ಫೇಸ್‌ಬುಕ್‌ನಿಂದ ಮಕ್ಕಳ ಮಾನಸಿಕತೆ ಮೇಲೆ ಪರಿಣಾಮ; 33 ರಾಜ್ಯಗಳಿಂದ ದೂರು
ಮಕ್ಕಳ ಮಾನಸಿಕತೆ ಮೇಲೆ ಫೇಸ್‌ಬುಕ್, ಇನ್‌ಸ್ಟಾಗ್ರಾಂನಂಥ ಮೆಟಾ ಕಂಪನಿಯ ಸಾಮಾಜಿಕ ಮಾಧ್ಯಮಗಳು ದುಷ್ಪರಿಣಾಮ ಬೀರುತ್ತಿವೆ. ಅವರನ್ನು ವ್ಯಸನ ಮನೋಭಾವಕ್ಕೆ ನೂಕುತ್ತಿವೆ ಎಂದು ಅಮೆರಿಕದ 33 ರಾಜ್ಯಗಳು ಕ್ಯಾಲಿಫೋರ್ನಿಯಾ ಕೋರ್ಟ್‌ನ ಮೆಟ್ಟಿಲೇರಿವೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ವಾಷಿಂಗ್ಟನ್: ಮಕ್ಕಳ ಮಾನಸಿಕತೆ ಮೇಲೆ ಫೇಸ್‌ಬುಕ್, ಇನ್‌ಸ್ಟಾಗ್ರಾಂನಂಥ ಮೆಟಾ ಕಂಪನಿಯ ಸಾಮಾಜಿಕ ಮಾಧ್ಯಮಗಳು ದುಷ್ಪರಿಣಾಮ ಬೀರುತ್ತಿವೆ. ಅವರನ್ನು ವ್ಯಸನ ಮನೋಭಾವಕ್ಕೆ ನೂಕುತ್ತಿವೆ ಎಂದು ಅಮೆರಿಕದ 33 ರಾಜ್ಯಗಳು ಕ್ಯಾಲಿಫೋರ್ನಿಯಾ ಕೋರ್ಟ್‌ನ ಮೆಟ್ಟಿಲೇರಿವೆ. ಕ್ಯಾಲಿಫೋರ್ನಿಯಾದ ಫೆಡರಲ್ ನ್ಯಾಯಾಲಯದಲ್ಲಿ ಮಂಗಳವಾರ ಸಲ್ಲಿಸಿದ ದೂರಿನಲ್ಲಿ, ಮೆಟಾ ತನ್ನ ಪ್ಲಾಟ್‌ಫಾರ್ಮ್‌ಗಳ ಮೂಲಕ ಉದ್ದೇಶಪೂರ್ವಕವಾಗಿ ಚಿಕ್ಕ ಮಕ್ಕಳು ಮತ್ತು ಹದಿಹರೆಯದವರನ್ನು ವ್ಯಸನಕ್ಕೆ ಪ್ರೇರೇಪಿಸುತ್ತದೆ. ಮತ್ತು ಕಡ್ಡಾಯ ಸಾಮಾಜಿಕ ಮಾಧ್ಯಮ ಬಳಕೆಗೆ ನೂಕುತ್ತಿದೆ ಎಂದು 33 ರಾಜ್ಯಗಳು ಆರೋಪಿಸಿವೆ.
'ಯುವಕರು ಮತ್ತು ಹದಿಹರೆಯದವರನ್ನು ಆಕರ್ಷಿಸಲು, ತೊಡಗಿಸಿಕೊಳ್ಳಲು ಮತ್ತು ಅಂತಿಮವಾಗಿ ಬಲೆಗೆ ಬೀಳಿಸಲು ಮೆಟಾ ಶಕ್ತಿಯುತ ಮತ್ತು ಅಭೂತಪೂರ್ವ ತಂತ್ರಜ್ಞಾನಗಳನ್ನು (Technology) ಬಳಸಿಕೊಂಡಿದೆ, ಮೆಟಾ ಕೇವಲ ಲಾಭ ಗಳಿಸುವ ಉದ್ದೇಶ ಹೊಂದಿದೆ' ಎಂದು ದೂರಿನಲ್ಲಿ ತಿಳಿಸಲಾಗಿದೆ. ಇತರ ಎಂಟು ಯುಎಸ್ ರಾಜ್ಯಗಳು ಮತ್ತು ವಾಷಿಂಗ್ಟನ್, ಡಿಸಿ ಮಂಗಳವಾರ ಮೆಟಾ ವಿರುದ್ಧ ಇದೇ ರೀತಿಯ ಮೊಕದ್ದಮೆಗಳನ್ನು ದಾಖಲಿಸುತ್ತಿವೆ.
ಮೆಟಾದಿಂದ ಹೊಸ ಫೀಚರ್: ಇನ್ಮೇಲೆ ವಾಟ್ಸಾಪ್ ಕಾಲ್ ಸುರಕ್ಷತೆ ಬಗ್ಗೆ ತಲೆಕೆಡಿಸ್ಕೋಬೇಡಿ!
ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕ್ ಸೇರಿದಂತೆ 33 ರಾಜ್ಯಗಳ ಅಟಾರ್ನಿ ಜನರಲ್, ಫೇಸ್‌ಬುಕ್‌ನ್ನು ಸಹ ನಿರ್ವಹಿಸುವ ಮೆಟಾ ತನ್ನ ಪ್ಲಾಟ್‌ಫಾರ್ಮ್‌ಗಳ ಅಪಾಯಗಳ ಬಗ್ಗೆ ಸಾರ್ವಜನಿಕರನ್ನು (Public) ಪದೇ ಪದೇ ದಾರಿ ತಪ್ಪಿಸುತ್ತಿದೆ. ಚಿಕ್ಕ ಮಕ್ಕಳು ಮತ್ತು ಹದಿಹರೆಯದವರನ್ನು ಉದ್ದೇಶಪೂರ್ವಕವಾಗಿ ವ್ಯಸನಕಾರಿ ಮತ್ತು ಒತ್ತಾಯದ ಸಾಮಾಜಿಕ ಮಾಧ್ಯಮಕ್ಕೆ (Social media) ಪ್ರೇರೇಪಿಸುತ್ತದೆ ಎಂದು ಹೇಳಿದರು.
ಮಕ್ಕಳನ್ನು ಸೋಷಿಯಲ್ ಮೀಡಿಯಾದಿಂದ ದೂರವಿಡೋದು ಹೇಗೆ?
ಮಕ್ಕಳನ್ನು ಗಮನಿಸುತ್ತಿರಿ: ಮಕ್ಕಳನ್ನು ಸರಿಯಾಗಿ ಗಮನಿಸುತ್ತಿದ್ದರೆ ಮಾತ್ರ ಮಕ್ಕಳು (children) ಫೋನ್ ಅಡಿಕ್ಟ್ ಆದರೆ ಗೊತ್ತಾಗುತ್ತದೆ. ಮಗು ತನ್ನ ಊಟವನ್ನು ಸಾಧ್ಯವಾದಷ್ಟು ಬೇಗ ಮುಗಿಸಲು ಪ್ರಯತ್ನಿಸುತ್ತಿರುವುದನ್ನು ಪೋಷಕರು ಗಮನಿಸಿದರೆ ಇದು ಸೋಷಿಯಲ್ ಮೀಡಿಯಾಗೆ ಅಡಿಕ್ಟ್ ಆಗಿರುವ ಮೊದಲ ಸೂಚನೆಯಾಗಿರಬಹುದು. ಈ ಸಮಸ್ಯೆಯನ್ನು ನಿಗ್ರಹಿಸಲು ನಿಮ್ಮ ಮಗು ಆನ್‌ಲೈನ್ ಬಳಸಲು ಸಮಯದ ಮಿತಿಯನ್ನು ಇರಿಸಿ.
ಸಾಮಾಜಿಕ ಮಾಧ್ಯಮದಲ್ಲಿ ಎಲ್ಲವನ್ನೂ ಬಹಿರಂಗಪಡಿಸಲು ಬಿಡಬೇಡಿ: ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚಿನ ಮಾಹಿತಿ, ಖಾಸಗಿ ವಿವರಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುವುದು ಊಹಿಸುವುದಕ್ಕಿಂತ ಹೆಚ್ಚು ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ಅನುಚಿತ ವಿಷಯಗಳನ್ನು ಪೋಸ್ಟ್ ಮಾಡುವುದರಿಂದ ಅಪಾಯಕ್ಕೆ (Danger) ಸಿಲುಕಿಸಬಹುದು. ಹೀಗಾಗಿ ಮಕ್ಕಳು ಈ ರೀತಿ ಮಾಡುವುದನ್ನು ತಪ್ಪಿಸಿ.
ನೈಜ ಜನರೊಂದಿಗೆ ಹೆಚ್ಚು ಸಂವಹನ ಮಾಡಲು ಸೂಚಿಸಿ: ಸಾಮಾಜಿಕ ಮಾಧ್ಯಮ ವ್ಯಸನದ ಅತ್ಯಂತ ಕೆಟ್ಟ ಪರಿಣಾಮವೆಂದರೆ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಬರುವ ನಿರಂತರ ಗೊಂದಲಗಳಿಂದಾಗಿ ಮಗುವಿಗೆ ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಸೈಬರ್‌ಬುಲ್ಲಿಂಗ್‌ನ ಘಟನೆಗಳು ಖಿನ್ನತೆಯ ಬೆಳವಣಿಗೆಗೆ ಕಾರಣವಾಗಬಹುದು. ಹೀಗಾಗಿ ಆನ್‌ಲೈನ್‌ಗಿಂತ ನೈಜವಾಗಿರುವ ಜನರೊಂದಿಗೆ ಹೆಚ್ಚು ಬೆರೆಯಲು ಸೂಚಿಸಿ.
ಅಶ್ಲೀಲ ವಿಡಿಯೋ ವೈರಲ್ ಮಾಡುವುದಾಗಿ 96 ಸಾವಿರ ರೂ ವಂಚಿಸಿದ ದುಷ್ಕರ್ಮಿಗಳು!
ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ: ಸಾಮಾಜಿಕ ಮಾಧ್ಯಮದಿಂದ ಮಕ್ಕಳನ್ನು ಹೊರತರಲು ಅತ್ಯುತ್ತಮ ಮಾರ್ಗವೆಂದರೆ ಮಕ್ಕಳು ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬುದನ್ನು ಪೋಷಕರು ಖಚಿತಪಡಿಸಿಕೊಳ್ಳಬೇಕು. ಇದು ಪುಸ್ತಕ ಓದುವುದು, ಸ್ನೇಹಿತರನ್ನು ಭೇಟಿ ಮಾಡುವುದು, ಒಳಾಂಗಣ ಮತ್ತು ಹೊರಾಂಗಣ ಆಟಗಳನ್ನು ಆಡುವುದು ಹೀಗೆ ಯಾವುದೇ ಚಟುವಟಿಕೆ ಆಗಿರಬಹುದು. ಮಕ್ಕಳೊಂದಿಗೆ ಸಾಕಷ್ಟು ಸಮಯ ಕಳೆಯುವುದು ಮತ್ತು ಅವರ ಅಗತ್ಯತೆಗಳು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುವುದರಿಂದ ಅವರು ಪ್ರತ್ಯೇಕತೆಯ ಭಾವನೆಯನ್ನು ಅನುಭವಿಸುವುದಿಲ್ಲ, ಇದು ಸಾಮಾಜಿಕ ಮಾಧ್ಯಮದ ಚಟವನ್ನು ತೊಡೆದುಹಾಕಲು ಉತ್ತಮ ಪರಿಹಾರವಾಗಿದೆ.