ಸಿಗರೇಟ್ Vs ಗಾಂಜಾ: ಯಾವುದು ತುಂಬಾ ಅಪಾಯಕಾರಿ? ಸಂಶೋಧನೆ ಹೇಳೋದೇನು?
ತಂಬಾಕು ಯಾವ ರೀತಿ ಸೇವನೆ ಮಾಡಿದ್ರೂ ಅಪಾಯಕಾರಿ. ಅದು ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಸಿಗರೇಟ್ ಹಾಗೂ ಗಾಂಜಾ ವಿಷ್ಯ ಬಂದಾಗ ಜನರು ಗಾಂಜಾ ಬೆಸ್ಟ್ ಎಂದುಕೊಳ್ತಾರೆ. ಆದ್ರೆ ಸಂಶೋಧಕರು ಹೇಳೋದೇ ಬೇರೆ.
ದುಶ್ಚಟಕ್ಕೆ ದಾಸರಾದ ಜನರಿಗೆ ಯಾವುದು ಹೆಚ್ಚು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಸಂಗತಿಯ ಅವಶ್ಯಕತೆಯಿರೋದಿಲ್ಲ. ಸಿಗರೇಟ್ ಸೇರಿದಂತೆ ತಂಬಾಕು ಪ್ಯಾಕೆಟ್ ಮೇಲೆಯೇ ಇದು ಆರೋಗ್ಯಕ್ಕೆ ಹಾನಿಕರ ಎಂದು ಬರೆದಿರಲಾಗುತ್ತದೆ. ತಂಬಾಕಿನಿಂದ ದೂರ ಇರುವಂತೆ ಜಾಹೀರಾತುಗಳನ್ನು ನೀಡಲಾಗುತ್ತದೆ. ಆದ್ರೆ ಈ ಚಟಗಳನ್ನು ಬಿಡುವವರಿಗಿಂತ ಶುರು ಮಾಡುವವರ ಸಂಖ್ಯೆಯೇ ಹೆಚ್ಚಿದೆ. ಸಿಗರೇಟು ಹಾಗೂ ಗಾಂಜಾ ಈ ಎರಡು ವಿಷ್ಯ ಬಂದಾಗ ಅನೇಕರು ಗಾಂಜಾ, ಸಿಗರೇಟಿಗಿಂತ ಕಡಿಮೆ ದುಷ್ಪರಿಣಾಮ ಬೀರುತ್ತದೆ ಎಂದುಕೊಳ್ತಾರೆ. ಇತ್ತೀಚಿನ ದಿನಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಕೆಲ ಸಂಶೋಧನೆ ಹಾಗೂ ಸಮೀಕ್ಷೆ ಕೂಡ ನಡೆದಿದೆ. ನಾವಿಂದು ಗಾಂಜಾ ಹಾಗೂ ಸಿಗರೇಟ್ ಇದ್ರಲ್ಲಿ ಯಾವುದು ಹೆಚ್ಚು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಿಮಗೆ ಹೇಳ್ತೆವೆ.
ಇತ್ತೀಚೆಗೆ ರೇಡಿಯಾಲಜಿ (Radiology) ಜರ್ನಲ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಗಾಂಜಾ (Marijuana), ಸಿಗರೇಟಿಗಿಂತ ಉತ್ತಮ ಎಂಬ ಮಾತು ಸರಿಯಲ್ಲ ಎನ್ನಲಾಗಿದೆ. ಗಾಂಜಾ ಸೇವಿಸುವವರ ಎದೆಯಲ್ಲಿ ಬಹಳಷ್ಟು ಕಫವು ರೂಪುಗೊಳ್ಳಲು ಪ್ರಾರಂಭವಾಗುತ್ತದೆ ಎಂದು ಅದ್ರಲ್ಲಿ ವಿವರಿಸಲಾಗಿದೆ. ಸಮೀಕ್ಷೆ (Survey) ಯಲ್ಲಿ ಗಾಂಜಾ ಸೇದುವವರನ್ನು ಧೂಮಪಾನ ಮಾಡುವವರು ಮತ್ತು ಕೇವಲ ತಂಬಾಕು ಸೇವನೆ ಮಾಡುವವರ ಜೊತೆ ಹೋಲಿಕೆ ಮಾಡಲಾಗಿದೆ. ಗಾಂಜಾ ಸೇದುವ 56 ಮಂದಿಯ ಎದೆಯನ್ನು ಸ್ಕ್ಯಾನ್ ಮಾಡಲಾಗಿದೆ. ಅವರ ಎದಯಲ್ಲಿ ಊತ, ಕಫ, ಗಾಳಿ ಕಾಣಿಸಿಡಿದೆ ಎಂದು ಸಂಶೋಧಕರು ಹೇಳಿದ್ದಾರೆ. ಯಾರು ಗಾಂಜಾ ಸೇದುವುದಿಲ್ಲವೋ ಅವರ ಎದೆಯನ್ನು ಕೂಡ ಸ್ಕ್ಯಾನ್ ಮಾಡಲಾಗಿತ್ತು. ಅದ್ರಲ್ಲಿ ಶೇಕಡಾ 90ರಷ್ಟು ಜನರು ಎದೆ ಸಂಪೂರ್ಣ ಸ್ವಚ್ಛವಾಗಿತ್ತು. ಗಾಂಜಾ,ಸಿ ಗರೇಟ್‌ಗಳಿಗಿಂತ ಸುರಕ್ಷಿತ ಈ ತಪ್ಪು ಕಲ್ಪನೆ ಜನರಲ್ಲಿ ಬೇರೂರಿದೆ.
ಇಷ್ಟು ಜನರ ಮೇಲೆ ನಡೆದಿದೆ ಸಂಶೋಧನೆ: ಕೆನಡಾದ ರಾಷ್ಟ್ರೀಯ ಅಂಕಿ ಅಂಶ ಕಚೇರಿಯಲ್ಲಿ ಈ ಬಗ್ಗೆ ಸಂಶೋಧನೆ ನಡೆದಿದೆ. ಸಂಶೋಧನೆಯಲ್ಲಿ 16,000 ಜನರು ಪಾಲ್ಗೊಂಡಿದ್ದರು. 2020 ರಲ್ಲಿ ನಡೆದ ಈ ಸಂಶೋಧನೆ ಪ್ರಕಾರ, 15 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ 5 ಕೆನಡಿಯನ್ನರಲ್ಲಿ ಒಬ್ಬರು ಮೂರು ತಿಂಗಳಲ್ಲಿ ಒಮ್ಮೆಯಾದ್ರೂ ಗಾಂಜಾ ಸೇದುತ್ತಿದ್ದಾರೆ. ಯುಎಸ್ ಆಲ್ಕೋಹಾಲ್ ಅಂಡ್ ಮೆಂಟಲ್ ಹೆಲ್ತ್ ಸರ್ವೀಸಸ್ ಅಡ್ಮಿನಿಸ್ಟ್ರೇಷನ್‌ನ ಡ್ರಗ್ ಕೂಡ ಈ ಬಗ್ಗೆ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆ ಪ್ರಕಾರ, ಶೇಕಡಾ 18 ಅಮೆರಿಕನ್ನರು 2020 ರಲ್ಲಿ ಒಮ್ಮೆಯಾದರೂ ಗಾಂಜಾವನ್ನು ಸೇದಿದ್ದಾರಂತೆ. ಇದ್ರಲ್ಲಿ 18 ರಿಂದ 25 ವರ್ಷ ವಯಸ್ಸಿನ ಮೂವರಿದ್ದಾರೆ. ಯುವಕರ ಸಂಖ್ಯೆಯೇ ಇದ್ರಲ್ಲಿ ಹೆಚ್ಚಿದೆ.
Benefits Of Sunlight: ದಿನದಲ್ಲಿ ಎಷ್ಟು ಗಂಟೆ ಬಿಸಿಲಿಗೆ ಮೈ ಒಡ್ಡಿದ್ರೆ ಒಳ್ಳೆದು? ಇದರಿಂದಾಗುವ ಪ್ರಯೋಜನವೇನು?
ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಗಾಂಜಾ ಚಟಕ್ಕೆ ಬಲಿಯಾಗ್ತಿದ್ದಾರೆ ಎನ್ನುವುದು ಆತಂಕದ ವಿಷ್ಯ. ಸಮೀಕ್ಷೆಯ ಪ್ರಕಾರ 12 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು ಕಾಲು ಭಾಗದಷ್ಟು ಜನರು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಗಾಂಜಾ ಸೇದುವುದು ಪತ್ತೆಯಾಗಿದೆ. ಇದು ಅವರ ಆರೋಗ್ಯವನ್ನು ಹದಗೆಡಿಸುತ್ತಿದೆ. ಗಾಂಜಾದಲ್ಲಿ ಬಳಸುವ ತಂಬಾಕು ಫಿಲ್ಟರ್ ಮಾಡದ ತಂಬಾಕಾಗಿರುವ ಕಾರಣ ಅದು ಮತ್ತಷ್ಟು ಪರಿಣಾಮ ಬೀರುತ್ತದೆ.
ಸೂರ್ಯ ಮುದ್ರೆ ಮಾಡಿ ಹಲವು ಕಾಯಿಲೆ ಗುಣಪಡಿಸ್ಕೋಬೋದು, ಹೇಗೆ ತಿಳ್ಕೊಳ್ಳಿ
ಗಾಂಜಾ ಸೇದುವ 56 ಮಂದಿಯಲ್ಲಿ ಸುಮಾರು 50 ಮಂದಿ ತಂಬಾಕನ್ನು ಸೇದುತ್ತಾರೆ. ಇದನ್ನು ಒಟ್ಟಾವಾ ಸಂಶೋಧನೆಯಲ್ಲಿ ಹೇಳಲಾಗಿದೆ. ತಂಬಾಕಿನ ಗಾಂಜಾ ಸೇವನೆ ಮಾಡುವವರ ಶ್ವಾಸಕೋಶ ಸ್ಕ್ಯಾನ್ ಮಾಡಿದಾಗ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯ ಅಪಾಯ ಅವರಲ್ಲಿ ಕಂಡು ಬಂದಿತ್ತು. ತಂಬಾಕಿನ ಗಾಂಜಾ ಸೇದುವವರು ಬಹುತೇಕ 50 ವರ್ಷ ಮೇಲ್ಪಟ್ಟವರಾಗಿದ್ದರು. ಗಾಂಜಾ ಹಾಗೂ ಸಿಗರೇಟು ಎರಡನ್ನೂ ಸೇದುವವರ ಸಂಖ್ಯೆ ಸಾಕಷ್ಟಿದೆ. ಇದು ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.