Asianet Suvarna News Asianet Suvarna News

Lose Weight: ತೂಕ ಇಳಿಸ್ಬೇಕಾ? ಅನಾನಸ್ ಗ್ರೀನ್ ಟೀ ಟ್ರೈ ಮಾಡಿ

ಅನಾನಸ್ ಕೆಲವರಿಗೆ ಇಷ್ಟವಾಗುವ ಹಣ್ಣು. ಮತ್ತೆ ಕೆಲವರು ದೇಹದ ಉಷ್ಣತೆ ಹೆಚ್ಚು ಮಾಡುತ್ತೆ ಎನ್ನುವ ಕಾರಣ ನೀಡಿ ಅದನ್ನು ದೂರವಿಡ್ತಾರೆ. ಆದ್ರೆ ಅನಾನಸ್ ಸಾಕಷ್ಟು ಆರೋಗ್ಯಕರ ಹಣ್ಣು. ಬೇಗ ಕೊಬ್ಬು ಕರಗ್ಬೇಕೆಂದ್ರೆ ಅದನ್ನು ತಿನ್ಲೇಬೇಕು.
 

Lose Weight With Pineapple Green Tea Here Are The Benefits And Recipe
Author
First Published May 22, 2023, 4:31 PM IST

ಕೊರೊನಾ ನಂತ್ರ ಜನರು ಮತ್ತಷ್ಟು ಎಚ್ಚೆತ್ತುಕೊಂಡಿದ್ದಾರೆ. ಆರೋಗ್ಯ ಹಾಗೂ ತೂಕದ ಬಗ್ಗೆ ಜನರು ಎಚ್ಚರಿಕೆವಹಿಸ್ತಿದ್ದಾರೆ. ಆದ್ರೆ ತೂಕ ಮಾತ್ರ ಇಳಿಯುತ್ತಿಲ್ಲ ಎನ್ನುವವರೇ ಹೆಚ್ಚು. ಒಂದೇ ಸಮನೆ ಕೊಬ್ಬು ಏರಿಕೆಯಾಗ್ತಿದ್ದರೆ ನಿಮ್ಮ ಡಯಟ್ ನಲ್ಲಿ ಅನಾನಸ್ ಹಣ್ಣನ್ನು ಸೇರಿಸಬಹುದು. ನೀವು ಅನಾನಸ್ (Pineapple) ಹಣ್ಣನ್ನು ಸಲಾಡ್ (Salad) ರೂಪದಲ್ಲಿ ಅಥವಾ ಜ್ಯೂಸ್ ರೂಪದಲ್ಲಿ ಸೇವನೆ ಆಡಬಹುದು. ಅನಾನಸ್ ಅನೇಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪರಿಣಾಮಕಾರಿ. ಅನಾನಸ್ ಹಣ್ಣಿನಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ದೇಹಕ್ಕೆ ಅನೇಕ ಪೋಷಕಾಂಶ (Nutrient) ಗಳನ್ನು ಅನಾನಸ್ ನೀಡುತ್ತದೆ. ತೂಕ ಇಳಿಕೆಗೆ ಕೂಡ ಇದು ಸಹಕಾರಿ. ನಾವಿಂದು ಅನಾನಸ್ ಪ್ರಯೋಜನ ಹಾಗೂ ಅನಾನಸ್ ಗ್ರೀನ್ ಟೀ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ. 

HEALTH TIPS: ಇವರೆಲ್ಲ ಸೇಬು ಹಣ್ಣಿನ ಸೇವನೆ ಮಾಡ್ಬೇಡಿ

ಒಂದು ಕಪ್ ಅನಾನಸ್‌ನಲ್ಲಿ ಏನೆಲ್ಲ ಇದೆ ಗೊತ್ತಾ?  : 82 ಕ್ಯಾಲೋರಿಗಳು, 0.2 ಗ್ರಾಂ ಕೊಬ್ಬು, ಕೊಲೆಸ್ಟ್ರಾಲ್ 0 ಗ್ರಾಂ, 2 ಮಿಗ್ರಾಂ ಸೋಡಿಯಂ, 21.65 ಗ್ರಾಂ ಕಾರ್ಬೋಹೈಡ್ರೇಟ್ ಗಳು ಮತ್ತು 0.89 ಗ್ರಾಂ ಪ್ರೋಟೀನ್ ಇದ್ರಲ್ಲಿರುತ್ತದೆ. 

ಅನಾನಸ್ ಗ್ರೀನ್ ಟೀ ತಯಾರಿಸುವ ವಿಧಾನ : 
ಅನಾನಸ್ ಗ್ರೀನ್ ಟೀಗೆ ಬೇಕಾಗುವ ಪದಾರ್ಥ :
2 ರಿಂದ 3 ಟೀಸ್ಪೂನ್ ಸಣ್ಣದಾಗಿ ಕೊಚ್ಚಿದ ಅನಾನಸ್. ಅರ್ಥ ಚಮಚ ಶುಂಠಿ ತುಂಡುಗಳು, ದಾಲ್ಚಿನ್ನಿ ಪುಡಿ ಅರ್ಧ ಟೀಚಮಚ, ಅರಿಶಿನ ಪುಡಿ 1 ಚಮಚ. ಒಂದು ಚಮಚ ಗ್ರೀನ್ ಟೀ ಎಲೆಗಳು ಮತ್ತು ನೀರು ಒಂದು ಲೀಟರ್.

ಅನಾನಸ್ ಗ್ರೀನ್ ಟೀ ಮಾಡುವ ವಿಧಾನ : ಒಂದು ಜಗ್ ತೆಗೆದುಕೊಂಡು ಅದರಲ್ಲಿ ಕತ್ತರಿಸಿದ ಅನಾನಸ್, ಅರಿಶಿನ ಪುಡಿ, ದಾಲ್ಚಿನ್ನಿ ಪುಡಿ ಮತ್ತು ಶುಂಠಿ ತುಂಡುಗಳನ್ನು ಹಾಕಿ. ಇದಕ್ಕೆ ಗ್ರೀನ್ ಟೀ ಎಲೆಯನ್ನು ಹಾಕಬೇಕು. ನಂತ್ರ ಬಿಸಿ ನೀರನ್ನು ಜಗ್ ಗೆ ಹಾಕಿ. ನಂತ್ರ ಜಗ್ ಮುಚ್ಚಿ ರಾತ್ರಿಪೂರ್ತಿ ಹಾಗೆ ಇಡಿ. ಆರರಿಂದ 8 ಗಂಟೆಗಳ ಕಾಲ ಹಾಗೆಯೇ ಇಟ್ಟು, ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಇದನ್ನು ಸ್ವಲ್ಪ ಬಿಸಿ ಮಾಡಿ ಕುಡಿಯಿರಿ.  ದಿನಕ್ಕೆ 2 ರಿಂದ 3 ಕಪ್ ಅನಾನಸ್ ಟೀ ಚಹಾವನ್ನು ಕುಡಿಯಬಹುದು.

ಸಮ್ಮರ್ ವೆಕೇಷನ್‌ನಲ್ಲಿ ತೂಕ ಹೆಚ್ಚಾಗೋ ಭಯಾನ? ಈ ಹಾಲಿಡೇ ವರ್ಕೌಟ್‌ ಮಾಡಿ

ಅನಾನಸ್ ಗ್ರೀನ್ ಟೀಯಿಂದಾಗುವ ಲಾಭಗಳು : 

ನಿರ್ಜಲೀಕರಣಕ್ಕೆ ಪರಿಹಾರ : ಪ್ರತಿನಿತ್ಯವೂ ಅನಾನಸ್ ಗ್ರೀನ್ ಟೀ ಸೇವನೆ ಮಾಡೋದ್ರಿಂದ ದೇಹದಲ್ಲಿ ನೀರಿನ ಕೊರತೆ ಕಾಡುವುದಿಲ್ಲ. ಅನಾನಸ್ ಶೇಕಡಾ 86 ರಷ್ಟು ನೀರಿನಲ್ಲಿ ಸಮೃದ್ಧವಾಗಿರುವುದಲ್ಲದೆ  ಅನೇಕ ಜೀವಸತ್ವಗಳು ಮತ್ತು ಖನಿಜಗಳು ಇದ್ರಲ್ಲಿ ಕಂಡುಬರುತ್ತವೆ.

ಹಸಿವನ್ನು ತಡೆದು ತೂಕ ನಿಯಂತ್ರಣ : ಅನಾನಸ್ ಗ್ರೀನ್ ಟೀ ಸೇವನೆ ಮಾಡಿದ್ರೆ ಅಥವಾ ಅನಾನಸ್ ಹಣ್ಣನ್ನು ನೀವು ಸೇವನೆ ಮಾಡಿದ್ರೆ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಒಂದು ಕಪ್ ಅನಾನಸ್ ನಲ್ಲಿ 2.3 ಗ್ರಾಂ ಫೈಬರ್ ಇರುವ ಕಾರಣ ಬೇಗ ಹಸಿವಾಗುವುದಿಲ್ಲ.  ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಇದು ಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಗೆ ಮುಕ್ತಿ ನೀಡುತ್ತದೆ.   ಫಲವತ್ತತೆಗೆ ಬೆಸ್ಟ್ : ಆಂಟಿಆಕ್ಸಿಡೆಂಟ್ ಸಮೃದ್ಧವಾಗಿರುವ ಅನಾನಸ್ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ. ಅಲ್ಲದೆ ಅನಾನಸ್ ನಲ್ಲಿರುವ ಆಂಟಿ ಆಕ್ಸಿಡೆಂಟ್ಗಳು, ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ.  

ಅಸ್ತಮಾ ರೋಗಕ್ಕೆ ಒಳ್ಳೆಯದು : ಅನಾನಸ್‌ನಲ್ಲಿ ಕಂಡುಬರುವ ಬ್ರೊಮೆಲಿನ್ ಅಸ್ತಮಾದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಅಸ್ತಮಾ ಸಮಯದಲ್ಲಿ ಶ್ವಾಸನಾಳದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕಣ್ಣಿನ ಪೊರೆ ತಪ್ಪಿಸುತ್ತೆ ಅನಾನಸ್ ಗ್ರೀನ್ ಟೀ : ಅನಾನಸ್‌ನಲ್ಲಿರುವ ವಿಟಮಿನ್ ಸಿ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಕಣ್ಣಿನ ಪೊರೆಗಳ ಅಪಾಯವನ್ನು ತಪ್ಪಿಸುತ್ತದೆ. 

Follow Us:
Download App:
  • android
  • ios