ಕೆಲವೊಬ್ಬರಿಗೆ ಮಲಗಿ ಎಷ್ಟು ಹೊತ್ತಾದ್ರೂ ನಿದ್ದೇನೆ (Sleep) ಬರಲ್ಲ. ಸುಮ್ನೆ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ಹೊರಳಾಡ್ತಾ ಒದ್ದಾಡ್ರಾ ಇರ್ತಾರೆ. ನಿಮ್ಗೂ ಇದೇ ಸಮಸ್ಯೆನಾ (Problem). ಹಾಗಿದ್ರೆ ಈಝಿಯಾಗಿ 8 ನಿಮಿಷದಲ್ಲಿ ನಿದ್ದೆ ಮಾಡೋ ಟ್ರಿಕ್ಸ್ (Tricks) ನಾವ್ ಹೇಳಿ ಕೊಡ್ತೀವಿ.
ಮನುಷ್ಯನ ಆರೋಗ್ಯ (Health) ಚೆನ್ನಾಗಿರಬೇಕಾದರೆ ದಿನಕ್ಕೆ 8ರಿಂದ 9 ಗಂಟೆ ನಿದ್ದೆ (Sleep) ಆಗಲೇಬೇಕು. ಸರಿಯಾಗಿ ನಿದ್ದೆ ಆಗಿಲ್ಲಾಂದ್ರೆ ಒಂದಲ್ಲ ಎರಡಲ್ಲ ನೂರಾರು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಆದ್ರೆ ಬೇಗ ಮಲಗಿದ್ರೂ ನಿದ್ದೆ ಬರದೇ ಇರೋದು ಹಲವರು ಎದುರಿಸೋ ಸಮಸ್ಯೆ. ಸುಮ್ನೆ ಮೊಬೈಲ್, ಟಿವಿ ನೋಡ್ತಾ, ಅತ್ತಿತ್ತ ಹೊರಳಾಡ್ತಾ ಸಮಯ (Time) ಕಳೆಯಬೇಕಾಗುತ್ತೆ. ಮರುದಿನ ಸರಿಯಾಗಿ ನಿದ್ದೆಯಾಗದ ಕಾರಣ ಕಣ್ಣು ಉರಿಯೋಕೆ ಶುರುವಾಗುತ್ತೆ. ಹಾಗಿದ್ರೆ ಮಲಗಿದ ಕೆಲವೇ ನಿಮಿಷಗಳಲ್ಲಿ ನಿದ್ದೆ ಬರಲು ಏನ್ ಮಾಡ್ಬೇಕು. ಇಲ್ಲಿದೆ ಸಿಂಪಲ್ ಆಂಡ್ ಈಝಿ ಟ್ರಿಕ್ಸ್ (Tricks).
ಸರಿಯಾಗಿ ನಿದ್ರೆ (Sleep) ಬಂದ್ರೆ ಇಡೀ ದಿನ ಚೆನ್ನಾಗಿರುತ್ತದೆ. ಆರೋಗ್ಯಕ್ಕೆ ನಿದ್ದೆಗಿಂತ ಉತ್ತಮವಾದದ್ದು ಯಾವುದೂ ಇಲ್ಲ. ಕೆಲಸ (Work) ದ ಒತ್ತಡದಲ್ಲಿ ನಾವು ಸರಿಯಾದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದಿಲ್ಲ. ಇದ್ರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. ಇದ್ದಕ್ಕಿದ್ದಂತೆ ಮಧ್ಯರಾತ್ರಿ ನಿದ್ರೆಯಿಂದ ಎಚ್ಚರವಾಗುತ್ತದೆ. ಯಾಕೋ ರಾತ್ರಿ ಸರಿಯಾಗಿ ನಿದ್ದೆ ಬರ್ತಿಲ್ಲ. ಇದ್ರಿಂದ ಕೆಲಸ ಮಾಡಲು ಆಗ್ತಿಲ್ಲ ಅಂತಾ ನಾವು ಹೇಳ್ತೇವೆ. ಆದ್ರೆ ಈ ನಿದ್ರೆ ಸಮಸ್ಯೆ ನಿಮಗೆ ಮಾತ್ರವಲ್ಲ, ಇನ್ನೂ ಅನೇಕರಿಗೆ ಈ ಸಮಸ್ಯೆ ಕಾಡ್ತಿದೆ ಅಂದ್ರೆ ನೀವು ನಂಬ್ಲೇಬೇಕು. ಚಿಕ್ಕ ವಯಸ್ಸಿನವರು ಹಾಸಿಗೆಗೆ ಬಿದ್ದ ಕೂಡಲೇ ನಿದ್ರೆಗೆ (Sleep) ಜಾರಿದರೆ, ವಯಸ್ಸಾದವರು ಆಕಳಿಸುತ್ತಾ, ಕೆಮ್ಮುತ್ತಾ, ನರಳುತ್ತಾ ರಾತ್ರಿ (Night) ಕಳೆಯೋದು ನೋಡಿರುತ್ತೇವೆ. ಹೀಗಾಗಿ ಸುಲಭವಾಗಿ ನಿದ್ದೆ ಮಾಡುವುದು ಹೇಗೆ ಅನ್ನೋ ಟ್ರಿಕ್ ಎಲ್ಲರಿಗೂ ಉಪಯೋಗಕ್ಕೆ ಬರೋದು ಖಂಡಿತ.
ನೈಟ್ಶಿಫ್ಟ್ನಲ್ಲಿ ಕೆಲಸ ಮಾಡುವವರ ಆಹಾರಕ್ರಮ ಹೀಗಿದ್ದರೆ ಆರೋಗ್ಯವಾಗಿರ್ಬೋದು
ಸರಳವಾದ ಈ ಟ್ರಿಕ್ಸ್‌ನ್ನು ಯೂಸ್ ಮಾಡೋದ್ರಿಂದ ನೀವು ಅತ್ಯುತ್ತಮ ನಿದ್ದೆಯನ್ನು ಪಡೀಬೋದು. ನಿಕ್ ಎಂಬವರು ಟಿಕ್‌ಟಾಕ್‌ನಲ್ಲಿ ಈ ಟ್ರಿಕ್ ಅನ್ನು ಹಂಚಿಕೊಂಡಿದ್ದಾರೆ. ಇದು ಅತ್ಯುತ್ತಮ ನಿದ್ದೆಗೆ ಸಹಕರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ನೀವು ಸುಸ್ತಾಗಿದ್ದರೂ 10 ನಿಮಿಷಗಳಿಗಿಂತ ಕಡಿಮೆ ಸಮಯವನ್ನು ಹೊಂದಿದ್ದರೆ, ಈ ಹ್ಯಾಕ್ (Hack)ನಿಮ್ಮ ರಕ್ಷಣೆಗೆ ಬರುತ್ತದೆ ಎಂದು ನಿಕ್ ವಿವರಿಸಿದರು.
ನೀವು ದಣಿದಿರುವಾಗ ನೀವು ಬೇಗ ಮಲಗಬೇಕೆಂದು ಬಯಸುತ್ತೀರಿ. ಇಂಥಾ ಸಂದರ್ಭದಲ್ಲಿ ಬೇಗ ನಿದ್ರೆ ಬರಲೆಂದು ಆಶಿಸುತ್ತೀರಿ. ಹೀಗಾದಾಗ ಏನು ಮಾಡಬಹುದು ಎಂದು ನಿಕ್ ಹೇಳುತ್ತಾರೆ. ಶೀಘ್ರ ನಿದ್ದೆ ಬರಲು ನಿಮ್ಮ ಪಾದಗಳನ್ನು ಹಾಸಿಗೆಯ ಮೇಲೆ ಇರಿಸಿ, ಅಥವಾ ಯಾವುದಾದರೂ ಎತ್ತರದ ಜಾಗದಲ್ಲಿ, ಮಂಚ, ಯಾವುದಾದರೂ ಮೇಲೆ ಇರಿಸಿ ಎಂದು ನಿಕ್ ಸಲಹೆ ನೀಡುತ್ತಾರೆ. ಎಂಟು ನಿಮಿಷಗಳ ಕಾಲ ಟೈಮರ್ ಹೊಂದಿಸಿ ಮತ್ತು ನಿಮ್ಮ ಜೀವನದ ಅತ್ಯುತ್ತಮ ನಿದ್ದೆ ತೆಗೆದುಕೊಳ್ಳಿ ಎಂದು ತಿಳಿಸುತ್ತಾರೆ.
ಮಾನಸಿಕ ಆರೋಗ್ಯ ನಿಯಂತ್ರಿಸಲು ನಿದ್ರೆ ನಮ್ಮ ಮೆದುಳಿಗೆ ಹೇಗೆ ಸಹಾಯ ಮಾಡುತ್ತದೆ ಗೊತ್ತಾ?
ನೆಟಿಜನ್‌ಗಳು ಈ ಟ್ರಿಕ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಇಷ್ಟು ಕಡಿಮೆ ಸಮಯದಲ್ಲಿ ಯಾರೂ ಸಹ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಕಮೆಂಟಿಸಿದ್ದಾರೆ. ಎಂಟು ನಿಮಿಷದಲ್ಲಿ ನಿದ್ದೆ ಮಾಡುವುದು ಅಸಾಧ್ಯವೆಂದು ನನಗೆ ತೋರುತ್ತದೆ ಎಂದಿದ್ದಾರೆ.
ನೇವಿ ಸೀಲ್ ನ್ಯಾಪ್ ಟ್ರಿಕ್ ಅನ್ನು ಯುಎಸ್ ನೇವಿ ಸೀಲ್ ಅಧಿಕಾರಿ ಜೊಕೊ ವಿಲಿಂಕ್ ಅವರು ಜನಪ್ರಿಯಗೊಳಿಸಿದರು. ಡಿಸಿಪ್ಲಿನ್ ಈಕ್ವಲ್ಸ್ ಫ್ರೀಡಂ ಫೀಲ್ಡ್ ಮ್ಯಾನ್ಯುಯಲ್ ಎಂಬ ತನ್ನ ಪುಸ್ತಕದಲ್ಲಿ, ವಿಲಿಂಕ್ ಅವರು ದಣಿದಿರುವಾಗ ಆದರೆ ಹೆಚ್ಚು ಸಮಯ ನಿದ್ರಿಸಲು ಸಾಧ್ಯವಾಗದಿದ್ದಾಗ ಹೇಗೆ ಮಲಗಬೇಕು ಎಂಬುದನ್ನು ವಿವರಿಸಿದ್ದರು. ಹೆಚ್ಚು ಸುಸ್ತಾದಾಗ ನಾನು ಬೆನ್ನನ್ನು ನೆಲಕ್ಕೊರಗಿಸಿ ಮಲಗುತ್ತೇನೆ. ಕಾಲನ್ನು ಮೇಲಕ್ಕೆತ್ತಿಡುತ್ತೇನೆ ಎಂದು ವಿವರಿಸಿದ್ದಾರೆ. ನಂತರ ಆರು ಅಥವಾ ಎಂಟು ನಿಮಿಷದಲ್ಲಿ ನಿದ್ದೆ ಬರುತ್ತದೆ. ಎಚ್ಚರವಾದಾಗ ಸಂಪೂರ್ಣ ಉಲ್ಲಸಿತವಾಗಿ ಎಚ್ಚರಗೊಳ್ಳಲು ಸಾಧ್ಯವಾಗುತ್ತದೆ ಎಂದವರು ತಿಳಿಸಿದ್ದಾರೆ.
