ಕರ್ನಾಟಕದಲ್ಲಿ ಅಲರ್ಟ್: ಸಲಿಂಗಕಾಮಿಗಳಲ್ಲಿ ಹೆಚ್ಚು ಮಂಕಿಪಾಕ್ಸ್ ಕೇಸ್ ಪತ್ತೆ, ಸಚಿವ ಸುಧಾಕರ್
ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತ ಕರ್ನಾಟಕದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಸಭೆ ಬಳಿಕ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು, (ಆಗಸ್ಟ್.02) : ದೇಶದಲ್ಲಿ ದಿನದಿಂದ ದಿನಕ್ಕೆ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ನಮ್ಮ ಕರ್ನಾಟಕದ ಪಕ್ಕದ ಕೇರಳದಲ್ಲಿ ಹೆಚ್ಚಾಗಿ ಕಂಡುಬರುತ್ತಿರುತ್ತಿವೆ. ಇದರಿಂದ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ.
ಈ ಬಗ್ಗೆ ಇಂದು(ಮಂಗಳವಾರ) ಮುಖ್ಯಮಂತ್ರಿ ಬಸವರಾಜ ಬೊಮಾಯಿ ಅವರು ಅಧಿಕಾರಿಗಳ ಸಭೆ ನಡೆಸಿದ್ದು.ಮಂಕಿಪಾಕ್ಸ್ ಸೋಂಕಿನ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.
ಮಂಕಿಪಾಕ್ಸ್ ಸೋಂಕು ತಡೆ, ಮುಂಜಾಗ್ರತಾ ಕ್ರಮಕ್ಕೆ ಬಿಬಿಎಂಪಿ, ಜಿಲ್ಲಾಡಳಿತಗಳಿಗೆ ಸೂಚನೆ
ಇನ್ನು ಸಭೆ ಬಳಿಕ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮಂಕಿಪಾಕ್ಸ್ (Monkeypox) ಸೋಂಕು ಬರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಏರ್ಪೋರ್ಟ್ನಲ್ಲಿ ಥರ್ಮಲ್ ಸ್ಕ್ರೀನಿಂಗ್ ನಡೆಸಲು ಸೂಚನೆ ನೀಡಿದ್ದೇನೆ. ಕೊವಿಡ್ ಸೋಂಕಿನ ರೀತಿ ಮಂಕಿಪಾಕ್ಸ್ ಸೋಂಕು ಹರಡುವುದಿಲ್ಲ. ಕೇರಳ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ವರದಿಗಳು ಹೇಳವ ಪ್ರಕಾರ ಯಾರು ನಿಖರ ಸಂಪರ್ಕದಲ್ಲಿ ಇರ್ತಾರೆ ಬಹಳ ದೀರ್ಘಕಾಲದ ಸೋಂಕಿತ ವ್ಯಕ್ತಿಯ ಜೊತೆ ಸಂಪರ್ಕದಲ್ಲಿ ಇರ್ತಾರೆಅವರಿಗೆ ಮಾತ್ರ ಬರಲಿಕ್ಕೆ ಸಾಧ್ಯ. ಕೊವೀಡ್ ರೀತಿ ವೇಗವಾಗಿ ಬಹಳ ಸುಲಭವಾಗಿ ಹರಡುವ ಸಾಂಕ್ರಾಮಿಕ ರೋಗ ಅಲ್ಲ. ಸಲಿಂಗಕಾಮಿಗಳಲ್ಲಿ ಹೆಚ್ಚು ರೀತಿಯ ಮಂಕಿಪಾಕ್ಸ್ ನ ಕೇಸ್ ಪತ್ತೆಯಾಗುತ್ತಿವೆ ಎಂದು ವರದಿಗಳು ಹೇಳುತ್ತಿವೆ ಎಂದು ಮಾಹಿತಿ ನೀಡಿದರು.
ಮಂಕಿಪಾಕ್ಸ್ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ವಿಶೇಷ ಸಭೆ ಮಾಡಿದ್ದೇವೆ. ಮುಖ್ಯಮಂತ್ರಿಗಳು ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಪಡೆದರು. ಸುಮಾರು 80 ದೇಶದಲ್ಲಿ 20 ಸಾವಿರ ಜನರಿಗೆ ಈ ಸೋಂಕು ಹರಡಿದೆ. ಭಾರತದಲ್ಲಿ ಇದುವರೆಗೆ 6 ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.
ಕೇರಳ 4 ಹಾಗೂ ದೆಹಲಿ 2 ಪ್ರಕರಣ ಪತ್ತೆಯಾಗಿದ್ದು. ಕರ್ನಾಟಕದಲ್ಲಿ 3 ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರುನಲ್ಲಿ 2 ಹಾಗೂ ಉತ್ತರ ಕನ್ನಡ 1 ಶಂಕಿತ ಪ್ರಕರಣ ಇದೆ. ಮಂಗಳೂರಿನ ವೆನ್ ಲಾಕ್ ಆಸ್ಪತ್ರೆ ಹಾಗೂ ಬೆಂಗಳೂರಿನಲ್ಲಿ ಒಂದು ಆಸ್ಪತ್ರೆ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.
ಯಾವುದೇ ವ್ಯಕ್ತಿ ಸೋಂಕು ಧೃಡಪಟ್ಟರೆ ಐಸೋಲೆಟೆ ಮಾಡಿ 21 ದಿನ ಆಸ್ಪತ್ರೆಯಲ್ಲಿ ಇಟ್ಟು ಚಿಕಿತ್ಸೆ ಕೊಡಬೇಕು. ಯಾಕೆಂದರೆ ಯಾವ ವ್ಯಕ್ತಿ ಮೇಲೆ ಚರ್ಮದ ಮೇಲೆ ಗಾಯ ಆಗುತ್ತೆ. ಗುಣಮುಖ ಆಗೋ ವರೆಗೂ 21 ದಿನ ಚಿಕಿತ್ಸೆ ಕೊಡಬೇಕಾಗುತ್ತದೆ. ಇದರ ಲಕ್ಷಣಗಳು ಹೇಳಬೇಕಾದರೆ ಜ್ವರ ಬರುತ್ತೆ, ಸ್ಕೀನ್ ನಲ್ಲಿ ರ್ಯಾಷಸ್ ಇರುತ್ತೆ ಎಂದು ತಿಳಿಸಿದರು.
ಕೇರಳ ಗಡಿಭಾಗದಲ್ಲಿ ಹೊರದೇಶದ ಪ್ರವಾಸಿಗರು ಬರುವುದರಿಂದ ಗಡಿ ಭಾಗದ ಎಲ್ಲ ಜಿಲ್ಲಾಡಳಿತ, ಅಧಿಕಾರಿಗಳಿಗೆ ಮಾರ್ಗಸೂಚಿ ಕೊಟ್ಟಿದ್ದೇವೆ. ಕರ್ನಾಟಕ ರಾಜ್ಯದ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ. ಆದ್ರೂ ಕೂಡಾ ಮುನ್ನೆಚ್ಚರಿಕೆ ಸ್ವಚ್ಚತೆಯನ್ನ ಕಾಪಾಡಲು ಸರ್ಕಾರ ಮನವಿ ಮಾಡುತ್ತೆ ಎಂದರು.