Asianet Suvarna News Asianet Suvarna News

ಕಡಲೆಕಾಯಿ ತಿಂದ ಮರುಕ್ಷಣ ಯುವಕ ಸಾವು: ಏನಿದು ಅನಾಫಿಲ್ಯಾಕ್ಸಿಸ್ ರೋಗ?

ಮನುಷ್ಯನಿಗೆ ಸಾವು ಹೇಗಾದರೂ, ಯಾವಾಗದರೂ ಬರಬಹುದು. ಅದರಲ್ಲಿ ಕಡಲೆಕಾಯಿ ತಿಂದ ಮರುಕ್ಷಣವೇ ಒಬ್ಬ ಯುವಕ ಸಾಯ್ತಾನೆ ಎಂದರೆ ನಂಬಕ್ಕಾಗತ್ತ?

Man died from peanut reaction Anaphylaxis Symptoms and causes
Author
First Published Feb 4, 2024, 5:43 PM IST

ಮನುಷ್ಯನಿಗೆ ಸಾವು ಹೇಗಾದರೂ, ಯಾವಾಗದರೂ ಬರಬಹುದು. ಅದರಲ್ಲಿ ಕಡಲೆಕಾಯಿ ತಿಂದ ಮರುಕ್ಷಣವೇ ಒಬ್ಬ ಯುವಕ ಸಾಯ್ತಾನೆ ಎಂದರೆ ನಂಬಕ್ಕಾಗತ್ತ? ನಮಗೆ ಒಂದು ಬಗೆಯ ಆಹಾರ ಅಥವಾ ಸಾಮಗ್ರಿ ಹಿಡಿಸುವುದಿಲ್ಲ ಎಂದು ತಿಳಿದಿದ್ದರೂ ಕೆಲವೊಮ್ಮೆ ಚಪಲಕ್ಕೆ ಇಲ್ಲ ಗೊತ್ತಿಲದೇ ಸೇವಿಸಿ ನಮ್ಮ ಜೀವವನ್ನು ನಾವೇ ಅಪಾಯಕ್ಕೆ ಸಿಲುಕಿಸಿ ಬಿಡುತ್ತೇವೆ. ಇಂತಹ ಘಟನೆಗಳಿಂದ ಸಾಕಷ್ಟು ಜನ ಆರೋಗ್ಯಕ್ಕೆ ಅಪಾಯ ತಂದೊಡ್ಡುಕೊಂಡಿದ್ದಾರೆ ಅಥವಾ ಸಾವನ್ನೇ ಅಪ್ಪಿದ್ದಾರೆ. 

2020ರಲ್ಲಿ ಲಂಡನ್ ನಲ್ಲಿ ಜೇಮ್ಸ್ ಅಟ್ಕಿನ್ಸನ್ ಎನ್ನುವ 23 ವರ್ಷದ ಹುಡುಗ ಕಡಲೆಕಾಯಿ ಹೊಂದಿದ್ದ ಪಿಜ್ಜಾ ಸೇವಿಸಿ ಮರುಕ್ಷಣವೆ ಉಸಿರಾಟದ ತೊಂದರೆಯಿಂದ ರೆಸ್ಟೋರೆಂಟ್ನಲ್ಲಿ ಸಾವನ್ನಪ್ಪಿದ್ದ. ಈ ಹುಡುಗನಿಗೆ ಕಡಲೆಕಾಯಿಗೆ ಸಂಬಂಧ ಪಟ್ಟ ಅಲರ್ಜಿ ಇದೇ ಎಂದು ಹತ್ತು ವರ್ಷದ ಮುಂಚೆಯೇ  ತಿಳಿದಿತ್ತು. ಈ ಯುವಕ ಅಷ್ಟು ವರ್ಷಗಳ ಕಾಲ ಶಿಸ್ತು ಬದ್ದವಾಗಿ ಎಲ್ಲ ಕಡಲೆಕಾಯಿ ಮತ್ತು ಅದಕ್ಕೆ ಸಂಬಂಧ ಪಟ್ಟ ಅಡುಗೆಗಳನ್ನು ತನ್ನ ಆಹಾರದಿಂದ ದೂರವಿಟ್ಟಿದ್ದ. ಆದರೆ ದುರದೃಷ್ಟವಶಾತ್ ಹೋಟೆಲ್ನಲ್ಲಿ  ಆತ ಕಡಲೆಕಾಯಿ ಹೊಂದಿರುವ ಚಿಕನ್ ಟಿಕ್ಕಾ ಪಿಜ್ಜಾ ಸೇವಿಸಿ ಕೊನೆ ಉಸಿರೆಳೆದ. 

ಈ ಹುಡುಗನ ಸಾವಿನ ಬಗ್ಗೆ ತನಿಖೆ ನಡೆಸಿದಾಗ ಪಿಜ್ಜಾ ಸೇವಿಸಿದ ವೇಳೆ ಆತನ ದೇಹದಲ್ಲಿ ಯಾವುದೇ ರೀತಿಯ ಮದ್ಯಪಾನ ಅಥವಾ ಔಷಧಗಳು ಇರಲಿಲ್ಲ.  ಬದಲಾಗಿ ಈತ ಅನಾಫಿಲ್ಯಾಕ್ಸಿಸ್ ಎಂಬ ಗಂಭೀರ ಕಾಯಿಲೆಯಿಂದ ಸಾವಪ್ಪಿದ ಎಂದು ವರದಿಯಲ್ಲಿ ಬಹಿರಂಗವಾಗಿತ್ತು. 

ಇದನ್ನೂ ಓದಿ: 30 ವರ್ಷಕ್ಕಿಂತ ಮೇಲ್ಪಟ್ಟವರು ಮಧುಮೇಹದ ಈ ಲಕ್ಷಣಗಳನ್ನು ಎಂದಿಗೂ ಕಡೆಗಣಿಸ್ಬೇಡಿ

ಇನ್ನು ಇತ್ತೀಚೆಗೆ ಲಂಡನ್ ನಲ್ಲಿ ವಾಸಿಸುತ್ತಿದ್ದ ಭಾರತೀಯ ಮೂಲದ  ಕರಂಬೀರ್ ಚೀಮಾ ಎನ್ನುವ 13 ವರ್ಷದ ಬಾಲಕ ತನ್ನ ಶಾಲೆಯಲ್ಲಿ ಗೆಳೆಯರ ಒತ್ತಾಯದ ಮೇಲೆ ಚೀಸ್ ತಿಂದು ಉಸಿರಾಟದ ತೊಂದರೆಯಿಂದ ಸಾವನಪಿದ್ದ. ಈ ಪ್ರಕರಣದ ಬಗ್ಗೆ ಹಚ್ಚಿನ ತನಿಖೆ ನಡೆಸಿದಾಗ ಆತನ ದೇಹ ಕಡಲೆಕಾಯಿ ಬೀಜ, ಗೋಧಿ, ಡೈರಿ ಹಾಗೂ ಮೊಟ್ಟೆಗೆ ಅಲರ್ಜಿ ಹೊಂದಿತ್ತು. ಅವನ ಆಹಾರದಲ್ಲಿ ಈ ಎಲ್ಲ ಪದಾರ್ಥಗಳು ಇಲ್ಲದಿರುವ ಹಾಗೆ ಪೋಷಕರು ನೋಡಿಕೊಳ್ಳುತ್ತಿದ್ದರು. ಆದರೆ ಶಾಲೆಯಲ್ಲಿ ಗೆಳೆಯರು ಆತನಿಗೆ ಚೀಸ್ ತಿನ್ನಿಸಿದ್ದು ಆತನ ಸಾವಿಗೆ ಕಾರಣವಾಯ್ತು. ಈ ವಿಚಾರ ಗಂಭೀರ ಅಪರಾಧವಾಗಿದ್ದರಿಂದ  ಮೃತ ಬಾಲಕ ಗೆಳೆಯನನ್ನು ವಿಚಾರಣೆಗೆ ಕರೆತಂದು ಪ್ರಶ್ನಿಸಲಾಗಿತ್ತು.  

ಕಡಲೆಕಾಯಿ ಅಲರ್ಜಿ ಯಾಕೆ ಬರುತ್ತದೆ?: ಕೆಲವೊಮ್ಮೆ ನಮ್ಮ ದೇಹದಲ್ಲಿರುವ ರೋಗ ನಿರೋಧಕ ಕಡಲೆಕಾಯಿ ಪ್ರೋಟೀನ್ನನ್ನು ಅಥವಾ ಯಾವುದೇ ಪದಾರ್ಥವನ್ನು ತಪ್ಪಾಗಿ ಹಾನಿಕಾರಕ ಎಂದು ಗುರುತಿಸುತ್ತದೆ. ಹೀಗಾಗಿ ಈ ಸ್ಥಿತಿಯಲ್ಲಿದ್ದಾಗ ದೇಹಕ್ಕೆ ಆಗದೆ ಇರುವಂತಹ ಕಡಲೆಕಾಯಿಗೆ ನೇರ ಅಥವಾ ಪರೋಕ್ಷ ಸಂಪರ್ಕ ಹೊಂದಿದಾಗ  ಆ ಅಲರ್ಜಿಗೆ ಸಂಬಂದ ಪಟ್ಟ ರೋಗ ಲಕ್ಷಣಗಳು ಕಾಣಿಸಲು ಶುರುವಾಗುತ್ತದೆ.

ಇದನ್ನೂ ಓದಿ: ವಿಮಾನದಲ್ಲಿ 1500 ರೂ. ಮೌಲ್ಯದ ಕಡಲೆಕಾಯಿ ಖರೀದಿಸಿದ ಮಹಿಳೆ!

ಅನಾಫಿಲ್ಯಾಕ್ಸಿಸ್ ಎಂದರೆ ಏನು?: ಅನಾಫಿಲ್ಯಾಕ್ಸಿಸ್ ಎನ್ನುವುದು ಒಂದು ಸಾವಿಗೆ ಕಾರಣವಾಗಬಹುದಾದ ಗಂಭೀರ ಅಲರ್ಜಿಕ್ ರಿಯಾಕ್ಷನ್. ಈ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಅಲರ್ಜಿ ಇರುವ ಯಾವುದೇ ವಸ್ತುವನ್ನು ಮುಟ್ಟಿದರೆ ಅಥವಾ ಸೇವಿಸಿದ ಮರು ಕ್ಷಣದಲ್ಲೇ ಸಾವು ಸಂಭವಿಸಬಹುದು. ಇಂಥಹ ಬೆಳಕಿಗೆ ಕಾಣದಂತಹ ಸಾಕಷ್ಟು ಪ್ರಕರಣಗಳು  ಭಾರತದಲ್ಲಿಯೂ ನಡೆದಿವೆ.

ಹೀಗೆ ಯಾರಿಗೆ ಕಡಲೆಕಾಯಿ ಅಥವಾ ಕಡಲೆಕಾಯಿಂದ ತಯಾರಿಸಿದ ತಿಂಡಿಗಳು ಅಥವಾ ಬೇರೆ ಕೆಲವು ಪದಾರ್ಥವು ಅವರ ದೇಹಕ್ಕೆ ಆಗದೆ ಇದ್ದಾಗ, ಅದರಿಂದ ದೂರ ಇರುವುದು ಹಾಗೂ ಯಾರೇ ಅದನ್ನು ತಿನ್ನಲು ಒತ್ತಾಯ ಮಾಡಿದರೂ ಕೂಡ ಅದನ್ನು ನಿರಾಕರಿಸುವುದು ಕ್ಷೇಮ ಹಾಗೂ ಸುರಕ್ಷಿತ. ಹೆಚ್ಚಾಗಿ  ದೇಹಕ್ಕೆ ಅಲರ್ಜಿ ಇರುವ ಯಾವ ವಸ್ತು ಅಥವಾ  ಈ ಪದಾರ್ಥ ಹಿಡಿಸುವುದು ಹಾಗೂ ಹಿಡಿಸುವುದಿಲ್ಲ ಎನ್ನುವುದು ನಿಮ್ಮ ಗಮನದಲ್ಲಿದ್ದರೆ ಆರೋಗ್ಯವನ್ನು  ಗಟ್ಟಿಯಾಗಿ ಇಟ್ಟುಕೊಳ್ಳಬಹುದು. 

ಪಿ ಶುಭ ರಾವ್, ಬೆಂಗಳೂರು

Latest Videos
Follow Us:
Download App:
  • android
  • ios