Men Health : ಹೆಚ್ಚಾಗ್ತಿದೆ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ

ಪ್ರಾಸ್ಟೇಟ್ ಕ್ಯಾನ್ಸರನ್ನು ಆರಂಭದಲ್ಲಿ ಪತ್ತೆ ಹಚ್ಚೋದು ಕಷ್ಟ. ಆರಂಭದಲ್ಲಿ ಯಾವುದೇ ಲಕ್ಷಣ ಕಾಣಿಸೋದಿಲ್ಲ. ರೋಗ ಬೇರೆ ಭಾಗಕ್ಕೆ ಹರಡಿದಾಗ ಸಮಸ್ಯೆ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಅದು ಬರದಂತೆ ತಡೆಯಲು ಕೆಲ ಮುನ್ನೆಚ್ಚರಿಕೆ ಕೈಗೊಳ್ಳಬೇಕು.
 

Prostate Cancer Reason And Symptoms Precaution And Who Are At Risk

ಪುರುಷರಲ್ಲಿ ಕಂಡುಬರುವ ಖಾಯಿಲೆಗಳ ಪೈಕಿ ಪ್ರಾಸ್ಟೇಟ್ ಕ್ಯಾನ್ಸರ್ ಕೂಡ ಒಂದಾಗಿದೆ. ಕೆಲವೊಮ್ಮೆ ಪ್ರಾರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸದ ಈ ಕ್ಯಾನ್ಸರ್ ಕೊನೆಗೆ ಮಾರಣಾಂತಿಕವಾಗಿಬಿಡುತ್ತೆ. ಪುರುಷರಲ್ಲಿ ವಯಸ್ಸಾಗುತ್ತ ಬಂದಂತೆ ಪ್ರಾಸ್ಟೇಟ್ ಕ್ಯಾನ್ಸರ್ ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಇದರಿಂದ ಸೆಕ್ಸ್ ಸಮಸ್ಯೆಗಳು ಮತ್ತು ಕಾಲುಗಳಲ್ಲಿ ಕೂಡ ದೌರ್ಬಲ್ಯ ಉಂಟಾಗುತ್ತದೆ.

ಜಗತ್ತಿನಾದ್ಯಂತ ಪುರುಷರಲ್ಲಿ ಕಾಣುವ ಕ್ಯಾನ್ಸರ್ (Cancer) ಗಳ ಪೈಕಿ ಪ್ರಾಸ್ಟೇಟ್ ಕ್ಯಾನ್ಸರ್ ಸಾಮಾನ್ಯವಾಗಿದೆ. ಇದು ಪುರುಷರ ಜನನೇಂದ್ರಿಯದ ಒಂದು ಗ್ರಂಥಿಯಾಗಿದ್ದು ಹೊಟ್ಟೆ (Stomach) ಯ ಕೆಳಭಾಗದಲ್ಲಿರುತ್ತದೆ. ಈ ಗ್ರಂಥಿಯಲ್ಲೇ ವೀರ್ಯ ಉತ್ಪಾದನೆಯಾಗುತ್ತದೆ. ಈ ಗ್ರಂಥಿಯಲ್ಲಿ ಜೀವಕೋಶಗಳ ಅಸಹಜ ಬೆಳವಣಿಗೆಯಾದಾಗ ಅದು ಪ್ರಾಸ್ಟೇಟ್ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ನಂತರದಲ್ಲಿ ಇದು ದೇಹದ ಇತರ ಭಾಗಗಳಿಗೂ ಹರಡುತ್ತದೆ.

BABY FOOD: ಆರು ತಿಂಗಳ ಮಗುವಿಗೆ ನೀಡೋ ಅನ್ನದ ಗಂಜಿ ಹೇಗಿರಬೇಕು?

ಆರಂಭದಲ್ಲಿ ಯಾವ ಲಕ್ಷಣಗಳೂ ಕಾಣುವುದಿಲ್ಲ :  ಪ್ರಾಸ್ಟೇಟ್ (Prostate)  ಕ್ಯಾನ್ಸರ್ ಸೈಲೆಂಟ್ ಕಿಲ್ಲರ್ ಎಂದೇ ಕುಖ್ಯಾತಿ ಪಡೆದಿದೆ. ಹೆಚ್ಚಿನ ಜನರಿಗೆ ಆರಂಭದಲ್ಲಿ ಇದು ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಕೆಲವು ಪುರುಷರಿಗೆ ಮಾತ್ರ ಪ್ರಾರಂಭದಲ್ಲೇ ಮೂತ್ರ ವಿಸರ್ಜನೆಗೆ ತೊಂದರೆ, ಮೂತ್ರದಲ್ಲಿ ರಕ್ತ ಮತ್ತು ಮತ್ತೆ ಮತ್ತೆ ಮೂತ್ರ ವಿಸರ್ಜನೆ ಉಂಟಾಗುತ್ತದೆ.

ಪ್ರಾಸ್ಟೇಟ್ ಕ್ಯಾನ್ಸರ್ ನ ಮುಖ್ಯ ಲಕ್ಷಣಗಳು : 
• ಹೆಚ್ಚಿನವರಿಗೆ ರಾತ್ರಿ ಮತ್ತೆ ಮತ್ತೆ ಮೂತ್ರವಿಸರ್ಜನೆ ಮಾಡಬೇಕೆನಿಸುವುದು
• ಮೂತ್ರವಿಸರ್ಜನೆಯ ವೇಳೆ ತೊಂದರೆ ಅಥವಾ ವಿಸರ್ಜಿಸುವಾಗ ಹೆಚ್ಚಿನ ಶಕ್ತಿ ವ್ಯಯ
• ಹೆಚ್ಚಿನ ಸಮಯದ ತನಕ ನಿಧಾನವಾಗಿ ಮೂತ್ರ ವಿಸರ್ಜನೆಯಾಗುವುದು
• ಮೂತ್ರವಿಸರ್ಜನೆಯಾದ ನಂತರವೂ ಮೂತ್ರಕೋಶ ಖಾಲಿಯಾಗಿಲ್ಲ ಎನಿಸುವುದು
• ಮೂತ್ರದಲ್ಲಿ ರಕ್ತ
• ವೀರ್ಯದಲ್ಲಿ ರಕ್ತ
• ಶಿಶ್ನದ ನಿಮಿರುವಿಕೆ
• ಕಾಲುಗಳಲ್ಲಿ ನೋವು, ಮರಗಟ್ಟುವಿಕೆ

ಜಾಣರು ಮತ್ಸರದ ಭಾವನೆಗೆ ನೀರೆರೆಯೋದಿಲ್ಲ, ಅದ್ಯಾಕೆ ನೋಡಿ

ಪ್ರಾಸ್ಟೇಟ್ ಕ್ಯಾನ್ಸರ್ ಹೆಚ್ಚಿದಂತೆ ಬೆನ್ನುಹುರಿಗೆ ಹೆಚ್ಚಿನ ಒತ್ತಡ ಬಿದ್ದು ಬೆನ್ನುಹುರಿಯಲ್ಲಿ ನೋವು ಹೆಚ್ಚುತ್ತದೆ. ಮೂತ್ರ ಮತ್ತು ಮಲವಿಸರ್ಜನೆಗಳ ನಿಯಂತ್ರಣ ತಪ್ಪುತ್ತದೆ. ಮೂಳೆ ಮುರಿತ, ಮೂತ್ರಪಿಂಡ ವೈಫಲ್ಯ, ಕೈ ಕಾಲುಗಳಲ್ಲಿ ಊತ ಮುಂತಾದ ತೊಂದರೆಗಳೂ ಕಾಣಿಸಬಹುದು. ಇಂತಹ ಲಕ್ಷಣಗಳು ಕಂಡುಬಂದಾಗ ವೈದ್ಯರ ಬಳಿ ಹೋಗಿ ಪಿಎಸ್ಎ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪ್ರಾಸ್ಟೇಟ್ ಲಕ್ಷಣಗಳು ರಕ್ತದಲ್ಲಿನ ಪಿಎಸ್ಎ ಮಟ್ಟದಿಂದ ತಿಳಿಯುತ್ತದೆ.

ಪ್ರಾಸ್ಟೇಟ್ ಕ್ಯಾನ್ಸರ್ ಯಾರಿಗೆ ಹೆಚ್ಚು ಅಪಾಯ : 
ಇತ್ತೀಚೆಗೆ ವಯಸ್ಸಾದವರಲ್ಲಿ ಮಾತ್ರವಲ್ಲ ಯುವಕರಲ್ಲೂ ಪ್ರಾಸ್ಟೇಟ್ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಹೆಚ್ಚಿನ ಸಮಯ ವಯಸ್ಸು ಹೆಚ್ಚಿದಂತೆ ಈ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ವೃದ್ದಾಪ್ಯದ ಹೊರತಾಗಿ ಬೊಜ್ಜಿನ ಸಮಸ್ಯೆ ಇರುವವರು ಮತ್ತು ಆನುವಂಶಿಕ ಸಮಸ್ಯೆ ಇರುವವರಿಗೆ ಈ ಕ್ಯಾನ್ಸರ್ ಬೇಗ ಹರಡುತ್ತದೆ. ಕೆಲವು ಅಧ್ಯಯನದ ಪ್ರಕಾರ ಮುಂದಿನ ವರ್ಷಗಳಲ್ಲಿ ಸುಮಾರು 1.7 ಮಿಲಿಯನ್ ಪುರುಷರು ಈ ಕ್ಯಾನ್ಸರ್ ಗೆ ತುತ್ತಾಗಲಿದ್ದಾರೆ. ಅವರ ಪೈಕಿ ಸುಮಾರು 50,000 ಜನರು ಇದರಿಂದ ಹೊರಬರಲಾರದೇ ಸಾವನ್ನಪ್ಪಲಿದ್ದಾರೆ ಎಂಬುದು ತಿಳಿದುಬಂದಿದೆ. ಹೆಚ್ಚುತ್ತಿರುವ ಕೈಗಾರಿಕೀಕರಣ ಮತ್ತು ಬದಲಾಗುತ್ತಿರುವ ಜೀವನಶೈಲಿಯೂ ಕೂಡ ಪ್ರಾಸ್ಟೇಟ್ ಕ್ಯಾನ್ಸರ್ ಗೆ ಮೂಲಕಾರಣವಾಗಿದೆ. 

ಪ್ರಾಸ್ಟೇಟ್ ಕ್ಯಾನ್ಸರ್ ತಡೆಗೆ ಏನು ಮಾಡಬೇಕು : 
• ದೇಹದ ರಕ್ತದಲ್ಲಿ ಅಸಮತೋಲನ ಉಂಟುಮಾಡುವ ಅಥವಾ ಕೆಫೀನ್ ಯುಕ್ತ ಆಹಾರಗಳನ್ನು ಸೇವಿಸಬಾರದು. ಇದರಿಂದ ಪ್ರಾಸ್ಟೇಟ್ ಗ್ರಂಥಿಗೆ ತೊಂದರೆಯಾಗುತ್ತೆ. ಇದರ ಬದಲಾಗಿ ಪ್ರಾಸ್ಟೇಟ್ ಗ್ರಂಥಿಯ ಆರೋಗ್ಯ ಹೆಚ್ಚಿಸುವ ಬಾದಾಮಿ, ಅಕ್ರೋಟ್ ಮುಂತಾದವನ್ನು ಸೇವಿಸಬೇಕು.
• ಮೂತ್ರದ ಸಮಸ್ಯೆಯ ಅಥವಾ ಇತರೆ ಲಕ್ಷಣಗಳು ಕಂಡುಬಂದಾಗ ಸೂಕ್ತ ಪರೀಕ್ಷೆ ಮಾಡಿಸಬೇಕು. 
• 45-50 ವರ್ಷದ ಪುರುಷರು ನಿಯಮಿತವಾಗಿ ವರ್ಷಕ್ಕೆ ಎರಡು ಬಾರಿಯಾದರೂ ಪರೀಕ್ಷೆಗೆ ಒಳಗಾಗಬೇಕು,
• ತೂಕದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು.
• ನಿಯಮಿತ ವ್ಯಾಯಾಮ ಮಾಡಬೇಕು. 
• ಹಣ್ಣು, ತರಕಾರಿಗಳನ್ನು ಸೇವಿಸಬೇಕು.

Latest Videos
Follow Us:
Download App:
  • android
  • ios