ಹಾವರ್ಡ್ ಹಾಗೂ ಅಮೆರಿಕ ಆರೋಗ್ಯ ಸಂಘ ಜಂಟಿ ಅಧ್ಯಯನ ಉತ್ತಮ ಆರೋಗ್ಯಕ್ಕೆ 2+3 ಸೂತ್ರ ಪರಿಣಾಮಕಾರಿ ಎಂದ ವರದಿ ಆರೋಗ್ಯ ಕಾಪಾಡಿಕೊಳ್ಳಲು ವರದಿ ನೀಡಿದ ಸೂಚನೆಗಳೇನು?

ನ್ಯೂಯಾರ್ಕ್(ಜೂ.01): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ತಿನ್ನುವ ಆಹಾರ, ಶುಚಿತ್ವದತ್ತ ಜನ ಹೆಚ್ಚಿನ ಗಮನಹರಿಸುತ್ತಿದ್ದಾರೆ. ಪೌಷ್ಠಿಕ ಆಹಾರ, ನೈಸರ್ಗಿಕ ಆಹಾರದತ್ತ ಒಲವು ತೋರುತ್ತಿದ್ದಾರೆ. ಇದರ ನಡುವೆ ಹಾರ್ವರ್ಡ್ ಸಂಶೋಧಕರು ಹಾಗೂ ಅಮೆರಿಕ ಹೆಲ್ತ್ ಆಸೋಸಿಯೇಶನ್ ಅಧ್ಯಯನವೊಂದನ್ನು ನಡೆಸಿ ವರದಿ ನೀಡಿದೆ. ಈ ವರದಿಯಲ್ಲಿ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಸರಳ ಸೂತ್ರ ನೀಡಿದೆ. 

Add Asianetnews Kannada as a Preferred SourcegooglePreferred

ಸಸ್ಯಾಹಾರಿಗಳಿಗೆ ಖಿನ್ನತೆ ಹೆಚ್ಚು, ಮಾಂಸಾಹಾರಿಗಳ ಮಾನಸಿಕ ಆರೋಗ್ಯ ಹೇಗೆ ?..

ಪ್ರತಿ ದಿನ ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚಾಗಿ ಸೇವಿಸಿದರೆ ದೀರ್ಘಾಯುಷ್ಯ ಮಾತ್ರವಲ್ಲ, ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು ಎಂದು ಹಾರ್ವರ್ಡ್ ಸಂಶೋಧಕರ ನೀಡಿದ ಅಧ್ಯಯನ ವರದಿಯಲ್ಲಿ ಹೇಳಿದ್ದಾರೆ. ಈ ವರದಿಯಲ್ಲಿ ಒರ್ವ ಪ್ರತಿ ದಿನ ಕನಿಷ್ಠ 2 ಬಗೆಯ ಹಣ್ಣು ಹಾಗೂ 3 ಬಗೆಯ ತರಕಾರಿ ಸೇವಿಸಿದರೆ ಮ್ಯಾಜಿಕ್ ಅನುಭವಿಸಬಹುದು ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಅಮೇರಿಕನ್ ಹೆಲ್ತ್ ಅಸೋಸಿಯೇಷನ್ ​​ಮತ್ತು ಹಾರ್ವರ್ಡ್ TH ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧಕರು ನಡೆಸಿದ ಹೊಸ ಅಧ್ಯಯನದಲ್ಲಿ ಈ ಸರಳ ಸೂತ್ರ ಪರಿಣಾಮಕಾರಿ ಎಂದು ದೃಢಪಟ್ಟಿದೆ. ಪ್ರತಿ ದಿನ ಎರಡು ಬಗೆಯ ಹಣ್ಣುಗಳನ್ನು ಮತ್ತು ಮೂರು ಬಗೆಯ ತರಕಾರಿ ತರಕಾರಿಗಳನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆ ಇಲ್ಲದೆ ದೀರ್ಘಾಯುಷ್ಯಿಯಾಗಬಹುದು ಎಂದಿದೆ.

ಊಟ ಆದ ಕೂಡಲೇ ಸಿಹಿ ತಿನ್ನೋದು ಆರೋಗ್ಯಕ್ಕೆ ಒಳ್ಳೇಯದಾ?.

ಈ ವರದಿ ಒಂದೆರಡು ವರ್ಷದಲ್ಲಿ ಮಾಡಿ ಮುಗಿಸಿಲ್ಲ. 1984 ರಿಂದ 2014ರ ವರೆಗೆ 1 ಲಕ್ಷಕ್ಕೂ ಅಧಿಕ ಯುವಕ ಯುವತಿಯರನ್ನು ಪರೀಕ್ಷೆ ಒಳಪಡಿಸಲಾಗಿದೆ. ಇದರ ಜೊತೆಗೆ ಹಣ್ಣು ಮತ್ತು ತರಕಾರಿಗಳ ಹೆಚ್ಚಾಗಿ ತಿನ್ನುವ 20 ಲಕ್ಷ ಮಂದಿಯ ಆರೋಗ್ಯವನ್ನು ಕೂಲಂಕುಷವಾಗಿ ಪರೀಕ್ಷಿಸಿ ವರದಿ ತಯಾರಿಸಲಾಗಿದೆ.

ಈ ಅಧ್ಯಯನ ವರದಿಯಲ್ಲಿ ಮತ್ತೊಂದು ಅಂಶವನ್ನು ಉಲ್ಲೇಖಿಸಲಾಗಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ಹಣ್ಣು ತರಕಾರಿ ಪ್ರತಿ ದಿನ ಸೇವಿಸಿದರೆ ಹೆಚ್ಚುವರಿ ಲಾಭವಿಲ್ಲ ಎಂದಿದೆ. ಆದರೆ ಬಗೆ ಬಗೆಯ ಒಣ ಹಣ್ಣುಗಳು ಸೇವೆನೆ ಕೂಡ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ ಎಂದಿದೆ

ಮೀನು ಪ್ರಿಯರು ಈ ಸುದ್ದಿ ಕೇಳಿದ್ರೆ ಫುಲ್ ಖುಷಿಯಾಗೋದು ಗ್ಯಾರಂಟಿ

ಸೇವಿಸುವ ಆಹಾರ ಕೆಮಿಕಲ್ ಮುಕ್ತವಾಗಿದ್ದರೆ ಮತ್ತಷ್ಟು ಉತ್ತಮ ಎನ್ನುತ್ತಿದೆ ವರದಿ . ಭಾರತದಲ್ಲಿ ಈ ರೀತಿಯ ಆರ್ಗಾನಿಕ್ ಆಹಾರ ಹುಡುಕಿದರೂ ಸಿಗುವುದು ವಿರಳ. ಸಿಕ್ಕರೂ ಶ್ರೀಮಂತರಿಗೆ ಮಾತ್ರ ಖರೀದಿ ಸಾಧ್ಯ.