ಇತ್ತೀಚಿನ ಕೆಲ ವರ್ಷಗಳಲ್ಲಿ ವರ್ಕೌಟ್ ಮಾಡುತ್ತಾ, ಡ್ಯಾನ್ಸ್ ಮಾಡುತ್ತಾ ಇರುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗೆಯೇ ಹೈದರಾಬಾದ್‌ನಲ್ಲಿ ಹೃದಯಾಘಾತವಾಗಿ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಯುವಕನೊಬ್ಬ ಕುಸಿದುಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೈದರಾಬಾದ್: ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಯುವಕನೊಬ್ಬ ಹೃದಯಾಘಾತಗೊಂಡು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಹೈದರಾಬಾದ್‌ನ ಸಿಕಂದರಾಬಾದ್‌ನಲ್ಲಿ ನಡೆದಿದೆ. ಸಿಕಂದರಾಬಾದ್‌ನ ಲಾಲಾಪೇಟ್‌ನ ಪ್ರೊಫೆಸರ್ ಜಯಶಂಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಬ್ಯಾಡ್ಮಿಂಟನ್ ಆಡುತ್ತಿದ್ದ 39 ವರ್ಷದ ವ್ಯಕ್ತಿ ಹೃದಯಾಘಾತದಿಂದ (Heartattack) ಸಾವನ್ನಪ್ಪಿದ್ದಾರೆ. ಮೃತನನ್ನು ಮಲ್ಕಾಜ್ಗಿರಿ ಮೂಲದ ಪರಮೇಶ್ ಯಾದವ್ ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ, ಯಾದವ್ ತಮ್ಮ ಕಚೇರಿಯಿಂದ ಹಿಂದಿರುಗಿದ ನಂತರ ನಿಯಮಿತವಾಗಿ ಬ್ಯಾಡ್ಮಿಂಟನ್ ಆಡುತ್ತಿದ್ದರು. ನಿನ್ನೆ ಕೂಡ ಅವರು ಯಾವತ್ತಿನಂತೆ ಕ್ರೀಡಾಂಗಣಕ್ಕೆ (Playground) ಹೋಗಿದ್ದರು. ಅಲ್ಲೇ ಹೃದಯಾಘಾತವಾಗಿ ಕುಸಿದುಬಿದ್ದಿದ್ದಾರೆ. ತಕ್ಷಣ ಅವರನ್ನು ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದೇ ರೀತಿಯ ಘಟನೆಯಲ್ಲಿ, ಓಮನ್‌ನ ಮಸ್ಕತ್‌ನಲ್ಲಿ ಪಂದ್ಯದ ನಡುವೆ ಬ್ಯಾಡ್ಮಿಂಟನ್ ಅಂಕಣದಲ್ಲಿ ಹೃದಯ ಸ್ತಂಭನದಿಂದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಬ್ಯಾಡ್ಮಿಂಟನ್ ಪಂದ್ಯದ ವೇಳೆ ವ್ಯಕ್ತಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗಿತ್ತು.

ಮಾರ್ನಿಂಗ್‌ ವಾಕ್‌ ಮಾಡುವಾಗ ಹಾರ್ಟ್‌ಅಟ್ಯಾಕ್‌, ಅಪಾಯ ಮೊದಲೇ ತಿಳಿದುಕೊಳ್ಳೋದು ಹೇಗೆ ?

ತೆಲಂಗಾಣದಲ್ಲಿ ವರ್ಕೌಟ್ ಮಾಡುವಾಗ ಹಾರ್ಟ್‌ ಅಟ್ಯಾಕ್‌ ಆಗಿ ವ್ಯಕ್ತಿ ಸಾವು: ತೆಲಂಗಾಣದ ಸಿಕಂದರಾಬಾದ್‌ನ ಬೋಯಿನಪಲ್ಲಿ ಜಿಮ್‌ನಲ್ಲಿ ಕೆಲದಿನಗಳ ಹಿಂದೆ ವ್ಯಾಯಾಮ ಮಾಡುತ್ತಿದ್ದ 24 ವರ್ಷದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದನು. ವ್ಯಕ್ತಿ ವ್ಯಾಯಾಮ ಮಾಡುತ್ತಿದ್ದ ಸಂದರ್ಭ ಏಕಾಏಕಿ ಉಸಿರು ಬಿಗಿ ಹಿಡಿದು ನೆಲದ ಮೇಲೆ ಕುಸಿದು ಬಿದ್ದಿದ್ದಾನೆ. ಇಡೀ ಘಟನೆ ಜಿಮ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೃತನನ್ನು ವಿಶಾಲ್ ಎಂದು ಗುರುತಿಸಲಾಗಿತ್ತು. ಈತ ಮೊಂಡಾ ಮಾರುಕಟ್ಟೆ ಪ್ರದೇಶದ ಘಾನ್ಸಿ ಬಜಾರ್ ನಿವಾಸಿಯಾಗಿದ್ದಾನೆ. ಮಾತ್ರವಲ್ಲ 2020ರ ಬ್ಯಾಚ್‌ನಲ್ಲಿ ಕಾನ್‌ಸ್ಟೇಬಲ್ ಹುದ್ದೆಯನ್ನು ಪಡೆದಿದ್ದನು ಮತ್ತು ಆಸಿಫ್ ನಗರ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲ್ಪಟ್ಟಿದ್ದನು ಎಂದು ತಿಳಿದುಬಂದಿತ್ತು.

ಪೊಲೀಸರ ಪ್ರಕಾರ, ಸಿಕಂದರಾಬಾದ್‌ನ ಜಿಮ್‌ನಲ್ಲಿ ವ್ಯಾಯಾಮ (Exercise) ಮಾಡುವಾಗ ಹೃದಯ ಸ್ತಂಭನದಿಂದ ವಿಶಾಲ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಇದು ಇತ್ತೀಚಿನ ತಿಂಗಳುಗಳಲ್ಲಿ ವರದಿಯಾದ ಹಠಾತ್ ಹೃದಯ ಸಾವಿನ (Death) ಮತ್ತೊಂದು ಪ್ರಕರಣವಾಗಿದೆ.

ಡ್ಯಾನ್ಸ್ ಮಾಡುವಾಗ ಕುಸಿದುಬಿದ್ದು ವ್ಯಕ್ತಿ ಸಾವು: ಹೈದರಾಬಾದ್‌ನಿಂದ ಸುಮಾರು 200 ಕಿಮೀ ದೂರದಲ್ಲಿರುವ ನಿರ್ಮಲ್ ಜಿಲ್ಲೆಯ ಪಾರ್ಡಿ ಗ್ರಾಮದಲ್ಲಿ ಸಂಬಂಧಿಕರೊಬ್ಬರ ಮದುವೆಯ ಆರತಕ್ಷತೆಯಲ್ಲಿ 19 ವರ್ಷದ ಯುವಕ ನೃತ್ಯ ಮಾಡುವಾಗ ಕುಸಿದು ಬಿದ್ದಿದ್ದ. ಬಳಿಕ ಯುವಕ ಹೃದಯ ಸ್ತಂಭನಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾನೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಹಾರ್ಟ್ ಅಟ್ಯಾಕ್ ಆದಾಗ ನೋವಿನ ಅನುಭವ ಹೇಗಿರುತ್ತೆ? ಬದುಕುಳಿದವರು ಹೇಳಿದ್ದಿಷ್ಟು

ವರನಿಗೆ ಅರಿಶಿನ ಲೇಪಿಸುತ್ತಿದ್ದ ವೇಳೆ ಕುಸಿದುಬಿದ್ದು ವ್ಯಕ್ತಿ ಸಾವು: ಹೈದರಾಬಾದ್‌ನ ಕಾಲಾ ಪತ್ತರ್ ಪ್ರದೇಶದಲ್ಲಿ ವಿವಾಹ ಸಮಾರಂಭದ ಭಾಗವಾಗಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಸಾವನ್ನಪ್ಪಿದ್ದರು. ಮದುವೆ ಮನೆಯಲ್ಲಿ,ವರನಿಗೆ ಅರಿಶಿನ ಹಚ್ಚಲು ಬಂದ ವ್ಯಕ್ತಿ ಈ ರೀತಿ ಸಾವನ್ನಪ್ಪಿದ್ದರು. ವೈರಲ್ ಆಗುತ್ತಿರುವ ಈ ಹಳದಿ ಸಮಾರಂಭದ ವೀಡಿಯೊದಲ್ಲಿ ರಬ್ಬಾನಿ ವರನ (Groom) ಪಾದಗಳ ಮೇಲೆ ಅರಿಶಿನ ಹಚ್ಚುತ್ತಿದ್ದ. ವ್ಯಕ್ತಿ ಸಮಾರಂಭದಲ್ಲಿದ್ದ ಅತಿಥಿಗಳೊಂದಿಗೆ ನಗುತ್ತಾ ಮಾತನಾಡುತ್ತಿದ್ದರು . ಸ್ಥಳದಲ್ಲಿ ಹಾಜರಿದ್ದ ಇತರ ಅತಿಥಿಗಳು (Guests) ನಗುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಆದರೆ ನಗು ನಗುತ್ತಲೇ ಅರಿಶಿನ ಹಚ್ಚಲು ಬಾಗಿದಾಗ ಹೃದಯ ಸ್ತಂಭನ (Heart attack)ಕ್ಕೊಳಗಾಗಿ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ.

Scroll to load tweet…