Healthy Snacks: ಪಾರ್ಟಿಯಾದರೇನು, ಹಾಳು ಮೂಳು ತಿನ್ನಲೇಬೇಕಾ?

ಸ್ನೇಹಿತರು ಸೇರಿ ಪಾರ್ಟಿ ಮಾಡುವ ಸಮಯದಲ್ಲಿ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಆರೋಗ್ಯಕ್ಕೆ ಹಾನಿಕರವಲ್ಲದ ಸ್ನ್ಯಾಕ್ಸ್ ಬಗ್ಗೆಯೇ ಯೋಚಿಸಬೇಕಾಗುತ್ತದೆ. ಅಂತಹ ಹಲವು ಸ್ನ್ಯಾಕ್ಸ್ ಗಳು ನಿಮ್ಮ ಗಮನದಲ್ಲಿರಲಿ.
 

Use healthy snacks in party time avoid  unhealthy foods

ಸ್ನೇಹಿತರೆಲ್ಲ ಸೇರಿ ಒಂದು ಗೆಟ್ ಟುಗೆದರ್ (Get Together) ಮಾಡಿದಾಗ ಏನಾದರೂ ತಿನ್ನುವುದು (Eat), ಕುಡಿಯುವುದು (Drink) ಸಹಜ. ನಗು, ಮಾತುಗಳ ಸಂಗಮದಲ್ಲಿ ತಿನ್ನುವ ಪ್ರಮಾಣದ ಅಂದಾಜೇ ಸಿಗುವುದಿಲ್ಲ. ಅಂತಹ ಸಮಯದಲ್ಲಿ ಹೆಚ್ಚು ಜಿಡ್ಡಿನಂಶದ ಮಂಚೂರಿಯನ್, ಸಮೋಸಾ (Samosa), ಚಿಪ್ಸ್ (Chips), ಫ್ರೆಂಚ್ ಫ್ರೈ (French Fry) ಮುಂತಾದ ಪಾರ್ಟಿ ಸ್ನ್ಯಾಕ್ಸ್ (Party Snacks) ತಿನ್ನುವ ಕುರಿತು ಗಮನ ನೀಡಬೇಕು. ಆದರೆ, ಅದಕ್ಕೂ ಮಿಗಿಲಾಗಿ ಆರೋಗ್ಯಕ್ಕೆ ಯಾವುದೇ ಹಾನಿ ನೀಡದ ಸ್ನಾಕ್ಸ್ ಗಳನ್ನು ಬಳಕೆ ಮಾಡುವತ್ತ ಆದ್ಯತೆ ನೀಡಬೇಕು. 
ಅಂತಹ ಕೆಲವು ಸ್ನ್ಯಾಕ್ಸ್ ಗಳನ್ನು ತಿಳಿದುಕೊಂಡಿರಿ. 

•    ಹುರಿದ ಕಾಳುಗಳು (Roasted Lentils)
ಹುರಿದ ಕಾಳುಗಳಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಬಾಧೆಯಿಲ್ಲ. ಇದರಲ್ಲಿ ಸಾಕಷ್ಟು ವೆರೈಟಿ ಕಾಳುಗಳು ದೊರೆಯುತ್ತವೆ. ಇವುಗಳನ್ನು ಪೂರ್ವ ಸಿದ್ಧತೆಯಿಲ್ಲದೆಯೂ ಬಳಕೆ ಮಾಡಬಹುದು. ಹೆಚ್ಚು ಉಪ್ಪಿನಂಶವಿಲ್ಲದ ಕಾಳುಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ.

•    ರೋಸ್ಟೆಡ್ ಕಾರ್ನ್ ನ್ಯಾಚೊಸ್ (Corn Nachos)
ಹುರಿದ ಕಾರ್ನ್ ಹಪ್ಪಳದಂತಿರುವ ನ್ಯಾಚೊಸ್ ಗೆ ಈರುಳ್ಳಿ, ಟೊಮ್ಯಾಟೋ, ಕೊತ್ತಂಬರಿ ಸೊಪ್ಪು ಸೇರಿಸಿ ಪಾರ್ಟಿಯಲ್ಲಿ ಸೇವಿಸಬಹುದು. ಇದನ್ನು ಶುಂಠಿ, ಕೊತ್ತಂಬರಿ, ಹಸಿಮೆಣಸು ಸೇರಿಸಿದ ಮೊಸರಿನಲ್ಲಿ ಡಿಪ್ ಮಾಡಿಕೊಂಡೂ ತಿನ್ನಬಹುದು. 

•    ಕ್ಯಾರೆಟ್ ಅಥವಾ ಹುಮ್ಮುಸ್ (Carrot and Hummus)
ಅತ್ಯಂತ ಆರೋಗ್ಯಪೂರ್ಣ ಸ್ನ್ಯಾಕ್ಸ್ ಎಂದರೆ ಕ್ಯಾರೆಟ್ ಮತ್ತು ಹುಮ್ಮುಸ್ ಮಿಶ್ರಣ. ಕಡಲೆಬೇಳೆಯಿಂದ ತಯಾರಿಸುವ ಹುಮ್ಮುಸ್ ಅತಿ ಕಡಿಮೆ ಕ್ಯಾಲರಿ ಹೊಂದಿರುವ ಆಹಾರ. ಅದನ್ನು ತಯಾರಿಸುವುದೂ ಸುಲಭವಾಗಿದ್ದು, ಸಂತೋಷಕೂಟಕ್ಕೆ ಸರಿಯಾಗಿ ಹೊಂದುವ ಆಹಾರವಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರಿಗೂ ಹೊಂದಾಣಿಕೆಯಾಗುತ್ತದೆ. 

•    ಪನೀರ್ ಅಥವಾ ಚಿಕನ್ ಟಿಕ್ಕಾ (Paneer or Chicken Tikka)
ಪಕೋರಾ ಅಥವಾ ಇನ್ನಿತರ ಡೀಪ್ ಫ್ರೈಡ್ ಸ್ನ್ಯಾಕ್ಸ್ ಗಿಂತ ಪನೀರ್ ಅಥವಾ ಚಿಕನ್ ಟಿಕ್ಕಾ ಎಷ್ಟೋ ಪಾಲು ಉತ್ತಮ. ಇದರೊಂದಿಗೆ ಮಸಾಲೆಯೂ ಸೇರಿರುವುದರಿಂದ ಕ್ಯಾಲರಿ ಬಗ್ಗೆ ಹೆಚ್ಚು ಯೋಚಿಸಬೇಕಾಗಿಲ್ಲ. 

•    ರಗ್ಡಾ ಪ್ಯಾಟ್ಟಿಸ್ (Ragda Pattice)
ಮುಂಬೈನಲ್ಲಿ ಭಾರೀ ಜನಪ್ರಿಯವಾಗಿರುವ ಸ್ಟ್ರೀಟ್ ಫುಡ್ (Street Food) ಇದು. ಸ್ವಲ್ಪ ಹುರಿದ ಆಲೂಗಡ್ಡೆ, ಮಂದವಾದ ಬಟಾಣಿ ಕರಿಯೊಂದಿಗೆ ಇದನ್ನು ಬಳಕೆ ಮಾಡಲಾಗುತ್ತದೆ. ರುಚಿಯಲ್ಲಿ ಯಾವುದೇ ಸ್ನ್ಯಾಕ್ಸ್ ಗೆ ಕಡಿಮೆಯಿಲ್ಲದ ಇದು ಆರೋಗ್ಯಕ್ಕೆ ಹಾನಿ ತರುವುದಿಲ್ಲ. 

•    ದಹಿ ವಡಾ (Dahi Vada)
ಕಾಳುಗಳಿಂದ ತಯಾರಿಸಿದ ವಡೆಯನ್ನು ಬಳಕೆ ಮಾಡಬೇಕು. ಇದು ಪ್ರೊಟೀನ್ ಭರಿತವಾಗಿರುತ್ತದೆ. ಇದನ್ನು ಮೊಸರಿನೊಂದಿಗೆ ಬಳಕೆ ಮಾಡುವುದು ಸೂಕ್ತ. ವಿವಿಧ ರೀತಿಯ ಸ್ಪೈಸಿ ಚಟ್ನಿಗಳನ್ನೂ ಸೇರಿಸಿಕೊಳ್ಳಬಹುದು.

•    ಢೋಕ್ಲಾ (Dhokla)
ಖ್ಯಾತ ಗುಜರಾತಿ ಆಹಾರ. ಹಬ್ಬದ ಸಮಯದಲ್ಲಿ ಡೋಕ್ಲಾ ಹೆಚ್ಚು ಬಳಕೆಯಾಗುತ್ತದೆ. ಕ್ಯಾಲರಿ ಕಡಿಮೆ ಇರುವ ಹಾಗೂ ರುಚಿಯಲ್ಲಿ ಅದ್ಭುತವಾಗಿರುವ ಆಹಾರ ಢೋಕ್ಲಾ. ಮೃದುವಾದ, ಹಗುರವಾಗಿರುತ್ತದೆ. 

•    ಬೇಯಿಸಿದ ಸ್ವೀಟ್ ಕಾರ್ನ್ ಚಾಟ್ (Sweet Corn Chat)
ಬೇಯಿಸಿದ ಸ್ವೀಟ್ ಕಾರ್ನ್ ಸಿದ್ಧಪಡಿಸಲು ಹತ್ತು ನಿಮಿಷಕ್ಕೂ ಅಧಿಕ ಸಮಯ ಬೇಕಾಗಿಲ್ಲ. ಬೇಯಿಸಿದ ಸ್ವೀಟ್ ಕಾರ್ನ್ ಗೆ ಮೊಳಕೆ ಕಾಳು, ಹುರಿದ ಕಾಳುಗಳು, ಈರುಳ್ಳಿ, ಟೊಮ್ಯಾಟೋ, ಸೌತೆಕಾಯಿಗಳನ್ನೂ ಸೇರಿಸಿದರೆ ರುಚಿ ಚೆನ್ನಾಗಿರುತ್ತದೆ. 

•    ಹುರಿದ ಡ್ರೈಫ್ರೂಟ್ಸ್ (Dry Fruits)
ಹುರಿದ ಬಾದಾಮಿ, ವಾಲ್ ನಟ್, ಗೋಡಂಬಿ, ಪಿಸ್ತಾಗಳನ್ನು ಪಾರ್ಟಿ ಸಮಯದಲ್ಲಿ ಬಳಕೆ ಮಾಡುವುದು ಅತ್ಯಂತ ಸೂಕ್ತ. ನಿಮ್ಮ ಪ್ಲೇಟ್ ನಲ್ಲಿ ಆಂಟಿಆಕ್ಸಿಡಂಟ್ ಭರಿತ ಆಹಾರ ಇದ್ದಂತಾಗುತ್ತದೆ. ಇವು ಯಾವುದೇ ರೀತಿಯ ಪಾನೀಯಕ್ಕೂ ಸೆಟ್ ಆಗುತ್ತವೆ. 

Latest Videos
Follow Us:
Download App:
  • android
  • ios