Asianet Suvarna News Asianet Suvarna News

ಮನೆಯಲ್ಲಿರಬೇಕು ತುಳಸಿ ಗಿಡ, ಅಪ್ಪಿ ತಪ್ಪಿಯೂ ಒಣಗದಂತೆ ಇರಿ ಎಚ್ಚರ

ತುಳಸಿ ಗಿಡದಲ್ಲಿ ಲಕ್ಷ್ಮಿ ನೆಲೆಸಿದ್ದಾಳೆಂಬ ನಂಬಿಕೆಯಿದೆ. ತುಳಸಿ ಎಲೆಗಳನ್ನು ದೇವರಿಗೆ ಅರ್ಪಿಸುವ ಪದ್ಧತಿಯಿದೆ. ಆದ್ರೆ ಅನೇಕರು ತುಳಸಿ ಹೂವನ್ನು ಪೂಜೆಗೆ ಬಳಸೋದಿಲ್ಲ. ಆದ್ರೆ ತುಳಸಿ ಹೂವಿನಲ್ಲೂ ಸಾಕಷ್ಟು ಶಕ್ತಿಯಿದೆ ಎಂಬುದು ಅನೇಕರಿಗೆ ತಿಳಿದಿಲ್ಲ.
 

Basil Astro Remedies For Money
Author
First Published Nov 14, 2022, 10:59 AM IST

ಹಿಂದು ಧರ್ಮ ಪಾಲನೆ ಮಾಡುವ ಪ್ರತಿಯೊಬ್ಬರ ಮನೆಯಲ್ಲಿ ನೀವು ತುಳಸಿ ಗಿಡವನ್ನು ನೋಡಬಹುದು. ಮನೆಯ ಮುಂದೆ ಬೆಳೆದು ನಿಂತಿರುವ ತುಳಸಿಗೆ ಪ್ರತಿ ದಿನ ನೀರು ಹಾಕಿ ಪೂಜೆ ಮಾಡಿದ್ರೆ ಎಲ್ಲ ಸಮಸ್ಯೆ ದೂರವಾಗುತ್ತದೆ ಎಂದು ನಂಬಲಾಗಿದೆ. ಮನೆಯಂಗಳದಲ್ಲಿ ತುಳಸಿ ಗಿಡ ಬೆಳೆಸಿ ಅದನ್ನು ಮಗುವಿನಂತೆ ಪಾಲನೆ ಮಾಡಲಾಗುತ್ತದೆ. ಈ ತುಳಸಿ ಗಿಡದಲ್ಲಿ ತಾಯಿ ಲಕ್ಷ್ಮಿ ನೆಲೆಸಿದ್ದಾಳೆ ಎಂಬ ನಂಬಿಕೆಯಿದೆ. ಜನರು ತುಳಸಿಯನ್ನು ದೇವಿಯ ರೂಪದಲ್ಲಿ ಮಾತ್ರವಲ್ಲ ಔಷಧಿ ರೂಪದಲ್ಲಿಯೂ ನೋಡ್ತಾರೆ. ಅನೇಕ ಖಾಯಿಲೆಗೆ ತುಳಸಿ ಗಿಡ ಮದ್ದಾಗಿದೆ. ತುಳಸಿ ಎಲೆ, ಬೇರು, ಕಾಂಡವನ್ನು ಮಾತ್ರವಲ್ಲ ತುಳಸಿ ಹೂ ಮತ್ತು ಬೀಜಗಳು ಕೂಡ ಸಾಕಷ್ಟು ಪ್ರಯೋಜನ ಹೊಂದಿವೆ. 

ತುಳಸಿ (Basil) ಎಲೆಯನ್ನು ಜನರು ದೇವರಿಗೆ ಅರ್ಪಣೆ ಮಾಡ್ತಾರೆ. ಹೂವನ್ನು ಹಾಗೆ ಒಣಗಲು ಬಿಟ್ಟುಬಿಡ್ತಾರೆ. ಮ್ತೆ ಕೆಲವರು ಹೂ (Flower) ಕತ್ತರಿಸಿ ಅದನ್ನು ಗಿಡದ ಬುಡಕ್ಕೆ ಹಾಕ್ತಾರೆ. ಆದ್ರೆ ತುಳಸಿ ಹೂ ಅಥವಾ ಮಂಜರಿ ಎಂದು ಕರೆಯಲ್ಪಡುವ ಇದನ್ನು ಧಾರ್ಮಿಕವಾಗಿ ಅನೇಕ ರೀತಿಯಲ್ಲಿ ಬಳಕೆ ಮಾಡಬಹುದು. ಇದ್ರಿಂದ ಸುಖ, ಸಂತೋಷ (Happy), ಸಮೃದ್ಧಿ ಜೊತೆ ದಾಂಪತ್ಯ ಸುಖ ಪ್ರಾಪ್ತಿಯಾಗುತ್ತದೆ. ನಾವಿಂದು ತುಳಸಿ ಹೂವನ್ನು ಹೇಗೆಲ್ಲ ಬಳಕೆ ಮಾಡಬಹುದು ಹಾಗೂ ಅದ್ರಿಂದ ಯಾವೆಲ್ಲ ಪ್ರಯೋಜನ ಪಡೆಯಬಹುದು ಎಂಬುದನ್ನು  ಹೇಳ್ತೆವೆ.

Tulsi remedies: ನಿಮ್ಮ ಹಣಕಾಸಿನ ಸಮಸ್ಯೆಗೆ ತುಳಸಿ ಎಲೆಯ ಈ ಪರಿಹಾರ ಮಾಡಿ!

ತುಳಸಿ ಹೂವನ್ನು ಹೀಗೆ ಬಳಸಿ :
ಪ್ರಸನ್ನಳಾಗ್ತಾಳೆ ತಾಯಿ ಲಕ್ಷ್ಮಿ (Lakshmi) :
ತಾಯಿ ಲಕ್ಷ್ಮಿ ಮನೆಯಲ್ಲಿ ನೆಲೆಸಿದ್ರೆ ಯಾವುದೇ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ಸದಾ ಮನೆಯಲ್ಲಿ ಸಂಪತ್ತು ನೆಲೆಸಿರುತ್ತದೆ. ಹಣದ ಕೊರತೆ ಎಂದೂ ಕಾಡುವುದಿಲ್ಲ. ಲಕ್ಷ್ಮಿ ಮನೆಯಲ್ಲಿ ಇರಬೇಕೆಂದ್ರೆ, ಲಕ್ಷ್ಮಿ ಆಶೀರ್ವಾದ ನಿಮಗೆ ಬೇಕೆಂದ್ರೆ ಪ್ರತಿ ಶುಕ್ರವಾರ ತುಳಸಿ ಹೂವನ್ನು ಲಕ್ಷ್ಮಿಯ ಪಾದಕ್ಕೆ ಅರ್ಪಿಸಬೇಕು. ಇದ್ರಿಂದ ಲಕ್ಷ್ಮಿ ಕೃಪೆಗೆ ನೀವು ಪಾತ್ರರಾಗಬಹುದು.

ತುಳಸಿ ಹೂ ಶಿವನಿಗೆ ಅರ್ಪಿಸ್ಬಹುದು : ತುಳಸಿ ವಿಷ್ಣುವಿಗೆ ಅತ್ಯಂತ ಪ್ರಿಯವಾದದ್ದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ವಿಷ್ಣುವಿಗೆ ತುಳಸಿ ಮಂಜರಿಗಳನ್ನು ಅರ್ಪಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಸಾಮಾನ್ಯವಾಗಿ ಶಿವನಿಗೆ ತುಳಸಿಯನ್ನು ಅರ್ಪಿಸುವುದಿಲ್ಲ. ಶಿವನ ಪೂಜೆಯಲ್ಲಿ ತುಳಸಿಯನ್ನು ನಿಷೇಧಿಸಲಾಗಿದೆ. ಆದ್ರೆ ತುಳಸಿ ಹೂವನ್ನು ನೀವು ಶಿವನಿಗೆ ಅರ್ಪಿಸಬಹುದು ಎಂಬುದನ್ನು ನೆನಪಿಡಿ. ಶಿವನ ಪಾದಕ್ಕೆ ತುಳಸಿ ಹೂವನ್ನು ಅರ್ಪಿಸಬಹುದು. ಹೀಗೆ ಮಾಡಿದ್ರೆ ನಿಮ್ಮ ಹಣದ ಸಮಸ್ಯೆ ದೂರವಾಗುತ್ತದೆ. ಆದಾಯದಲ್ಲಿ ಹೆಚ್ಚಳವಾಗುತ್ತದೆ. 

ಕುಟುಂಬದ ಪ್ರಗತಿಗೆ ಹೀಗೆ ಮಾಡಿ : ಕೆಂಪು ಲಕ್ಷ್ಮಿಗೆ ಪ್ರಿಯವಾದ ಬಣ್ಣವಾಗಿದೆ. ಹಾಗಾಗಿ ನೀವು ತುಳಸಿ ಹೂವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನು ಹಣವಿಡುವ ಜಾಗದಲ್ಲಿ ಇಡಬೇಕು. ಹೀಗೆ ಮಾಡಿದ್ರೆ ಲಕ್ಷ್ಮಿ ಸಂತೋಷಗೊಳ್ತಾಳೆ. ಲಕ್ಷ್ಮಿ ಆಶೀರ್ವಾದ ಕುಟುಂಬದ ಮೇಲಿರುತ್ತದೆ. ಕುಟುಂಬದ ಪ್ರಗತಿಗೆ ಇದು ದಾರಿಯಾಗುತ್ತದೆ.

ಮನೆ ಸುತ್ತ ಗಿಡ ಇರಬೇಕು, ಒಳ್ಳೇದು, ಒಣಗಿದರೆ ದರಿದ್ರ ಒಕ್ಕರಿಸುತ್ತೆ!

ಗಂಗಾಜಲದ ಜೊತೆ ತುಳಸಿ ಹೂ : ಗಂಗಾಜಲ ಪವಿತ್ರವಾದದ್ದು. ಮನೆ, ಮನಸ್ಸಿನ ಶುದ್ಧಿಗೆ ಗಂಗಾಜಲವನ್ನು ಬಳಸಲಾಗುತ್ತದೆ. ನೀವು ಗಂಗಾಜಲಕ್ಕೆ ತುಳಸಿ ಹೂವನ್ನು ಹಾಕಿ ಇಡಬಹುದು. ತುಳಸಿ ಮಂಜರಿ ಹಾಕಿದ ಗಂಗಾಜಲವನ್ನು ಮನೆಯ ಉತ್ತರ ದಿಕ್ಕಿಗೆ ನೀವು ಇಡಬೇಕು. ಇದನ್ನು ನೀವು ಪ್ರತಿ ದಿನ ಬಳಸಬಹುದು. ತುಳಸಿ ಹೂ ಇರುವ ಗಂಗಾಜಲವನ್ನು ನೀವು ಮನೆಯ ಮೂಲೆ ಮೂಲೆಗೆ ಸಿಂಪಡಿಸಬಹುದು. ಆದ್ರೆ ತುಳಸಿ ಬೀಜ ನೆಲಕ್ಕೆ ಬೀಳಬಾರದು. ತುಳಸಿ ಬೀಜ ಕೂಡ ಪವಿತ್ರವಾಗಿದೆ. ಅದನ್ನು ತುಳಿಯುವುದು ಒಳ್ಳೆಯದಲ್ಲ. ತುಳಸಿ ಹೂ ಇರುವ ಗಂಗಾಜಲವನ್ನು ನೀವು ಮನೆಗೆ ಸಿಂಪಡಿಸುವುದ್ರಿಂದ ಆರ್ಥಿಕ ವೃದ್ಧಿಯನ್ನು ನೀವು ಕಾಣಬಹುದಾಗಿದೆ.
 

Follow Us:
Download App:
  • android
  • ios