ಒಮ್ಮೆ ಬಂದರೆ ಜೀವನಪರ್ಯಂತ ಕಂಗೆಡಿಸುವ ಮಧುಮೇಹಕ್ಕೆ(Diabetes) ಈಗ ಸರಳ ಮೆಡಿಸಿನ್‌ ಸಂಶೋಧಿಸಲಾಗಿದೆ. ಬಾಯಿ ಮೂಲಕವೇ ಸೇವಿಸುವ ಈ ಮೆಡಿಸಿನ್‌ ಬಗ್ಗೆ ಡೀಟೇಲ್ಸ್ ಇಲ್ಲಿದೆ.

ನಮ್ಮ ಬದಲಾದ ಲೈಪ್‌ಸ್ಟೈಲ್‌ (Lifestyle) ಪರಿಣಾಮದಿಂದ ಮಕ್ಕಳಿಂದ ವಯಸ್ಸಾದವರವರೆಗೆ ಹಲವರು ಡಯಾಬಿಟೀಸ್ಅ( Diabetes)ಥವಾ ಮಧುಮೇಹದಿಂದ ಬಳಲುತ್ತಾರೆ. ಇನ್ಸುಲಿನ್ (Insuline) ಚುಚ್ಚಿಕೊಂಡು ಮಧುಮೇಹ ನಿಯಂತ್ರಿಸೋದನ್ನು ಸದ್ಯ ಹೆಚ್ಚಿನ ಮಧುಮೇಹ ಸಮಸ್ಯೆ ಇರುವವರು ಅನುಸರಿಸುತ್ತಾರೆ. ಇದರಿಂದ ಒಂದಿಷ್ಟು ಸಮಸ್ಯೆಗಳೂ ಉದ್ಭವಿಸುತ್ತವೆ. ಆದರೆ ಮಧುಮೇಹ ಚಿಕಿತ್ಸೆ (Diabetes Treatment) ಇದೀಗ ಮತ್ತಷ್ಟು ಸರಳವಾಗಲಿದೆ. ಐಐಟಿಯ ಸಂಶೋಧಕರು ಮಧುಮೇಹಕ್ಕೆ ಚಿಕಿತ್ಸೆ ನೀಡುವ ಹೊಸ ಔಷಧವೊಂದನ್ನು ಪತ್ತೆ ಹಚ್ಚುತ್ತಿದ್ದಾರೆ.

PK2 ಎಂದು ಹೆಸರಿಸಲಾದ ಈ ಮೆಡಿಸಿನ್ ಮೇದೋಜ್ಜೀರಕ ಗ್ರಂಥಿಯಿಂದ(The Pancreas) ಇನ್ಸುಲಿನ್ ಬಿಡುಗಡೆಯನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಮಧುಮೇಹ ರೋಗಿಗಳು ಬಾಯಿಯ ಮೂಲಕ ತೆಗೆದುಕೊಳ್ಳುವ ಔಷಧೀಯ ರೂಪದಲ್ಲಿ ಅಂದರೆ ಮಾತ್ರೆ ರೂಪದಲ್ಲಿ ಬಳಸಬಹುದು. ಚುಚ್ಚಿಸಿಕೊಂಡು ಒದ್ದಾಡುವ ಹಿಂಸೆ ಇರೋದಿಲ್ಲ. ಐಐಟಿ ನಡೆಸಿರುವ ಈ ಸಂಶೋಧನೆಯನ್ನು 'ಜರ್ನಲ್ ಆಫ್ ಬಯೋಲಾಜಿಕಲ್ ಕೆಮಿಸ್ಟ್ರಿ' (Journal of Biochemistry)ಯಲ್ಲಿ ಪ್ರಕಟಿಸಲಾಗಿದೆ.

ಹೀಟ್ ವೇವ್ ಸಮಸ್ಯೆ ಕಾಡದಿರಲು ಬೇಸಿಗೆಯಲ್ಲಿ ಇದನ್ನ ಮಾಡಿ

ಹೀಗೊಂದು ಮೆಡಿಸಿನ್‌ ಸೃಷ್ಟಿಸಬಹುದು ಅನ್ನೋ ವಿವರವನ್ನು ಪ್ರಬಂಧದ ರೂಪದಲ್ಲಿ ಸ್ಕೂಲ್ ಆಫ್ ಬೇಸಿಕ್ ಸೈನ್ಸಸ್‌ನ (School of Basic Sciences) ಸಹ ಪ್ರಾಧ್ಯಾಪಕ ಡಾ. ಪ್ರೊಸೆನ್‌ಜಿತ್ ಮಂಡಲ್( Dr.Prosenjith Mandal) ಬರೆದಿದ್ದಾರೆ. ಪ್ರೊಫೆಸರ್ ಸುಭ್ರತೋ ಘೋಷ್ (Prof. Subhratho Ghosh) ಸ್ಕೂಲ್ ಆಫ್ ಬೇಸಿಕ್ ಸೈನ್ಸಸ್, IIT, ಡಾ. ಸುನಿಲ್ ಕುಮಾರ್, ICAR-IASRI ಅವರೂ ಈ ಪ್ರಬಂಧ ಮಂಡಿಸಲು ಸಹಕರಿಸಿದ್ದಾರ.

ಡಯಾಬಿಟೀಸ್‌ನಲ್ಲಿ ಎರಡು ಬಗೆ ಇದೆ. ಈ ಎರಡೂ ಬಗೆಗಳಿಗೂ ಅಂದರೆ ಟೈಪ್ 1(Type 1) ಮತ್ತು ಟೈಪ್ 2 (Type 2)ಡಯಾಬಿಟಿಸ್ ಗಳಿಗೆ ಇದು ಪರಿಣಾಮಕಾರಿ ಔಷಧಿಯಾಗಲಿದೆ. 'ಮಧುಮೇಹಕ್ಕೆ ಬಳಸುವ ಎಕ್ಸೆನಾಟೈಡ್ ಮತ್ತು ಲಿರಾಗ್ಲುಟೈಡ್‌ನಂತಹ ಔಷಧಗಳನ್ನು ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತದೆ. ಈ ಔಷಧಿಗಳು ದುಬಾರಿ ಮತ್ತು ತಾತ್ಕಾಲಿಕವಾಗಿರುತ್ತವೆ. ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಎರಡರಲ್ಲೂ ಸ್ಥಿರವಾದ, ಕೈಗೆಟುಕುವ ಮತ್ತು ಪರಿಣಾಮಕಾರಿಯಾದ ಸರಳ ಔಷಧಿಗಳನ್ನು ಕಂಡುಹಿಡಿಯುವುದು ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ ತಮ್ಮ ಈ ಮೆಡಿಸಿನ್ ಸಂಶೋಧಿಸಿರುವ ಡಾ.ಪ್ರೊಸೆನ್‌ಜಿತ್ ಮಂಡಲ್, 'ಇನ್ಸುಲಿನ್ ಬಿಡುಗಡೆಯಲ್ಲಿ ಹಲವಾರು ಸಂಕೀರ್ಣ ಜೀವರಾಸಾಯನಿಕ ಪ್ರಕ್ರಿಯೆಗಳು ಸಂಭವಿಸುತ್ತವೆ. ಇಂತಹ ಒಂದು ಪ್ರಕ್ರಿಯೆಯು ಜೀವಕೋಶಗಳಲ್ಲಿ ಇರುವ GLP1Rs ಎಂಬ ಪ್ರೋಟೀನ್ ರಚನೆಗಳನ್ನು ಒಳಗೊಂಡಿರುತ್ತದೆ. GLP1 ಎಂಬ ಹಾರ್ಮೋನ್ ಕಣ, ಊಟದ ನಂತರ ಬಿಡುಗಡೆಯಾಗುತ್ತದೆ, GLP1R ಅನ್ನು ಪ್ರತಿಬಂಧಿಸಿ ಇನ್ಸುಲಿನ್ ಬಿಡುಗಡೆಯನ್ನು ಪ್ರಚೋದಿಸುತ್ತದೆ' ಎಂದು ಪ್ರೊಫೆಸರ್ ಮಂಡಲ್ ವಿವರಿಸಿದ್ದಾರೆ.

Health Care : ಆನ್ಲೈನ್ ನಲ್ಲಿ ಔಷಧಿ ಖರೀದಿ ವೇಳೆ ನಡೆಯುತ್ತೆ ತಪ್ಪು

ಈ ಪ್ರಬಂಧ ಮಂಡನೆ ಬಳಿಕ ಸಂಶೋಧಕರು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯದಲ್ಲಿ PK2 ಅನ್ನು ಪರೀಕ್ಷಿಸಿದ್ದಾರೆ. ಈ ಪ್ರಯೋಗ ಯಶಸ್ವಿ ಅನಿಸಿಕೊಂಡಿದೆ. ಈ PK2 ಜಠರ ಕರುಳಿನ ಭಾಗದಿಂದ ವೇಗವಾಗಿ ಹೀರಲ್ಪಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ, ಅಂದರೆ ಇದನ್ನು ಚುಚ್ಚುಮದ್ದಿನ ಬದಲಿಗೆ ಮಾತ್ರೆ ರೂಪದಲ್ಲಿ ಬಳಸಬಹುದು.

ಇಂದು ನಮ್ಮ ನಡುವೆ ದಿನೇ ದಿನೇ ಡಯಾಬಿಟೀಸ್ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮಧುಮೇಹಕ್ಕೆ ಸಂಬಂಧಿಸಿದ ಸಂಶೋಧನೆಗಳೂ ಹೆಚ್ಚು ಹೆಚ್ಚು ನಡೆಯುತ್ತಿವೆ. ಕೆಲವೊಂದು ಸಂಶೋಧನೆಗಳು ಯಶಸ್ವಿ ಆದರೂ ಅಲ್ಲಿ ಕಂಡು ಹಿಡಿಯಲಾದ ಔಷಧದಿಂದ ಸೈಡ್‌ ಎಫೆಕ್ಟ್‌ಗಳೂ ಹೆಚ್ಚಿರುವ ಕಾರಣ ಅವುಗಳಿಗೆ ಮಾನ್ಯತೆ ಸಿಕ್ಕಿಲ್ಲ. ಆದರೆ ಇದೀಗ ಅಭಿವೃದ್ಧಿಪಡಿಸಲಾಗಿರುವ ಈ ಸರಳ ಮೆಡಿಸಿನ್‌ ಅಂಥಾ ಅಡೆತಡೆ ಮೀರಿ ಯಶಸ್ವಿಯಾಗಿದೆ. ಎಲ್ಲ ಅಂದುಕೊಂಡ ಹಾಗೆ ನಡೆದರೆ ಇನ್ನು ಕೆಲವೇ ದಿನಗಳಲ್ಲಿ ಈ ಔಷಧ ನಮ್‌ ಮೆಡಿಕಲ್‌ಗಳಲ್ಲೂ ಸಿಗಬಹುದು. ಈ ಮೂಲಕ ಚುಚ್ಚಿಸಿಕೊಳ್ಳುವ ನೋವಿಂದ ಮಧುಮೇಹ ರೋಗಿಗಳು ಪಾರಾಗಬಹುದು ಮತ್ತು ಪರಿಣಾಮಕಾರಿ ಚಿಕಿತ್ಸೆ ಪಡೆಯಬಹುದು. ಆ ಮಟ್ಟಿಗೆ ಇದೊಂದು ಯಶಸ್ವಿ ಸಂಶೋಧನೆ ಎನ್ನಬಹುದು.

Bad for Brain: ಮಿದುಳನ್ನು ಕುಗ್ಗಿಸುವ ಕೆಲವು ಅಭ್ಯಾಸಗಳಿಗೆ ಬೈ ಹೇಳಿ