Asianet Suvarna News Asianet Suvarna News

ಚಿತ್ರಹಿಂಸೆ ನೀಡುವ ಫೋಬಿಯಾದಲ್ಲಿ ಎಷ್ಟು ವಿಧ ಗೊತ್ತಾ? ಭಯವೇ ಸಾಯಿಸುತ್ತೆ!

ಅಯ್ಯೋ ನನಗೆ ಆ ವಸ್ತು ಕಂಡ್ರೆ ಭಯ ಅಂತಾ ನಿಮ್ಮವರು ಹೇಳಿದ್ರೆ ನೀವು ನಕ್ಕು ಸುಮ್ನಾಗ್ತಿರಾ. ಕೆಲವೊಮ್ಮೆ ನಿನ್ನ ಭ್ರಮೆ ಎಂದಿರ್ತೀರಿ. ಆದ್ರೆ ಆ ವ್ಯಕ್ತಿ ಪಡುವ ಭಯ, ನಗುವಷ್ಟು ಹಗುರವಾಗಿರೋದಿಲ್ಲ. ಭಯದ ಜೊತೆ ಮಾನಸಿಕ ಅಸ್ವಸ್ಥತೆ ವಿಪರೀತವಾದ್ರೆ ಅದು ಡೇಂಜರ್.
 

Most Common Phobias
Author
First Published Nov 18, 2022, 1:24 PM IST

ಮಾನಸಿಕ ಸಮಸ್ಯೆಗೆ ನಾವು ಮಹತ್ವ ನೀಡೋದು ಕಡಿಮೆ. ಹುಚ್ಚು ಹೆಚ್ಚಾಗಿದೆ ಎಂಬುದು ಗೊತ್ತಾದಾಗ ಮಾತ್ರ ಆಸ್ಪತ್ರೆಗೆ ಕರೆದುಕೊಂಡು ಹೋಗ್ತೆವೆಯೇ ಹೊರತು, ಭಯ, ಆತಂಕ, ಖಿನ್ನತೆಯಂತಹ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವುದು ಹೆಚ್ಚು. ಬಹುತೇಕರಿಗೆ ನಮ್ಮಲ್ಲೊಂದು ಮಾನಸಿಕ ಸಮಸ್ಯೆ ಕಾಡ್ತಿದೆ ಎಂಬುದೇ ತಿಳಿದಿರೋದಿಲ್ಲ. ನಾವಿಂದು ನಮ್ಮನ್ನು ಕಾಡುವ ಕೆಲ ಫೋಬಿಯಾಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಫೋಬಿಯಾ (Phobia) ಅಂದ್ರೇನು? : ಯಾವುದೇ ವಸ್ತು ಅಥವಾ ಸನ್ನಿವೇಶದ ಬಗ್ಗೆ ಅತಿಯಾದ ಭಯ (fear) ವನ್ನು ನಾವು ಫೋಬಿಯಾ ಎಂದು  ಕರೆಯುತ್ತೇವೆ. ಫೋಬಿಯಾ ಒಂದು ರೋಗ (Disease). ಇದು ಭಯದ ಜೊತೆ ಸಂಬಂಧ ಹೊಂದಿದೆ. ಫೋಬಿಯಾದಿಂದ ಬಳಲುತ್ತಿರುವ ವ್ಯಕ್ತಿಯು ಯಾವುದೇ ವಸ್ತು, ಸ್ಥಳ ಮತ್ತು ಸನ್ನಿವೇಶಕ್ಕೆ ಹೆದರಬಹುದು. ಫೋಬಿಯಾದಿಂದ ಬಳಲುತ್ತಿರುವ ವ್ಯಕ್ತಿಯು ತಾನು ಭಯಪಡುವ ವಿಷಯದ ಮುಂದೆ ಬಂದಾಗ ಅತಿಯಾಗಿ ಪ್ರತಿಕ್ರಿಯಿಸುತ್ತಾನೆ. ಮನಸ್ಸಿನಲ್ಲಿ ಭಯ ವಿಪರೀತವಾಗಿ, ಅದು ಮಾನಸಿಕ ಅಸ್ವಸ್ಥತೆಯ ರೂಪವನ್ನು ಪಡೆಯುತ್ತದೆ. 

ಸ್ಪೆಸಿಫಿಕ್ ಫೋಬಿಯಾ ಎಂದರೇನು ? : ಫೋಬಿಯಾದಲ್ಲಿ ಅನೇಕ ವಿಧಗಳಿವೆ. ಒಂದು ನಿರ್ದಿಷ್ಟ ವಸ್ತು ಅಥವಾ ಸನ್ನಿವೇಶ ಅಥವಾ ಆಲೋಚನೆಯಿಂದ ಉಂಟಾಗುವ ಭಯವನ್ನು ಸ್ಪೆಸಿಫಿಕ್ ಫೋಬಿಯಾ ಎಂದು ಕರೆಯಲಾಗುತ್ತದೆ. ಆ ವಸ್ತು ಅಥವಾ ಸನ್ನಿವೇಷದಲ್ಲಿ ವ್ಯಕ್ತಿ ವಿಪರೀತ ಭಯಕ್ಕೊಳಗಾಗಿ, ಮಾನಸಿಕ ಹಿಂಸೆ ಅನುಭವಿಸುತ್ತಾನೆ. ಉದಾಹರಣೆಗೆ ಸಣ್ಣ ಜಾಗದಲ್ಲಿ ಸಿಕ್ಕಿಬಿದ್ದಾಗ ಉಸಿರುಗಟ್ಟಿದ ಅನುಭವಕ್ಕೆ ಒಳಗಾಗುವುದನ್ನು ಕ್ಲಾಸ್ಟ್ರೋಫೋಬಿಯಾ ಎಂದು ಕರೆಯಲಾಗುತ್ತದೆ. ಶಾಲೆಗೆ ಹೋಗುವ ಸಂದರ್ಭಗಳು, ಸುತ್ತಮುತ್ತಲಿನ ಸ್ಥಳಗಳು ಮತ್ತು ವಿಮಾನಗಳು, ಎತ್ತರ ಮತ್ತು ಚಂಡಮಾರುತ, ನಾಯಿ ಮತ್ತು ಜೇಡಗಳಂತಹ ಪ್ರಾಣಿ ಅಥವಾ ಕೀಟಗಳು, ರಕ್ತ, ಚುಚ್ಚುಮದ್ದು ಮತ್ತು ಗಾಯಗಳು, ಸೂಜಿ, ಅಪಘಾತ,ಜೋರಾದ ಶಬ್ದದಿಂದ ಭಯ ಇವೆಲ್ಲವೂ ಸ್ಪೆಸಿಪಿಕ್  ಫೋಬಿಯಾದಲ್ಲಿ ಬರುತ್ತವೆ.

ಸೋಶಿಯಲ್ ಫೋಬಿಯಾ : ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಉದ್ವೇಗಕ್ಕೆ ಒಳಗಾಗುವುದು ಸಾಮಾನ್ಯ. ಭಾಷಣ ಮಾಡುವಾಗ ಭಯ ಕಾಡುವುದು ಸಾಮಾನ್ಯ. ಆದ್ರೆ  ಪ್ರತಿ ದಿನ ನಾಲ್ಕೈದು ಜನರ ಜೊತೆ ಮಾತನಾಡಲು, ಚರ್ಚೆ ಮಾಡಲು, ಗುಂಪಿರುವ ಜಾಗಕ್ಕೆ ಹೋಗಲು ಭಯಪಟ್ಟರೆ ಅದನ್ನು ಸೋಶಿಯಲ್ ಫೋಬಿಯಾ ಎನ್ನಲಾಗುತ್ತದೆ.ಸಾಮಾಜಿಕ ಫೋಬಿಯಾದ ತೀವ್ರ ಒತ್ತಡವು ಕೆಲಸ, ಶಾಲೆ ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. 

ಈ ಚಳಿಯಲ್ಲಿಯೂ ಬೆವರ್ತಿದ್ದರೆ ಜೋಪಾನ!

ಫೋಬಿಯಾದಲ್ಲಿರುವ ಇತರ ವಿಧಗಳು :
ಅರಾಕ್ನೋಫೋಬಿಯಾ – ಜೇಡ ಕಂಡೆ ಭಯಪಡುವ ಸ್ಥಿತಿಯಾಗಿದೆ.
ಒಫಿಡಿಯೋಫೋಬಿಯಾ – ಹಾವುಗಳನ್ನು ಕಂಡಾಗ ಕಾಣಿಸಿಕೊಳ್ಳುವ ಭಯ
ಅಕ್ರೋಫೋಬಿಯಾ - ಎತ್ತರದ ಭಯ
ಏರೋಫೋಬಿಯಾ - ಹಾರುವ ಭಯ
ಸೈನೋಫೋಬಿಯಾ - ನಾಯಿಗಳ ಭಯ
ಮೈಸೋಫೋಬಿಯಾ - ಸೂಕ್ಷ್ಮಜೀವಿಗಳ ಭಯ
ಅಸ್ಟ್ರಾಫೋಬಿಯಾ - ಗುಡುಗು ಮತ್ತು ಮಿಂಚಿನ ಭಯ
ಟ್ರಿಪನೋಫೋಬಿಯಾ - ಚುಚ್ಚುಮದ್ದಿನ ಭಯ
ಅಗೋರಾಫೋಬಿಯಾ - ಒಬ್ಬಂಟಿಯಾಗಿರುವ ಭಯ

ಫೋಬಿಯಾ ಅಂಕಿಅಂಶ : ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಪ್ರಕಾರ, ಫೋಬಿಯಾಕ್ಕೆ ಬಳಲುತ್ತಿರುವವರ ಸಂಖ್ಯೆ ಸಾಕಷ್ಟಿದೆ.  8.5 ರಷ್ಟು ವಯಸ್ಕ ಅಮೆರಿಕನ್ನರು ಸ್ಪೆಸಿಫಿಕ್ ಫೋಬಿಯಾದಿಂದ ಬಳಲುತ್ತಿದ್ದಾರೆ. ಸ್ಪೆಸಿಫಿಕ್ ಫೋಬಿಯಾ ಹೊಂದಿರುವ ಶೇಕಡಾ 32 ರಷ್ಟು ವಯಸ್ಕರು ಚಿಕಿತ್ಸೆ ಪಡೆಯುತ್ತಾರೆ. ಹೆಚ್ಚಿನ ಅಮೆರಿಕನ್ನರಿಗೆ 7 ನೇ ವಯಸ್ಸಿನಲ್ಲಿಯೇ ಫೋಬಿಯಾದ ರೋಗ ಲಕ್ಷಣ ಪತ್ತೆಯಾಗುತ್ತದೆ.  

ಮದ್ವೆ ಬಳಿಕ ಕೆಲವರನ್ನು ಖಿನ್ನತೆ ಕಾಡುವುದೇಕೆ?

ಫೋಬಿಯಾಗೆ ಔಷಧಿ : ಎತ್ತರದ ಸ್ಥಳಕ್ಕೆ ಹೋಗಲು ಭಯ, ಒಂಟಿಯಾಗಿರಲು ಭಯ, ಪ್ರಾಣಿಗಳನ್ನು ಕಂಡ್ರೆ ಭಯ ಸಾಮಾನ್ಯ ಫೋಬಿಯಾಗಳಲ್ಲಿ ಬರುತ್ತದೆ. ಇದು ಬಹುತೇಕರನ್ನು ಕಾಡುತ್ತದೆ. ಈ ಎಲ್ಲ ಫೋಬಿಯಾಕ್ಕೆ ಚಿಕಿತ್ಸೆಯಿದೆ. ಬೇರೆ ಬೇರೆ ಫೋಬಿಯಾಕ್ಕೆ ನೀಡುವ ಚಿಕಿತ್ಸೆ ಭಿನ್ನವಾಗಿರುತ್ತದೆ. ಕೆಲವರಿಗೆ ಮಾತ್ರೆ ನೀಡಿದ್ರೆ ಮತ್ತೆ ಕೆಲವರಿಗೆ ಥೆರಪಿ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (CBT), ಎಕ್ಸ್ಪೋಸರ್ ಥೆರಪಿ, ಹೋಲಿಸ್ಟಿಕ್ ಥೆರಪಿ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.
 

Follow Us:
Download App:
  • android
  • ios