ರಾಂಚಿ(ಜು.24): ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಳವಾಗುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಾರ್ಖಂಡ್‌ ಸರ್ಕಾರ, ರಾಜ್ಯದಲ್ಲಿ ಕೋವಿಡ್‌ ಸುರಕ್ಷತಾ ನಿಯಮಗಳನ್ನು ಇನ್ನಷ್ಟುಕಠಿಣಗೊಳಿಸಲು ನಿರ್ಧರಿಸಿದೆ.

ಅದರನ್ವಯ ಯಾವುದೇ ವ್ಯಕ್ತಿ ಮಾಸ್ಕ್‌ ಧರಿಸದೇ ಹೊರಗೆ ಬಂದರೆ ಅವರಿಗೆ 1 ಲಕ್ಷ ರು. ದಂಡ ವಿಧಿಸಲಾಗುವುದು. ಇನ್ನು ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿದರೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಘೋಷಿಸಿದೆ.

50904 ಕೇಸು, 1199 ಸಾವು: ದೇಶದಲ್ಲಿ ನಿನ್ನೆ ಗರಿಷ್ಠ ಸೋಂಕು, ಸಾವು ದಾಖಲು

ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಬುಧವಾರ 439 ಹೊಸ ಸೋಂಕಿತರು ಪತ್ತೆಯಾಗುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6,682ಕ್ಕೇರಿದೆ. ಈ ಪೈಕಿ 3048 ಜನರು ಗುಣಮುಖರಾಗಿದ್ದು, 3,570 ಸಕ್ರಿಯ ಪ್ರಕರಣಗಳಿವೆ.