ಮುಂಬೈ(ಸೆ.01):  ಸೋಶಿಯಲ್ ಮೀಡಿಯಾದಲ್ಲಿ ಸ್ಟಂಟ್ ಮಾಡಿದ ವಿಡಿಯೋಗಳಿಗೆ ಭಾರೀ ವೀಕ್ಷಣೆಯಾಗುತ್ತವೆ. ಹೀಗಾಗಿ ಅನೇಕ ಬಗೆಯ ವಿಡಿಯೋಗಳು ವೈರಲ್ ಆಗುತ್ತಿಉತ್ತವೆ. ಆದರೀಗ ಸೀರೆಯುಟ್ಟ ಯುವತಿಯ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. 

ಹೌದು ಜಿಮ್ನಾಸ್ಟಿಕ್ಸ್ ಹಾಗೂ ಫಿಟ್ನೆಸ್ ಮಾಡೆಲ್ ಪಾರುಲ್ ಅರೋರಾ ಸೀರೆಯುಟ್ಟುಕೊಂಡೇ ಬ್ಯಾಕ್ ಲಿಫ್ಟ್ ಮಾಡಿದ್ದಾರೆ. ಈ ಸ್ಟಂಟ್ ಬಳಿಕ ಅವರು ತಮನ್ನೊಂದಿಗಿದ್ದ ಯುವಕನ ಜೊತೆ ಕ್ಯಾಟ್ ವಾಕ್ ಮಾಡಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಈ ವಿಡಿಯೋ ಕೋಟಿಗೂ ಅಂದಿಕ ಬಾರಿ ವೀಕ್ಷಣೆಯಾಗಿದೆ.

 
 
 
 
 
 
 
 
 
 
 
 
 

Who can do stunt in saree #reelsinstagram #reels #fitness #fitgirl @michaelhsingh

A post shared by Parul_Arora💫 (@parul_cutearora) on Aug 22, 2020 at 12:04am PDT

ಈ ವಿಡಿಯೋದಲ್ಲಿ ಅವರು ಛಾವಣಿ ಮೇಲೆ ಮ್ಯಾಟ್ ಒಂದನ್ನು ಹಾಕಿದ್ದು, ವಿಡಿಯೋ ಆರಂಭದಲ್ಲಿ ಪಾರುಲ್ ತಮ್ಮ ಪಾರ್ಟ್ನರ್ ಜೊತೆಗೆ ಬರುತ್ತಾರೆ. ನೋಡ ನೋಡುತ್ತಿದ್ದಂತೆಯೇ ಇಬ್ಬರೂ ಬ್ಯಾಕ್ ಲಿಫ್ಟ್ ಮಾಡುತ್ತಾರೆ. ಇನ್ನು ವಿಡಿಯೋ ಶೇರ್ ಮಾಡಿಕೊಂಡಿರುವ ಪಾರುಲ್ ಯಾರಾದರೂ ಈ ಸ್ಟಂಟ್ ಸೀರೆಯುಟ್ಟುಕೊಂಡು ಮಾಡುವಿರಾ? ಎಂದೂ ಪ್ರಶ್ನಿಸಿದ್ದಾರೆ.