Asianet Suvarna News Asianet Suvarna News

Pathaan Virus: ನಿಜಕ್ಕೂ 'ಪಠಾಣ್‌' ಚಿತ್ರದ ಪಾಕ್ಸ್ ವೈರಸ್‌ ವೈರಲ್‌ ಆಗೋಕೆ ಸಾಧ್ಯವಾ?

“ಪಠಾಣ್‌ʼ ಚಿತ್ರ ಜೈವಿಕ ಅಸ್ತ್ರ ಬಳಕೆಯ ಸಾಧ್ಯತೆ ಕುರಿತ ಚರ್ಚೆಗೆ ಮತ್ತೊಮ್ಮೆ ಮುನ್ನುಡಿ ಬರೆದಿದೆ. ಚಿತ್ರದಲ್ಲಿ ಹೇಳಲಾದ ಸ್ಮಾಲ್‌ ಪಾಕ್ಸ್‌ ವೈರಸ್‌ 70ರ ದಶಕದಲ್ಲಿ ಕಂಡುಬಂದಿತ್ತು. ಅದೀಗ, ವಿಶ್ವದ ಎರಡು ಪ್ರಮುಖ ಲ್ಯಾಬ್‌ ಗಳಲ್ಲಿ ಸುರಕ್ಷಿತವಾಗಿದೆ. 
 

Pathaan virus can not go viral in real life know why
Author
First Published Feb 11, 2023, 4:08 PM IST

ಬಾಲಿವುಡ್‌ ಹಿಟ್‌ ಚಿತ್ರ “ಪಠಾಣ್‌ʼ ಈಗ ಹಲವು ವಿಧದಲ್ಲಿ ಸದ್ದು ಮಾಡುತ್ತಿದೆ. ಜೈವಿಕ ಶಸ್ತ್ರಾಸ್ತ್ರ ಬಳಕೆ ಮಾಡುವ ವಿಚಾರದ ಮೇಲೆ ಇರುವ ಚಿತ್ರದ ಕಥಾವಸ್ತು ಕುತೂಹಲಕಾರಿ ಸಾಗುತ್ತದೆ ಎನ್ನುವುದೇನೋ ನಿಜ. ಸ್ಮಾಲ್ ಪಾಕ್ಸ್‌ ವೈರಸ್‌ ಅನ್ನು ಬಯೋ ವೆಪನ್‌ ಮಾದರಿಯಲ್ಲಿ ಬಳಕೆ ಮಾಡಿದ್ದರಿಂದ ಸಹಜವಾಗಿ ಒಂದಿಷ್ಟು ಕುತೂಹಲ ಎಲ್ಲರಲ್ಲೂ ಮೂಡಿದೆ. ಅದನ್ನು ನೋಡಿದ ಹಲವರು ನಿಜವಾಗಿಯೂ ಸ್ಮಾಲ್‌ ಪಾಕ್ಸ್‌ ಎನ್ನುವ ವೈರಸ್‌ ಅನ್ನು ಬಯೋ ವೆಪನ್‌ ಅನ್ನಾಗಿ ಬಳಕೆ ಮಾಡುವ ಸಾಧ್ಯತೆ ಇದೆಯೇ ಎನ್ನುವ ಕುರಿತು ಚರ್ಚೆ ಆರಂಭಿಸಿದ್ದಾರೆ. ನಾಲ್ಕು ಜನರ ಮಾತಿನಲ್ಲೂ ಈ ವಿಚಾರ ನುಸುಳಲು ಆರಂಭವಾಗಿದೆ. ಏಕೆಂದರೆ, ಜಗತ್ತು ಈಗಾಗಲೇ ಕೊರೋನಾ ಸೋಂಕಿನಿಂದ ಬಸವಳಿದಿದೆ. ಅದು ಜೈವಿಕ ಅಸ್ತ್ರವಾಗಿರಬಹುದೇ ಎನ್ನುವ ಅನುಮಾನ ಈಗಲೂ ಸಾಕಷ್ಟು ಜನರಲ್ಲಿದೆ. ಈ ನಡುವೆ, ಇಂಥದ್ದೊಂದು ಸಿನಿಮಾ ಬಂದಾಗ ಸಹಜವಾಗಿ ಚರ್ಚೆಯ ವಿಷಯವಾಗುತ್ತದೆ. “ಪಠಾಣ್‌ʼ ಚಿತ್ರದಲ್ಲಿ ಬರುವ ಜಿಮ್‌ (ಜಾನ್‌ ಅಬ್ರಾಹಂ) ಕ್ಯಾರೆಕ್ಟರ್‌ ಈ ಜೈವಿಕ ಅಸ್ತ್ರವನ್ನು ಬಳಕೆ ಮಾಡುವ ಭಯೋತ್ಪಾದಕ. ಮೊದಲು ಸೈನಿಕನಾಗಿದ್ದಾತ ಬಳಿಕ ಉಗ್ರನಾಗಿರುತ್ತಾನೆ, ಸ್ಮಾಲ್‌ ಪಾಕ್ಸ್‌ ವೈರಸ್‌ ಅನ್ನು ಜೈವಿಕ ಅಸ್ತ್ರವನ್ನಾಗಿ ಬಳಸುತ್ತಾನೆ.

ಸ್ಮಾಲ್‌ ಪಾಕ್ಸ್‌ (Smallpox) ನಿಜಕ್ಕೂ ಸಾಂಕ್ರಾಮಿಕವೇ? (Contagious)
ಚಿತ್ರದಲ್ಲಿ ತೋರಿಸಿರುವಂತೆ ಪಾಕ್ಸ್‌ ವೈರಲ್‌ ವೈರಲ್‌ ಆಗೋಕೆ ಸಾಧ್ಯವೇ ಎನ್ನುವ ಭಯ (Fear) ಈಗ ಮೂಡಿದೆ. ವಾಸ್ತವವಾಗಿ, ಇದು ಸಾಧ್ಯವಿಲ್ಲ. ತಜ್ಞರ ಪ್ರಕಾರ, ಸ್ಮಾಲ್‌ ಪಾಕ್ಸ್‌ ವೈರಸ್‌ (Virus) ಇಂದಿಗೂ ಅತ್ಯಾಧುನಿಕ ಪ್ರಯೋಗಾಲಯಗಳಲ್ಲಿ (Secured Labs) ಸುರಕ್ಷಿತವಾಗಿದೆ. ಅದು ಯಾವುದೇ ಕಾರಣಕ್ಕೂ ಈಗ ಸಾಂಕ್ರಾಮಿಕವಾಗಿ ಹರಡುವ ಸಾಧ್ಯತೆ ಇಲ್ಲ. ಆದರೆ, ಸ್ಮಾಲ್‌ ಪಾಕ್ಸ್‌ ವೈರಸ್‌ ಕೂಡ ಕೊರೋನಾದಂತೆಯೇ ಸಾಂಕ್ರಾಮಿಕವಾದದ್ದು. ಗಂಭೀರವಾದ ಸೋಂಕನ್ನು (Infection) ಉಂಟುಮಾಡುತ್ತದೆ. ಇದಕ್ಕೆ ಮೂಲ ಕಾರಣವಾಗಿರುವುದು ವೇರಿಯೋಲಾ ಎನ್ನುವ ವೈರಸ್. ಇದರ ಲಕ್ಷಣವೆಂದರೆ, ಜ್ವರ (Fever) ಹಾಗೂ ಚರ್ಮದ ಮೇಲೆ ಗುಳ್ಳೆಗಳು (Skin Rashes) ಏಳುವುದು. ಸೋಂಕು ಕಂಡುಬಂದ ಹತ್ತು ಜನರಲ್ಲಿ ಮೂವರು ಸಾವಿಗೆ ತುತ್ತಾಗುತ್ತಾರೆ. 

Covid Cases: ನಾಲ್ಕನೇ ಡೋಸ್‌ ಹಾಕಿಸಿಕೊಳ್ಳಲೇ ಬೇಕಾ ? ಡಾ.ಸಿಎನ್ ಮಂಜುನಾಥ್ ಹೇಳೋದೇನು?

ಜಗತ್ತಿನ ಎರಡು ಲ್ಯಾಬ್‌ ಗಳಲ್ಲಿ ಸ್ಮಾಲ್‌ ಪಾಕ್ಸ್‌ ವೈರಸ್‌ 
ಮೊಟ್ಟ ಮೊದಲ ಬಾರಿಗೆ ಸ್ಮಾಲ್‌ ಪಾಕ್ಸ್‌ ಸೋಂಕು ಸೋಮಾಲಿಯಾದಲ್ಲಿ 1977ರಲ್ಲಿ ಕಂಡುಬಂದಿತ್ತು. ಬಳಿಕ, 1980ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (World Health Organisation) ಈ ರೋಗ ನಿರ್ಮೂಲನೆ ಆಗಿದೆ ಎನ್ನುವುದಾಗಿ ಘೋಷಣೆ ಮಾಡಿತ್ತು. ಅದಾದ ಬಳಿಕ, ಈ ಸೋಂಕು ಎಲ್ಲೂ ಹರಡಿರುವ ಬಗ್ಗೆ ವರದಿ ಇಲ್ಲ. ಹಾಗೆಯೇ, ಯಾರೂ ಸಹ ಇದಕ್ಕೆ ತುತ್ತಾದ ಘಟನೆ ಸಂಭವಿಸಿಲ್ಲ. ಮಾನ್ಯತೆ ಪಡೆದಿರುವ ಜಗತ್ತಿನ ಎರಡು ಅತ್ಯಾಧುನಿಕ ಲ್ಯಾಬ್‌ ಗಳಲ್ಲಿ ವೈರಸ್‌ ಇನ್ನೂ ಜೀವಂತವಾಗಿದೆ ಎಂದರೆ ಅಚ್ಚರಿಯಾಗಬಹುದು. ರಷ್ಯಾದ ಸ್ಟೇಟ್‌ ರಿಸರ್ಚ್‌ ಸೆಂಟರ್‌ ಆಫ್‌ ವೈರಾಲಜಿ ಆಂಡ್‌ ಬಯೋಟೆಕ್ನಾಲಜಿ (ವೆಕ್ಟರ್) ಹಾಗೂ ಅಮೆರಿಕದ ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆಂಡ್‌ ಪ್ರಿವೆನ್ಷನ್‌ (ಸಿಡಿಸಿ) ಪ್ರಯೋಗಾಲಯದಲ್ಲಿ ಸ್ಮಾಲ್‌ ಪಾಕ್ಸ್‌ ವೈರಸ್‌ ಅನ್ನು ಇರಿಸಿಕೊಳ್ಳಲಾಗಿದೆ. 

Covid-19: ಸೋಂಕು ತಗುಲಿ 18 ತಿಂಗಳ ವರೆಗೆ ಸಾವಿನ ಅಪಾಯ ಹೆಚ್ಚು-ಅಧ್ಯಯನ

ಹೇಗೆ ನಿರ್ಮೂಲನೆ (Eradication) ಆಯ್ತು?
ಸ್ಮಾಲ್‌ ಪಾಕ್ಸ್‌ ವೈರಸ್‌ ಮನುಷ್ಯರಲ್ಲಿ (Human) ಮಾತ್ರ ಜೀವಂತವಾಗಿರುತ್ತದೆ. ಯಾವುದೇ ಪ್ರಾಣಿಗಳ (Animal) ದೇಹದಲ್ಲಿ ವಾಸಿಸುವುದಿಲ್ಲ. ಸೋಂಕು ಕಂಡುಬಂದರೆ ತಕ್ಷಣ ತಿಳಿಯುತ್ತದೆ, ಹೀಗಾಗಿ, ಬಹುಬೇಗ ಚಿಕಿತ್ಸೆ ನೀಡಲು ಸಾಧ್ಯವಾಯಿತು. ಇದರ ಇನ್‌ ಕ್ಯುಬೇಷನ್‌ ಪೀರಿಯಡ್‌ 7-19 ದಿನಗಳ ಕಾಲವಾಗಿದ್ದು, ಇದರಿಂದ ಮುನ್ನೆಚ್ಚರಿಕೆ ವಹಿಸುವುದು ಸುಲಭವಾಗಿತ್ತು. ಅಲ್ಲದೆ, ಇದರ ವಿರುದ್ಧದ ಲಸಿಕೆಗಳು (Vaccine) ಪರಿಣಾಮಕಾರಿಯಾಗಿದ್ದವು. ಒಂದೊಮ್ಮೆ ಸೋಂಕು ಕಂಡುಬಂದರೆ ಹಾಗೂ ಲಸಿಕೆ ಪಡೆದುಕೊಂಡರೆ ಅದು ಜೀವನವಿಡೀ ರಕ್ಷಣೆ ನೀಡುವಂಥದ್ದಾಗಿತ್ತು. 

ಅಷ್ಟಕ್ಕೂ ಇಂತಹ ಸಾಂಕ್ರಾಮಿಕ ವೈರಸ್‌ ಗಳನ್ನು ಯಾರು, ಹೇಗೆ ಬೇಕಾದರೂ ಬಳಕೆ ಮಾಡಬಹುದು ಎನ್ನುವ ಭಾವನೆ ಬೇಡ. ಇದಕ್ಕೆ ಸಂಬಂಧಿಸಿ ಜಾಗತಿಕ ಒಪ್ಪಂದವಿದ್ದು (Global Agreement), ಯಾವುದೇ ರೀತಿಯ ಪ್ರಯೋಗಗಳನ್ನು (Experiment) ನಿಷೇಧಿಸಲಾಗಿದೆ.  
 

Follow Us:
Download App:
  • android
  • ios