ತಂಬಾಕು ಬಳಕೆಯಿಂದಾಗುವ ದುಷ್ಪರಿಣಾಮ: ಫೆ.28ರಂದು ಬೆಂಗಳೂರಲ್ಲಿ ಮಾಧ್ಯಮ ಸಂವಾದ

ಶತಮಾನಗಳ ಹಿಂದೆ, ಮನುಕುಲದ ‘ಒಳಿತಿಗೆ’ ಎಂದು ಬಿಂಬಿಸಿಕೊಂಡು ಬಂದ ತಂಬಾಕು ಇಂದು ಜೀವಹಾನಿಕಾರಕವಾಗಿ ಪರಿಣಮಿಸಿದೆ. ಈ ಸಂಬಂಧ ತಂಬಾಕು ಬಳಕೆಯಿಂದಾದ ಪರಿಣಾಮಗಳ ಬಗ್ಗೆ ಅಪರೂಪದ ಪ್ರಕರಣಗಳ ಬಗ್ಗೆ ಮಾಧ್ಯಮ ಸಂವಾದ ಆಯೋಜನೆ. 

Media Interaction Will Be Held about Adverse Effects of Tobacco Use in Bengaluru grg

ಬೆಂಗಳೂರು(ಫೆ.25):  ಹಲವಾರು ವರ್ಷಗಳಿಂದ ಜಗತ್ತು ತಂಬಾಕು ಬಳಕೆಯಿಂದಾಗಿ ಅನೇಕ ಆರೋಗ್ಯ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ತಮಗೆ ಗೊತ್ತೇ ಇದೆ. ತಂಬಾಕು ಬಳಕೆಯು ಕ್ಯಾನ್ಸರ್‌, ಶ್ವಾಸಕೋಶ, ಹೃದಯ, ಪಿತ್ತಕೋಶದ ಕಾಯಿಲೆಗಳು ಸಹಿತ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಶತಮಾನಗಳ ಹಿಂದೆ, ಮನುಕುಲದ ‘ಒಳಿತಿಗೆ’ ಎಂದು ಬಿಂಬಿಸಿಕೊಂಡು ಬಂದ ತಂಬಾಕು ಇಂದು ಜೀವಹಾನಿಕಾರಕವಾಗಿ ಪರಿಣಮಿಸಿದೆ. ಈ ಸಂಬಂಧ ತಂಬಾಕು ಬಳಕೆಯಿಂದಾದ ಪರಿಣಾಮಗಳ ಬಗ್ಗೆ ಅಪರೂಪದ ಪ್ರಕರಣಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ, ರಾಜ್ಯ ತಂಬಾಕು ನಿಯಂತ್ರಣ ಘಟಕ, ದಿ ಯೂನಿಯನ್‌, ಮೀಡಿಯಾ ಅಲೂಮ್ನಿ ಅಸೋಸಿಯೇಷನ್‌ ಆಫ್‌ ಮಂಗಳಗಂಗೋತ್ರಿ ಫೆ. 28 ರಂದು ನಗರದ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದ ಕಾನ್ಫರೆನ್ಸ್‌ ಹಾಲ್‌ನಲ್ಲಿ ಸಂವಾದ ಆಯೋಜಿಸಿದೆ. 

ಈ ಸಂವಾದ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿಲು ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ, ರಾಜ್ಯ ತಂಬಾಕು ನಿಯಂತ್ರಣ ಘಟಕ, ದಿ ಯೂನಿಯನ್‌, ಮೀಡಿಯಾ ಅಲೂಮ್ನಿ ಅಸೋಸಿಯೇಷನ್‌ ಆಫ್‌ ಮಂಗಳಗಂಗೋತ್ರಿ ಆಹ್ವಾನ ನೀಡಿದೆ. 

ಮಕ್ಕಳಲ್ಲಿ ಹೆಚ್ಚಾಗ್ತಿರೋ ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣಗಳೇನು?

ಕರ್ನಾಟಕದ ಚಿತ್ರಣ

ಕರ್ನಾಟಕದ 7 ಕೋಟಿ ಜನಸಂಖ್ಯೆಯ ಪೈಕಿ ಶೇ 22.8 ವಯಸ್ಕರು ಅಂದರೆ ಸುಮಾರು 2.5 ರಿಂದ 3 ಕೋಟಿ ಮಂದಿ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಈ ಶೇ. 22.8% ವಯಸ್ಕರ ಪೈಕಿ, ಶೇ. 8.8 ಮಂದಿ ಧೂಮಪಾನಿಗಳು (ಬೀಡಿ, ಸಿಗರೇಟು, ಹುಕ್ಕಾ... ಬಳಕೆದಾರರು) ಮತ್ತು ಶೇ 16.3 ಮಂದಿ ಧೂಮಪಾನರಹಿತ ತಂಬಾಕು (ಹೊಗೆಸೊಪ್ಪು, ಜರ್ದಾ, ಬೀಡಾ, ಪಾನ್‌ಮಸಾಲಾದೊಂದಿಗಿನ ತಂಬಾಕು...) ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಈ ಯುವಕರಲ್ಲಿ ಹೆಚ್ಚಿನವರು ಸುಮಾರು 15 ವರ್ಷದ ವಯೋಮಾನದಲ್ಲೇ ತಂಬಾಕು ಬಳಕೆದಾರರಾಗಿದ್ದಾರೆ. ಹದಿಹರೆಯದ ಈ ಸಮುದಾಯದಲ್ಲಿ ತಂಬಾಕಿನ ಅಪಾಯಗಳ ಬಗ್ಗೆ ಅರಿವಿದ್ದೂ ಅಲಕ್ಷ್ಯ ಪ್ರವೃತ್ತಿ ಹೆಚ್ಚಾಗಿದೆ. ಹೀಗಾಗಿ ರಾಷ್ಟ್ರದ ಸಂಪತ್ತಾಗಿರುವ ಯುವಜನರ ಗುಣಮಟ್ಟವನ್ನು ಕಾಪಾಡಬೇಕಿದೆ. ಅವರು ತಂಬಾಕು ಮುಕ್ತ ಜೀವನದಿಂದ ಆರೋಗ್ಯಕರ, ಚೈತನ್ಯದಾಯಕ ಮತ್ತು ದೀರ್ಘಾವಧಿಯ ಬದುಕು ಸಾಗಿಸಬಹುದು. 

ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ, ರಾಜ್ಯ ತಂಬಾಕು ನಿಯಂತ್ರಣ ಘಟಕ, ದಿ ಯೂನಿಯನ್‌, ಮೀಡಿಯಾ ಅಲೂಮ್ನಿ ಅಸೋಸಿಯೇಷನ್‌ ಆಫ್‌ ಮಂಗಳಗಂಗೋತ್ರಿ ಸೇರಿ ತಂಬಾಕು ಮುಕ್ತ ಪೀಳಿಗೆ ಸಂಬಂಧಿಸಿದ ಮಾಧ್ಯಮ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದೇವೆ. ಮಾಧ್ಯಮಗಳ ಮೂಲಕ ತಂಬಾಕು ಬಳಕೆಯಿಂದ ದೂರವಿರಲು ಪ್ರೇರೇಪಿಸುವ ಜಾಗೃತಿ ವಿಚಾರಗಳು ಪಸರಿಸಲಿ ಎಂಬ ಉದ್ದೇಶ ನಮ್ಮದು.   
ಈ ಸಂವಾದಾತ್ಮಕ ಕಾರ್ಯಾಗಾರದಲ್ಲಿ ವಾಸ್ತವ ಉದಾಹರಣೆಗಳನ್ನು ಪರಿಣತರ ಮೂಲಕ ತಮ್ಮ ಮುಂದಿಡಲಿದ್ದೇವೆ. ತಂಬಾಕಿನಿಂದ ಬಾಧೆಗೊಳಗಾದವರು ಮತ್ತು ಅವರ ಜೀವನಶೈಲಿ - ತಂಬಾಕು ಸಂಬಂಧಿತ ಆರೋಗ್ಯ ಸಮಸ್ಯೆಗಳು (ಪ್ರಕರಣಗಳ ತೀವ್ರತೆ– ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳ ಪರಿಣತರಿಂದ ವಿಶ್ಲೇಷಣಾತ್ಮಕ ಅಧ್ಯಯನದ ವಿವರಣೆ)ಪರೋಕ್ಷ ಧೂಮಪಾನಿಗಳು (ಪ್ಯಾಸಿವ್‌ಸ್ಮೋಕರ್ಸ್‌) ಮತ್ತು ಮಕ್ಕಳು– ಅನುಭವ ಕಥನಗಳು. ನಗರ ಪ್ರದೇಶದ ಮಹಿಳೆಯರಲ್ಲಿ ತಂಬಾಕು ಸೇವನೆಯ ಹೆಚ್ಚಳ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆ ಮೇಲಾಗಿರುವ ಪರಿಣಾಮ. ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ತಂಬಾಕು ಮುಕ್ತ ಸಮಾಜದತ್ತ ಸಾಗಲು ಮಾಧ್ಯಮಗಳ ಸಲಹೆ, ಸಹಯೋಗ ಮತ್ತು ಸಹಕಾರ ಅಗತ್ಯವಾಗಿದೆ ಅಂತ ಪ್ರಕಟಣೆಯಲ್ಲಿ ತಿಳಿಸಿದೆ.

Latest Videos
Follow Us:
Download App:
  • android
  • ios