Asianet Suvarna News Asianet Suvarna News

ಭಾರತದ ಶೇ.50 ರಷ್ಟು ವಯಸ್ಕರು ಅನ್‌ಫಿಟ್, ಪುರಷರಿಗಿಂತ ಮಹಿಳೆಯರೇ ಹೆಚ್ಚು!

ಭಾರತೀಯರು ಎಷ್ಟು ಫಿಟ್? ದಿ ಲ್ಯಾನ್ಸೆಟ್‌ ಗ್ಲೋಬಲ್‌ ಹೆಲ್ತ್‌ ಜರ್ನಲ್‌ ವಿಶೇಷ ವರದಿಯೊಂದನ್ನು ಪ್ರಕಟಿಸಿದೆ. ಭಾರತದಲ್ಲಿ ದೈಹಿಕವಾಗಿ ಫಿಟ್ ಆಗಿರುವ ಸಂಖ್ಯೆ ಕೇವಲ ಶೇಕಡಾ 50 ಮಾತ್ರ.

lancet global health study nearly 50 percent adult Indians physically unfit says report ckm
Author
First Published Jun 27, 2024, 7:42 AM IST

ನವದೆಹಲಿ(ಜೂ.27): ಭಾರತದಲ್ಲಿ ಸುಮಾರು ಅರ್ಧದಷ್ಟು ವಯಸ್ಕರು ಅಂದರೆ ಶೇ.50ರಷ್ಟು ವಯಸ್ಕರು 2022ರಲ್ಲಿ ಸಾಕಷ್ಟು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿಲ್ಲ ಎಂದು ‘ದಿ ಲ್ಯಾನ್ಸೆಟ್‌ ಗ್ಲೋಬಲ್‌ ಹೆಲ್ತ್‌ ಜರ್ನಲ್‌’ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ತಿಳಿಸಿದೆ. ಪುರುಷರಿಗೆ ಹೋಲಿಸಿದರೆ ಭಾರತದಲ್ಲಿ ಈ ಪ್ರಮಾಣ ಮಹಿಳೆಯರಲ್ಲಿ ಹೆಚ್ಚು ಎಂದು ವರದಿ ಹೇಳಿದೆ.

ಭಾರತದಲ್ಲಿ ಸಕ್ರಿಯವಾಗಿಲ್ಲದ ಪುರುಷರ ಪ್ರಮಾಣ ಶೇ.42ರಷ್ಟಿದ್ದರೆ, ಮಹಿಳೆಯರ ಪ್ರಮಾಣ ಶೇ.57ರಷ್ಟಿದೆ. ವರದಿಯ ಪ್ರಕಾರ ಜಾಗತಿಕವಾಗಿ ಮೂರನೇ ಒಂದರಷ್ಟು ಜನರು ದೈಹಿಕವಾಗಿ ಸಕ್ರಿಯವಾಗಿಲ್ಲ. ವಾರಕ್ಕೆ ಕನಿಷ್ಠ 150 ನಿಮಿಷದ ಮಧ್ಯಮ ತೀವ್ರತೆಯ, ವಾರಕ್ಕೆ ಕನಿಷ್ಠ 75 ನಿಮಿಷ ಹುರುಪಿನ ತೀವ್ರತೆಯ ದೈಹಿಕ ಶ್ರಮದ ಚಟುವಟಿಕೆ ಮಾಡುವುದಿಲ್ಲ ಎಂದು ವರದಿ ಹೇಳಿದೆ. 2010ರಲ್ಲಿ ಈ ಪ್ರಮಾಣ ಶೇ.26.4 ರಷ್ಟಿತ್ತು. ಆದರೆ 2022ರ ವೇಳೆಗೆ ಶೇ.5ರಷ್ಟು ಹೆಚ್ಚಳವಾಗಿದೆ. 2030ರ ವೇಳೆಗೆ ಈ ಪ್ರಮಾಣ ಶೇ.60ರ ಗಡಿ ತಲುಪಬಹುದು ಎಂದು ವರದಿ ಹೇಳಿದೆ.

ಸ್ಮೋಕಿಂಗ್ ಬಿಟ್ಟು ಶ್ವಾಸಕೋಶ ಬಲಪಡಿಸುತ್ತಿರುವವರಿಗೆ 10 ಟಿಪ್ಸ್

ಫಿಟ್ನೆಸ್ ಕುರಿತು ಭಾರತದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಮಾಜಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಫಿಟ್ನೆಸ್ ಚಾಲೆಂಜ್ ಅಭಿಯಾನ ಆರಂಭಿಸಿ ಭಾರಿ ಸುದ್ದಿ ಮಾಡಿದ್ದರು. ಕೊರೋನಾಗೂ ಮೊದಲು ಈ ಚಾಲೆಂಜ್ ಭಾರಿ ಸಂಚಲನ ಸೃಷ್ಟಿಸಿತ್ತು. ಫಿಟ್ನೆಸ್ ಕುರಿತು ಅರಿವು ಮೂಡಿಸಲು  ಈ ಅಭಿಯಾನ ಆರಂಭಿಸಲಾಗಿತ್ತು. ಖುದ್ದು ಕಿರಣ್ ರಿಜಿಜು ಕೂಡ ಈ ಫಿಟ್ನೆಸ್ ಚಾಲೆಂಜ್‌ನಲ್ಲಿ ಪಾಲ್ಗೊಂಡಿದ್ದರು. ಕ್ರೀಡಾಪಟುಗಳು, ಸೆಲೆಬ್ರೆಟಿಗಳು ಸೇರಿದಂತೆ ಹಲವರು ಈ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ್ದರು. 

ಕೊರೋನಾ ಬಳಿಕ ಭಾರತದಲ್ಲಿ ಫಿಟ್ನೆಸ್, ಜಿಮ್ ವ್ಯಾಯಾಮ ಭಯ ತರಿಸಿತ್ತು. ಜಿಮ್ ಅಭ್ಯಾಸದಲ್ಲಿ ಕುಸಿದು ಬಿದ್ದು ಮೃತಪಟ್ಟ ಹಲವು ಘಟನೆಗಳು ವರದಿಯಾಗಿತ್ತು. ಹೀಗಾಗಿ ಮತ್ತೆ ಫಿಟ್ನೆಸ್ ಅಭಿಯಾನಕ್ಕೆ ಭಾರಿ ಹಿನ್ನಡೆಯಾಗಿದೆ. ಆದರೆ ಇದೀಗ ಭಾರತದ ಬಹುತೇಕರು ಯೋಗದತ್ತ ವಾಲುತ್ತಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಇದರ ನಡುವೆ ಫಿಟ್ನೆಸ್ ವರದಿ ಬಿಡುಡೆಯಾಗಿದೆ.
 

Latest Videos
Follow Us:
Download App:
  • android
  • ios