Asianet Suvarna News Asianet Suvarna News

Malaika Arora: ಉಭಯ ಪಾದಂಗುಷ್ಟಾನ ಆಸನಾಭ್ಯಾಸದಲ್ಲಿ ಮಲೈಕಾ ಅರೋರಾ: ನೀವೂ ಟ್ರೈ ಮಾಡಿ

ಯೋಗದಿಂದ ಆರೋಗ್ಯ. ಯೋಗ ಮಾಡುವವನಿಗೆ ಯಾವ ರೋಗವಿಲ್ಲ ಎಂದು ಹಿರಿಯರು ಹೇಳುತ್ತಾರೆ. ಸಾಮಾನ್ಯವಾಗಿ ಬೆಳಗ್ಗೆ ಯೋಗ(Yoga) ಮಾಡುವವರು ದಿನವಿಡೀ ಲವಲವಿಕೆಯಿಂದ ಇರುತ್ತಾರೆ. ನಮ್ಮ ಬಹುತೇಕ ಸ್ಟಾರ್ ನಟ ನಟಿಯರು ಯೋಗ ಮಾಡುವುದರ ಮೂಲಕ ಆರೋಗ್ಯ ಕಾಯ್ದುಕೊಳ್ಳುವ ಬಗ್ಗೆ ತಮ್ಮ ಅಭಿಮಾನಿಗಳಿಗೆ ಉತ್ತಮ ಸಂದೇಶವನ್ನು ನೀಡುತ್ತಿದ್ದಾರೆ ಕೂಡ. ಅವರಲ್ಲಿ ಒಬ್ಬರು ಬಾಲಿವುಡ್‌ನ ಹಾಟ್ ಅಂಡ್ ಬೋಲ್ಡ್ ಲುಕ್ ಕ್ವೀನ್ (Bold Look Queen) ಮಲೈಕಾ ಅರೋರ (Malika Arora) ಉಭಯ ಪಾದಂಗುಷ್ಟಾನ (Ubhaya Padangusthasana) ಆಸನ ಮಾಡುವ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Malaika Arora in a new Yogasana made her fans praise
Author
First Published Nov 28, 2022, 3:15 PM IST

ನಮ್ಮ ಪ್ರಾಚೀನ ಪರಂಪರೆಯ ಆಚರಣೆ ಯೋಗ ಇಂದು ವಿಶ್ವಾದ್ಯಂತ (World Wide) ಹೆಸರಾಗಿದೆ. ಯೋಗ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ ಯೋಗ ನಮ್ಮ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಇಂದಿನ ದಿನಗಳಲ್ಲಿ ಯೋಗ ಜಗಜ್ಜಾಹೀರಾಗಿದೆ. ಇತ್ತೀಚೆಗೆ ಬಾಲಿವುಡ್ ಹಾಟ್ ಅಂಡ್ ಬೋಲ್ಡ್ ಕ್ವೀನ್ ಮಲೈಕಾ ಅರೋರ (Malaika Arora) ಯೋಗ ಮಾಡುವ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಅಲ್ಲದೆ ಆರೋಗ್ಯ ಕಾಯ್ದುಕೊಳ್ಳುವ ಬಗ್ಗೆಯೂ ಉತ್ತಮ ಸಂದೇಶವನ್ನು ನೀಡುತ್ತಿದ್ದಾರೆ. ತಮ್ಮ ಜಿಮ್‌ನಲ್ಲಿ(Gym) ಕಠಿಣ ಯೋಗಾಭ್ಯಾಸ ಮಾಡುವ ಮೂಲಕ ಪೋಸ್ಟರ್(Poster) ಹಂಚಿಕೊಂಡಿದ್ದಾರೆ. 

ಮಲೈಕಾ ಅರೋರ ವಾರದಲ್ಲಿ ಬಹುತೇಕ ದಿನಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಸಹ ಜಿಮ್‌ಗೆ ಹೋಗುವುದು ಬಿಡುವುದಿಲ್ಲ. ಬಿಡುವು ಮಾಡಿಕೊಂಡಾದರೂ ಜಿಮ್ ಹೋಗುತ್ತಾರೆ. ಫಿಟ್(Fit) ಆದ ದೇಹ ಮತ್ತು ಆರೋಗ್ಯಕರ ಜೀವನಶೈಲಿಗೆ(Healthy Lifestyle) ಹೆಸರುವಾಸಿಯಾಗಿರುವ ಮಲೈಕಾ ಅನೇಕರಿಗೆ ಸ್ಫೂರ್ತಿ ನೀಡಿದ್ದಾರೆ. ಇತ್ತೀಚೆಗೆ ಅವರು ತಮ್ಮ ಜಿಮ್‌ನಲ್ಲಿ ಬಿಗ್ ಟೋ ಪೋಸ್(Toe Pose) ಅಥವಾ ಉಭಯ ಪಾದಂಗುಷ್ಟಾನ (Ubhaya Padangushtasana) ಎಂಬ ಬ್ಯಾಲೆನ್ಸಿಂಗ್(Balancing) ಭಂಗಿಯೊAದನ್ನು ಮಾಡುತ್ತಿರುವ ಪೋಸ್ಟ್ ಅನ್ನು ತಮ್ಮ ಇನ್‌ಸ್ಟಾದಲ್ಲಿ(Instagram) ಪೋಸ್ಟ್ ಮಾಡಿದ್ದಾರೆ. ಈ ಉಭಯ ಪಾದಂಗುಷ್ಟಾನ ಆಸನ ಮಾಡುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭವಿದೆ? ಹೇಗೆ ಮಾಡುವುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಉಭಯ ಪಾದಂಗುಷ್ಟಾನ ಆಸನ (Ubhaya Padangushtasana): ಉಭಯ ಪಾದಂಗುಷ್ಟಾನ ಆಸನ ಕುಳಿತು ಮಾಡುವ ಆಸನವಾಗಿದೆ. ಮೊದಲು ಒಂದು ಯೋಗ ಮ್ಯಾಟ್(Yoga Mat) ಅಥವಾ ಚಾಪೆಯ ಮೇಲೆ ಕುಳಿತುಕೊಳ್ಳಬೇಕು. ಎರಡೂ ಕಾಲಿನ ಮೊಣಕಾಲುಗಳನ್ನು(Knees) ಬಗ್ಗಿಸಿ ಮತ್ತು ದೊಡ್ಡ ಕಾಲ್ಬೆರಳು ಅಥವಾ ಹೆಬ್ಬೆರಳನ್ನು ಹಿಡಿದುಕೊಳ್ಳಿ. ನಂತರ ದೇಹವನ್ನು V ಆಕಾರವನ್ನು(V-Shape) ಪಡೆದುಕೊಳ್ಳಲು ನಿಮ್ಮ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಬೆನ್ನನ್ನು ನೇರವಾಗಿಸಿ, ಕೋರ್ ಸ್ನಾಯುಗಳನ್ನು(Core Muscles) ತೊಡಗಿಸಿಕೊಳ್ಳುವ ಮೂಲಕ ಪಾದಗಳನ್ನು ಬಗ್ಗಿಸಬೇಕು. ಹಾಗೂ ಕೈಗಳಿಂದ ಕಾಲ್ಬೆರಳುಗಳನ್ನು ಹಿಡಿದಿಟ್ಟುಕೊಂಡಿರಲೇಬೇಕು. ಅಂದರೆ ಎರಡೂ ಕಾಲುಗಳನ್ನು ಹಿಡಿದುಕೊಂಡು 60 ಡಿಗ್ರಿ ಆಯಂಗಲ್‌ನಲ್ಲಿ(Angles) ಮೇಲಕೆತ್ತಬೇಕು.

Malaika Arora Fitness Secrets: ಬಯಲಾಯ್ತು ಮಲೈಕಾ ತ್ವಚಾ ಸೌಂದರ್ಯದ ಗುಟ್ಟು

ಪ್ರಯೋಜನಗಳು(Benefits): ಅಭ್ಯಾಸದೊಂದಿಗೆ, ಈ ಸುಂದರವಾದ ಭಂಗಿಯು ಮನಸ್ಸು ಮತ್ತು ದೇಹದ ಆಳವಾದ ಸಂಪರ್ಕವನ್ನು ತರುತ್ತದೆ. ಉಸಿರಾಟವನ್ನು ಮೃದು(Smoothen Respiration) ಮತ್ತು ವಿನಮ್ರ ವೇಗಕ್ಕೆ ತರುತ್ತದೆ. ಈ ಭಂಗಿಯ ಪ್ರಯೋಜನ ಪಡೆಯಲು ಮೊದಲು ದೇಹಕ್ಕೆ(Body) ಮತ್ತು ನಂತರ ಮನಸ್ಸಿಗೆ ತರಲು ಅದೇ ಪುನರಾವರ್ತಿತ ಅಭ್ಯಾಸ ಅತ್ಯಗತ್ಯ. ಆರೋಗ್ಯದ ಮೇಲಾಗುವ ಇತರೆ ಪ್ರಯೋಜನಗಳು. 

1. ಸ್ನಾಯುಗಳನ್ನು ಹಿಗ್ಗಿಸುತ್ತೆ(Stretches Muscles): ಹಿಪ್‌ನಿಂದ(Hip) ಸಂಪೂರ್ಣ ಕಾಲಿನ ಸ್ನಾಯುಗಳು ಮತ್ತು ಭುಜದಿಂದ ತೋಳಿನ ಸ್ನಾಯುಗಳು ಗರಿಷ್ಠವಾಗಿ ವಿಸ್ತರಿಸಲ್ಪಡುತ್ತವೆ.
 
2. ಎದೆ ಮತ್ತು ಭುಜಗಳನ್ನು ತೆರೆಯುತ್ತದೆ(Opens up Chest and Shoulders): ಈ ಭಂಗಿಯು ಎದೆ ಮತ್ತು ಭುಜಗಳನ್ನು ಸುಂದರವಾದ ರೀತಿಯಲ್ಲಿ ತೆರೆಯುತ್ತದೆ. ಈ ಭಂಗಿಯನ್ನು ಹಿಡಿದಿಟ್ಟುಕೊಳ್ಳುವುದರಿಂದ ಸರಳ ಸಂತೋಷವನ್ನು ನೀಡುತ್ತದೆ.

3. ಬೆನ್ನುಮೂಳೆಯನ್ನು ಹಿಗ್ಗಿಸುತ್ತದೆ ಮತ್ತು ಬೆನ್ನುನೋವುಗಳನ್ನು ನಿವಾರಿಸುತ್ತದೆ(Stretches Spine and Relieves Backaches): ಸಂಪೂರ್ಣ ಬೆನ್ನುಮೂಳೆಯನ್ನು ಹಿಗ್ಗಿಸುವ ಮೂಲಕ ಈ ಯೋಗಾಸನವು ಬೆನ್ನುನೋವುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಬೆನ್ನುಮೂಳೆಯ ಸುತ್ತಲಿನ ಸ್ನಾಯುಗಳನ್ನು  ಸರಾಗವಾಗಿ ಸಾಗಿಸಲು ಸಹಾಯ ಮಾಡುತ್ತದೆ.

4. ದೇಹದ ನಮ್ಯತೆಯನ್ನು ಸುಧಾರಿಸುತ್ತದೆ(Improves Flexibility of the Body): ಸಂಪೂರ್ಣ ಬೆನ್ನುಮೂಳೆ, ಕಾಲುಗಳು ಮತ್ತು ತೋಳುಗಳನ್ನು ವಿಸ್ತರಿಸುವುದರಿಂದ ದೇಹದ ನಮ್ಯತೆಯನ್ನು ಸುಧಾರಿಸುತ್ತದೆ.

5. ನರಮಂಡಲವನ್ನು ಉತ್ತೇಜಿಸುತ್ತದೆ(Stimulates Nervous System): ಈ ಭಂಗಿಯು ನರಮಂಡಲವನ್ನು ಉತ್ತೇಜಿಸುತ್ತದೆ. ಅಲ್ಲದೆ ಮೆದುಳಿಗೆ(Brain) ತಾಜಾ ಆಮ್ಲಜನಕವನ್ನು(Oxygen) ಒದಗಿಸುತ್ತದೆ ಮತ್ತು ಮೆದುಳನ್ನು ಹೆಚ್ಚು ಸಕ್ರಿಯವಾಗಿರಿಸುತ್ತದೆ. 

6. ಕೋರ್ ಅನ್ನು ಬಲಪಡಿಸುತ್ತದೆ(Strengthens Core): ಈ ಭಂಗಿಯು ಕೋರ್ ಅನ್ನು ಬಲಪಡಿಸುತ್ತದೆ. ಈ ಪ್ರಮುಖ ಶಕ್ತಿಯು ಕುಳಿತುಕೊಳ್ಳುವ ಮೂಳೆಗಳ ಮೇಲೆ ದೇಹವನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಸಮತೋಲನಗೊಳಿಸುತ್ತದೆ. ಕಿಬ್ಬೊಟ್ಟೆಯ ಸ್ನಾಯುಗಳ ಬಿಗಿತವು ಹೊಟ್ಟೆಯನ್ನು ಟೋನ್ ಮಾಡುತ್ತದೆ ಮತ್ತು ಕೋರ್ ಬಲಗೊಳ್ಳುತ್ತದೆ. 

7. ಒತ್ತಡವನ್ನು ನಿವಾರಿಸುತ್ತದೆ(Relieves Stress): ಈ ಭಂಗಿಯ ಮುಖ್ಯ ಗುರಿಯೇ "ಸಮತೋಲನ(Balance)'. ಇದು ವಾಸ್ತವವಾಗಿ ದೇಹ ಮತ್ತು ಮನಸ್ಸಿನ ನಡುವಿನ ಸಂಪರ್ಕದಿAದ ಬರುತ್ತದೆ. ಮನಸ್ಸಿನ ಏಕಾಗ್ರತೆಯನ್ನು(Concentration) ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ.

Follow Us:
Download App:
  • android
  • ios