Asianet Suvarna News Asianet Suvarna News

ಕಿಡ್ನಿ ಸ್ಟೋನ್‌ಗೆ ಬಿಯರ್ ಮದ್ದು, ಏನೀದರ ಅಸಲೀಯತ್ತು?

ಕಿಡ್ನಿ ಸ್ಟೋನ್ ಆಗಿದೆ ಅಂತ ನೀವು ಹೇಳಿದ್ರೆ, ನಿಮ್ಮ ಮುಂದಿನ ವ್ಯಕ್ತಿ ಹೇಳುವ ಮೊದಲ ಮಾತು, ಸರಿಯಾಗಿ ಬಿಯರ್ ಕುಡಿ. ಒಂದೇ ಹೊಡೆತಕ್ಕೆ ಹೊರ ಬರುತ್ತೆ ಅಂತಾ. ಬಹುತೇಕ ಭಾರತೀಯರು ಇದನ್ನು ನಂಬಿದ್ದಾರೆ. ಆದ್ರೆ ಇದ್ರಲ್ಲಿ ಸತ್ಯ ಎಷ್ಟಿದೆ? 
 

Know The Truth Behind The Fact Beer Can Reduce Kidney Stone Chances roo
Author
First Published Sep 25, 2023, 12:45 PM IST

ಮದ್ಯಪಾನಿಗಳಿಗೆ ಮದ್ಯಪಾನ ಮಾಡಲು ಒಂದು ನೆಪ ಬೇಕು. ಯಾವುದ್ಯಾವುದೋ ಕಾರಣ ಹೇಳಿ ಮದ್ಯಪಾನ ಮಾಡುವ ಜನರನ್ನು ನೀವು ನೋಡಿರ್ಬಹುದು. ಕೆಲವರು ಬಿಯರ್ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಾದ ಮಾಡ್ತಾರೆ. ಬಿಯರ್ ಸೇವನೆ ಮಾಡೋದ್ರಿಂದ ಮೂತ್ರಪಿಂಡದಲ್ಲಿ ಕಲ್ಲು ಬೆಳೆಯೋದಿಲ್ಲ ಎಂಬ ಮಾತನ್ನು ನೀವು ಕೇಳಿರಬಹುದು. ಕಿಡ್ನಿಯಲ್ಲಿ ಸ್ಟೋನ್ ಇದೆ ಅಂತಾ ನೀವು ಹೇಳಿದ್ರೆ, ಬಹುತೇಕ ಭಾರತೀಯರ ಬಾಯಲ್ಲಿ ಬರುವ ಮಾತೆಂದ್ರೆ ಬಿಯರ್ ಕುಡಿ, ಕಲ್ಲು ಬೀಳುತ್ತೆ ಅನ್ನೋದು. 

ಇದನ್ನು ನಾವು ಅಂದಾಜಿಗೆ ಹೇಳ್ತಿಲ್ಲ. ಈ ಬಗ್ಗೆ ಸಮೀಕ್ಷೆ (Survey) ಒಂದು ನಡೆದಿದೆ. ಅದ್ರ ಪ್ರಕಾರ, ಪ್ರತಿ ಮೂರನೇ ಭಾರತೀಯ ಬಿಯರ್ (Beer) ಕುಡಿಯುವುದರಿಂದ ಮೂತ್ರಪಿಂಡ (Kidney) ದ ಕಲ್ಲಿನ ಸಮಸ್ಯೆ ಕಡಿಮೆ ಆಗುತ್ತೆ ಎಂದು ನಂಬುತ್ತಾನೆ. ನಾವಿಂದು ಬಿಯರ್ ಸೇವನೆಯಿಂದ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಕಡಿಮೆಯಾಗುತ್ತಾ ಎಂಬ ಪ್ರಶ್ನೆಗೆ ಉತ್ತರ ನೀಡ್ತೇವೆ.

ಉಸಿರಾಡುವಾಗ ಎದೆಯಲ್ಲಿ ಚುಚ್ಚಿದ ಅನುಭವ ಆಗ್ತಿದ್ಯಾ? ಹಾಗಿದ್ರೆ ಇದೊಂದು ರೋಗ

ಬಿಯರ್ ಸೇವನೆಯಿಂದ ಕಿಡ್ನಿ ಸ್ಟೋನ್ ಕಡಿಮೆ ಆಗುತ್ತಾ? : ಅಮೇರಿಕನ್ ಅಡಿಕ್ಷನ್ ಸೆಂಟರ್ನ ವರದಿಯ ಪ್ರಕಾರ, ಬಿಯರ್ ಕುಡಿಯುವುದ್ರಿಂದ ಕಲ್ಲುಗಳ ಅಪಾಯ ಕಡಿಮೆ ಆಗುತ್ತದೆ ಅಥವಾ ಕಲ್ಲುಗಳು ಹೊರಗೆ ಬರುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. 

ಬಿಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಬರದಂತೆ ತಡೆಯಬಹುದು ಎಂಬ ನಂಬಿಕೆ ಜನರಲ್ಲಿದೆ, ಆದರೆ ಇದು ಸಂಪೂರ್ಣವಾಗಿ ಮಿಥ್ಯೆ ಎಂದು ವೈದ್ಯರು ಹೇಳ್ತಾರೆ. ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುವಲ್ಲಿ ಬಿಯರ್ ಕೆಲವು ಸಂಭಾವ್ಯ ಪ್ರಯೋಜನಗಳನ್ನು ಹೊಂದಿದೆ ಎಂಬುದಕ್ಕೆ ಸೀಮಿತ ಪುರಾವೆಗಳಿದ್ದರೂ, ದೇಹದ ಮೇಲೆ ಮದ್ಯದ ದುಷ್ಪರಿಣಾಮಗಳು ಹೆಚ್ಚು ಎಂದು ವೈದ್ಯರು ಹೇಳಿದ್ದಾರೆ. ಬಿಯರ್ ಸೇರಿದಂತೆ ಎಲ್ಲಾ ರೀತಿಯ ಆಲ್ಕೋಹಾಲ್ ಮೂತ್ರವರ್ಧಕ. ಅಂದರೆ ಇದು ಮೂತ್ರದ ಉತ್ಪಾದನೆಯನ್ನು ಹೆಚ್ಚಿಸುತ್ತದೆ.  ಮೂತ್ರಪಿಂಡದಿಂದ ಕಲ್ಲು ರೂಪಿಸುವ ವಸ್ತುಗಳನ್ನು ಹೊರಹಾಕಲು ಸಮರ್ಥವಾಗಿ ಸಹಾಯ ಮಾಡುತ್ತದೆ. ಆದರೆ ಅತಿಯಾದ ಆಲ್ಕೋಹಾಲ್ ಸೇವನೆ  ವಿರುದ್ಧ ಕೆಲಸ ಮಾಡುತ್ತದೆ. ಅತಿಯಾದ ಆಲ್ಕೋಹಾಲ್ ಸೇವನೆಯು ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇದು ಮೂತ್ರಪಿಂಡದ ಕಲ್ಲುಗಳ ರಚನೆಯ ಅಪಾಯವನ್ನು ಹೆಚ್ಚಿಸುತ್ತದೆ. ಬಿಯರ್ ಹಾಗೂ ಆಲ್ಕೋಹಾಲ್ ಸೇವನೆ ಮಾಡೋದ್ರಿಂದ ಮೂತ್ರಪಿಂಡ ವೈಫಲ್ಯ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಉಂಟಾಗುತ್ತವೆ. 

ಪ್ಲಾಸ್ಟಿಕ್‌ ವೆಜಿಟೇಬಲ್ ಕಟ್ಟಿಂಗ್ ಬೋರ್ಡ್‌, ತರಕಾರಿ ಹೆಚ್ಚಲು ಬಳಸಬಹುದಾ?

ಕಿಡ್ನಿ ಸ್ಟೋನ್ ಅಂದ್ರೇನು? : ಮೂತ್ರಪಿಂಡದಲ್ಲಿ ಸಣ್ಣ ಕಲ್ಲುಗಳು ರೂಪುಗೊಳ್ಳುತ್ತವೆ. ಸಾಮಾನ್ಯವಾಗಿ, ಕ್ಯಾಲ್ಸಿಯಂ, ಯೂರಿಕ್ ಆಸಿಡ್ ಅಥವಾ ಇತರ ಲೋಹಗಳು ಮೂತ್ರಪಿಂಡದಲ್ಲಿ ಒಟ್ಟಿಗೆ ಸಂಗ್ರಹಗೊಳ್ಳುತ್ತವೆ. ಅದು ಕಲ್ಲಿನಂತಹ ಆಕಾರ ಪಡೆಯುತ್ತವೆ. 

ಮೂತ್ರಪಿಂಡದ ಕಲ್ಲಿಗೆ (Kidney Stone) ಕಾರಣ : 
• ಕಡಿಮೆ ನೀರು ಸೇವನೆ :  ಕೆಲವರು ದೇಹಕ್ಕೆ ಅಗತ್ಯವಿರುಷ್ಟು ನೀರಿನ ಸೇವನೆ ಮಾಡುವುದಿಲ್ಲ. ನೀರಿನ ಕೊರತೆಯಿಂದಾಗಿ ಮೂತ್ರವು ಸರಿಯಾಗಿ ರೂಪುಗೊಳ್ಳುವುದಿಲ್ಲ. ಇದರಿಂದಾಗಿ ಕಲ್ಲುಗಳ ಅಪಾಯವು ಹೆಚ್ಚಾಗುತ್ತದೆ.
• ಆಹಾರ : ನಾವು ಸೇವನೆ ಮಾಡುವ ಕೆಲ ಆಹಾರ ಕೂಡ ಕಿಡ್ನಿ ಸ್ಟೋನ್ ಗೆ ಕಾರಣವಾಗುತ್ತದೆ. ಅತಿಯಾದ ಉಪ್ಪು, ಪ್ರಾಣಿ ಪ್ರೋಟೀನ್ ಮತ್ತು ಆಕ್ಸಲೇಟ್ ಭರಿತ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡಿದ್ರೆ ಅಪಾಯ ಹೆಚ್ಚು.  
• ಆನುವಂಶಿಕ : ಇದು ಆನುವಂಶಿಕ ಖಾಯಿಲೆಯೂ ಹೌದು. ಕುಟುಂಬದ ಸದಸ್ಯರಿಗೆ ಈ ಖಾಯಿಲೆ ಇದ್ರೆ ಕಿರಿಯರನ್ನು ಕೂಡ ಇದು ಕಾಡುತ್ತದೆ. 
• ಆರೋಗ್ಯ ಸಮಸ್ಯೆ : ಹೈಪರ್‌ಕಾಲ್ಸಿಯುರಿಯಾ, ಸಿಸ್ಟಿನೂರಿಯಾ ಮತ್ತು ಹೈಪರ್‌ಪ್ಯಾರಾಥೈರಾಯ್ಡಿಸಮ್‌ನಂತಹ ಪರಿಸ್ಥಿತಿಗಳು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸಬಹುದು.
• ಮೂತ್ರನಾಳದ ಸೋಂಕು : ಕೆಲವು ವಿಧದ ಬ್ಯಾಕ್ಟೀರಿಯಾಗಳು ಕಲ್ಲು ರೂಪಗೊಳ್ಳಲು ಕಾರಣವಾಗುತ್ತವೆ.

ಮೂತ್ರಪಿಂಡದ ಕಲ್ಲಿಗೆ ಚಿಕಿತ್ಸೆ : ಕಲ್ಲಿನ ಗಾತ್ರ ಬದಲಾಗುತ್ತಿರುತ್ತದೆ. ಕಲ್ಲಿನ ಗಾತ್ರ ದೊಡ್ಡದಿದ್ದಾಗ ಔಷಧಿ, ಚಿಕಿತ್ಸೆ , ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. 
 

Follow Us:
Download App:
  • android
  • ios