ.
ಸ್ನಾನ ಮಾಡದಿರುವುದು (Bathing)
ಹೆಚ್ಚಿನವರು ತಮ್ಮ ದಿನವನ್ನು ಪ್ರಾರಂಭಿಸುವ ಮೊದಲು ಬೆಳಿಗ್ಗೆ ಸ್ನಾನ ಮಾಡುವ ಕಾರಣವೆಂದರೆ ಅದು ಅವರಿಗೆ ತಾಜಾತನವನ್ನು (Freshness) ನೀಡುತ್ತದೆ ಮತ್ತು ದಿನಕ್ಕೆ ಉತ್ತೇಜನ ನೀಡುತ್ತದೆ. ಸ್ನಾನದ ಕ್ರಿಯೆಯ ವೇಳೆ ನಮ್ಮ ದೇಹವು ಉತ್ತಮ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಶಕ್ತಿಯನ್ನು ನಮಗೆ ನೀಡುತ್ತದೆ.
Healthy Snacks: ಪಾರ್ಟಿಯಾದರೇನು, ಹಾಳು ಮೂಳು ತಿನ್ನಲೇಬೇಕಾ?
ನಕಾರಾತ್ಮಕ ಆಲೋಚನೆಗಳು (Negative thoughts)
ನೀವು ಎದ್ದ ತಕ್ಷಣ ಜೀವನದಲ್ಲಿ ನಕಾರಾತ್ಮಕ ವಿಷಯಗಳ ಬಗ್ಗೆ ಯೋಚಿಸಬೇಡಿ. ಧ್ಯಾನ ಮಾಡಿ ಅಥವಾ ನೀವೇ ಪೆಪ್ ಟಾಕ್ ನೀಡಿ. ಜೀವನದಲ್ಲಿ ನೀವು ಹೊಂದಿರುವ ಒಳ್ಳೆಯ ವಿಷಯಗಳಿಗೆ ಕೃತಜ್ಞರಾಗಿರಿ. ನಿಮಗೆ ದೊರೆತ ಆಶೀರ್ವಾದಗಳನ್ನು ಎಣಿಸಿಕೊಳ್ಳಿ ಮತ್ತು ಆಶಾವಾದಿಯಾಗಿರಿ. ಬೆಳಿಗ್ಗೆ ತಲೆಗೆ ಬರುವ ಒಂದು ಋಣಾತ್ಮಕ ಆಲೋಚನೆಯು ಯಾವಾಗಲೂ ನಿಮ್ಮನ್ನು ನಿರಾಶಾದಾಯಕ ವ್ಯಕ್ತಿಯಾಗಿಸಬಹುದು.
ಈ ಗಿಡಮೂಲಿಕೆಗಳನ್ನು ಬಳಸಿ Cholesterol ನಿಯಂತ್ರಿಸಿ!
ಜಂಕ್‌ಫುಡ್ ಸೇವಿಸುವುದು (Junk food)
ಬೆಳಗ್ಗೆ ಎದ್ದು ಹಲ್ಲು ಉಜ್ಜಿ ಮುಖ ತೊಳೆದ ತಕ್ಷಣ ಕೆಲವರು ಫ್ರಿಜ್‌ನಲ್ಲಿ ಇಟ್ಟ ನಿನ್ನೆಯ ಆಹಾರವನ್ನು ಸೇವಿಸುವುದುಂಟು. ಅಥವಾ ಕೆಲವರು ಬ್ರೆಡ್, ಚಿಪ್ಸ್‌ನಂಥ ಆಹಾರ ಸೇವಿಸುತ್ತಾರೆ. ಇದಂತೂ ಬಹಳ ಕೆಟ್ಟ ಅಭ್ಯಾಸ. ಬೆಳಗ್ಗಿನ ಹೊತ್ತಿನಲ್ಲಿ ನೀವಿ ದೇಹಕ್ಕೆ ಸಾತ್ವಿಕ, ಪ್ರೊಟೀನ್ ಹೆಚ್ಚಾಗಿ ಇರುವ, ಕಾರ್ಬೊ ಸಾಕಷ್ಟು ಇರುವ ಆಹಾರವನ್ನು ಕೊಟ್ಟರೆ ದಿನವಿಡೀ ದೇಹ ಉಲ್ಲಾಸ, ಚಟುವಟಿಕೆಯಿಂದ ಇರುತ್ತದೆ. ಮುಂಜಾನೆಯೇ ಜಂಕ್ ಸೇವಿಸಿದರೆ ಹೊಟ್ಟೆ ಕೆಟ್ಟ ಫೀಲ್ ಬರುತ್ತಾ ದಿನವನ್ನು ಕೆಡಿಸುತ್ತದೆ.
