Fitness Tips: ಈ ಅಪಾಯಕಾರಿ ವ್ಯಾಯಾಮದ ಸುದ್ದಿಗೆ ಹೋಗ್ಬೇಡಿ
ಜಿಮ್ ಒಂದು ಹವ್ಯಾಸದ ಜೊತೆ ಫ್ಯಾಷನ್ ಕೂಡ ಹೌದು. ಅನೇಕರು ಬೇರೆಯವರನ್ನು ನೋಡಿ ಜಿಮ್ ಗೆ ಹೋಗ್ತಿರುತ್ತಾರೆ. ಮೊದಲ ದಿನವೇ ಎಲ್ಲ ವ್ಯಾಯಾಮ ಮಾಡೋಕೆ ಮುಂದಾಗ್ತಾರೆ. ಟ್ರೈನರ್ ಅನುಪಸ್ಥಿತಿಯಲ್ಲಿ ಸಾಹಸ ಮಾಡಲು ಹೋಗಿ ಮೂಳೆ ಮುರಿದುಕೊಳ್ಬೇಡಿ ಸ್ವಾಮಿ. ವರ್ಷಾನುಗಟ್ಟಲೆ ಜಿಮ್ ಗೆ ಹೋದ್ರೂ ಈ ಕೆಲ ವ್ಯಾಯಾಮ ಮಾಡದಿರುವುದೇ ಒಳ್ಳೆಯದು.
ಬಹುತೇಕರು ಜಿಮ್ ಇಷ್ಟಪಡ್ತಾರೆ. ಜಿಮ್ (Gym) ಗೆ ಹೋಗೋದು, ವ್ಯಾಯಾಮ (Exercise) ಮಾಡುವುದನ್ನು ಪ್ರತಿ ದಿನ ಅಭ್ಯಾಸ ಮಾಡಿಕೊಂಡಿರುತ್ತಾರೆ. ಕೆಲವರು ಬಾಡಿ ಬಿಲ್ಡ್ ಮಾಡಲು ಜಿಮ್ ಗೆ ಹೋದ್ರೆ ಮತ್ತೆ ಕೆಲವರು ತೂಕ (Weight) ಇಳಿಸಿಕೊಳ್ಳಲು ಜಿಮ್ ಗೆ ಹೋಗ್ತಾರೆ. ಜಿಮ್ ನಲ್ಲಿ ಭಾರ ಎತ್ತುವ ಅನೇಕ ವ್ಯಾಯಾಮಗಳಿರುತ್ತವೆ. ಇದು ದೇಹಕ್ಕೆ ಅನೇಕ ಲಾಭ ನೀಡುತ್ತದೆ. ದೇಹದ ತೂಕ ಇಳಿಸಿ, ದೇಹಕ್ಕೆ ಶಕ್ತಿಯನ್ನು ನೀಡುವ ಕೆಲಸವನ್ನು ಇದು ಮಾಡುತ್ತದೆ. ವೇಟ್ ಟ್ರೈನಿಂಗ್ ನಲ್ಲಿ ಎಲ್ಲರೂ ಎಲ್ಲ ಅಭ್ಯಾಸ ಮಾಡಬಾರದು. ಕೆಲವೊಂದು ವ್ಯಾಯಾಮ ಮಾಡದಿರುವುದೇ ಒಳ್ಳೆಯದು. ವೇಟ್ ಟ್ರೈನಿಂಗ್ ನ ಕೆಲವೊಂದು ವ್ಯಾಯಾಮ ಖತರ್ನಾಕ್ ಆಗಿರುತ್ತದೆ. ಹಾಗಾಗಿ ಎಕ್ಸ್ಫರ್ಟ್ಸ್ ಕೂಡ ಅದನ್ನು ಮಾಡದಂತೆ ಸಲಹೆ ನೀಡ್ತಾರೆ. ಒಂದು ವೇಳೆ ಅದು ಅತ್ಯಗತ್ಯ ಎನ್ನುವವರು ನೀವಾಗಿದ್ದರೆ ತರಬೇತುದಾರರಿಲ್ಲದೆ ಎಂದೂ ಪ್ರಯೋಗ ಮಾಡಬಾರದು. ಇಂದು ನಾವು ಎಕ್ಸ್ಫರ್ಟ್ ಸಲಹೆ ಇಲ್ಲದೆ ಹಾಗೂ ಅವರಿಲ್ಲದೆ ಯಾವ ವ್ಯಾಯಾಮ ಮಾಡ್ಬಾರದು ಎಂಬುದನ್ನು ಹೇಳ್ತೇವೆ.
ತರಬೇತುದಾರರಿಲ್ಲದೆ ಈ ವ್ಯಾಯಾಮ ಮಾಡ್ಬೇಡಿ :
1. ಸ್ಮಿತ್ ಮೆಷಿನ್ ಸ್ಕ್ವಾಟ್ಸ್ (Smith Machine Squats) : ಸ್ಮಿತ್ ಮೆಷಿನ್ ನಲ್ಲಿ ಸ್ಕಾರ್ಟ್ಸ್ ಮಾಡಲು ಎಲ್ಲರಿಗೂ ಇಷ್ಟವಾಗುತ್ತದೆ. ಇದು ಸುಲಭ ಎನ್ನಿಸುತ್ತದೆ. ಆದ್ರೆ ದೇಹಕ್ಕೆ ಇದು ಸ್ವಲ್ಪವೂ ಒಳ್ಳೆಯದಲ್ಲ. ಸ್ಮಿತ್ ಮೆಷಿನ್ ನಲ್ಲಿ ಸ್ಕ್ವಾರ್ಟ್ಸ್ ಮಾಡಿದಾಗ ಬೆನ್ನು ನೇರವಾಗಿರುತ್ತದೆ ಅಥವಾ ನೆಲಕ್ಕೆ ಸಂಪೂರ್ಣವಾಗಿ ಲಂಬವಾಗಿರುತ್ತದೆ. ಇದು ಬೆನ್ನುಹುರಿಯ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ. ಇದಲ್ಲದೆ ಸ್ಮಿತ್ ಮೆಷಿನ್ ಮೇಲೆ ಸ್ಕ್ವಾರ್ಟ್ಸ್ ಮಾಡಿದ್ರೆ ಮೊಣಕಾಲುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಸೊಂಟ ಮತ್ತು ಮಂಡಿರಜ್ಜು ಸ್ನಾಯುಗಳು ಇದ್ರಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳದ ಕಾರಣ ಗಾಯಗಳಾಗುವ ಅಪಾಯವಿರುತ್ತದೆ. ಹಾಗಾಗಿ ತರಬೇತುದಾರರಿಲ್ಲದೆ ಈ ವ್ಯಾಯಾಮವನ್ನು ಮಾಡಲು ಹೋಗ್ಬೇಡಿ.
REASONS TO SWEAT: ಬೇಸಿಗೆಯಲ್ಲಿ ಕಾಡೋ ಸಮಸ್ಯೆಗೆೇನಿರಬಹುದು ಕಾರಣ?
2. ಅಬ್ ಮೆಷಿನ್ ಕ್ರಂಚ್ (Ab Machine Crunch) : ಅಬ್ ಮೆಷಿನ್ ಕ್ರಂಚ್ ನಲ್ಲಿ ಎಬಿಎಸ್ ನ ನ ಮುಖ್ಯ ಸ್ನಾಯುಗಳಿಗೆ ವ್ಯಾಯಾಮವಾಗುವುದಿಲ್ಲ. ಕಿಬ್ಬೊಟ್ಟೆಯ ಸ್ನಾಯುಗಳಿಗೆ ಓವರ್‌ಲೋಡ್ ವ್ಯಾಯಾಮವಾಗುತ್ತದೆ. ಇದ್ರಿಂದ ದೀರ್ಘ ಸಮಯದವರೆಗೆ ನೋವು ಉಳಿದುಕೊಳ್ಳುತ್ತದೆ. ಹಾಗಾಗಿ ಈ ವ್ಯಾಯಾಮ ಮಾಡದಿರುವುದು ಒಳ್ಳೆಯದು.
Weight Loss Tips : ತೂಕ ಇಳಿಸೋ ಚಿಂತೆ ಬಿಡಿ, ಕಪ್ಪು ಅರಿಶಿನ ಬಳಸಿ
3. ಸ್ನ್ಯಾಚ್ (Snatch) : ಸ್ನ್ಯಾಚ್ ವ್ಯಾಯಾಮ ಒಲಿಂಪಿಕ್ಸ್ ಆಟದ ಭಾಗವಾಗಿದೆ. ನುರಿತರು ಇದನ್ನು ಪ್ರತಿದಿನದ ವ್ಯಾಯಾಮದಲ್ಲಿ ಸೇರಿಸಿಕೊಳ್ತಾರೆ. ಕೆಲ ದಿನಗಳ ಹಿಂದೆ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಇದ್ರ ಫೋಟೋ ಹಾಕಿದ್ದರು. ನಾನು ಒಂದೇ ವ್ಯಾಯಾಮವನ್ನು ಮೂರು ವರ್ಷಗಳಿಂದ ಮಾಡ್ತಿದ್ದೇನೆ. ಅದರ ತಂತ್ರ ಅರಿಯಲು ನಿಯಮಿತವಾಗಿ ಪ್ರಯತ್ನ ನಡೆಸುತ್ತಿದ್ದೇನೆ ಎಂದು ಬರೆದಿದ್ದರು. ಸ್ನ್ಯಾಚ್ ಅಪಾಯಕಾರಿ ವ್ಯಾಯಾಮಗಳಲ್ಲಿ ಒಂದು. ತರಬೇತಿಯಿಲ್ಲದೆ ಈ ವ್ಯಾಯಾಮ ಮಾಡಿದ್ರೆ ಭುಜ, ಕೆಳ ಬೆನ್ನು ಅಥವಾ ತಲೆಗೆ ಗಾಯಗಳಾಗುವ ಸಾಧ್ಯತೆಯಿದೆ. ಇದ್ರಿಂದ ನಿಮ್ಮ ಫಿಟ್ನೆಸ್ ಕನಸು ಭಗ್ನವಾಗಬಹುದು. ಹಾಗಾಗಿ ತರಬೇತುದಾರರ ಸಲಹೆ ಇಲ್ಲದೆ ಈ ವ್ಯಾಯಾಮ ಮಾಡ್ಬೇಡಿ.
4. ಕುತ್ತಿಗೆ ಹಿಂದೆ ಲ್ಯಾಟ್ ಫುಲ್ ಡೌನ್ (Behind the Head Lat Pull-Down) : ಯಾವಾಗ್ಲೂ ಲ್ಯಾಟ್ ಫುಲ್-ಡೌನ್ ಮಾಡುವಾಗ ನಿಮ್ಮ ಮುಂದಿರಬೇಕು. ಕತ್ತಿನ ಹಿಂದೆ ತೆಗೆದುಕೊಂಡು ಹೋದಾಗ ಭುಜದ ಸ್ನಾಯು ಮುರಿಯುವ ಸಾಧ್ಯತೆಯಿರುತ್ತದೆ.
ಈ ಮಾತು ನೆನಪಿರಲಿ :
ಈಗ ನಾವು ಹೇಳಿರುವ ವ್ಯಾಯಾಮಗಳನ್ನು ಅನೇಕರು ಮಾಡ್ತಾರೆ. ಅವರು ಮಾಡ್ತಾರೆ ನಾವ್ಯಾಕೆ ಮಾಡ್ಬಾರದು ಅಂತಾ ನೀವು ಪ್ರಶ್ನೆ ಮಾಡ್ಬಹುದು. ಈಗಾಗಲೇ ಖತರ್ನಾಕ್ ವ್ಯಾಯಾಮ ಮಾಡ್ತಿರುವವರು ವರ್ಷಗಳಿಂದ ತರಬೇತಿ ಪಡೆದಿರುತ್ತಾರೆ. ತರಬೇತುದಾರರಿಲ್ಲದೆ ಅವರು ಈ ವ್ಯಾಯಾಮ ಮಾಡಿರುವುದಿಲ್ಲ. ಮೊದಲು ನಿಮ್ಮ ಶಕ್ತಿ,ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ನಂತ್ರ ತರಬೇತುದಾರರ ಸಲಹೆ ಹಾಗೂ ಉಪಸ್ಥಿತಿಯಲ್ಲಿ ವ್ಯಾಯಾಮ ಮಾಡಿ. ಇಲ್ಲವಾದ್ರೆ ಅಪಾಯವನ್ನು ನೀವು ಮೈಮೇಲೆ ಎಳೆದುಕೊಳ್ಳುತ್ತೀರಿ.