Male Fertility : ಮಹಿಳೆಯರನ್ನು ಮಾತ್ರವಲ್ಲ ಪುರುಷರನ್ನು ಹೆಚ್ಚಾಗಿ ಕಾಡ್ತಿದೆ ಬಂಜೆತನ
ಮಕ್ಕಳಾಗ್ಲಿಲ್ಲ ಎಂದ ತಕ್ಷಣ ಮಹಿಳೆಯರನ್ನು ದೂರೋದು ಹೆಚ್ಚು. ಹಿಂದಿನ ಕಾಲ ಈಗಿಲ್ಲ ನಿಜ. ಆದ್ರೆ ಮಹಿಳೆಗೆ ಎಲ್ಲ ಪರೀಕ್ಷೆ ಮುಗಿದು,ಆಕೆ ಆರೋಗ್ಯವಾಗಿದ್ದಾಳೆ ಎಂಬುದು ಗೊತ್ತಾದ್ಮೇಲೆ,ಒತ್ತಾಯದ ಮೇರೆಗೆ ಪುರುಷರು ಪರೀಕ್ಷೆ ಮಾಡಿಸಿಕೊಳ್ತಾರೆಯೇ ಹೊರತೂ ಮೊದಲೇ ಆಸ್ಪತ್ರೆಗೆ ಹೋಗುವುದಿಲ್ಲ.ತಮಗೂ ಬಂಜೆತನ ಸಮಸ್ಯೆ ಕಾಡಬಲ್ಲದು ಎಂಬುದೇ ಅನೇಕ ಪುರುಷರಿಗೆ ತಿಳಿದಿಲ್ಲ.
ಭಾರತೀಯರಲ್ಲಿ ಬಂಜೆತನ (Infertility)ಸಮಸ್ಯೆ ಹೆಚ್ಚಾಗ್ತಿದೆ. ಮಹಿಳೆಯರಿಗೆ ಮಾತ್ರವಲ್ಲ ಪುರುಷ(Male)ರಿಗೂ ಈ ಸಮಸ್ಯೆ ಕಾಡ್ತಿದೆ. ವಿಶೇಷವೆಂದ್ರೆ ನಗರವಾಸಿ ಪುರುಷರಿಗೆ ಮಾತ್ರವಲ್ಲ ಹಳ್ಳಿಗಳಲ್ಲಿಯೂ ಜನರು ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಯುವಕರಲ್ಲಿ ಹೆಚ್ಚುತ್ತಿರುವ ಬಂಜೆತನ ಅಪಾಯಕಾರಿ ಸಂಗತಿ ಎಂದ್ರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಬಂಜೇತನ ಪರೀಕ್ಷೆ (Test )ಕೂಡ ಹೆಚ್ಚಾಗಿದ್ದು,ಇದಕ್ಕೆ ಕಾರಣ ಮಾತ್ರ ಸ್ಪಷ್ಟವಾಗಿಲ್ಲ. ಅನೇಕ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಬಂಜೇನತ ಹೆಚ್ಚಾಗಿದೆ.
ವೈದ್ಯರ (Doctor) ಪ್ರಕಾರ, ದಂಪತಿ,ಸಂತಾನೋತ್ಪತ್ತಿಗಿಂತ ಅಧ್ಯಯನ, ವೃತ್ತಿ (Career)ಜೀವನಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಹೆಚ್ಚು ವಯಸ್ಸು ಕಳೆದುಹೋಗ್ತಿದೆ. ವಯಸ್ಸು(Age) ಹೆಚ್ಚಾದಂತೆ ಫಲವತ್ತತೆ ಕಡಿಮೆಯಾಗುತ್ತದೆ. ಪುರುಷರಲ್ಲಿ ವೀರ್ಯ(Sperm)ದ ಗುಣಮಟ್ಟವು ವಯಸ್ಸಿನೊಂದಿಗೆ ಕುಸಿಯಲು ಪ್ರಾರಂಭಿಸುತ್ತದೆ. 35 ವರ್ಷದೊಳಗೆ ಗರ್ಭಧರಿಸುವುದು ಒಳ್ಳೆಯದು. ವಯಸ್ಸು ಹೆಚ್ಚಾಗ್ತಿದ್ದಂತೆ ಫಲವತ್ತತೆ ಸಮಸ್ಯೆ ಮಾತ್ರವಲ್ಲ ಮಧುಮೇಹ (Diabetes), ಅಧಿಕ ಬಿಪಿ(BP), ಬೊಜ್ಜು (Obesity )ಮತ್ತು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳು ಶುರುವಾಗುತ್ತವೆ. ಇದು ನೇರವಾಗಿ ಬಂಜೆತನಕ್ಕೆ ಕಾರಣವಾಗುತ್ತದೆ.
ಕೆಟ್ಟ ಹವ್ಯಾಸ (Bad Habits) : ಕೆಲಸ,ಕೌಟುಂಬ ನಿರ್ವಹಣೆ ಎಲ್ಲವೂ ಒತ್ತಡವನ್ನು ಹೆಚ್ಚು ಮಾಡುತ್ತಿದೆ. ಒತ್ತಡ ಕಡಿಮೆ ಮಾಡಲು ಧೂಮಪಾನಕ್ಕೆ ಜನರು ದಾಸರಾಗುತ್ತಿದ್ದಾರೆ. ಮದ್ಯ ಸೇವನೆ ಮಾಡುವವರ ಸಂಖ್ಯೆಯೂ ಸಾಕಷ್ಟಿದೆ. ಮದ್ಯಪಾನ ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದೆ. ಇದಕ್ಕೆ ಲಿಂಗ ಅಡ್ಡಿಯಾಗ್ತಿಲ್ಲ. ಪುರುಷ-ಮಹಿಳೆ ಇಬ್ಬರೂ ಮದ್ಯಪಾನ ಹಾಗೂ ಧೂಮಪಾನ ಮಾಡುವುದ್ರಲ್ಲಿ ಹಿಂದೆ ಬಿದ್ದಿಲ್ಲ. ಇವೆರಡೂ ಪುರುಷರು ಮತ್ತು ಮಹಿಳೆಯರಲ್ಲಿ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಹಾನಿಕಾರಕ ಜೀವಾಣುಗಳು ಸಂತಾನೋತ್ಪತ್ತಿ ಅಂಗಗಳನ್ನು ಹಾನಿಗೊಳಿಸುತ್ತವೆ. ವೀರ್ಯಾಣುಗಳ ಉತ್ಪಾದನೆ ಕಡಿಮೆಯಾಗುತ್ತದೆ. ಹೆಚ್ಚು ಆಲ್ಕೋಹಾಲ್ ಸೇವನೆಯಿಂದ ಪುರುಷರ ವೀರ್ಯದ ಗುಣಮಟ್ಟ ಕಡಿಮೆಯಾಗುತ್ತದೆ. ದೀರ್ಘಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು,ದೈಹಿಕ ಕೆಲಸದ ಕೊರತೆ ಮತ್ತು ನಿಯಮಿತ ಜಂಕ್, ಸಂಸ್ಕರಿಸಿದ ಮತ್ತು ಪ್ಯಾಕ್ ಮಾಡಲಾದ ಆಹಾರ ಸೇವನೆ ಕೂಡ ಬಂಜೇತನಕ್ಕೆ ಕಾರಣವಾಗುತ್ತದೆ. ಈ ಆಹಾರಗಳು ಸ್ಥೂಲಕಾಯಕ್ಕೆ ದಾರಿಮಾಡಿ ಕೊಡುತ್ತವೆ. ಸ್ಥೂಲ ಕಾಯ ಪುರುಷರ ಫಲವತ್ತತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಗರ್ಭ ಕಟ್ಟುತ್ತಿಲ್ಲವೇ? ಈ ಟಿಪ್ಸ್ ಫಾಲೋ ಮಾಡಿ..
ಒತ್ತಡ (Stress) : ಒತ್ತಡ ಪುರುಷರ ಬಂಜೆತನಕ್ಕೆ ಮುಖ್ಯ ಕಾರಣವಾಗ್ತಿದೆ. ಪುರುಷರಲ್ಲಿ ಒತ್ತಡ ಹೆಚ್ಚಾದಂತೆ ಟೆಸ್ಟೋಸ್ಟೆರಾನ್ (Testosterone) ಮಟ್ಟ ಮತ್ತು ವೀರ್ಯವನ್ನು ತಯಾರಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ವೀರ್ಯ ಗುಣಮಟ್ಟ ಕಳೆದುಕೊಳ್ಳುತ್ತದೆ. ಇದರಿಂದ ಬಂಜೆತನ ಕಾಡುತ್ತದೆ. ಫಲವತ್ತತೆಯ ಸಾಮರ್ಥ್ಯ ತಿಳಿಯಲು ಮಹಿಳೆಯರು ಮಾತ್ರವಲ್ಲ ಪುರುಷರು ವೀರ್ಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅದ್ರ ನಂತರ ಯೋಗ್ಯವಾದ ಚಿಕಿತ್ಸೆ (Treatment )ಪಡೆಯಬಹುದಾಗಿದೆ.
ಏನು ಮಾಡಬೇಕು? : ಮಕ್ಕಳಾದ ಮೇಲೂ ವೃತ್ತಿಯಲ್ಲಿ ಉನ್ನತಿ ಸಾಧಿಸಬಹುದು. ಕಮಿಟ್ಮೆಂಟ್ (Commitment) ಹೇಳುತ್ತ ಹೋದರೆ ಅದು ಮುಗಿಯುವುದಿಲ್ಲ. ಮಗು ಬೇಕೆನ್ನುವವರು ಮದುವೆ(Marriage)ಯಾದ ಒಂದೆರಡು ವರ್ಷದಲ್ಲಿಯೇ ಇದಕ್ಕೆ ಪ್ಲಾನ್ ಮಾಡುವುದು ಬಹಳ ಮುಖ್ಯ. ಮದುವೆ ಕೂಡ 35ರ ಗಡಿ ದಾಟಿದ ನಂತರ ಆಗುವುದು ಒಳ್ಳೆಯದಲ್ಲ. ವಿಳಂಬ ಮಾಡದೆ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು.
ಪುರುಷರ ಲೈಂಗಿಕ ಜೀವನಕ್ಕೆ ಮಾರಕ ಈ ಆಹಾರಗಳು
ಯಾವ ಆಹಾರ (Food) ಉತ್ತಮ :
ನಿಯಮಿತವಾಗಿ ಕೆಲ ಆಹಾರ ಸೇವಿಸಿದರೆ ಪುರುಷರ ವೀರ್ಯದ ಸಂಖ್ಯೆಯನ್ನು ಹೆಚ್ಚಿಸಬಹುದು.ದಾಳಿಂಬೆ,2. ಕುಂಬಳಕಾಯಿ ಬೀಜಗಳು,ಟೊಮೆಟೊ,ವಾಲ್ನಟ್,ಡಾರ್ಕ್ ಚಾಕೊಲೇಟ್, ಮೊಟ್ಟೆ,ಬಾಳೆಹಣ್ಣು,ಬೆಳ್ಳುಳ್ಳಿ, ಕ್ಯಾರೆಟ್ ಮತ್ತು ಪಾಲಕ ಸೇವನೆ ಮಾಡಬೇಕಾಗುತ್ತದೆ. ಡಯೆಟ್ ನಲ್ಲಿ ನಿಯಮಿತವಾಗಿ ಇವುಗಳ ಸೇವನೆ ಮಾಡುವುದರಿಂದ ವೀರ್ಯದ ಪ್ರಮಾಣ ಹೆಚ್ಚಾಗುತ್ತದೆ. ವೀರ್ಯದ ಗುಣಮಟ್ಟ ಸುಧಾರಿಸುತ್ತದೆ. ಜೊತೆಗೆ ಖಾಸಗಿ ಅಂಗ (private organ )ದ ಆಕಾರ ಹಾಗೂ ಗಾತ್ರವೂ ಸುಧಾರಿಸುತ್ತದೆ. ವಂಶಾಭಿವೃದ್ಧಿಗೆ ಮಾತ್ರವಲ್ಲದೆ ಇತರ ಪುರುಷರ ಆರೋಗ್ಯಕ್ಕೂ ಇದು ಒಳ್ಳೆಯದು.