Mens Health:18 ವರ್ಷದ ನಂತರ ಹುಡುಗರು ಈ ಟೆಸ್ಟ್‌ ತಪ್ಪದೇ ಮಾಡಿಸ್ಕೊಳ್ಬೇಕು

ಆರೋಗ್ಯ ಚೆನ್ನಾಗಿರಬೇಕಾದರೆ ಆಗಾಗ ತಪಾಸಣೆ ಮಾಡಿಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಯಾವುದೇ ಕಾಯಿಲೆಯಿದ್ದರೂ ತಡವಾಗಿ ಗೊತ್ತಾಗುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಹುಡುಗರು 18 ವರ್ಷದ ನಂತರ ಕೆಲವೊಂದು ಟೆಸ್ಟ್ ಮಾಡಿಸಿಕೊಳ್ಳಲೇಬೇಕು. ಅದ್ಯಾವುದು ತಿಳಿಯಿರಿ.

Mens Health: Men Should Get These 5 tests Done After 18 Years Vin

ಆರೋಗ್ಯವೇ ಭಾಗ್ಯ. ಆರೋಗ್ಯವಿಲ್ಲದಿದ್ದರೆ ಜೀವನದಲ್ಲಿ ಯಾವ ಖುಷಿಯನ್ನು ಸಹ ಅನುಭವಿಸಲು ಸಾಧ್ಯವಿಲ್ಲ. ಹೀಗಾಗಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದುದು ಅಗತ್ಯ. ಮಹಿಳೆಯರು ಯಾವಾಗಲೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರುತ್ತಾರೆ. ಆದ್ರೆ ಪುರುಷರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದಿಲ್ಲ. ಇದರಿಂದಾಗಿ ದಿನವೂ ಹೊಸ ಹೊಸ ರೋಗಗಳು ಅವರನ್ನು ಕಾಡುತ್ತಿರುತ್ತವೆ. ಆಗಾಗ ತಪಾಸಣೆ ಮಾಡದಿರುವ ಅಭ್ಯಾಸ ಸಣ್ಣ ಆರೋಗ್ಯ ಸಮಸ್ಯೆಗಳು (Health problem) ಮತ್ತು ಗಂಭೀರ ಕಾಯಿಲೆ (Disease)ಗಳನ್ನು ಅಭಿವೃದ್ಧಿಪಡಿಸಬಹುದು. ಆಗಾಗ ಬಾಯಾರಿಕೆ, ತುರಿಕೆ, ತಲೆನೋವು (Headache), ಉಸಿರಾಟದ ತೊಂದರೆ ಮುಂತಾದ ರೋಗಲಕ್ಷಣಗಳು (Symptoms) ಸಾಮಾನ್ಯವೆನಿಸಿದರೂ ಗಂಭೀರ ಕಾಯಿಲೆಗಳ ಸೂಚನೆಯೂ ಆಗಿರಬಹುದು. ಅದಕ್ಕಾಗಿಯೇ ಕಾಯಿಲೆಗಳಿಂದ ದೂರವಿರಲು, ಕೆಲವು ವೈದ್ಯಕೀಯ ಪರೀಕ್ಷೆಗಳನ್ನು (Medical test) ಮಾಡಿಸಿ. 18 ವರ್ಷದ ನಂತರ ಪುರುಷರು ಈ 5 ವೈದ್ಯಕೀಯ ಪರೀಕ್ಷೆಗಳನ್ನು ತಪ್ಪದೇ ಮಾಡಬೇಕು. 

ರಕ್ತದ ಸಕ್ಕರೆ ಮಟ್ಟ ಪರೀಕ್ಷೆ
ಪದೇ ಪದೇ ಬಾಯಾರಿಕೆ, ತುರಿಕೆ, ಅತಿಯಾದ ಮೂತ್ರ ವಿಸರ್ಜನೆ, ಕೈಕಾಲುಗಳಲ್ಲಿ ಜುಮ್ಮೆನ್ನುವುದು ಪುರುಷರಲ್ಲಿ ಮಧುಮೇಹದ ಲಕ್ಷಣಗಳಾಗಿರಬಹುದು. ಹೆಚ್ಚಿನ ಸಂಖ್ಯೆಯ ಭಾರತೀಯ ಪುರುಷರು ಪೂರ್ವ ಮಧುಮೇಹದಿಂದ ಬಳಲುತ್ತಿದ್ದಾರೆ. ಅದರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅದಕ್ಕಾಗಿಯೇ ಪುರುಷರು (Men) ರಕ್ತದಲ್ಲಿನ ಸಕ್ಕರೆಯನ್ನು ಪರೀಕ್ಷಿಸುವುದು ಬಹಳ ಮುಖ್ಯ.

ರಕ್ತದಲ್ಲಿನ ಸಕ್ಕರೆ ಪರೀಕ್ಷೆಯನ್ನು ಯಾವಾಗ ಪಡೆಯಬೇಕು: 18 ವರ್ಷದಿಂದ 40 ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು - ಎರಡು ವರ್ಷಗಳಲ್ಲಿ 1 ಬಾರಿ, 40 ವರ್ಷದಿಂದ 65+ ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು - ವರ್ಷಕ್ಕೆ 2 ಬಾರಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಗಂಡಸರು ಇಂಥಾ ಲೈಂಗಿಕ ಸಮಸ್ಯೆ ನಿರ್ಲಕ್ಷಿಸಿದ್ರೆ ಅಪಾಯ ತಪ್ಪಿದ್ದಲ್ಲ

ರಕ್ತದೊತ್ತಡ ಪರೀಕ್ಷೆ
ಪುರುಷರಿಗೆ ಹೃದಯಾಘಾತದ ಹೆಚ್ಚಿನ ಅಪಾಯವಿದೆ. ಇದಕ್ಕೆ ಮುಖ್ಯ ಕಾರಣ ಅಧಿಕ ರಕ್ತದೊತ್ತಡ. ಅಧಿಕ ರಕ್ತದೊತ್ತಡವು ಪಾರ್ಶ್ವವಾಯು ಅಪಾಯವನ್ನು ಸಹ ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡದ ಅಪಾಯಗಳಿಂದ ಪುರುಷರು ಚಿಕ್ಕ ವಯಸ್ಸಿನಲ್ಲೇ ಸಾಯುತ್ತಿದ್ದಾರೆ.

ರಕ್ತದೊತ್ತಡ ಪರೀಕ್ಷೆಯನ್ನು ಯಾವಾಗ ತೆಗೆದುಕೊಳ್ಳಬೇಕು: 18 ವರ್ಷದಿಂದ 40 ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು - ಎರಡು ವರ್ಷಗಳಲ್ಲಿ 1 ಬಾರಿ, 40 ವರ್ಷದಿಂದ 65+ ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು - ವರ್ಷಕ್ಕೆ 2 ಬಾರಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

STD ಪರೀಕ್ಷೆ
HIV/AIDS ಅತ್ಯಂತ ಸಾಮಾನ್ಯವಾದ ಲೈಂಗಿಕವಾಗಿ ಹರಡುವ ರೋಗಗಳಲ್ಲಿ ಒಂದಾಗಿದೆ. ಸಂಭೋಗವಿಲ್ಲದೆಯೂ ಇದು ವ್ಯಕ್ತಿಯನ್ನು ಬಲಿಪಶು ಮಾಡಬಹುದು. ಆದ್ದರಿಂದ ನೀವು ಲೈಂಗಿಕತೆ (Sex)ಯನ್ನು ಹೊಂದಿರಲಿ ಅಥವಾ ಇಲ್ಲದಿರಲಿ, ನೀವು STD (Sexually transmitted infections) ಪರೀಕ್ಷೆಗೆ ಒಳಗಾಗಬೇಕು.

STD ಯಾವಾಗ ಪರೀಕ್ಷಿಸಬೇಕು: 18 ವರ್ಷದಿಂದ 40 ವರ್ಷಗಳವರೆಗೆ ಆರೋಗ್ಯವಂತ ಪುರುಷರು - ವರ್ಷದಲ್ಲಿ 1 ಬಾರಿ, 40 ವರ್ಷದಿಂದ 65+ ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು - ವರ್ಷದಲ್ಲಿ 1 ಬಾರಿ ಪರೀಕ್ಷೆ ನಡೆಸಬೇಕು,

ವೈವಾಹಿಕ ಜೀವನ ಹಾಳು ಮಾಡುತ್ತೆ ಪುರುಷರು ಮಾಡೋ ಈ ಕೆಲಸ

ಪಿಎಸ್ಎ ಪರೀಕ್ಷೆ
ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರ ಸಾವಿಗೆ ದೊಡ್ಡ ಕಾರಣಗಳಲ್ಲಿ ಒಂದಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಲು, ಪುರುಷರು ಪಿಎಸ್ಎ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇದು ರಕ್ತ ಪರೀಕ್ಷೆಯಾಗಿದ್ದು ಅದು ಕ್ಯಾನ್ಸರ್ ಬಗ್ಗೆ ಹೇಳುವ ಪ್ರಾಸ್ಟೇಟ್-ನಿರ್ದಿಷ್ಟ ಪ್ರತಿಜನಕದ ಪ್ರಮಾಣವನ್ನು ಹೇಳುತ್ತದೆ.

ಪಿಎಸ್ಎ ಪರೀಕ್ಷೆಯನ್ನು ಯಾವಾಗ ಪಡೆಯಬೇಕು: ಆರೋಗ್ಯವಂತ ಪುರುಷರು 18 ವರ್ಷದಿಂದ 40 ವರ್ಷಗಳು - ನಾಲ್ಕರಿಂದ ಐದು ವರ್ಷಗಳಲ್ಲಿ 1 ಬಾರಿ, 40 ವರ್ಷದಿಂದ 65+ ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು - ಎರಡರಿಂದ ಮೂರು ವರ್ಷಗಳಲ್ಲಿ 1 ಬಾರಿ ಟೆಸ್ಟ್ ಮಾಡಿಕೊಳ್ಳಬೇಕು.

ವೃಷಣ ಕ್ಯಾನ್ಸರ್ ಪರೀಕ್ಷೆ
ಪುರುಷರ ವೃಷಣದಲ್ಲಿ ಬರುವ ಕ್ಯಾನ್ಸರ್ ಅನ್ನು ವೃಷಣ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ವರದಿಯ ಪ್ರಕಾರ, 20 ರಿಂದ 39 ವರ್ಷ ವಯಸ್ಸಿನ ಪುರುಷರಲ್ಲಿ ಈ ಕ್ಯಾನ್ಸರ್ ಅಪಾಯವು ತುಂಬಾ ಹೆಚ್ಚಾಗಿದೆ. ಅದೇ ಸಮಯದಲ್ಲಿ, ನೀವು ವೃಷಣಗಳನ್ನು ಸ್ಪರ್ಶಿಸುವ ಮೂಲಕ ಈ ಕ್ಯಾನ್ಸರ್ನ ದೈಹಿಕ ಪರೀಕ್ಷೆಯನ್ನು ಸಹ ಮಾಡಬಹುದು. ಆದ್ದರಿಂದ, ನೀವು ಮೊದಲಿನಿಂದಲೂ ವೃಷಣ ಕ್ಯಾನ್ಸರ್ ಅನ್ನು ಪರೀಕ್ಷಿಸುತ್ತಿರಬೇಕು.

ವೃಷಣ ಕ್ಯಾನ್ಸರ್‌ಗೆ ಯಾವಾಗ ಪರೀಕ್ಷಿಸಬೇಕು: 18 ವರ್ಷದಿಂದ 40 ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು - ತಿಂಗಳಿಗೆ 1 ಬಾರಿ, 40 ವರ್ಷದಿಂದ 65+ ವರ್ಷಗಳವರೆಗೆ ಆರೋಗ್ಯವಂತ ಪುರುಷರು - ತಿಂಗಳಿಗೆ 1 ಬಾರಿ ಪರೀಕ್ಷೆ ಮಾಡಬೇಕು.

Latest Videos
Follow Us:
Download App:
  • android
  • ios