Asianet Suvarna News Asianet Suvarna News

Organ Donation: ಎರಡೂವರೆ ವರ್ಷದ ಕಂದನಿಂದ 7 ಜನರಿಗೆ ಅಂಗ ದಾನ: ಹಳೇ ಕಾರ್ಯ ಈಗ ವೈರಲ್

ಎರಡೂವರೆ ವರ್ಷದ ಕಂದನೋರ್ವ ಏಳು ಜನರ ಬಾಳು ಬೆಳಗಿದ ಘಟನೆ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆದಿದೆ. 2020ರಲ್ಲಿ ನಡೆದ ಘಟನೆ ಇದಾಗಿದ್ದು, ಈ ಪುಟ್ಟ ಕಂದನ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ.

Organ Donation, 2.5 Year Old baby Boy Gives Life To seven people in Gujarat akb
Author
Bangalore, First Published Jul 10, 2022, 3:27 PM IST

ಅಹ್ಮದಾಬಾದ್‌: ಎರಡೂವರೆ ವರ್ಷದ ಕಂದನೋರ್ವ ಏಳು ಜನರ ಬಾಳು ಬೆಳಗಿದ ಘಟನೆ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆದಿದೆ. 2020ರಲ್ಲಿ ನಡೆದ ಘಟನೆ ಇದಾಗಿದ್ದು, ವೈದ್ಯ ಅದ್ವೈತ ಕಂಡೋರಿಯಾ ಎಂಬುವವರು ಈ ಬಗ್ಗೆ ಲಿಂಕ್ಡಿನ್‌ನಲ್ಲಿ ಮತ್ತೆ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಈ ಪುಟ್ಟ ಕಂದನ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಜಶ್ ಸಂಜೀವ್ ಓಜಾ ಎಂಬ ಎರಡೂವರೆ ವರ್ಷದ ಬಾಲಕ ತನ್ನ ನೆರೆಮನೆಯ ಎರಡನೇ ಮಹಡಿಯಿಂದ ಬಿದ್ದು ತೀವ್ರ ಗಾಯಗೊಂಡು ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿದ್ದ. ನಂತರ ಡಿಸೆಂಬರ್‌  14 ರಂದು ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದರು. 

ಇದಾದ ಬಳಿಕ ಬಾಲಕನ ಪೋಷಕರು ಮಗುವಿನ ಅಂಗಾಂಗ ದಾನ ಮಾಡಲು ನಿರ್ಧರಿಸಿದರು. ಇದರಿಂದ ಬಾಲಕ  ಏಳು ಮಕ್ಕಳಿಗೆ ಹೊಸ ಜೀವನ ನೀಡುವಂತಾದ. ರಷ್ಯಾ ಹಾಗೂ ಉಕ್ರೇನ್‌ ಇಬ್ಬರು ಸೇರಿದಂತೆ ಈ ಪುಟ್ಟ ಕಂದ ಒಟ್ಟು ಏಳು ಮಕ್ಕಳಿಗೆ ಮರುಜೀವ ನೀಡಿದ್ದಾನೆ. ಈ ಮೂಲಕ ಬಹು ಅಂಗಾಂಗಗಳನ್ನು ದಾನ ಮಾಡಿದ ಅತ್ಯಂತ ಕಿರಿಯ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸಾವಿನಲ್ಲೂ ಸಾರ್ಥಕತೆ: ಅಂಗಾಂಗ ದಾನ ಮಾಡಿ ಐವರ ಜೀವ ಉಳಿಸಿದ ವೃದ್ಧೆ..!

ಮಗು ಜಶ್ ಸಂಜೀವ್ ಓಜಾ (Jash Sanjeev Oza) ಅವರ ಮರಣದ ನಂತರ, ಜಶ್ ಅವರ ಪೋಷಕರಾದ, ಸಂಜೀವ್ ಓಜಾ (Sanjeev Oza) ಮತ್ತು ಅರಾಚನಾ (Arachana) ಅವರು ಮಗುವಿನ ಹೃದಯ, ಶ್ವಾಸಕೋಶ (lung), ಮೂತ್ರಪಿಂಡಗಳು (kidneys), ಯಕೃತ್ತು (liver) ಮತ್ತು ಕಣ್ಣುಗಳನ್ನು (eyes) ದಾನ ಮಾಡಲು ನಿರ್ಧರಿಸಿದರು. ನಂತರ ಬಾಲಕನ ಹೃದಯ ಮತ್ತು ಶ್ವಾಸಕೋಶವನ್ನು 160 ನಿಮಿಷಗಳಲ್ಲಿ ವಿಮಾನದ ಮೂಲಕ ಚೆನ್ನೈಗೆ ಸಾಗಿಸಲಾಯಿತು. ವರದಿಗಳ ಪ್ರಕಾರ, ಅವರ ಹೃದಯವನ್ನು 4 ವರ್ಷದ ರಷ್ಯಾದ (Russia) ಹುಡುಗನಿಗೆ ಮತ್ತು ಶ್ವಾಸಕೋಶವನ್ನು ಉಕ್ರೇನ್‌ನ (Ukraine) 4 ವರ್ಷದ ಬಾಲಕನಿಗೆ ಚೆನ್ನೈನ (Chennai) ಎಂಜಿಎಂ ಆಸ್ಪತ್ರೆಯಲ್ಲಿ (MGM hospital) ಕಸಿ ಮಾಡಲಾಗಿತ್ತು.

ವಿಶೇಷ ಹಸಿರು ಕಾರಿಡಾರ್ ಮೂಲಕ ಕಿಡ್ನಿಗಳನ್ನು ರಸ್ತೆಯ ಮೂಲಕ ಸಾಗಿಸಲಾಗಿದ್ದು, 265 ಕಿ.ಮೀ ದೂರವನ್ನು 180 ನಿಮಿಷಗಳಲ್ಲಿ ಕ್ರಮಿಸಿ ಅಹಮದಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಕಿಡ್ನಿ ಡಿಸೀಸ್ ಅಂಡ್ ರಿಸರ್ಚ್ ಸೆಂಟರ್ (IKDRC) ಗೆ ತಲುಪಿಸಲಾಯಿತು. ಅದರಲ್ಲಿ ಒಂದು ಕಿಡ್ನಿಯನ್ನು ಸುರೇಂದ್ರನಗರದ (Surendranagar) 13 ವರ್ಷದ ಬಾಲಕಿಗೆ ಕಸಿ ಮಾಡಲಾಗಿದೆ. ಮತ್ತೊಂದನ್ನು ಸೂರತ್‌ನ 17 ವರ್ಷದ ಹುಡುಗಿಗೆ ನೀಡಲಾಗಿದೆ. ಅವರ ಯಕೃತ್ತನ್ನು ಭಾವನಗರದ (Bhavnagar) ಎರಡು ವರ್ಷದ ಬಾಲಕಿಗೆ ನೀಡಲಾಯಿತು.

ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ: ಅಂಗಾಂಗ ದಾನ ಮಾಡಿ ಮೂವರ ಜೀವ ಉಳಿಸಿದ ಕರುಣಾಮಯಿ..!

ಅಂಗಾಂಗ ದಾನವನ್ನು ಪ್ರೋತ್ಸಾಹಿಸುವ ಎನ್‌ಜಿಒ ಡೊನೇಟ್ ಲೈಫ್‌ನ ಸಂಸ್ಥಾಪಕ ನಿಲೇಶ್ ಮಂಡ್ಲೇವಾಲಾ (Nilesh Mandlewala) ಪ್ರಕಾರ, ಮಗು ಜಶ್ ಅವರ ಸಾವಿನ ನಂತರ ಅವರ ಕುಟುಂಬವು ಸಂಪೂರ್ಣ ಆಘಾತಗೊಂಡಿತ್ತು. ಮಗನ ಸಾವಿನ ಬಳಿಕ ಸಂಜೀವ್ ಅವರು ಶವ ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಮತ್ತು ಅಂತಹ ಕಠಿಣ ಪರಿಸ್ಥಿತಿಯಲ್ಲಿ ಅವರು ಅಂಗಾಂಗ ದಾನದ ನಿರ್ಧಾರವನ್ನು ತೆಗೆದುಕೊಂಡರು ಎಂದು ಅವರು ಹೇಳಿದರು. ಆರಂಭದಲ್ಲಿ, ತನ್ನ ಮಗ ಚೇತರಿಸಿಕೊಳ್ಳುತ್ತಾನೆ ಎಂದು ಜಶ್‌ ತಾಯಿ ಭರವಸೆ ಹೊಂದಿದ್ದರು. ಆದಾಗ್ಯೂ, ವೈದ್ಯರು ಅವರು ಪ್ರಾಯೋಗಿಕವಾಗಿ ಸತ್ತರು ಎಂದು ಘೋಷಿಸಿದಾಗ ಆಕೆಯ ಕನಸುಗಳು ಭಗ್ನಗೊಂಡವು. ಸಂಜೀವ್ ಓಜಾ ಸ್ಥಳೀಯ ಪತ್ರಿಕೆಯೊಂದರ ಪತ್ರಕರ್ತರಾಗಿದ್ದು, ಈ ದಂಪತಿಗೆ ಆರು ವರ್ಷದ ಮಗಳೂ ಇದ್ದಾಳೆ. 

ಭಾರತದಲ್ಲಿ ಅಂಗಾಂಗ ದಾನ

ಪ್ರತಿ ವರ್ಷ ನವೆಂಬರ್ 27 ಅನ್ನು ದೇಶದಲ್ಲಿ 'ಭಾರತೀಯ ಅಂಗದಾನ ದಿನ' ಎಂದು ಆಚರಿಸಲಾಗುತ್ತದೆ. ಅಂದಾಜಿನ ಪ್ರಕಾರ, ಪ್ರತಿ ಮಿಲಿಯನ್ ಜನಸಂಖ್ಯೆಗೆ ಕೇವಲ 0.65 ದಾನಗಳು ಮಾತ್ರ ದೇಶದಲ್ಲಿ ನಡೆಯುತ್ತವೆ, ಸ್ಪೇನ್‌ನಲ್ಲಿ (Spain) ಶೇ.35 ಮತ್ತು ಅಮೆರಿಕಾದಲ್ಲಿ ಶೇ.26 ಅಂಗಾಂಗ ದಾನಿಗಳಿದ್ದು (organ donor), ಭಾರತವು (India) ಕೇವಲ 3% ನೋಂದಾಯಿತ ಅಂಗಾಂಗ ದಾನಿಗಳನ್ನು ಹೊಂದಿದೆ.
 

Follow Us:
Download App:
  • android
  • ios