ಈ ಚಳಿಯಲ್ಲಿಯೂ ಬೆವರ್ತಿದ್ದರೆ ಜೋಪಾನ!
ದೇಹದಿಂದ ಬೆವರು ಹೊರಗೆ ಬರಬೇಕು ನಿಜ. ಹಾಗಂತ ಮೈಕೊರೆಯುವ ಚಳಿಯಲ್ಲೂ ನೀವು ಸಿಕ್ಕಾಪಟ್ಟೆ ಬೆವರ್ತಾ ಇದ್ರೆ ಅದು ಒಳ್ಳೆಯದಲ್ಲ. ನಿಮ್ಮ ಆರೋಗ್ಯದಲ್ಲಿ ಏನೋ ಏರುಪೇರಾಗಿದೆ ಎಂದೇ ಅರ್ಥ.
ದೇಹ ದಣಿದು, ಬೆವರಿಳಿದ್ರೆ ಮಾತ್ರ ಆರೋಗ್ಯ ಚೆನ್ನಾಗಿರಲು ಸಾಧ್ಯ. ದೇಹದಿಂದ ಬೆವರು ಹೊರಗೆ ಹೋದ್ರೆ ಉಷ್ಣತೆ ನಿಯಂತ್ರಣಕ್ಕೆ ಬರುತ್ತದೆ. ವಿಷ ಪದಾರ್ಥಗಳು ಬೆವರಿನ ಮೂಲಕ ಹೊರಗೆ ಹೋಗುತ್ತವೆ. ಜಿಮ್ ಗೆ ಹೋದಾಗ, ವ್ಯಾಯಾಮ ಮಾಡಿದಾಗ ಇಲ್ಲವೆ ಬಿಸಿಲಿನಲ್ಲಿ ಸಮಯ ಕಳೆದಾಗ ಬೆವರು ಬಂದ್ರೆ ಓಕೆ. ಚಳಿಗಾಲದಲ್ಲಿ ಮನೆಯಲ್ಲಿ ಬೆಚ್ಚಿಗಿದ್ದಾಗ್ಲೂ ನೀವು ವಿಪರೀತ ಬೆವರುತ್ತಿದ್ದೀರಿ ಎಂದಾದ್ರೆ ನಿಮ್ಮ ಆರೋಗ್ಯದಲ್ಲಿ ಏರುಪೇರಾಗಿದೆ ಎಂದೇ ಅರ್ಥ.
ಚಳಿಗಾಲ (Winter) ದಲ್ಲಿ ಬೆವರು (Sweat) ವಿಕೆಗೆ ಅನೇಕ ಕಾರಣವಿದೆ. ಇದು ಕೆಲ ಗಂಭೀರ ಕಾಯಿಲೆಗಳ ಸಂಕೇತವಾಗಿದೆ. ನಮ್ಮ ದೇಹ (Body) ದ ಸರಾಸರಿ ತಾಪಮಾನ 98 ರಿಂದ 98.8 ಫ್ಯಾರನ್ಹೀಟ್ ಇದ್ದರೆ ಅದನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ತಾಪಮಾನ 100 ಕ್ಕಿಂತ ಹೆಚ್ಚಿದ್ದರೆ ಅದನ್ನು ಜ್ವರ ಎಂದು ಪರಿಗಣಿಸಲಾಗುತ್ತದೆ. ನಮ್ಮ ದೇಹದ ತಾಪಮಾನ (Temperature) ಏರುವುದು ಅಪಾಯದ ಕರೆಗಂಟೆಯಾಗಿದೆ.
ವೈದ್ಯರ ಪ್ರಕಾರ, ಚಳಿಗಾಲದಲ್ಲಿ ಅತಿಯಾದ ಬೆವರು ಬಂದ್ರೆ ಅದು ನಮ್ಮ ದೇಹದ ಈಸ್ಟ್ರೊಜೆನ್ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಮನಸ್ಸು ಉದ್ವೇಗಕ್ಕೊಳಗಾದಾಗ, ಖಿನ್ನತೆ ಕಾಡುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ನಾವು ಬಿಸಿ ಆಹಾರ ಸೇವನೆ ಮಾಡಲು ಇಷ್ಟಪಡ್ತೇವೆ. ಬಿಸಿ ಆಹಾರ ಸೇವನೆ ಮಾಡಿದ ವೇಳೆ ಬೆವರು ಬಂದ್ರೆ ಅದು ಸಾಮಾನ್ಯ ಎನ್ನಬಹುದು. ಆದರೆ ಈ ಬೆವರು ಯಾವುದೇ ಕಾರಣವಿಲ್ಲದೆ ಕಾಣಿಸಿಕೊಳ್ತಿದ್ದರೆ, ವಿಪರೀತ ಬೆವರು ಬರ್ತಿದ್ದರೆ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಈ ಬೆವರಿಗೆ ನಾನಾ ಕಾರಣವಿದೆ. ನಾವಿಂದು ಚಳಿಗಾಲದಲ್ಲಿ ಬೆವರು ಬರೋದು ಯಾವ ಖಾಯಿಲೆಯ ಲಕ್ಷಣ ಎಂಬುದನ್ನು ಹೇಳ್ತೇವೆ.
ಚಳಿಗಾಲದಲ್ಲಿ ಅತಿಯಾದ ಬೆವರು ಈ ರೋಗದ ಲಕ್ಷಣ :
ನಿಮ್ಮನ್ನು ಕಾಡ್ತಿರಬಹುದು ಲೋ ಬಿಪಿ (Low Blood Pressure) : ಚಳಿಗಾಲದಲ್ಲಿ ಬೆವರುವುದು ಕಡಿಮೆ ರಕ್ತದೊತ್ತಡದ ಸಂಕೇತವೂ ಆಗಿರಬಹುದು. ಕಡಿಮೆ ರಕ್ತದೊತ್ತಡದಿಂದಾಗಿ ಹೃದಯಾಘಾತ ಸಂಭವಿಸುವ ಸಾಧ್ಯತೆಯಿದೆ. ಚಳಿಯ ವಾತಾವರಣದಲ್ಲಿ ಕಡಿಮೆ ರಕ್ತದೊತ್ತಡದಿಂದಾಗಿ ಹೃದಯಕ್ಕೆ ರಕ್ತ ಪೂರೈಸುವ ಅಪಧಮನಿಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ. ಇದ್ರಿಂದ ಅದು ಮುಚ್ಚಲು ಪ್ರಾರಂಭಿಸುತ್ತದೆ. ಇದರಿಂದಾಗಿ ವ್ಯಕ್ತಿ ಬೆವರುತ್ತಾನೆ. ಹೃದಯ ಬಡಿತ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಬೆವರಿನ ಜೊತೆ ಹೃದಯ ಬಡಿತ ಹೆಚ್ಚಾಗಿದ್ದರೆ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.
ಜಗತ್ತಿನಲ್ಲಿ ಕೇವಲ 45 ಜನರಲ್ಲಿ ಮಾತ್ರ ಇರೋ ಗೋಲ್ಡನ್ ಬ್ಲಡ್ ಗ್ರೂಪ್ ಬಗ್ಗೆ ಕೇಳಿದ್ದೀರಾ ?
ಹೈಪರ್ ಹೈಡ್ರೋಸಿಸ್ ಕಾರಣವಾಗಿರಬಹುದು : ಹೈಪರ್ ಹೈಡ್ರೋಸಿಸ್ ಒಂದು ರೋಗ. ಇದರಲ್ಲಿ ಕೂಡ ಯಾವಾಗ ಬೇಕಾದ್ರೂ ರೋಗಿ ಅತಿಯಾಗಿ ಬೆವರಬಹುದು. ಈ ರೋಗದಲ್ಲಿ ರೋಗಿಯ ಮುಖದ ಜೊತೆಗೆ, ಅಂಗೈ ಮತ್ತು ಪಾದದಲ್ಲಿ ಹೆಚ್ಚು ಬೆವರು ಕಾಣಿಸಿಕೊಳ್ಳುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡಲು ಬೆವರುವುದು ಅಗತ್ಯ. ಆದ್ರೆ ಅಂಗೈಗಳು, ಪಾದಗಳು ಅತಿಯಾಗಿ ಬೆವರುತ್ತಿದ್ದರೆ ಆತ ಹೈಪರ್ ಹೈಡ್ರೋಸಿಸ್ ರೋಗಕ್ಕೆ ಒಳಗಾಗಿದ್ದಾನೆ ಎಂದೇ ಅರ್ಥ.
ಸಕ್ಕರೆ ಮಟ್ಟದಲ್ಲಿ (Sugar Level) ಇಳಿಕೆಯಾದ್ರೆ ಹೆಚ್ಚುತ್ತೆ ಬೆವರು : ದೇಹದಲ್ಲಿ ಸಕ್ಕರೆ ಮಟ್ಟ ಸರಿಯಾಗಿರಬೇಕು. ಅದು ಹೆಚ್ಚಾದ್ರೂ ಸಮಸ್ಯೆ, ಕಡಿಮೆಯಾದ್ರೂ ಸಮಸ್ಯೆ. ದೇಹದಲ್ಲಿ ಸಕ್ಕರೆ ಮಟ್ಟ ಕಡಿಮೆಯಿದ್ರೆ ನಿಮಗೆ ಹೆಚ್ಚಿನ ಬೆವರು ಬರುತ್ತದೆ. ಖಾಲಿ ಹೊಟೆಯಲ್ಲಿರುವಾಗ 1 ಡೆಸಿಲೀಟರ್ ರಕ್ತದಲ್ಲಿ 70 ರಿಂದ 100 ಮಿಗ್ರಾಂ ಸಕ್ಕರೆ ಇದ್ದರೆ ಅದನ್ನು ಆರೋಗ್ಯವಂತ ಎನ್ನಲಾಗುತ್ತದೆ. ಸಕ್ಕರೆ ಮಟ್ಟವು ಇದಕ್ಕಿಂತ ಕಡಿಮೆಯಾದರೆ ಬೆವರುವುದು ಪ್ರಾರಂಭವಾಗುತ್ತದೆ.
ಋತುಬಂಧದ (Periods) ಸಂದರ್ಭದಲ್ಲಿ ಕಾಡುತ್ತೆ ಬೆವರು : ಮಹಿಳೆಯರಿಗೆ 40 ವರ್ಷ ದಾಟುತ್ತಿದ್ದಂತೆ ಮುಟ್ಟು ನಿಲ್ಲುವ ಸಮಯ ಬರುತ್ತದೆ. ಕೆಲವರಿಗೆ 40ನೇ ವಯಸ್ಸಿನಲ್ಲಿಯೇ ಮುಟ್ಟು ನಿಂತ್ರೆ ಮತ್ತೆ ಕೆಲ ಮಹಿಳೆಯರು ವಯಸ್ಸು 50 ದಾಟಿದ್ರೂ ಮುಟ್ಟಾಗ್ತಿರುತ್ತಾರೆ. ಮಹಿಳೆ ವಯಸ್ಸು 40 ದಾಟಿದ್ದು, ಚಳಿಗಾಲದಲ್ಲೂ ಬೆವರುತ್ತಿದ್ದಾಳೆ ಎಂದಾದ್ರೆ ಆಕೆಗೆ ಋತುಬಂಧದ ಆರಂಭವಾಗಿದೆ ಎಂದರ್ಥ. ಹಾರ್ಮೋನ್ ನಲ್ಲಾಗುವ ಏರುಪೇರಿನಿಂದ ಬೆವರು ಕಾಣಿಸಿಕೊಳ್ಳುತ್ತದೆ.
Healthy Food : ಪಿ ಅಕ್ಷರದಿಂದ ಶುರುವಾಗುವ ಈ ಹಣ್ಣಿನಲ್ಲಿವೆ ಮಹಾನ್ ಶಕ್ತಿ
ಬೊಜ್ಜಿನಿಂದ್ಲೂ ಬರುತ್ತೆ ಬೆವರು : ಬೊಜ್ಜು ಹೆಚ್ಚಾಗಿರುವ ಜನರಿಗೂ ಬೆವರು ಹೆಚ್ಚು ಬರುತ್ತದೆ. ಅವರು ಚಳಿಗಾಲದಲ್ಲೂ ಬೆವರುತ್ತಾರೆ.