ಅತ್ತರೂ ಇದೆ ಆರೋಗ್ಯಕ್ಕೆ ಲಾಭ, ನಿಮಗೆ ಗೊತ್ತಿಲ್ಲದ ಅಳುವಿನ ಇಂಟರೆಸ್ಟಿಂಗ್ ಫ್ಯಾಕ್ಟ್ಸ್
ಕೆಲವರು ಪದೇ ಪದೇ ಅಳ್ತಿರುತ್ತಾರೆ. ಮತ್ತೆ ಕೆಲವರು ಅತಿ ಅಪರೂಪಕ್ಕೊಮ್ಮೆ ಅಳ್ತಿರುತ್ತಾರೆ. ಇನ್ನು ಕೆಲವರು ಸಂತೋಷವಾದ್ರೆ ಅಳ್ತಾರೆ. ಈ ಅಳುವಿನ ಹಿಂದೆ ಸಾಕಷ್ಟು ಕಾರಣವಿದೆ. ಪುರುಷರು ಹಾಗೂ ಮಹಿಳೆ ಮಧ್ಯೆ ಅಳುವಿನ ವ್ಯತ್ಯಾಸಕ್ಕೂ ಕಾರಣವಿದೆ
ಮನುಷ್ಯನ ಮನಸ್ಸನ್ನು ಅರಿಯೋದು ಅಷ್ಟು ಸುಲಭವಲ್ಲ. ಮನಸ್ಸು ತುಂಬಾ ಸಂಕೀರ್ಣವಾಗಿರುತ್ತದೆ. ವೈದ್ಯರು ಮತ್ತು ನರವಿಜ್ಞಾನಿಗಳು ಕೂಡ ನಮ್ಮ ಮನಸ್ಸನ್ನು ಸಂಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲ. ಅದರ ಒಂದು ಭಾಗವನ್ನು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ. ನಮ್ಮ ದೇಹದ ಕೆಲ ಚಟುವಟಿಕೆಯನ್ನು ನಾವು ಸೂಕ್ಷ್ಮವಾಗಿ ಅರ್ಥೈಸಬೇಕು. ನಮ್ಮ ದೇಹದಲ್ಲಾಗುವ ಬದಲಾವಣೆ ನಮ್ಮ ಮನಸ್ಸಿನ ಜೊತೆ ನೇರ ಸಂಬಂಧವನ್ನು ಹೊಂದಿದೆ. ನಾವಿಂದು ಅಳುವಿನ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೋಡ್ತೇವೆ.
ಅಳು (Cry) ವಿನಲ್ಲಿದೆ ಲಾಭ : ಅಳೋದ್ರಿಂದ ನಮ್ಮ ಕಣ್ಣಿನಲ್ಲಿರುವ ಬ್ಯಾಕ್ಟೀರಿಯಾ (Bacteria) ಹೊರಗೆ ಹೋಗುತ್ತದೆ. ಅಷ್ಟೇ ಅಲ್ಲ ಅಳು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಳೋದ್ರಿಂದ ನಮ್ಮ ಒತ್ತಡ (Stress) ಹೊರಗೆ ಬರುತ್ತದೆ. ಇದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುತ್ತದೆ. ದುಃಖವನ್ನು ಮನಸ್ಸಿನಲ್ಲಿಯೇ ತಡೆಹಿಡಿದಾಗ ಒತ್ತಡ ಹೆಚ್ಚಾಗುತ್ತದೆ. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಅಳು ಬಂದಾಗ ಅತ್ತುಬಿಡಿ, ದುಃಖವನ್ನು ಹೊರಗೆ ಹಾಕಿ ಅನ್ನೋದು.
ಯಾವ ಕಣ್ಣಿನಲ್ಲಿ ಬರುತ್ತೆ ಸಂತೋಷದ ನೀರು ? : ದುಃಖದಲ್ಲಿ ಎಡಗಣ್ಣಿನಿಂದ ಮತ್ತು ಸಂತೋಷದಲ್ಲಿ ಬಲಗಣ್ಣಿನಿಂದ ಕಣ್ಣೀರು ಬರುತ್ತದೆ. ಈ ಸತ್ಯ ಬಹುತೇಕ ಯಾರಿಗೂ ತಿಳಿದಿಲ್ಲ. ದುಃಖದಲ್ಲಿ ನಮ್ಮ ಎಡಗಣ್ಣಿನಿಂದ ಹೆಚ್ಚಾಗಿ ಕಣ್ಣೀರು ಬರುತ್ತದೆ. ಸಂತೋಷವಾಗಿದ್ದರೆ ನಮ್ಮ ಬಲಗಣ್ಣಿನಿಂದ ಮೊದಲು ಕಣ್ಣೀರು ಬರುತ್ತದೆ. ನಮ್ಮ ದೇಹ ವ್ಯಕ್ತಪಡಿಸಲು ಸಾಧ್ಯವಾಗದ ನೋವು ಕಣ್ಣೀರಿನ ಮೂಲಕ ಹೊರಬರುತ್ತದೆ. ನೋವು ಅಳುವಿನ ಮೂಲಕ ಹೊರಗೆ ಬರೋದು ಒಳ್ಳೆಯದು ಎನ್ನುತ್ತಾರೆ ತಜ್ಞರು.
ಕೆಲವು ಕಾಸ್ಮೆಟಿಕ್ಸ್ ಬಳಸಿದರೆ ಕ್ಯಾನಸರ್ ಸಾಧ್ಯತೆ ಇರೋದು ಹೌದಾ?
ರಾತ್ರಿಯೇ ಹೆಚ್ಚು ಜನರು ಅಳೋದೇಕೆ? : ರಾತ್ರಿ ಅಳು ಬರೋದು ಹೆಚ್ಚು. ನಿಮಗೆ ಕೂಡ ರಾತ್ರಿ ಅಳು ನಿಯಂತ್ರಿಸಿಕೊಳ್ಳಲು ಸಾಧ್ಯವಾಗದೆ ಇರಬಹುದು. ಇದಕ್ಕೆ ಕಾರಣ ನಿಮ್ಮ ಮನಸ್ಸು. ರಾತ್ರಿ ಭಾವನೆಗಳನ್ನು ನಿಯಂತ್ರಿಸುವುದು ಕಷ್ಟ. ಬೆಳಗಿನ ಸಮಯದಲ್ಲಿ ಸುತ್ತಲ ಪ್ರದೇಶ ವೀಕ್ಷಣೆ, ಆಪ್ತರ ಜೊತೆ ಮಾತನಾಡಿ ಸಮಯ ಹೋಗಿರುತ್ತದೆ. ರಾತ್ರಿ ಒಂಟಿತನ, ಒತ್ತಡ ಕಾಡುತ್ತದೆ. ರಾತ್ರಿ ಅನೇಕರಿಗೆ ಆತಂಕದಿಂದ ಸರಿಯಾಗಿ ನಿದ್ರೆ ಬರೋದಿಲ್ಲ. ಅತ್ತು ಆತಂಕ ಹೊರಗೆ ಹಾಕಿದ ನಂತ್ರ ಆರಾಮವಾಗಿ ಅವರು ನಿದ್ರೆ ಮಾಡ್ತಾರೆ.
ಅಳೋದು ಒಂದು ಕಾಯಿಲೆ : ತಜ್ಞರ ಪ್ರಕಾರ, ಅತಿಯಾಗಿ ನಗೋದು ಹಾಗೆ ಅತಿಯಾಗಿ ಅಳೋದು ಕೂಡ ಒಂದು ರೀತಿಯ ಕಾಯಿಲೆಯಾಗಿದೆ. ನರಮಂಡಲದಲ್ಲಿ ಸಮಸ್ಯೆ ಕಾಣಿಸಿಕೊಂಡ್ರೆ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗೋದಿಲ್ಲ. ಕೆಲವರು ಇದ್ದಕ್ಕಿದ್ದಂತೆ ಅಳಲು ಹಾಗೂ ನಗಲು ಶುರು ಮಾಡ್ತಾರೆ. ಅಕಾಲಿಕವಾಗಿ ನೀಡುವ ಈ ಪ್ರತಿಕ್ರಿಯೆ ಅಪಾಯಕಾರಿಯಾಗಿದೆ. ನಿಮ್ಮಲ್ಲಿಯೂ ಈ ಸಮಸ್ಯೆ ಕಾಣಿಸಿಕೊಂಡ್ರೆ ತಕ್ಷಣ ತಜ್ಞರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಿರಿ.
ಅಳೋದ್ರಲ್ಲಿ ಮಹಿಳೆಯರು ಏಕೆ ಮುಂದೆ? : ಮಹಿಳೆಯರು ಯಾವಾಗ್ಲೂ ಪುರುಷರಿಗಿಂತ ಹೆಚ್ಚು ಅಳ್ತಾರೆ. ಸಂಶೋಧನೆ ಪ್ರಕಾರ, ದುಃಖದ ಕಣ್ಣೀರು ದೇಹಕ್ಕೂ ಸಂಬಂಧಿಸಿದೆ. ದೇಹದ ಭಾಗವಾಗಿರುವ ಪ್ರೊಲ್ಯಾಕ್ಟಿನ್ ಎಂಬ ಪ್ರೋಟೀನ್ ನಮ್ಮ ಎಂಡೋಕ್ರೈನ್ ಮೇಲೆ ಪರಿಣಾಮ ಬೀರುತ್ತದೆ. ಇದು ಪುರುಷರಿಗಿಂತ ಮಹಿಳೆಯರು ಹೆಚ್ಚು ಅಳಲು ಕಾರಣವಾಗಿದೆ. ಮಹಿಳೆಯರ ದೇಹದಲ್ಲಿ ಪುರುಷರಿಗಿಂತ ಶೇಕಡಾ 60 ಹೆಚ್ಚು ಪ್ರೊಲ್ಯಾಕ್ಟಿನ್ ಇರುತ್ತದೆ.
Brain Dead ಮಹಿಳೆಯರಿಂದ್ಲೂ ಮಗು ಪಡೆಯಬಹುದು?
ಕೆಲವರು ತುಂಬಾ ಅಳೋದೇಕೆ? : ಅಳಲು ಪ್ರೊಲ್ಯಾಕ್ಟಿನ್ ಕಾರಣ ಅನ್ನೋದು ಗೊತ್ತಾಗಿದೆ. ಇದಲ್ಲದೆ ಕೆಲವರು ತುಂಬಾ ಮೃದು ಸ್ವಭಾವ ಹೊಂದಿರುತ್ತಾರೆ. ಅವರಿಗೆ ಮಾತು ಮಾತಿಗೂ ಅಳು ಬರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ವ್ಯಕ್ತಿತ್ವವನ್ನು ಹೊಂದಿರುತ್ತಾನೆ. ಪ್ರತಿಯೊಂದು ಪರಿಸ್ಥಿತಿಯಲ್ಲೂ ಅವರ ಪ್ರತಿಕ್ರಿಯೆ ಭಿನ್ನವಾಗಿರುತ್ತದೆ. ಶೇಕಡಾ 20ರಷ್ಟು ಮಂದಿ ಅತೀ ಭಾವುಕ ಸ್ವಭಾವ ಹೊಂದಿದ್ದು, ಅವರನ್ನು ಕರುಣಾಮಯಿ ಎನ್ನಲಾಗುತ್ತದೆ.