ಕೋವಿಡ್ ಸೋಂಕಿನ ಮಧ್ಯೆ Monkeypox ವೈರಸ್‌ ಭೀತಿ, ರೋಗ ಲಕ್ಷಣಗಳೇನು ?

ಕೊರೋನಾ ವೈರಸ್‌ (Corona Virus)ಬರೋಬ್ಬರಿ ಎರಡು ವರ್ಷಗಳ ಕಾಲ ಜನಜೀವನವನ್ನೇ ಅಲ್ಲೋಲಕಲ್ಲೋಲವಾಗಿಸಿತು. ಇನ್ನೇನು ಸೋಂಕಿನ ಪ್ರಭಾವ ಕಡಿಮೆಯಾಗಿ ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ ಎನ್ನುವಾಗಲೇ ನಾಲ್ಕನೇ ಅಲೆಯ ಭೀತಿ ಕಾಣಿಸಿಕೊಂಡಿದೆ. ಅಷ್ಟು ಮಾತ್ರವಲ್ಲ, ಈ ಮಧ್ಯೆ ಯುಕೆಯ ನಾರ್ತ್ ವೇಲ್‌ನಲ್ಲಿ ಮಂಕಿಪಾಕ್ಸ್ (Monkeypox) ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ವರದಿಯಾಗಿದೆ. 

Monkeypox  Symptoms, Causes And How To Treat The Disease Vin

ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್‌ನ (Corona Virus) ಪ್ರಭಾವ ಸ್ಪಲ್ಪ ಮಟ್ಟಿಗೆ ಕಡಿಮೆಯಾಗಿರುವಾಗಲೇ  ಸೋಂಕಿತ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದ ವೈರಸ್ ಮಂಕಿಪಾಕ್ಸ್‌ನ (Monkeypox) ಮೊದಲ ಪ್ರಕರಣವನ್ನು ಯುಕೆ ದೃಢಪಡಿಸಿದೆ. ಇತ್ತೀಚೆಗಷ್ಟೇ ನೈಜೀರಿಯಾಕ್ಕೆ ತೆರಳಿದ್ದ ವ್ಯಕ್ತಿಯಲ್ಲಿ ಈ ವೈರಸ್ ಪತ್ತೆಯಾಗಿದೆ. ರೋಗಿಯನ್ನು ಪ್ರಸ್ತುತ ಲಂಡನ್‌ನ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ನಾರ್ತ್ ವೇಲ್ಸ್‌ನ (North Wales) ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಈ ಮಾಹಿತಿಯನ್ನು ನೀಡಿದ್ದಾರೆ. ಒಂದೇ ಕುಟುಂಬದ 2 ಸದಸ್ಯರಲ್ಲಿ ಈ ರೋಗವು ಕಂಡುಬಂದಿದೆ ಬಂದಿದೆ ಎಂದು ಅವರು ಹೇಳಿದ್ದಾರೆ. ಈ ಕಾರಣದಿಂದಾಗಿ, ಎರಡೂ ರೋಗಿಗಳಿಗೆ ದೇಹದಲ್ಲಿ ದದ್ದು, ತುರಿಕೆ, ಜ್ವರ ಮತ್ತು ನೋವಿನ ಸಮಸ್ಯೆ (Monkey Pox Symptoms) ಎದುರಾಗಿದೆ.

ಸಿಡುಬು ರೋಗದ ವರ್ಗಕ್ಕೆ ಸೇರಿದ ಈ ಮಂಕಿಪಾಕ್ಸ್‌, ಕಡಿಮೆ ತೀವ್ರವಾದ ರೋಗ (Disease) ಎಂದು ಪರಿಪರಿಗಣಿಸಲಾಗಿದೆ. ಹಾಗೆಯೇ ಇದು ಸಾಂಕ್ರಾಮಿಕವಾಗಿ ಹರಡುವ ಸಾಧ್ಯತೆಗಳು ಕಡಿಮೆ ತಜ್ಞರು ತಿಳಿಸಿದ್ದಾರೆ. ವೈರಸ್‌ ಹೆಚ್ಚಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಉಷ್ಣವಲಯದ ಮಳೆಕಾಡುಗಳಲ್ಲಿ ಕಂಡುಬರುತ್ತದೆ. ಇದರಲ್ಲಿ ಎರಡು ಪ್ರಮುಖ ತಳಿಗಳು ಇದೆ. ಒಂದು ಪಶ್ಚಿಮ ಆಫ್ರಿಕನ್ ತಳಿ, ಇನ್ನೊಂದು ಮಧ್ಯ ಆಫ್ರಿಕನ್ ತಳಿ. ಈ ರೋಗದ ಸಂಪರ್ಕ ಪತ್ತೆ ಕಾರ್ಯ ಈಗಾಗಲೇ ಆರಂಭ ಮಾಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

Covid 4th wave: ಇಂಥಾ ಆರೋಗ್ಯ ಸಮಸ್ಯೆಯಿದ್ದವರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು

ಮಂಕಿಪಾಕ್ಸ್ ಕಾಯಿಲೆ ಎಂದರೇನು ?
ಯುನೈಟೆಡ್ ಸ್ಟೇಟ್ಸ್‌ನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಪ್ರಕಾರ, ಮಂಕಿಪಾಕ್ಸ್ ವೈರಸ್ ಸೋಂಕಿನಿಂದ ಉಂಟಾಗುವ ಅಪರೂಪದ ಕಾಯಿಲೆಯಾಗಿದೆ. ಮಂಕಿಪಾಕ್ಸ್ ವೈರಸ್ ಪಾಕ್ಸ್‌ವಿರಿಡೆ ಕುಟುಂಬದಲ್ಲಿ ಆರ್ಥೋಪಾಕ್ಸ್‌ವೈರಸ್ ಕುಲಕ್ಕೆ ಸೇರಿದೆ ಎಂದು ಅದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಝೂನೋಟಿಕ್ ಕಾಯಿಲೆಯು ಪ್ರಾಥಮಿಕವಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಉಷ್ಣವಲಯದ ಮಳೆಕಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ ಮತ್ತು ಸಾಂದರ್ಭಿಕವಾಗಿ ಇತರ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ.

ರೋಗದ ಲಕ್ಷಣಗಳು
ಜ್ವರ, ದದ್ದು, ತೀವ್ರವಾದ ತಲೆನೋವು, ಬೆನ್ನು ನೋವು, ಸ್ನಾಯು ನೋವು (ಮೈಯಾಲ್ಜಿಯಾ), ತೀವ್ರವಾದ ಅಸ್ತೇನಿಯಾ (ಶಕ್ತಿಯ ಕೊರತೆ) ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳು ಮಂಕಿಪಾಕ್ಸ್‌ಗೆ ಸಂಬಂಧಿಸಿದ ಸಾಮಾನ್ಯ ಲಕ್ಷಣಗಳಾಗಿವೆ. WHO ಪ್ರಕಾರ, ಜ್ವರ ಕಾಣಿಸಿಕೊಂಡ 1-3 ದಿನಗಳಲ್ಲಿ ಮಂಕಿಪಾಕ್ಸ್ ರೋಗಿಗಳಲ್ಲಿ ಚರ್ಮದ ಸಮಸ್ಯೆಗಳು ಕಂಡುಬರುತ್ತವೆ. ದದ್ದುಗಳು ಮುಖದ ಮೇಲೆ ಹೆಚ್ಚು ಕೇಂದ್ರೀಕೃತವಾಗಿರುತ್ತವೆ. ಮುಖದ ಹೊರತಾಗಿ, ಇದು ಅಂಗೈಗಳು ಮತ್ತು ಪಾದಗಳ ಅಡಿಭಾಗ, ಬಾಯಿಯ ಲೋಳೆಯ ಪೊರೆಗಳು, ಜನನಾಂಗಗಳು ಮತ್ತು ಕಾಂಜಂಕ್ಟಿವಾ ಮತ್ತು ಕಾರ್ನಿಯಾದ ಮೇಲೆ ಪರಿಣಾಮ ಬೀರುತ್ತದೆ ಎಂದು ಜಾಗತಿಕ ಆರೋಗ್ಯ ಸಂಸ್ಥೆ ಹೇಳಿದೆ. ಮಂಕಿಪಾಕ್ಸ್‌ನ ಕಾವು ಕಾಲಾವಧಿಯು (ಸೋಂಕಿನಿಂದ ರೋಗಲಕ್ಷಣಗಳ ಪ್ರಾರಂಭದವರೆಗೆ) ಸಾಮಾನ್ಯವಾಗಿ 6 ​​ರಿಂದ 13 ದಿನಗಳವರೆಗೆ ಇರುತ್ತದೆ ಎಂದು ತಿಳಿಸಲಾಗಿದೆ.

Covid Fourth Wave: ಸೋಂಕಿನಿಂದ ಪಾರಾಗಲು ಸ್ಟಿರಾಯ್ಡ್‌ ಬಳಕೆ ನೆರವಾಗುತ್ತಾ ?

ರೋಗವು ಮನುಷ್ಯರಿಗೆ ಹೇಗೆ ಹರಡುತ್ತದೆ ?
UK ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (UKHSA) ಮಂಕಿಪಾಕ್ಸ್ ಅಪರೂಪದ ವೈರಲ್ ಸೋಂಕು, ಇದು ಜನರ ನಡುವೆ ಸುಲಭವಾಗಿ ಹರಡುವುದಿಲ್ಲ ಎಂದು ಹೇಳಿದೆ. 1958ರಲ್ಲಿ ಈ ರೋಗವನ್ನು ಕಂಡುಹಿಡಿಯಲಾಯಿತು, ಸಂಶೋಧನೆಗಾಗಿ ಇರಿಸಲಾದ ಮಂಗಗಳ ವಸಾಹತುಗಳಲ್ಲಿ ಪಾಕ್ಸ್ ತರಹದ ಕಾಯಿಲೆಯ ಎರಡು ಏಕಾಏಕಿ ಸಂಭವಿಸಿದಾಗ ಈ ರೋಗಕ್ಕೆ ಅದರ ಹೆಸರನ್ನು ನೀಡಲಾಯಿತು.

ಮಾನವ ಪ್ರಸರಣದ ಮೊದಲ ಪ್ರಕರಣವು 50 ವರ್ಷಗಳ ಹಿಂದೆ 1970ರಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (DRC) ವರದಿಯಾಗಿದೆ. ಸೋಂಕಿತ ಪ್ರಾಣಿಗಳ ರಕ್ತ, ದೈಹಿಕ ದ್ರವಗಳು ಅಥವಾ ಚರ್ಮದ ಅಥವಾ ಲೋಳೆಪೊರೆಯ ಗಾಯಗಳೊಂದಿಗೆ ನೇರ ಸಂಪರ್ಕದಿಂದ ಪ್ರಸರಣ ಉಂಟಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ.

ಮಂಕಿಪಾಕ್ಸ್‌ನ ನೈಸರ್ಗಿಕ ಹರಡುವಿಕೆಯ ಮೂಲವನ್ನು ಗುರುತಿಸಲಾಗಿಲ್ಲ. ಆದರೂ ಅಸಮರ್ಪಕವಾಗಿ ಬೇಯಿಸಿದ ಮಾಂಸ ಮತ್ತು ಸೋಂಕಿತ ಪ್ರಾಣಿಗಳ ಇತರ ಪ್ರಾಣಿ ಉತ್ಪನ್ನಗಳನ್ನು ತಿನ್ನುವುದು ಸಂಭವನೀಯ ಅಪಾಯಕಾರಿ ಅಂಶವಾಗಿದೆ ಎಂದು ಹೇಳಲಾಗಿದೆ.

ಮಂಕಿಪಾಕ್ಸ್‌ಗೆ  ಹೇಗೆ ಚಿಕಿತ್ಸೆ ನೀಡಬಹುದು?
WHO ಪ್ರಕಾರ ಮಂಕಿಪಾಕ್ಸ್‌ಗೆ ಪ್ರಸ್ತುತ ಯಾವುದೇ ನಿರ್ದಿಷ್ಟ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗಿಲ್ಲ. ಸಿಡುಬು ವಿರುದ್ಧ ಬಳಸುವ ವ್ಯಾಕ್ಸಿನೇಷನ್ ಮಂಕಿಪಾಕ್ಸ್‌ ರೋಗವನ್ನು ತಡೆಗಟ್ಟುವಲ್ಲಿ ಸುಮಾರು 85 ಪ್ರತಿಶತದಷ್ಟು ಪರಿಣಾಮಕಾರಿ ಎಂದು ಕಂಡುಬಂದಿದೆ. ಆದ್ದರಿಂದ, ಮಂಕಿಪಾಕ್ಸ್‌ನ ಗಂಭೀರ ಲಕ್ಷಣಗಳನ್ನು ತಡೆಗಟ್ಟಲು  ಸಿಡುಬು ಲಸಿಕೆಯನ್ನು ಶಿಫಾರಸು ಮಾಡಲಾಗುತ್ತಿದೆ.

Latest Videos
Follow Us:
Download App:
  • android
  • ios