Asianet Suvarna News Asianet Suvarna News

Poisonous Plants: ವಿಷಕಾರಿ ಸಸ್ಯಗಳಿವು, ಅಪ್ಪಿತಪ್ಪಿಯೂ ಮನೆಯೊಳಗೆ ಇಡಬೇಡಿ !

ಪರಿಸರದಲ್ಲಿ ವಿಷಕಾರಿ ಮತ್ತು ಮಾರಣಾಂತಿಕವಾದ ಅನೇಕ ಸಸ್ಯಗಳು ಇವೆ. ಆಕಸ್ಮಿಕವಾಗಿ ಅವುಗಳ ಸಂಪರ್ಕಕ್ಕೆ ಬಂದರೆ ಅಥವಾ ಅವುಗಳನ್ನು ಸೇವಿಸಿದರೆ, ಆರೋಗ್ಯಕ್ಕೆ ಹಾನಿಯಾಗಬಹುದು. ಹೀಗಾಗಿ ಮನೆಯೊಳಗೆ ಸಸಿಗಳನ್ನು ತರುವಾಗ ಎಚ್ಚರಿಕೆಯಿರಲಿ. ಅಂಥಾ ವಿಷಕಾರಿ ಸಸ್ಯಗಳು ಯಾವುವು ತಿಳ್ಕೊಳ್ಳಿ.

Poisonous Plants: Do Not Make The Mistake Of Keeping Them At Home Vin
Author
First Published Dec 3, 2022, 9:31 AM IST

ಹಸಿರು ಗಿಡಗಳು ಸುತ್ತಮುತ್ತಲಿನ ಪರಿಸರವನ್ನು ತಂಪಾಗಿಸುವುದರ ಜೊತೆಗೆ ಮನಸ್ಸನ್ನು ಉಲ್ಲಸಿತಗೊಳಿಸುತ್ತವೆ. ಮಾತ್ರವಲ್ಲ ಮನಸ್ಸಿಗೆ ಸಕಾರಾತ್ಮಕತೆಯನ್ನು (Positivity) ತರುತ್ತವೆ. ಆದ್ದರಿಂದ ಅವು ಜೀವನಕ್ಕೆ (Life) ಬಹಳ ಮುಖ್ಯ. ಅದಕ್ಕಾಗಿಯೇ ಜನರು ತಮ್ಮ ಮನೆಯೊಳಗೆ ಮತ್ತು ಹೊರಗೆ ಇಂಥಾ ಹಸಿರು ಗಿಡ(Plants)ಗಳನ್ನು ತಂದಿಡುತ್ತಾರೆ. ಇವುಗಳು ತಾಜಾ ಮತ್ತು ಶುದ್ಧ ಗಾಳಿಯನ್ನು ನೀಡುವುದರೊಂದಿಗೆ, ಇನ್ನೂ ಅನೇಕ ಪ್ರಯೋಜನಗಳನ್ನು ಹೊಂದಿವೆ. ಇವುಗಳಲ್ಲಿ ಕೆಲವು ಸಸ್ಯಗಳು ಹಣ್ಣುಗಳನ್ನು ನೀಡಿದರೆ, ಕೆಲವು ಸಸ್ಯಗಳು  ತರಕಾರಿಗಳನ್ನು ನೀಡುತ್ತವೆ. ಅಂತಹ ಅನೇಕ ಸಸ್ಯಗಳಿವೆ, ಅದು ಔಷಧಿಯಂತೆ ಕೆಲಸ ಮಾಡುತ್ತದೆ. ಆದರೆ ಹೀಗೆ ಎಲ್ಲಾ ಸಸ್ಯಗಳನ್ನು ಮನೆಯೊಳಗೆ ಇಡಬಾರದು. ಕೆಲವೊಂದು ವಿಷಕಾರಿ (Poisonous) ಸಸ್ಯಗಳೂ ಇರುತ್ತವೆ. ಆ ಬಗ್ಗೆ ತಿಳಿದುಕೊಳ್ಳಬೇಕು. 

ವಿಷಕಾರಿ ಮತ್ತು ಮಾರಣಾಂತಿಕವಾದ ಇಂತಹ ಅನೇಕ ಸಸ್ಯಗಳು ಇವೆ. ಆಕಸ್ಮಿಕವಾಗಿ ಅವುಗಳ ಸಂಪರ್ಕಕ್ಕೆ ಬಂದರೆ ಅಥವಾ ಅವುಗಳನ್ನು ಸೇವಿಸಿದರೆ, ಆರೋಗ್ಯಕ್ಕೆ (Health) ಹಾನಿಯಾಗಬಹುದು, ಕೆಲವು ಸಸ್ಯಗಳಿಂದ ಸಾವು ಕೂಡ ಸಂಭವಿಸಬಹುದು. ಆದ್ದರಿಂದ, ಮನೆ ಅಥವಾ ಕಚೇರಿಯಲ್ಲಿ ಯಾವುದೇ ಗಿಡವನ್ನು ನೆಡುವ ಮೊದಲು, ಅದರ ಬಗ್ಗೆ ಸ್ವಲ್ಪ ಸಂಶೋಧನೆ ಮಾಡಿ. ಇಂದು, ಇಲ್ಲಿ ನಾವು ನಿಮಗೆ ಅಂತಹ ಕೆಲವು ವಿಷಕಾರಿ ಸಸ್ಯಗಳ ಬಗ್ಗೆ ಹೇಳುತ್ತಿದ್ದೇವೆ.

ಮನೆಯಲ್ಲಿರಬೇಕು ತುಳಸಿ ಗಿಡ, ಅಪ್ಪಿ ತಪ್ಪಿಯೂ ಒಣಗದಂತೆ ಇರಿ ಎಚ್ಚರ

ವೈಟ್ ಸ್ನೇಕ್‌ರೂಟ್‌: ಸಣ್ಣ ಬಿಳಿ ಹೂವುಗಳನ್ನು ಹೊಂದಿರುವ ವೈಟ್ ಸ್ನೇಕ್‌ರೂಟ್‌ ಗಿಡ ವಿಷಕಾರಿ ಎಂದು ಹೇಳಲಾಗುತ್ತದೆ. ಇದರಲ್ಲಿ ವಿಷಕಾರಿ ಅಲ್ಕೋಹಾಲ್ ಟ್ರೆಮಾಟಾಲ್ ಕಂಡುಬರುತ್ತದೆ. ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ತಾಯಿಯ ಸಾವಿಗೆ ಇದೇ ಸಸ್ಯ ಕಾರಣವಾಗಿದೆ. ಈ ಗಿಡವನ್ನು ತಿಂದ ಹಸುವಿನ ಹಾಲು ಕುಡಿದರು. ಇದು ಮಾನವ ದೇಹದಲ್ಲಿ (Human body) ವಿಷವನ್ನು ಹರಡುತ್ತದೆ ಎಂದು ಹೇಳುತ್ತಾರೆ. 

ಕ್ಯಾಸ್ಟೋರ್: ಕ್ಯಾಸ್ಟೋರ್ ಅಥವಾ ಗುಲಗಂಜಿ ಸೀಡ್ ತುಂಬಾ ವಿಷಕಾರಿಯಾಗಿದೆ. ಕ್ಯಾಸ್ಟರ್ ಆಯಿಲ್ ಅನ್ನು ಅದರಿಂದ ಹೊರತೆಗೆಯಲಾಗುತ್ತದೆ. ಇದು ಭಾರತದ ಅನೇಕ ಭಾಗಗಳಲ್ಲಿ ಕಂಡುಬರುತ್ತದೆ. ಕ್ಯಾಸ್ಟೋರ್ ಒಂದು ಕಾಡು ಸಸ್ಯವಾಗಿದ್ದು ಎಲ್ಲಿ ಬೇಕಾದರೂ ಇದನ್ನು ಬೆಳೆಯಬಹುದು. ಇದು ಎಷ್ಟು ವಿಷಕಾರಿಯಾಗಿದೆ ಎಂದರೆ ಅದರಲ್ಲಿರುವ ಅಲ್ಪ ಪ್ರಮಾಣವೂ ಮನುಷ್ಯನನ್ನು ಕೊಲ್ಲುತ್ತದೆ. ಇದು ರಿಸಿನ್ ಎಂಬ ವಿಷವನ್ನು ಹೊಂದಿರುತ್ತದೆ. ಇದು ಜೀವಕೋಶಗಳ ಒಳಗೆ ಪ್ರೋಟೀನ್ ಸಂಶ್ಲೇಷಣೆಯನ್ನು ನಿಲ್ಲಿಸುತ್ತದೆ.

ಒಲಿಯಾಂಡರ್ ಸಸ್ಯ: ಒಲಿಯಾಂಡರ್ ಸಸ್ಯವನ್ನು ಕನೆರಾ ಎಂದು ಸಹ ಕರೆಯಲಾಗುತ್ತದೆ. ಈ ಸಸ್ಯದಲ್ಲಿ ಮಾರಣಾಂತಿಕ ಕಾರ್ಡಿಯಾಕ್ ಗ್ಲೈಕೋಸೈಡ್‌ಗಳು ಕಂಡುಬರುತ್ತವೆ. ಇದರಿಂದಾಗಿ ವಾಂತಿ, ತಲೆತಿರುಗುವಿಕೆ, ಸಡಿಲ ಚಲನೆ ಮತ್ತು ಕೋಮಾದ ಅಪಾಯವಿದೆ. ಅದೇ ಸಮಯದಲ್ಲಿ, ಅದರ ಎಲೆಗಳ ಸ್ಪರ್ಶದಿಂದಾಗಿ ದೇಹದಲ್ಲಿ ತುರಿಕೆ ಪ್ರಾರಂಭವಾಗುತ್ತದೆ. ಅದರ ಹೂವಿನ ರಸದಿಂದ ತಯಾರಿಸಿದ ಜೇನುತುಪ್ಪವು (Honey) ವ್ಯಕ್ತಿಯನ್ನು ಅನಾರೋಗ್ಯಕ್ಕೆ ಒಳಪಡಿಸುತ್ತದೆ.

Diabetes treatment: ಮಧುಮೇಹಕ್ಕೆ ಇಲ್ಲಿದೆ ಪ್ರಾಕೃತಿಕ ಚಿಕಿತ್ಸೆ

ರೋಸರಿ ಗಿಡ: ಈ ಸಸ್ಯವು ಹೆಚ್ಚಾಗಿ ಕಾಡಿನಲ್ಲಿ ಕಂಡುಬರುತ್ತದೆ. ನೋಡಲು ಸುಂದರವಾಗಿರುವ ಇದರ ಮಧ್ಯದಲ್ಲಿ ಅಬ್ರಿನ್ ಎಂಬ ಮಾರಕ ರೈಬೋಸೋಮ್ ಪ್ರತಿಬಂಧಕ ಪ್ರೊಟೀನ್ ಕಂಡುಬರುತ್ತದೆ. ಇದನ್ನು ಆಭರಣಗಳಲ್ಲಿ ಮತ್ತು ಪ್ರಾರ್ಥನೆಗೆ ಬಳಸುವ ಮಾಲೆಗಳಲ್ಲಿ ಬಳಸಲಾಗುತ್ತದೆ. ಅದನ್ನು ಅಗಿಯುವುದು ಮತ್ತು ಸ್ಕ್ರಾಚಿಂಗ್ ಮಾಡುವುದು ಮಾರಕವಾಗಬಹುದು. ಕೇವಲ 3 ಮೈಕ್ರೋಗ್ರಾಂಗಳಷ್ಟು ಅಬ್ರಿನ್ ಯಾವುದೇ ಮನುಷ್ಯನನ್ನು ಕೊಲ್ಲುತ್ತದೆ.

ಟ್ಯಾಕ್ಸಸ್ ಬ್ಯಾಕಾಟಾ: Taxus baccata ಹೆಸರಿನ ಈ ಮರವು ಯುರೋಪ್, ಆಫ್ರಿಕಾ ಮತ್ತು ಏಷ್ಯಾದಂತಹ ಎಲ್ಲಾ ಪ್ರದೇಶಗಳಲ್ಲಿ ಕಂಡುಬರುತ್ತದೆ. ಅದರ ಮೇಲೆ ಬಹಳ ಸುಂದರವಾದ ಕೆಂಪು ಬಣ್ಣದ ಹಣ್ಣು ಕಾಣಿಸಿಕೊಳ್ಳುತ್ತದೆ. ಈ ಸಸ್ಯವು ನೋಡಲು ಹೆಚ್ಚು ಸುಂದರವಾಗಿರುತ್ತದೆ. ಆದರೆ ಇದು ಹೆಚ್ಚು ಅಪಾಯಕಾರಿ. ಇದರ ಬೀಜಗಳ ಹೊರತಾಗಿ, ಇಡೀ ಸಸ್ಯದಲ್ಲಿ 'ಟ್ಯಾಕ್ಸಿನ್' ಎಂಬ ವಿಷವು ಕಂಡುಬರುತ್ತದೆ. ಈ ವಿಷದ ಸಂಪರ್ಕಕ್ಕೆ ಬರುವ ಯಾರಾದರೂ ಕೆಲವೇ ಕ್ಷಣಗಳಲ್ಲಿ ಸಾಯಬಹುದು.

ಮಾರಣಾಂತಿಕ ನೈಟ್‌ಶೇಡ್: ಈ ಸಸ್ಯವು ತುಂಬಾ ಅಪಾಯಕಾರಿ. ಟ್ರೋಪಿನ್ ಮತ್ತು ಸ್ಕೋಪೋಲಮೈನ್ ಅದರ ಕಾಂಡ, ಎಲೆಗಳು, ಹಣ್ಣುಗಳು (Fruits) ಮತ್ತು ಬೇರುಗಳ ಮೇಲೆಲ್ಲಾ  ಇರುತ್ತವೆ. ಇದರ ಸೇವನೆಯಿಂದ ದೇಹದ ಅನೈಚ್ಛಿಕ ಸ್ನಾಯುಗಳು ಮತ್ತು ಹೃದಯ ಕೂಡ ಸ್ಥಿರವಾಗುತ್ತದೆ. ಇದರಿಂದಾಗಿ ದೇಹದಲ್ಲಿ ಪಾರ್ಶ್ವವಾಯು ಉಂಟಾಗುತ್ತದೆ.

Follow Us:
Download App:
  • android
  • ios