ಕೊರೋನಾ ಲಾಕ್‌ಡೌನ್ ಅವಧಿ ಕ್ರಿಯೇಟಿವ್ ಅಲ್ಲ. ಇಂಥ ಹೊತ್ತಲ್ಲಿ ಹೊಸದನ್ನು ಕಲಿಯುವುದು ಮಕ್ಕಳಿಗೂ ಕಷ್ಟವೇ. ಇದೊಂಥರ ಮಕ್ಕಳನ್ನು ಜೈಲಿನ ಒಳಗಿಟ್ಟು, ವಿದ್ಯಾಭ್ಯಾಸ ಮಾಡಿಸಿದಂತೆ.

ಹೀಗಾಗಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಕೊಡಿಸುವುದು ಒಳ್ಳೆಯದಲ್ಲ. ಈ ಕಷ್ಟಕಾಲ ಮುಂದುವರಿದು, ಆನ್‌ಲೈನ್ ಶಿಕ್ಷಣಕ್ಕೆ ಎಲ್ಲರೂ ಒಗ್ಗಿಹೋದರೆ, ಮುಂದಿನ ದಿನಮಾನಗಳಲ್ಲಿ ಆನ್‌ಲೈನ್ ಶಿಕ್ಷಣವೇ ಜಾರಿಗೆ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.

ಮಕ್ಕಳನ್ನು ಕೊರೋನಾದಿಂದ ರಕ್ಷಿಸುವುದು ಹೇಗೆ?

ಸ್ಕೂಲು ಕಟ್ಟಡ, ಬಸ್ಸು ಪ್ರಯಾಣ, ಬೆಳಗಿನ ಗಡಿಬಿಡಿ, ಮೇಷ್ಟ್ರುಗಳ ಕೊರತೆ, ಆರೋಗ್ಯದ ನೆಪ ಹೇಳಿ ಆನ್‌ಲೈನ್ ಶಿಕ್ಷಣವೇ ಅನುಕೂಲ ಅನ್ನಿಸಿದರೆ, ಮುಂದಿನ ತಲೆಮಾರಿನ ಮಕ್ಕಳು ಜೈಲಿನಲ್ಲೇ ಕಾಲ ಕಳೆಯಬೇಕಾದೀತು. ಹೀಗಾಗಿ ನಿಮ್ಮಂತೆಯೇ ಆತಂಕದಲ್ಲಿರುವ ಮಕ್ಕಳು ಅವರ ಪಾಡಿಗೆ ಅವರಿರಲಿ. ಆನ್‌ಲೈನ್ ಶಿಕ್ಷಣ ಎಂಬ ಕೊರೋನಾಕ್ಕಿಂತ ಭಯಂಕರ ದುಸ್ಥಿತಿಗೆ ಅವರನ್ನು ತಳ್ಳಬೇಡಿ.