Asianet Suvarna News Asianet Suvarna News

Weight Loss : ದಿನಾ ಪರಾಟಾ ತಿಂದು 27 ಕೆ.ಜಿ ತೂಕ ಇಳಿಸಿಕೊಂಡ ಮಹಿಳೆ..!

ಅಸ್ವಸ್ಥ ಜೀವನ ಶೈಲಿ,ಕುಳಿತಲ್ಲಿಯೇ ಕೆಲಸ,ಫಾಸ್ಟ್ ಫುಡ್ ಸೇವನೆ,ಪ್ಯಾಕೇಟ್ ಆಹಾರ ಸೇವನೆ ಇವೆಲ್ಲವೂ ಬೊಜ್ಜಿಗೆ ಕಾರಣವಾಗುತ್ತದೆ. ಭಾರತದಲ್ಲಿ 15.3 ಕೋಟಿಗೂ ಹೆಚ್ಚು ಮಂದಿ,ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ಕೆಲ ದಿನಗಳ ಹಿಂದೆ ದಿ ಇಂಡಿಯಾ ಡಯಾಬಿಟೀಸ್ ವರದಿ ಮಾಡಿತ್ತು. ತೂಕ ಇಳಿಸಿಕೊಳ್ಳುವುದು ಕಷ್ಟದ ಕೆಲಸವೆಂದು ಅನೇಕರು ಭಾವಿಸ್ತಾರೆ. ಆದ್ರೆ ಸರಿಯಾದ ದಿಕ್ಕಿನಲ್ಲಿ ಪ್ರಯತ್ನ ನಡೆಸಿದ್ರೆ ತೂಕ ಇಳಿಸಿಕೊಳ್ಳುವುದು ಕಷ್ಟವಲ್ಲ. 
 

Nutrition Anu Bathla Fat To Fit Transformation Journey
Author
Bangalore, First Published Jan 28, 2022, 7:18 PM IST

ಮದುವೆ(Marriage)ಯಾದ್ಮೇಲೆ,ಮಕ್ಕಳಾ(Children)ದ್ಮೇಲೆ ಮಹಿಳೆಯರ ತೂಕ (Weight) ಹೆಚ್ಚಾಗುತ್ತದೆ. ಅದನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವವರಿದ್ದಾರೆ. ಆದ್ರೆ ಕೆಲಸ,ಮನೆ,ಮಕ್ಕಳ ಮಧ್ಯೆಯೂ ಆರಾಮವಾಗಿ ತೂಕ ಇಳಿಸಿಕೊಳ್ಳಬಹುದು. ಸತತ ಪ್ರಯತ್ನದ ಜೊತೆ ಮುಖ್ಯವಾಗಿ ಮನಸ್ಸಿರಬೇಕೆಂದು ತಜ್ಞರು ಹೇಳ್ತಾರೆ. ಇದಕ್ಕೆ ಮಹಿಳೆಯೊಬ್ಬಳು ಉತ್ತಮ ನಿದರ್ಶನ. ತೂಕ ಕಡಿಮೆಯಾಗ್ತಿಲ್ಲ ಎನ್ನುವ ಮಹಿಳೆಯರು ಈಕೆಯ ಟಿಪ್ಸ್ ಪಾಲನೆ ಮಾಡಬಹುದು.ಈ ಮಹಿಳೆ ಹೆಸರು ಅನು ಬತ್ಲಾ (Anu Bathla).ವಯಸ್ಸು 34 ವರ್ಷ.ಉಪನ್ಯಾಸಕಿಯಾಗಿ ಕೆಲಸ ಮಾಡ್ತಿದ್ದಾರೆ. ಗುರ್ಗಾವ್ ನಿವಾಸಿಯಾಗಿರುವ ಅನು 5 ಅಡಿ 4 ಇಂಚು ಉದ್ದವಿದ್ದಾರೆ. ಅನು ತೂಕ 85 ಕೆ.ಜಿಯಿತ್ತು. ಇದನ್ನು ಅನು ಈಗ 58 ಕೆಜಿಗೆ ಇಳಿಸಿಕೊಂಡಿದ್ದಾರೆ. 

85 ಕೆಜಿಯಿಂದ 58 ಕೆಜಿಗೆ ತೂಕ ಇಳಿಸಿದ್ದು ಹೇಗೆ? : ಬಾಲ್ಯದಲ್ಲಿಯೂ ಅನು,ಗೊಂಬೆಯಂತೆ ಗುಂಡಗಿದ್ದರಂತೆ. ಮದುವೆ,ಮಕ್ಕಳಾದ್ಮೇಲೆ, ಕೆಲಸದ ಒತ್ತಡದಲ್ಲಿ ಅನು ತೂಕ ಹೆಚ್ಚಿತ್ತಂತೆ. 85 ಕೆ.ಜಿಯಾಗಿದ್ದ ಅನು,ತೂಕ ಇಳಿಸಿಕೊಳ್ಳುವ ನಿರ್ಧಾರಕ್ಕೆ ಬಂದರಂತೆ. ಇದಕ್ಕಾಗಿ ಇಂಟರ್ನೆಟ್ ನಲ್ಲಿ ಹುಡುಕಾಟ ಶುರು ಮಾಡಿದ್ದರಂತೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು,ಗ್ರೀನ್ ಟೀ ಹೀಗೆ ಅನೇಕ  ಪ್ರಯತ್ನವನ್ನು ಅನು ಮಾಡಿದ್ದರಂತೆ. ಇದಲ್ಲದೆ ಕೀಟೋ ಡಯಟ್, ಜಿಎಂ ಡಯಟ್, 5-ಬೈಟ್ ಡಯಟ್, ರೇನ್ ಬೋ ಡಯಟ್, ಪ್ಯಾಲಿಯೋ ಡಯಟ್ ಹೀಗೆ ಎಲ್ಲಾ ರೀತಿಯ ಡಯಟ್ ಪಾಲನೆ ಮಾಡಿದ್ರೂ ತೂಕದಲ್ಲಿ ಇಳಿಕೆಯಾಗ್ಲಿಲ್ಲವಂತೆ. ನಂತ್ರ ಜಿಮ್ ಗೆ ಸೇರಿಕೊಂಡು ಕಸರತ್ತು ಶುರು ಮಾಡಿದ್ರಂತೆ. ಜಿಮ್ ನಲ್ಲಿ ಕೊಬ್ಬು ಕರಗಿಸುವ ಮಾತ್ರೆ ಸೇವನೆಗೆ ಸೂಚನೆ ನೀಡಿದ್ದರಂತೆ. ಅನು ಅದ್ರ ಪ್ರಯೋಗ ಮಾಡಿದ್ದರಂತೆ. ಅದ್ರಿಂದ ಸ್ವಲ್ಪ ತೂಕ ಇಳಿದಿತ್ತಂತೆ. ಆದ್ರೆ ಕೆಲವೇ ದಿನಗಳಲ್ಲಿ ಮತ್ತೆ ತೂಕ ಏರಿತ್ತಂತೆ. 
ಲಾಕ್ ಡೌನ್ ಸಮಯದಲ್ಲಿ ಇದ್ರ ಬಗ್ಗೆ ಹೆಚ್ಚು ಸ್ಟಡಿ ಮಾಡಿದ ಅನುಗೆ ತಾವು ತಪ್ಪು ದಾರಿಯಲ್ಲಿ ಹೋಗ್ತಿರುವ ಅರಿವಾಯ್ತಂತೆ. ಒಳ್ಳೆಯ ಕೋಚ್ ಸಹಾಯದಿಂದ ಡಯಟ್ ಪ್ಲಾನ್ ಶುರು ಮಾಡಿದ್ರಂತೆ. ಅದನ್ನು ಫಾಲೋ ಮಾಡಿದ ಕೆಲವೇ ದಿನಗಳಲ್ಲಿ ಪರಿಣಾಮ ಕಾಣಲು ಶುರುವಾಗಿತ್ತಂತೆ. ಸತತ ಎರಡು ವರ್ಷಗಳ ಪ್ರಯತ್ನದ ನಂತ್ರ ಅನು 27 ಕೆ.ಜಿ ತೂಕ ಇಳಿಸಿದ್ದರಂತೆ. ಕಳೆದ ಒಂದು ವರ್ಷದಿಂದ 58 ಕೆ.ಜಿ ತೂಕ ಮೆಂಟೇನ್ ಮಾಡ್ತಿದ್ದೇನೆ ಎನ್ನುತ್ತಾರೆ ಅನು. 

ಚಳಿಗಾಲದಲ್ಲಿ ಈ ಆಹಾರ ಬೆಸ್ಟ್

ಅನು ಯಶಸ್ವಿಯಾದ ಡಯಟ್ ಪ್ಲಾನ್ : ಮುಖ್ಯವಾಗಿ ಅನು ಕ್ಯಾಲೋರಿ ಬಗ್ಗೆ ಗಮನ ನೀಡಿದ್ದರು. ದಿನದಲ್ಲಿ ಎಷ್ಟು ಬಾರಿ ಬೇಕಿದ್ರೂ ಆಹಾರ ಸೇವನೆ ಮಾಡಲಿ,ಆದ್ರೆ ಸೇವನೆ ಮಾಡುವ ಕ್ಯಾಲೋರಿ ಬಗ್ಗೆ ಗಮನವಿರಲಿ ಎನ್ನುತ್ತಾರೆ ಅನು. ಅವರು ದಿನದಲ್ಲಿ ನಾಲ್ಕು ಬಾರಿ ಸ್ವಲ್ಪ ಸ್ವಲ್ಪ ಆಹಾರ ಸೇವನೆ ಮಾಡ್ತಾರಂತೆ. ಅನುಗೆ ಪರಾಟಾ ಇಷ್ಟವಾಗಿತ್ತಂತೆ. ಹಾಗಾಗಿ ಗೋಧಿ ಹಾಗೂ ಸೋಯಾ ಬೆರೆಸಿದ ಪರಾಟಾ ಸೇವನೆ ಮಾಡ್ತಿದ್ದರಂತೆ. ಕೆಲವೊಮ್ಮೆ ಅದಕ್ಕೆ ಸೊಪ್ಪುಗಳನ್ನು ಸೇರಿಸ್ತಿದ್ದ ಅನು,10 ಗ್ರಾಂ ಎಣ್ಣೆಯನ್ನು ಮಾತ್ರ ಆಹಾರದ ರೂಪದಲ್ಲಿ ತೆಗೆದುಕೊಳ್ತಿದ್ದರಂತೆ.ಬೆಳಿಗ್ಗೆ ಎದ್ದ ತಕ್ಷಣ ಒಂದು ಲೀಟರ್ ನೀರು ಸೇವನೆ ಮಾಡ್ತಿದ್ದ ಅನು ನಂತ್ರ ಒಂದು ಕಪ್ ಗ್ರೀನ್ ಟೀ ಕುಡಿಯುತ್ತಿದ್ದರಂತೆ. ನಂತ್ರ ವರ್ಕ್ ಔಟ್ ಶುರು ಮಾಡ್ತಿದ್ದರಂತೆ.

ಅನು ಡಯಟ್ : 
ಉಪಹಾರ : 200 ಮಿಲಿ ಹಾಲು ಅಥವಾ ಮೊಸರು
75 ಗ್ರಾಂ ಪನೀರ್ ಅಥವಾ 60 ಗ್ರಾಂ ಚೀಸ್
100 ಗ್ರಾಂ ಹಸಿರು ತರಕಾರಿಗಳು

ಸ್ನ್ಯಾಕ್ಸ್ : ಒಂದು ಸ್ಕೂಪ್ ವೇ ಪ್ರೋಟೀನ್

ಊಟ : 40 ಗ್ರಾಂ ಗೋಧಿ ಹಿಟ್ಟು (ರೋಟಿ ಅಥವಾ ಪರಾಟ)
30 ಗ್ರಾಂ ಸೋಯಾ ತುಂಡುಗಳು (ರೊಟ್ಟಿ ಅಥವಾ ಪರಾಟಕ್ಕೆ ಬಳಕೆ)
10 ಗ್ರಾಂ ತುಪ್ಪ ಅಥವಾ ಬೆಣ್ಣೆ  
35 ಗ್ರಾಂ ಕಿಡ್ನಿ ಬೀನ್ಸ್ ಅಥವಾ ಕಡಲೆ
150 ಗ್ರಾಂ ಸಲಾಡ್

ಸ್ನ್ಯಾಕ್ಸ್ :  1 ಸ್ಕೂಪ್ ವೇ ಪ್ರೋಟೀನ್

ರಾತ್ರಿಯ ಊಟಕ್ಕೂ ಮಧ್ಯಾಹ್ನದ ಊಟವನ್ನೇ ಫಾಲೋ ಮಾಡ್ತಿದ್ದ ಅನು,ಹೆಚ್ಚು ತೂಕವನ್ನು ಮನೆಯಲ್ಲಿಯೇ ಕಡಿಮೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ 5 ಗಂಟೆಗೆ ಎದ್ದು ತೂಕ ಇಳಿಸಲು ಒಂದಿಷ್ಟು ವ್ಯಾಯಾಮ ಮಾಡ್ತಿದ್ದ ಅನು,ಮನೆಯಲ್ಲಿಯೇ 10 ಸಾವಿರ ನಡಿಗೆ ನಡೆಯುತ್ತಿದ್ದರಂತೆ.

ಹೊಸ ಡಯಟ್ ಪ್ಲಾನ್‌ಗೆ ನೋ ಎಂದ ಜನ 

Follow Us:
Download App:
  • android
  • ios