Gold Loan : ಉಳಿದ್ದಕ್ಕಿಂತ ಚಿನ್ನದ ಮೇಲೆ ಸಾಲ ಪಡೆಯೋದು ಯಾಕೆ ಬೆಸ್ಟ್?
ಭಾರತೀಯರ ಮನೆಯಲ್ಲಿ ಬಂಗಾರವಿಲ್ಲವೆಂದ್ರೆ ನಂಬೋದು ಅಸಾಧ್ಯ. ಕಷ್ಟದ ಕಾಲಕ್ಕೆ ಬರುತ್ತೆ ಎಂಬ ಕಾರಣಕ್ಕೆ ಬಂಗಾರ ಖರೀದಿ ಮಾಡೋರೇ ಹೆಚ್ಚು. ಇದು ಸತ್ಯವೂ ಹೌದು. ಬಂಗಾರದ ಮೇಲಿನ ಸಾಲ ಉಳಿದ ಸಾಲಕ್ಕಿಂತ ಹೆಚ್ಚು ಅನುಕೂಲಕರ.
ಮನೆಯಲ್ಲಿದ್ದರೆ ಚಿನ್ನ, ಚಿಂತೆಯು ಏತಕೆ ರನ್ನ ಎಂಬ ಮಾತನ್ನು ನೀವು ಕೇಳಿರಬಹುದು. ಚಿನ್ನವನ್ನು ಆಪದ್ಭಾಂದವ ಎಂದು ಕರೆಯಲಾಗುತ್ತದೆ. ಹಿಂದಿನ ಕಾಲದಲ್ಲಿ ಸ್ವಲ್ಪ ಹಣ ಕೈಗೆ ಬಂದ್ರೂ ಜನರು ಬಂಗಾರ ಖರೀದಿಗೆ ಒಲವು ತೋರುತ್ತಿದ್ದರು. ಕಷ್ಟದಲ್ಲಿ ಸಹಾಯಕ್ಕೆ ಬರುವ ಏಕೈಕ ಸರಕೆಂದ್ರೆ ಅದು ಚಿನ್ನವೆಂದು ನಂಬಲಾಗಿದೆ. ಇದು ನೂರಕ್ಕೆ ನೂರು ಸತ್ಯ ಕೂಡ ಹೌದು.
ಭಾರತ (India) ದಲ್ಲಿ ಚಿನ್ನ (Gold) ಖರೀದಿದಾರರ ಸಂಖ್ಯೆ ಈಗ್ಲೂ ಹೆಚ್ಚಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಲ (Loan) ಪಡೆಯಲು ಚಿನ್ನವನ್ನು ಬಳಸಬಹುದು. ಚಿನ್ನದ ಮೇಲೆ ಸಾಲವನ್ನು ಪಡೆಯುವುದು ಬಹಳ ಸುಲಭ ಹಾಗೂ ತ್ವರಿತವಾಗಿ ಸಿಗುವ ಸಾಲವಾಗಿದೆ. ಗೃಹ ಸಾಲ ಅಥವಾ ಶಿಕ್ಷಣ (Education) ಸಾಲಕ್ಕಿಂತ ಚಿನ್ನದ ಮೇಲಿನ ಸಾಲ ಭಿನ್ನವಾಗಿದೆ. ನಾವಿಂದು ಚಿನ್ನದ ಸಾಲದಿಂದ ಆಗುವ ಲಾಭವೇನು ಎಂಬುದನ್ನು ನಿಮಗೆ ಹೇಳ್ತೇವೆ.
ಚಿನ್ನದ ಸಾಲ ಅಂದ್ರೇನು? : ಚಿನ್ನದ ಆಭರಣದ ಮೇಲೆ ನೀಡಲ್ಪಡುವ ಸುರಕ್ಷಿತ ಸಾಲವಾಗಿದೆ. ನಿಮ್ಮ ಬಳಿ ಇರುವ ಬಂಗಾರ ಹಾಗೂ ಅದ್ರ ಮಾರ್ಕೆಟ್ ರೇಟಿನ ಆಧಾರದ ಮೇಲೆ ನಿಮಗೆ ಎಷ್ಟು ಸಾಲ ಸಿಗುತ್ತೆ ಎಂಬುದು ನಿರ್ಧಾರವಾಗುತ್ತದೆ. ಆಭರಣವನ್ನು ಇಟ್ಟು ಸಾಲ ಪಡೆದ ನಂತ್ರ ನಿಗದಿತ ಸಮಯಕ್ಕೆ ಸಾಳ ತೀರಿಸಿ ನೀವು ಆಭರಣವನ್ನು ಮರುಪಡೆಯಬಹುದು.
SBI ALERT:ನಿಮ್ಮ ಮೊಬೈಲ್ ಗೆ ಈ ಮೆಸೇಜ್ ಬಂದಿದ್ರೆ ಎಚ್ಚರ, ಯಾವುದೇ ಕಾರಣಕ್ಕೂ ಲಿಂಕ್ ಕ್ಲಿಕ್ ಮಾಡ್ಬೇಡಿ!
ಬಂಗಾರದ ಮೇಲೆ ಸಾಲ ಪಡೆಯಲು ಯಾವೆಲ್ಲ ದಾಖಲೆ ನೀಡ್ಬೇಕು? : ಬಂಗಾರದ ಮೇಲೆ ಸಾಲ ಪಡೆಯಲು ನೀವು ಹೆಚ್ಚುವರಿ ದಾಖಲೆ ನೀಡಬೇಕಾಗಿಲ್ಲ. ನೀವು ಅಡ್ರೆಸ್ ಪ್ರೂಫ್ ಹಾಗೂ ಐಡೆಂಟಿಟಿ ದಾಖಲೆ ನೀಡಿದ್ರೆ ಸಾಕು.
ಚಿನ್ನದ ಮೇಲೆ ಸಾಲ ಮೊದಲ ಆದ್ಯತೆಯಾಗೋಕೆ ಕಾರಣವೇನು? :
ಅರ್ಹತೆ ಮಾನದಂಡ : ಚಿನ್ನದ ಮೇಲೆ ಸಾಲ ಪಡೆಯೋದು ಬಹಳ ಸುಲಭ. 18 ವರ್ಷ ಮೇಲ್ಪಟ್ಟ ಯಾವ ವ್ಯಕ್ತಿಯಾದ್ರೂ ಚಿನ್ನದ ಮೇಲೆ ಸಾಲವನ್ನು ಪಡೆಯಬಹುದು. ಇನ್ನೊಂದು ವಿಶೇಷವೆಂದ್ರೆ ಇದಕ್ಕೆ ಯಾವುದೇ ಕ್ರೆಡಿಟ್ ಸ್ಕೋರ್ ಆಗ್ಲಿ ಇಲ್ಲ ಸಿಬಿಲ್ ಸ್ಕೋರ್ ಆಗ್ಲಿ ಅಗತ್ಯವಿಲ್ಲ. ಚಿನ್ನವನ್ನು ಅಡವಿಟ್ಟುಕೊಂಡು ಸಾಲವನ್ನು ನೀಡಲಾಗುತ್ತದೆ. ಎಲ್ಲ ವರ್ಗದ ಜನರಿಗೆ ಚಿನ್ನದ ಮೇಲೆ ಸಾಲ ನೀಡಲಾಗುತ್ತದೆ.
ಬಡ್ಡಿ ದರ ಅಗ್ಗ : ಇತರ ಸುರಕ್ಷಿತ ಸಾಲಗಳಿಗೆ ಹೋಲಿಸಿದರೆ ಚಿನ್ನದ ಸಾಲದ ಮೇಲಿನ ಬಡ್ಡಿ ದರ ಅಗ್ಗವಾಗಿದೆ. ವಾರ್ಷಿಕವಾಗಿ ಶೇಕಡಾ 8.5 ರಷ್ಟು ಬಡ್ಡಿ ದರವನ್ನು ಪಾವತಿಸಬೇಕು. ಬೇರೆ ಬೇರೆ ಬ್ಯಾಂಕ್ ನಲ್ಲಿ ಚಿನ್ನದ ಮೇಲಿನ ಸಾಲದ ಬಡ್ಡಿದರ ಭಿನ್ನವಾಗಿದೆ. ಶೇಕಡಾ 28ರವರೆಗೆ ಬ್ಯಾಂಕ್ ಬಡ್ಡಿ ವಿಧಿಸುತ್ತವೆ.
ಉತ್ತಮ ಸಾಲ ಮೌಲ್ಯಮಾಪನ : ನೀವು ತುರ್ತು ಸಂದರ್ಭದಲ್ಲಿ ನಗದು ಹೊಂದಿಸುವುದು ಕಷ್ಟವಾಗುತ್ತದೆ. ನಿಮಗೆ ಅಗತ್ಯವಿರುವಷ್ಟು ಹಣ ಒಂದೇ ಬಾರಿ ಸಿಗೋದಿಲ್ಲ. ಆಗ ನಿಮ್ಮ ನೆರವಿಗೆ ಬರೋದು ಬಂಗಾರ. ಇದು ಉತ್ತಮ ಸಾಲ ಮೌಲ್ಯ ಮಾಪನವನ್ನು ಹೊಂದಿದೆ. ಇದ್ರಲ್ಲಿ ನಿಮಗೆ ಶೇಕಡಾ 75ರವರೆಗೆ ನಗದು ಪ್ರಾಪ್ತಿಯಾಗುತ್ತದೆ.
ಸುಲಭವಾಗಿ ಮತ್ತು ವೇಗವಾಗಿ ಸಿಗುತ್ತೆ ಚಿನ್ನದ ಮೇಲಿನ ಸಾಲ : ಚಿನ್ನದ ಮೇಲಿನ ಸಾಲವನ್ನು ಪಡೆಯುವುದು ಬಹಳ ಸುಲಭ. ಆನ್ಲೈನ್ ಯುಗದಲ್ಲಿ ಇದನ್ನು ಮತ್ತಷ್ಟು ಸರಳಗೊಳಿಸಲಾಗಿದೆ. ಡಿಜಿಟಲ್ ಚಿನ್ನದ ಸಾಲವನ್ನು ಪಡೆಯಲು ಇರುವ ಅಡೆತಡೆಗಳನ್ನು ತೆಗೆದುಹಾಕಲಾಗಿದೆ. ಕೆಲವೇ ಕೆಲವು ದಾಖಲೆ ನೀಡಿ ನೀವು ಚಿನ್ನದ ಮೇಲೆ ಸಾಲ ಪಡೆಯಬಹುದು.
ನಿಮ್ಗೆ ಗೊತ್ತಾ, ಎಟಿಎಂ ಕಾರ್ಡ್ ಹೊಂದಿರೋರಿಗೆ ಸಿಗುತ್ತೆ 10 ಲಕ್ಷ ರೂ. ವಿಮಾ ಕವರೇಜ್!
ಚಿನ್ನದ ಮೇಲಿನ ಸಾಲದ ಮರುಪಾವತಿ ಸುಲಭ : ಇದ್ರಲ್ಲಿ ಡಿಫಾಲ್ಟ್ ಪೆನಾಲ್ಟಿ ಇರೋದಿಲ್ಲ. ಸಾಲಗಾರ ಬಡ್ಡಿಯನ್ನು ಮಾತ್ರ ಪಾವತಿ ಮಾಡಿದ್ರೆ ಸಾಕಾಗುತ್ತದೆ. ಅವಧಿ ಕೊನೆಯಲ್ಲಿ ಆತ ಪೂರ್ಣ ಹಣವನ್ನು ಪಾವತಿಸಲು ಅನುಮತಿ ನೀಡಲಾಗುತ್ತದೆ. ಹಾಗೆಯೇ ಬಂಗಾರದ ಸುರಕ್ಷತೆಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.