ಕೆಲವು ಕಾಸ್ಮೆಟಿಕ್ಸ್ ಬಳಸಿದರೆ ಕ್ಯಾನಸರ್ ಸಾಧ್ಯತೆ ಇರೋದು ಹೌದಾ?
ಹೊಸ ಅಧ್ಯಯನವು ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದೆ, ಇದರ ಪ್ರಕಾರ ನೈಲ್ ಪಾಲಿಶ್ ಮತ್ತು ಶಾಂಪೂ ಬಳಸುವವರು ಈ ಕಾರಣದಿಂದಾಗಿ ಕ್ಯಾನ್ಸರ್ ಅಪಾಯ ಹೊಂದುವ ಸಾಧ್ಯತೆ ಹೆಚ್ಚಾಗಿರುತ್ತೆ ಎಂದು ತಿಳಿದುಬಂದಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮುಂದೆ ಓದಿ.
ಹುಡುಗಿಯರು ಮತ್ತು ಮಹಿಳೆಯರು ಪರ್ಫ್ಯೂಮ್ಸ್, ನೈಲ್ ಪಾಲಿಶ್(Nail polish) ಮತ್ತು ಶಾಂಪೂವನ್ನು ಬಳಸಲು ಇಷ್ಟಪಡುತ್ತಾರೆ. ಹಾಗೆಯೇ, ಪುರುಷರು ಸ್ಪ್ರೇ ಮತ್ತು ಆಫ್ಟರ್ ಶೇವ್ ಲೋಷನ್ ಹಚ್ಚಲು ಇಷ್ಟಪಡುತ್ತಾರೆ. ನೀವು ಸಹ ಅವುಗಳನ್ನು ಇಷ್ಟಪಟ್ಟು ಬಳಸ್ತೀರಾ? ಹಾಗಿದ್ರೆ ನಿಮಗೊಂದು ಶಾಕಿಂಗ್ ಸುದ್ದಿ ಇಲ್ಲಿದೆ. ಈ ವಸ್ತುಗಳನ್ನು ನಿರಂತರವಾಗಿ ಬಳಸೋದರಿಂದ ಕ್ಯಾನ್ಸರ್ ಕೂಡ ಉಂಟಾಗುವ ಸಾಧ್ಯತೆ ಇದೆ ಗೊತ್ತಾ?
ನೈಲ್ ಪಾಲಿಶ್ ಮತ್ತು ಶಾಂಪೂ(Shampoo) ಬಳಸೋದರಿಂದ ಕ್ಯಾನ್ಸರ್ ಮತ್ತು ಮಧುಮೇಹದಂತಹ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಾಗುತ್ತೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಹಾಗಿದ್ರೆ ಈ ಅಧ್ಯಯನದಲ್ಲಿ ಏನಿದೆ? ನೈಲ್ ಪಾಲಿಶ್ ನಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ಅನ್ನೋದನ್ನು ತಿಳಿಯೋಣ.
ಈ ಅಧ್ಯಯನದ ಪ್ರಕಾರ, ಶಾಂಪೂ ಮತ್ತು ನೈಲ್ ಪಾಲಿಶ್ನಂತಹ ಉತ್ಪನ್ನಗಳು ಚರ್ಮದ ಒಳ ಪದರಗಳನ್ನು ಪ್ರವೇಶಿಸುವ ರಾಸಾಯನಿಕಗಳನ್ನು ಹೊಂದಿರುತ್ತವೆ ಮತ್ತು ಶ್ವಾಸಕೋಶ, ಯಕೃತ್ತು ಮತ್ತು ಮೂತ್ರಪಿಂಡಗಳಂತಹ(Kidney) ಪ್ರಮುಖ ಅಂಗಗಳನ್ನು ಹಾನಿಗೊಳಿಸುತ್ತವೆ.
ಈ ಅಧ್ಯಯನದ ಫಲಿತಾಂಶಗಳನ್ನು ಜರ್ನಲ್ ಆಫ್ ಕ್ಲಿನಿಕಲ್ ಎಂಡೋಕ್ರೈನಾಲಜಿ ಅಂಡ್ ಮೆಟಬಾಲಿಸಂ ಆಫ್ ದಿ ಎಂಡೋಕ್ರೈನ್ ಸೊಸೈಟಿಯಲ್ಲಿ ಪ್ರಕಟಿಸಲಾಗಿದೆ. ಸಂಶೋಧಕರ ಪ್ರಕಾರ, ಗ್ರೂಮಿಂಗ್ ಉತ್ಪನ್ನಗಳಲ್ಲಿ ಕಂಡುಬರುವ ಈ ವಿಷಕಾರಿ ರಾಸಾಯನಿಕಗಳು ಎಂಡೋಕ್ರೇನ್ ಹಾನಿಗೊಳಿಸೋದಲ್ಲದೆ, ಅವು ಮಹಿಳೆಯರಲ್ಲಿ ಮಧುಮೇಹದ(Diabetes) ಅಪಾಯವನ್ನು ಹೆಚ್ಚಿಸುತ್ತವೆ.
ಸೌಂದರ್ಯವನ್ನು ಹೆಚ್ಚಿಸುವ ಈ ಉತ್ಪನ್ನಗಳು ನಿಮ್ಮನ್ನು ಅನಾರೋಗ್ಯಕ್ಕೆ ದೂಡಬಹುದು
ಈ ಅನಾರೋಗ್ಯಕ್ಕೆ ಕಾರಣ ಪ್ಲಾಸ್ಟಿಕ್ ಡಬ್ಬಿ, ಬಾಟಲಿ ಮತ್ತು ಪ್ಯಾಕೇಜಿಂಗ್ನಲ್ಲಿ ಬಳಸುವ ಪೈಥಾಲೇಟ್ ಎಂಬ ಕೆಮಿಕಲ್. ಈ ರಾಸಾಯನಿಕಗಳು ಮಕ್ಕಳ ಆಟಿಕೆ ಮತ್ತು ಆಹಾರ ಪ್ಯಾಕೆಟ್ ಗಳಲ್ಲಿಯೂ(Packet) ಕಂಡುಬಂದಿವೆ.
ಈ ಹಿಂದಿನ ಅಧ್ಯಯನಗಳು ಹೇಳೋ ಪ್ರಕಾರ, ಪೈಥಾಲೇಟ್ಸ್ ಕಾರಣದಿಂದಾಗಿ, ಮಧುಮೇಹದಂತಹ ಎಂಡೋಕ್ರೇನ್ ಡಿಸ್ಆರ್ಡರ್ ಅಪಾಯದ ಜೊತೆಗೆ ಫರ್ಟಿಲಿಟಿ(Fertility) ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಇದರಿಂದ ಗರ್ಭ ಧರಿಸಲು ಸಮಸ್ಯೆಯಾಗಬಹುದು. ಆದುದರಿಂದ ಎಚ್ಚರಿಕೆಯಿಂದ ಇದನ್ನು ಬಳಸೋದ ಉತ್ತಮ.
ಈ ಪೈಥಾಲೇಟ್ ರಾಸಾಯನಿಕಗಳ ಬಳಕೆಯಿಂದಾಗಿ ಮಹಿಳೆಯರಲ್ಲಿ ಮಧುಮೇಹ ಮತ್ತು ಮೆಟಬೋಲಿಕ್ ರೋಗಗಳ(Metabolic diseases) ಅಪಾಯ ಹೆಚ್ಚಾಗಬಹುದು ಎಂದು ಅಧ್ಯಯನದಲ್ಲಿ ಸಾಬೀತಾಗಿದೆ. ಹಾಗಾಗಿ ಪ್ರತಿದಿನ ಜನರು ಈ ರಾಸಾಯನಿಕದೊಂದಿಗೆ ಸಂಪರ್ಕಕ್ಕೆ ಬರುವುದು ಆತಂಕಕಾರಿಯಾಗಿದೆ. ಅವು ನಮ್ಮ ಆರೋಗ್ಯಕ್ಕೆ ಹಾನಿಕಾರಕ, ನಾವು ಅವುಗಳನ್ನು ತಪ್ಪಿಸಲು ಪ್ರಯತ್ನಿಸಬೇಕು.