Asianet Suvarna News Asianet Suvarna News

ವಿಶಿಷ್ಠ ಗಿನ್ನೆಸ್‌ ದಾಖಲೆ : ಆಕಾಶದೆತ್ತರದಲ್ಲಿ ಹಗ್ಗದ ಮೇಲೆ ನಡೆದ ಯುವಕ

  • ಹಗ್ಗದ ಮೇಲೆ ಆಕಾಶದೆತ್ತರದಲ್ಲಿ ನಡಿಗೆ
  • ಗಿನ್ನೆಸ್‌ ದಾಖಲೆ ಪುಟ ಸೇರಿದ ಯುವಕ
  • ಎರಡು ಬಲೂನುಗಳ ಮೇಲೆ ಹಗ್ಗ ಕಟ್ಟಿ ಸಾಧನೆ
Man Walks On a Rope Between Two Hot Air Balloons Breaks World Record akb
Author
Bangalore, First Published Apr 8, 2022, 4:51 PM IST

ಯುವಕನೋರ್ವ ಆಕಾಶದೆತ್ತರದಲ್ಲಿ ಹಾರುವ ಎರಡು ಹಾಟ್‌ ಏರ್‌ ಬಲೂನ್‌ಗಳ ಮಧ್ಯೆ ಕಟ್ಟಿದ ಹಗ್ಗದ ಮೇಲೆ ಬರಿಗಾಲಲ್ಲಿ ನಡೆಯುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾನೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ತನ್ನ ಇನ್ಸ್ಟಾಗ್ರಾಮ್‌ನಲ್ಲಿ(Instagram) ಆಗಾಗ ವಿಶ್ವ ದಾಖಲೆಯ ಹಲವು ಮನಸೆಳೆಯುವ ವೀಡಿಯೊಗಳನ್ನು ಪೋಸ್ಟ್ ಮಾಡುವುದನ್ನು ನಾವು ಆಗಾಗ್ಗೆ ನೋಡುತ್ತೇವೆ. ಇಲ್ಲಿ ಎಲ್ಲಾ ರೀತಿಯ ಅಸಾಮಾನ್ಯ ವಿಶ್ವ ದಾಖಲೆಗಳ ವಿಡಿಯೋಗಳಿವೆ. ಜನರು ನಿರ್ಭಯವಾಗಿ ತಮ್ಮ ಮಿತಿಗಳನ್ನು ಮೀರಿ ದಾಖಲೆ ಮಾಡುವ ಈ ಹಲವು ವೀಡಿಯೊಗಳನ್ನು ವೀಕ್ಷಿಸಲು ಸ್ಪೂರ್ತಿದಾಯಕವಾಗಿದೆ. ಅಂತಹ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗಿದ್ದು, ಇದರಲ್ಲಿ ವ್ಯಕ್ತಿಯೊಬ್ಬರು ಎರಡು ಬಿಸಿ ಗಾಳಿಯ ಬಲೂನ್‌ಗಳ ನಡುವೆ ಕಟ್ಟಲಾದ ಹಗ್ಗದ ಮೇಲೆ ಬರಿಗಾಲಿನಲ್ಲಿ ನಡೆದು ವಿಶ್ವದಾಖಲೆ ನಿರ್ಮಿಸಿರುವುದನ್ನು ಕಾಣಬಹುದು.

ರಾಫೆಲ್ ಜುಗ್ನೋ ಬ್ರಿಡಿ (Rafael Zugno Bridi) ಎಂಬ ಹೆಸರಿನ ವ್ಯಕ್ತಿ  1,901 ಮೀಟರ್ ಅಥವಾ ಸುಮಾರು 6,236 ಅಡಿಗಳಷ್ಟು ದೂರ ಆಕಾಶದೆತ್ತರದಲ್ಲಿ ಹಗದ್ದ ಮೇಲೆ ನಡೆದಿದ್ದಾರೆ. ಸ್ಲಾಕ್‌ಲೈನ್ ವಾಕ್ (slackline walk) ಕರೆಯಲಾಗುವ ಈ ನಡಿಗೆಯನ್ನು ನಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ವಿಡಿಯೋದಲ್ಲಿ ಒಂದು ಬೆಲೂನಿನ ತುದಿಯಿಂದ ಮತ್ತೊಂದು ಬೆಲೂನಿನ ಬಳಿಗೆ ಮಧ್ಯೆ ಕಟ್ಟಿದ ಹಗ್ಗದ ಮೇಲೆ ಬರಿಗಾಲಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು. 76 ಸಾವಿರ ಜನ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

ಒಂದು ನಿಮಿಷದಲ್ಲಿ 109 ಫಿಂಗರ್‌ ಟಿಪ್‌ ಫುಶ್ ಅಪ್ಸ್... ಗಿನ್ನೆಸ್‌ ದಾಖಲೆ ಮುರಿದ ಮಣಿಪುರಿ ಹುಡ್ಗ

ರಾಫೆಲ್ ಝುಗ್ನೋ ಬ್ರಿಡಿ ಎಂಬವರು  ಅತಿ ಹೆಚ್ಚು ಸ್ಲಾಕ್‌ಲೈನ್ ನಡಿಗೆ  1,901 ಮೀ (6,236 ಅಡಿ) ನಡೆದು ದಾಖಲೆ ನಿರ್ಮಿಸಿದ್ದಾರೆ ಎಂದು ಬರೆದು ಈ ವಿಡಿಯೋವನ್ನು ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆ ಪೋಸ್ಟ್ ಮಾಡಿದೆ. ಇದು  ನಂಬಲಾಗದಷ್ಟು ಧೈರ್ಯಶಾಲಿ ಸಾಧನೆಯಾಗಿದೆ ಎಂದು ಸಂಸ್ಥೆ ಹೇಳಿದೆ.

 

ಬ್ರೆಜಿಲ್‌ನ ಸಾಂಟಾ ಕ್ಯಾಟರಿನಾದಲ್ಲಿ (Santa Catarina) ಪ್ರಿಯಾ ಗ್ರಾಂಡೆ (Praia Grande) ಅವರು ಮಾಡಿದ  25 ಸೆ.ಮೀ ದೂರದ (1-ಇನ್) ಸ್ಲಾಕ್‌ಲೈನ್ ನಡಿಗೆ ದಾಖಲೆಯನ್ನು ಬ್ರಿಡಿ ಬರಿಗಾಲಿನಲ್ಲಿ ದಾಟಿದ್ದಾರೆ. ಬ್ರಿಡಿ ಅವರು ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ಎರಡು ಪಟ್ಟು ಎತ್ತರದಲ್ಲಿ ಈ ಸಾಧನೆ ಮಾಡಿದ್ದಾರೆ. ಫ್ಲೋಟಿಂಗ್ ಮತ್ತು ಸ್ವಾತಂತ್ರ್ಯದ ಭಾವನೆಯು ಯಾವಾಗಲೂ ನನ್ನ ಹೈಲೈನ್ ಅಭ್ಯಾಸಕ್ಕೆ ಒಂದು ದೊಡ್ಡ ಪ್ರೇರಣೆಯಾಗಿದೆ ಎಂದು ಆತ ಹೇಳಿದ್ದಾನೆ.

ದೇಹದ ಮೇಲೆ 85 ಚಮಚ ಸಿಕ್ಕಿಸಿಕೊಂಡು ಗಿನ್ನೆಸ್‌ ದಾಖಲೆ ಮಾಡಿದ ಇರಾನ್ ಭೂಪ

ಜನ ಇತ್ತೀಚೆಗೆ ದಾಖಲೆಗಾಗಿ ಏನೇನೋ ಸಾಹಸ ಮಾಡುತ್ತಿರುತ್ತಾರೆ. ಇಲ್ಲೊಬ್ಬ ಇರಾನ್‌ ಪ್ರಜೆ (Iran) ತನ್ನ ದೇಹದ ತುಂಬಾ  85 ಚಮಚಗಳನ್ನು ಬ್ಯಾಲೆನ್ಸ್‌ ಮಾಡಿ ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾನೆ. 50 ವರ್ಷದ ಅಬೋಲ್ಫಾಜ್ಲ್ ಸಬರ್ ಮೊಖ್ತಾರಿ (Abolfazl Saber Mokhtari) ತನ್ನ ದೇಹದ ಮೇಲೆ 85 ಚಮಚಗಳನ್ನು ಏಕಕಾಲದಲ್ಲಿ ನಿಲ್ಲಿಸಿ ಸಮತೋಲ ಕಾಯ್ದುಕೊಂಡಿದ್ದಾನೆ. ಇದಕ್ಕೂ ಮೊದಲು ಸ್ಪೇನ್‌ನ ಮಾರ್ಕೋಸ್ ರುಯಿಜ್ ಸೆಬಾಲೋಸ್ (Marcos Ruiz Ceballos) ಅವರು ತಮ್ಮ ದೇಹದ ಮೇಲೆ  64 ಚಮಚಗಳನ್ನು ಇರಿಸಿ ಇಂತಹ ದಾಖಲೆಯೊಂದನ್ನು ಮಾಡಿದ್ದರು. ಆದರೆ ಈಗ ಇರಾನ್‌ ಪ್ರಜೆ ಆ ದಾಖಲೆಯನ್ನು ಮುರಿದಿದ್ದಾರೆ. 

Follow Us:
Download App:
  • android
  • ios