ಪ್ರಧಾನಿ ಮೋದಿ ನಟ ಮಿಲಿಂದ್ ಸೋಮನ್ ಜೊತೆ ಗುರುವಾರ ಮಾತನಾಡಿ, ನಟನ ತಾಯಿ ಎಲ್ಲರಿಗೂ ಸ್ಪೂರ್ಥಿ ಎಂದು ಹೊಗಳಿದ್ದಾರೆ. ಉಶಾ ಸೋಮನ್ ವಿಡಿಯೋ ಬಗ್ಗೆ ಮಾತನಾಡಿದ ಪ್ರಧಾನಿ ವಿಡಿಯೋ ಮೆಚ್ಚಿ ಹೊಗಳಿದ್ದಾರೆ.

ನಟ ಮಿಲಿಂದ್ ಸೋಮನ್ ತಾಯಿ ಪುಶ್ ಅಪ್ ಮಾಡೋ ವಿಡಿಯೋ ಯಾರೋ ಕಳುಹಿಸಿದ್ದರು. ನಿಜಕ್ಕೂ ಆಶ್ಚರ್ಯವಾಯ್ತು, 5 ಬಾರಿ ವಿಡಿಯೋ ನೋಡಿದೆ ಎಂದಿದ್ದಾರೆ ಮೋದಿ.

ತೂಕ ಇಳಿಸ್ಕೋಬೇಕಾ..? ನಿಮ್ಮ ತಿಂಡಿ, ಊಟದ ಸಮಯ ಹೀಗಿರಲಿ

ಯಾರೋ ನಿಮ್ಮ ತಾಯಿಯ ವಿಡಿಯೋ ಕಳುಹಿಸಿದರು. ನಾನದನ್ನು 5 ಬಾರಿ ನೋಡಿದೆ. ಬರ್ತ್‌ಡೇ ದಿನ ಅವರು ಪುಶ್ ಅಪ್ ಮಾಡುತ್ತಿದ್ದರು. ನಾನವರಿಗೆ ಸೆಲ್ಯೂಟ್ ಮಾಡುತ್ತೇನೆ ಎಂದಿದ್ದಾರೆ.

ಮಿಲಿಂದ್‌ ಸೋಮನ್‌ಗೆ ತಮಾಷೆಯಾಗಿ ಮಾತನಾಡಿದ ಪ್ರಧಾನಿ  ನಿಜಕ್ಕೂ ನಿಮಗೆ 45 ವರ್ಷ ವಯಸ್ಸಾಯ್ತಾ ಎಂದು ಪ್ರಶ್ನಿಸಿದಾಗ ತಾಯಿಯೇ ನನಗೆ ಫೀಟ್ ಆಗಿರಲು ಪ್ರೇರಣೆ ಎಂದಿದ್ದಾರೆ.

ಸೀರೆಯುಟ್ಟು ಸ್ಟಂಟ್ ಮಾಡಿದ ಯುವತಿ, ವಿಡಿಯೋ ವೀಕ್ಷಿಸಿದ ಕೋಟಿಗೂ ಅಧಿಕ ಮಂದಿ!

ಬಹಳಷ್ಟು ಜನ ನನ್ನ ವಯಸ್ಸಿನ ಬಗ್ಗೆ ಕೇಳುತ್ತಾರೆ. ನನ್ನಮ್ಮನಿಗೆ 81 ವರ್ಷ. ಇದನ್ನು ಅವರೂ ಮಡ್ತಾರೆ. ಅವರು ನನಗೆ ಸ್ಫೂರ್ಥಿ. ಇನ್ನು ಹಳ್ಳಿ ಕಡೆ ಹೋದರೆ ಮಹಿಳೆಯರು ನೀರಿಗಾಗಿ ಕಿಲೋಮೀಟರ್‌ಗಟ್ಟಲೆ ನಡೆಯುತ್ತಾರೆ. ನಗರದಲ್ಲಿ ಕೆಲಸಕ್ಕಾಗಿ ಒಂದೇ ಕಡೆ ಕೂರುತ್ತೇವೆ. ಇದು ನಮ್ಮನ್ನು ಸೋಮಾರಿ ಮಾಡುತ್ತದೆ ಎಂದಿದ್ದಾರೆ.

ಫಿಟ್ ಇಂಡಿಯಾ ಅಭಿಯಾನವನ್ನು ಹೊಗಳಿದ ನಟ, ಇದು ಜನರಿಗೆ ಫಿಟ್‌ನೆಸ್ ಪ್ರಾಮುಖ್ಯತೆಯನ್ನು ತಿಳಿಸುತ್ತದೆ ಎಂದಿದ್ದಾರೆ. ದೈಹಿಕ ಮಾತ್ರವಲ್ಲ, ಮಾನಸಿಕ ಆರೋಗ್ಯವನ್ನೂ ಕೊಡುತ್ತದೆ ಎಂದಿದ್ದಾರೆ. ಪ್ರಧಾನಿ ಜೊತೆಗಿನ ಕಾನ್ಫರೆನ್ಸ್‌ನಲ್ಲಿ ವಿರಾಟ್ ಕೊಹ್ಲಿ, ದೇವೇಂದ್ರ ಜಜಾರಿಯಾ, ಅಫ್ಜಾನ್ ಆಶಿಕ್ ಭಾಗಿಯಾಗಿದ್ದರು.